ಕನ್ನಡದ ಬಹು ಸ್ವಾರಸ್ಯಕರ ಗಾದೆಮಾತುಗಳಲ್ಲಿ ಇದಕ್ಕೆ ಮೊದಲ ಸ್ಥಾನ ಕೊಟ್ಟರೆ ತಪ್ಪಾಗಲಾರದು. ಕೆಲವೊಮ್ಮೆ ನಾವು ಜೀವನದಲ್ಲಿ ನಮ್ಮ ಸಹಜೀವಿಗಳ ವಿಚಿತ್ರ ನಡವಳಿಕೆಗಳಿಗೆ ಸಾಕ್ಷಿಯಾಗುತ್ತೇವೆ, ಅಥವಾ ನಾವು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಅವರಿಗೆ ಅನ್ನಿಸುವ ಸಂದರ್ಭಗಳು ಬರಬಹುದು. ಇದನ್ನು ತುಸು ವಿವರಿಸುತ್ತೇನೆ. ಒಬ್ಬರು ಇನ್ನೊಬ್ಬರಿಗೆ ರಾಮಾಯಣದ ಕಥೆಯನ್ನು ರಾತ್ರಿಯೆಲ್ಲ ವಿಶದವಾಗಿ ಹೇಳಿದರು ಎಂದು ಇಟ್ಟುಕೊಳ್ಳೋಣ. ಕೇಳುವವರು ಎಲ್ಲ ಕೇಳಿಸಿಕೊಂಡ ಮೇಲೆ ‘ಹೌದು, ರಾಮನಿಗೂ ಸೀತೆಗೂ ಏನು ಸಂಬಂಧ ಅಂತ ಸ್ವಲ್ಪ ಹೇಳಿ ಮತ್ತೆ? ‘ ಅಂತ ಕೇಳಿದರೆ ತನ್ಮಯವಾಗಿ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!