ಉತ್ತಮ ಹಾಗೂ ಅಭಿರುಚಿಯುತ ಜೀವನದ ಬಗ್ಗೆ ಹೇಳುವ ಗಾದೆಮಾತು ಇದು. ಸ್ವಲ್ಪವೇ ತಿಂದರೂ ರಸಮಯವಾದದ್ದನ್ನು ತಿನ್ನಬೇಕು. ಏನೇನೋ ನೀರಸವಾದದ್ದನ್ನು ಅತಿಯಗಿ ತಿನ್ನಬಾರದು. ಊಟ ಮಾಡುವಾಗ ಪ್ರಮಾಣಕ್ಕಿಂತ ರುಚಿ, ಸ್ವಾರಸ್ಯ, ಸವಿಯುವಿಕೆ ಮುಖ್ಯ ಎಂಬುದನ್ನು ಅಡಕವಾಗಿ, ಪ್ರಾಸಬದ್ಧವಾಗಿ ಹೇಳುತ್ತದಲ್ಲವೆ ಈ ಗಾದೆಮಾತು? ಪ್ರಾನ್ಸ್ ದೇಶದಲ್ಲಿ ಹೀಗೆ ರುಚಿಕರವಾದ, ಒಳ್ಳೆಯ ಊಟವನ್ನು ಪುಟ್ಟ ಪುಟ್ಟ ಭಾಗಗಳಲ್ಲಿ ಬಡಿಸ್ತಾರಂತೆ. ಈ ರೀತಿಯಲ್ಲಿ ತಿನ್ನುವುದನ್ನು ‘ಫ್ರೆಂಚ್ ಪೋರ್ಷನ್’ ಎನ್ನುತ್ತಾರೆ. ಒಟ್ಟಿನಲ್ಲಿ ನಮ್ಮ ಗಾದೆ ಮಾತೊಂದು ಫ್ರಾನ್ಸ್ ದೇಶವನ್ನು ನೆನಪಿಸಿತು ನೋಡಿ! Kannada proverb […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!