ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಕಡುಕೋಪ ಬಂದಾಗ ತಡಕೊಂಡವನೇ ಜಾಣ.

ಕೋಪ ಬರದ ಮನುಷ್ಯರಿಲ್ಲ.‌ ಮನಸ್ಸಿಗೆ ಇಷ್ಟವಾಗದ್ದು ನಡೆದರೆ, ಯಾರಾದರೂ ತೊಂದರೆ ಮಾಡಿದರೆ, ಬದುಕು ಅಸಹಾಯಕ ಪರಿಸ್ಥಿತಿಗೆ ಒಡ್ಡಿದರೆ ಮನುಷ್ಯರಿಗೆ ಕೋಪ ಬರುತ್ತದೆ. ಕೋಪ ಬರುವುದು ಅಸಹಜ ಅಲ್ಲ. ಆದರೆ ಕೋಪ ಬಂದಾಗ ಅದನ್ನು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ಮುಖ್ಯ ವಿಷಯ. ಸುಮ್ಮನಿದ್ದು ಬಿಡುವುದೋ, ಆ ಜಾಗ ಬಿಟ್ಟು ಸ್ವಲ್ಪ ದೂರ ಹೋಗುವುದೋ, ದೀರ್ಘ ಉಸಿರುಗಳನ್ನು  ತೆಗೆದುಕೊಳ್ಳುವುದೋ ಇಂಥವನ್ನು ಮಾಡಬೇಕು‌‌. ಅದು ಬಿಟ್ಟು ಕೋಪ, ಅದರಲ್ಲೂ ಕಡುಕೋಪ( ಅತಿ ಹೆಚ್ಚಿನ ಕೋಪ) ಬಂದರೆ ನಾವು ಪ್ರತಿಕ್ರಯಿಸಿದೆವು ಅಂದರೆ ಎದುರಿಗಿರುವ […]

ಕನ್ನಡ ಗಾದೆಮಾತು‌ – ಆನೆಯಂಥದೂ ಮುಗ್ಗರಿಸ್ತದೆ.

ನಮ್ಮ ಹಿರಿಯರ ಅನುಭವದ ಸಾರ ಈ ಗಾದೆಮಾತು.  ಮನುಷ್ಯರು ತಮ್ಮ ವಯಸ್ಸು, ಸ್ಥಾನಮಾನ, ವಿದ್ಯೆ, ಅಧಿಕಾರ ಇಂತಹ ಸಮೃದ್ಧಿಗಳನ್ನು ನೆಚ್ಚಿಕೊಂಡು, ನೆಮ್ಮಿಕೊಂಡು ತಮ್ಮಿಂದ ಎಂದೂ ಯಾವ ತಪ್ಪೂ ಆಗುವುದಿಲ್ಲ ಎಂದು ಭಾವಿಸಿದರೆ ಅದು ವಿವೇಕದ ನಡೆ ಅಲ್ಲ. ಯಾವಾಗಲೂ ಗಂಭೀರವಾಗಿ ಹೆಜ್ಜೆಹಾಕುವ (ಗಜಗಾಂಭೀರ್ಯ ಎಂಬ ನುಡಿಗಟ್ಟೇ ಇದೆಯಲ್ಲವೆ ಕನ್ನಡದಲ್ಲಿ), ಕಾಡಿನ ಕೀರ್ತಿಕಲಶದಂತಹ, ದೈತ್ಯಗಾತ್ರದ ಪ್ರಾಣಿ ಆನೆಯೂ ಸಹ, ನಡೆಯುವಾಗ ಕೆಲವೊಮ್ಮೆ ಮುಗ್ಗರಿಸಬಹುದು‌.‌ ಹಾಗೆಯೇ ಬಹಳ ವಿವೇಕಿಗಳು, ವಿದ್ವಾಂಸರು ಅನ್ನಿಸಿಕೊಂಡ ಅನುಭವಸ್ಥ ಮನುಷ್ಯರೂ ಸಹ ಕೆಲವು ಸಲ ತಪ್ಪು ಮಾಡುವ ಸಾಧ್ಯತೆ […]

ಕನ್ನಡ ಗಾದೆಮಾತು – ಮಂಡೆ ಗಟ್ಟಿ ಅಂತ ಬಂಡೆಗೆ ಚಚ್ಚಿದ್ರಂತೆ.

