ಕಿವಿಗೆ ಇಂಪಾಗಿ ಕೇಳಿಸುವ ಈ ಗಾದೆಮಾತು ಬಹು ಜನಪ್ರಿಯವೂ ಹೌದು. ಬೇಡಿಕೆ ತುಂಬ ಹೆಚ್ಚಾಗಿದ್ದು ಪೂರೈಕೆ ತೀರಾ ಕಡಿಮೆಯಾಗಿರುವ ಸನ್ನಿವೇಶವೊಂದನ್ನು ಈ ಕನ್ನಡ ಜಾಣ್ಣುಡಿ ತುಂಬ ಚಿತ್ರಕವಾಗಿ ಪ್ರಸ್ತುತಿಸುತ್ತದೆ. ಗುಡಾಣದಂತಿರುವ ಆನೆಯ ಹೊಟ್ಟೆ ತುಂಬಬೇಕೆಂದರೆ ಭಾರೀ ಹೆಚ್ಚು ಪ್ರಮಾಣದಲ್ಲಿ ಆಹಾರ ಬೇಕು. ಅರೆಕಾಸಿಗೆ ಕೊಂಡಂತಹ ಅರ್ಧಲೋಟ ಮಜ್ಜಿಗೆ ಆನೆಗೆ ಎಲ್ಲಿ ಸಾಕಾಗುತ್ತದೆ!? ನಮ್ಮ ಜೀವನದ ಕೆಲವು ದೈನಂದಿನ ಸನ್ನಿವೇಶಗಳಲ್ಲೂ ಈ ಗಾದೆಮಾತಿನ ಪ್ರಸ್ತುತತೆಯನ್ನು ಗಮನಿಸಬಹುದು. ಉದಾಹರಣೆಗೆ, ‘ಅಯ್ಯೋ, ಎಷ್ಟು ಮೆಟ್ರೋ ರೈಲಿದ್ರೂ ಬೆಂಗ್ಳೂರಿನ ಜನಸಂಖ್ಯೆಗೆ ಸಾಲಲ್ಲಪ್ಪ. ಆನೆ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!