ಕನ್ನಡ ಭಾಷೆಯಲ್ಲಿ ಆಗಾಗ ಬಳಕೆಯಾಗುವ ಗಾದೆಮಾತು ಇದು.  ನಮ್ಮ ತಲೆ ( ಮಂಡೆ) ಗಟ್ಟಿ ಇದೆ ಎಂದು ನಾವು ಭಾವಿಸಿ, ಅದಕ್ಕಿಂತ ಸಾವಿರ ಪಾಲು ಗಟ್ಟಿ ಇರುವ ಬಂಡೆಗಲ್ಲಿಗೆ ಅದನ್ನು ಚಚ್ಚಿದರೆ ನಮ್ಮ ತಲೆ ಉಳಿದೀತೇ? ಇಲ್ಲ. ಒಡೆದು ರಕ್ತ ಬರುತ್ತದೆ. ಹಾಗೆಯೇ ಜೀವನದಲ್ಲಿ ಕೆಲವು ಸಲ ಅತಿ ಕಠಿಣ  ಸಮಸ್ಯೆ, ಸನ್ನಿವೇಶಗಳು ಎದುರಾಗುತ್ತವೆ. ಅಂತಹ ಸಮಯದಲ್ಲಿ ನಮ್ಮ ಕೈಯಿಂದ ಪರಿಹಾರ  ಇದನ್ನು ಪರಿಹಾರ ಮಾಡಲು ಸಾಧ್ಯವೇ?, ಆ ಶಕ್ತಿ ಸಾಮರ್ಥ್ಯ  ನಮಗಿದೆಯೇ? ಎಂದು ಯೋಚಿಸಿ ನಾವು […]

ಕನ್ನಡ ಗಾದೆ ಮಾತು – ಗೆಳೆಯರಿಲ್ಲದ ಗ್ರಾಮ ಗೊಂಡಾರಣ್ಯ.

ಸ್ನೇಹ ಅನ್ನುವುದು ಜೀವನದಲ್ಲಿ ತುಂಬ ಅಮೂಲ್ಯವಾದುದು. ವಯಸ್ಸು, ಜಾತಿ, ಲಿಂಗ, ಧರ್ಮ, ಭಾಷೆ, ಅಂತಸ್ತು ಮುಂತಾದ ಯಾವ ಭೇದಗಳನ್ನೂ ಲೆಕ್ಕಿಸದೆ ಎರಡು ಜೀವಗಳು ಒಂದಕ್ಕೊಂದು ಸದಾ ಒಳಿತನ್ನು ಬಯಸುತ್ತಾ, ಕಷ್ಟ ಸುಖಗಳಲ್ಲಿ ಜೊತೆಗಿರುತ್ತಾ,  ತಾವು ಜೊತೆಗಿರುವ ಹೊತ್ತನ್ನು  ಸವಿಯುತ್ತಾ, ಪರಸ್ಪರರ ಬದುಕಿನ ಭಾರವನ್ನು ಹಗುರ ಮಾಡುವ ಅದ್ಭುತ ಭಾವನೆ ಇದು‌. ಕವಿ ಚೆನ್ನವೀರ ಕಣವಿಯವರು ಸ್ನೇಹವನ್ನು ‘ಉಪ್ಪಿಗಿಂತಲು ರುಚಿಯು, ತಾಯಿಗಿಂತಲು ಬಂಧು’ ಎಂದು ಬಣ್ಣಿಸಿದ್ದಾರೆ. ಒಬ್ಬರಾದರೂ ಆಪ್ತ ಸ್ನೇಹಿತರು ಇಲ್ಲದ ಬಾಳಿನಲ್ಲಿ ಸುಖವಿಲ್ಲ. ಅದಕ್ಕಾಗಿಯೇ ಈ ಗಾದೆಮಾತು, […]

ಕನ್ನಡ ಗಾದೆಮಾತು – ಹಾಳೂರಿಗುಳಿದವನೇ ಗೌಡ‌.‌

ಕನ್ನಡಿಗರು ಆಗಾಗ ಬಳಸುವ ಗಾದೆಮಾತು ಇದು‌. ಗೌಡ( ಗ್ರಾಮ ವೃದ್ಧ ಪದವು ‌ಸುಲಭೀಕರಣಗೊಂಡು ಜನರ ಬಾಯಲ್ಲಿ ಗೌಡ ಆಗಿದೆ).  ಗ್ರಾಮದಲ್ಲಿ ಹೆಚ್ಚಿನ ಸ್ಥಾನಮಾನ, ಆಸ್ತಿಪಾಸ್ತಿ ಮತ್ತು ಯಜಮಾನಿಕೆ ಇರುವಂತಹ ವ್ಯಕ್ತಿಯೇ ಗೌಡ‌‌. ಜನರಿದ್ದರೆ ಊರಿಗೆ ನೆಲೆ, ಜನರಿದ್ದರೆ ಗೌಡನಿಗೆ ಬೆಲೆ.‌ ಆದರೆ ಯಾವುದೋ ಕಾರಣಕ್ಕೆ ಜನರೆಲ್ಲ ಬೇರೆ ಊರಿಗೆ ಹೊರಟುಹೋಗಿ  ಆ ಊರು ಹಾಳೂರಾದರೆ? ಆಗ ಯಾವ ವ್ಯಕ್ತಿ ಆ ಊರಿನಲ್ಲಿ ಒಬ್ಬನೇ ಉಳಿದುಕೊಳ್ಳುತ್ತಾನೋ, ಅವನೇ ತನ್ನನ್ನು ತಾನು ಗೌಡ ಎಂದು ಕರೆದುಕೊಳ್ಳಬಹುದು! ಯಾಕೆಂದರೆ ಅದನ್ನು ಪ್ರಶ್ನೆ ಮಾಡಲು […]

ಕನ್ನಡ ಗಾದೆಮಾತು – ಕಾಯಿದ್ದ ಮರಕ್ಕೇ ಕಲ್ಲು ಬೀಳೋದು. 

ತುಂಬ ಕಷ್ಟ ಸುಖ ಕಂಡ ಹಿರಿಯರು ತಮ್ಮ ಜೀವನಾನುಭವವನ್ನು ಭಟ್ಟಿ ಇಳಿಸಿದ ಗಾದೆಮಾತಿದು. ಹಣ್ಣಿನ ತೋಪಿನಲ್ಲಿ ಯಾವ ಮರದಲ್ಲಿ ಹಣ್ಣು ಹೆಚ್ಚಾಗಿ ಬಿಟ್ಟಿರುತ್ತದೆಯೋ ಜನ  ಆ ಮರಕ್ಕೆ ತಾನೇ ಕಲ್ಲು ಹೊಡೆಯುವುದು? ಹೀಗೆಯೇ ಯಾವ ಮನುಷ್ಯರಲ್ಲಿ ಸಂಪನ್ಮೂಲ ( ಪ್ರತಿಭೆ, ಹಣ, ಕಾರ್ಯಸಾಮರ್ಥ್ಯ….ಇಂಥದ್ದು) ಇರುತ್ತದೋ ಅಂಥವರ ಮೇಲೆ ಬೇರೆಯವರ ಹಕ್ಕೊತ್ತಾಯ ಹೆಚ್ಚು.  ಅಸೂಯೆಯ ಮಾತುಗಳ ಪ್ರಹಾರ, ಕೆಲಸದ ಮೇಲೆ ಕೆಲಸ, ಆದೇಶದ ಮೇಲೆ ಆದೇಶ…ಹೀಗೆ ಅನೇಕ ಹೊಡೆತಗಳ ಪರಂಪರೆಗೆ ಅವರು ಒಳಗಾಗುತ್ತಾರೆ‌. ಹೀಗೆ ಕಷ್ಟ ಪಟ್ಟವರು ನೊಂದುಕೊಂಡಾಗ […]

ಕನ್ನಡ ಗಾದೆಮಾತು – ಬಳ್ಳಿಗೆ ಕಾಯಿ ಭಾರವಾ? ಮರಕ್ಕೆ ಬಿಳಲು ಭಾರವಾ?

ಕನ್ನಡ ಭಾಷೆಯಲ್ಲಿ ಬಹಳವಾಗಿ ಬಳಕೆಯಲ್ಲಿರುವ ಗಾದೆ ಮಾತಿದು. ಬಹಳ ನವಿರು, ಕೋಮಲ ಅನ್ನಿಸುವ ಬಳ್ಳಿಗಳು ದಪ್ಪ ದಪ್ಪವಾದ ದೊಡ್ಡ ಕಾಯಿಗಳನ್ನು ಆರಾಮವಾಗಿ ಧರಿಸಿರುತ್ತವೆ ; ಆಲದ ಮರದಂತಹ ಮರಗಳು ದೊಡ್ಡ ದೊಡ್ಡ ಬಿಳಲುಗಳನ್ನು ಸರಾಗವಾಗಿ ಧರಿಸಿರುತ್ತವೆ‌. ಇದೇ ರೀತಿಯಲ್ಲಿ ತಂದೆ ತಾಯಂದಿರು (೯೯ ಶೇಕಡ) ತಮಗೆ ಎಷ್ಟೇ ಬಡತನ ಇದ್ದರೂ, ಎಷ್ಟೇ ಮಕ್ಕಳಿದ್ದರೂ ಅವರನ್ನು ಭಾರ ಎಂದುಕೊಳ್ಳದೆ ಅವರನ್ನು ಪ್ರೀತಿಯಿಂದ ಸಾಕುತ್ತಾರೆ. ಇಂತಹ ಸಂದರ್ಭದಲ್ಲಿ ಹುಟ್ಟಿರಬಹುದಾದ ಗಾದೆ ಮಾತಿದು. ಹಳೆಯ ಕಾಲದಲ್ಲಿ, ವಿವಾಹಿತ ಹೆಣ್ಣುಮಕ್ಕಳು ತಮ್ಮ ಗಂಡನ […]

ಕನ್ನಡ ಗಾದೆಮಾತು – ಕಿಡಿ ಸಣ್ಣದಾದ್ರೂ ಕಾಡು ಸುಡಬಲ್ಲುದು.

ತುಂಬ ಅರ್ಥಪೂರ್ಣವಾದ ಗಾದೆಮಾತು ಇದು. ‌ಬೆಂಕಿ ಕಿಡಿ ಚಿಕ್ಕದು ಎಂದು ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪುಟ್ಟ ಹುಲ್ಲಿನಿಂದ ಪ್ರಾರಂಭಿಸಿ ಪೊದೆ, ಗಿಡ, ಮರ ಎಲ್ಲವನ್ನೂ ಒಂದರ ಹಿಂದೆ ಒಂದರಂತೆ ಸುಡಬಲ್ಲುದು ಅದು. ಹಾಗೆಯೇ ಚಾಡಿಮಾತು, ಹೊಟ್ಟೆಕಿಚ್ಚು, ಒಳಸಂಚುಗಳಂತಹ ಕೆಟ್ಟ ಸಂಗತಿಗಳು ; ಶುರುವಿನಲ್ಲಿಯೇ ಅವುಗಳ ಬೇರು ಚಿವುಟದಿದ್ದರೆ ಇಡೀ ಬದುಕನ್ನೇ ಹಾಳು ಮಾಡಬಲ್ಲಂತಹ ಶಕ್ತಿ ಹೊಂದಿರುತ್ತವೆ‌‌. ಹೀಗಾಗಿ ಚಿಕ್ಕದೆಂದು ನಿರ್ಲಕ್ಷ್ಯ ಮಾಡದೆ ಇಂತಹ ‘ಬೆಂಕಿಯ ಕಿಡಿ’ಗಳನ್ನು ನಾವು ಬೇಗನೆ ನಂದಿಸಬೇಕು. ಇಲ್ಲದಿದ್ದರೆ ನಮ್ಮ ಬದುಕೆಂಬ ಶ್ರೀಮಂತ ಕಾಡು ನಾವು […]

ಕನ್ನಡ ಗಾದೆಮಾತು – ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ.

ಕನ್ನಡ ಭಾಷೆಯಲ್ಲಿ ಆಗಾಗ ಬಳಕೆಯಾಗುವ ಒಂದು ಗಾದೆಮಾತಿದು. ಜೀವನದ ಕೆಲವು ಸನ್ನಿವೇಶಗಳು ಹೇಗಿರುತ್ತವೆ ಅಂದರೆ ನಾವು ಅಂದುಕೊಂಡಂತೆ ಯಾವುದೇ ಉತ್ತಮಿಕೆ, ಅಭಿವೃದ್ಧಿ ಆಗುತ್ತಿರುವುದಿಲ್ಲ, ಹಾಗೆಂದು ತೀರಾ ಇಳಿತವೂ ಆಗುತ್ತಿರುವುದಿಲ್ಲ. ಉದಾಹರಣೆಗೆ ಸೀಮಿತ ಸಂಬಳದ ಮಧ್ಯಮ ವರ್ಗದ ಜೀವನಕ್ರಮ,  ತೀರಾ ಹೆಚ್ಚು ಅಂಕ ತೆಗೆದುಕೊಳ್ಳದ ಆದರೆ ನಪಾಸಾಗದ ವಿದ್ಯಾರ್ಥಿಯ ವಿದ್ಯಾಭ್ಯಾಸ ಪರಿಸ್ಥಿತಿ, ಶಾಂತವಾಗಿ ಸಾಗುವ ನಿವೃತ್ತಿ ಜೀವನ…ಇಂಥವುಗಳ ಬಗ್ಗೆ ವ್ಯಾಖ್ಯಾನ ಮಾಡುವಾಗ “ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ” ಎಂಬ ಗಾದೆ ಮಾತನ್ನು ಬಳಸುತ್ತಾರೆ.‌ ಹೆಚ್ಚು ಉತ್ಸಾಹವನ್ನೂ ಮೂಡಿಸದ ಆದರೆ ಅಂತಹ ಆತಂಕಕಾರಿಯೂ […]

ಕನ್ನಡ ಗಾದೆಮಾತು – ದೂರದ ನೀರು‌ ದಾಹಕ್ಕಿಲ್ಲ.

ನೀರಿನ ನೆಪದಲ್ಲಿ ಮನುಷ್ಯ ಸಂಬಂಧಗಳ ಬಗ್ಗೆ ಒಂದು ಮುಖ್ಯವಾದ ಒಳನೋಟವನ್ನು ಕೊಡುವ ಗಾದೆ ಮಾತು ಇದು. ನಮಗೆ ತುಂಬ ಬಾಯಾರಿಕೆಯಾದಾಗ  ನೀರು ತಕ್ಷಣ ಹತ್ತಿರದಲ್ಲಿ ಸಿಕ್ಕಿದರಷ್ಟೆ ನಮಗೆ ಅದರಿಂದ ಪ್ರಯೋಜನ. ಆದರೆ ಎಲ್ಲೋ ದೂರದಲ್ಲಿ ಎಷ್ಟು ನೀರಿದ್ದರೂ ಅದು ನಮ್ಮ ದಾಹ ಶಮನಕ್ಕೆ ಒದಗುವುದಿಲ್ಲ. ಹಾಗೆಯೇ, ನಾವು ಯಾರನ್ನು ಆತ್ಮೀಯರೆಂದು ಭಾವಿಸುತ್ತೇವೋ ಅವರು ನಮ್ಮ ಕಷ್ಟದ ಸಮಯದಲ್ಲಿ ಲಭ್ಯರಾಗಿ ನಮ್ಮ ಬೆಂಬಲಕ್ಕೆ ಸಿಗಬೇಕು.‌ಅದು ಬಿಟ್ಟು ಅವರು ಎಲ್ಲೋ ದೂರದಲ್ಲಿ ಇದ್ದುಬಿಟ್ಟರೆ ಏನು ಪ್ರಯೋಜನ? ಬಹುಶಃ,  ನಾವು ನಮ್ಮ […]

Page 2 of 16

Kannada Sethu. All rights reserved.