ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು –  ತುತ್ತು ಹೆಚ್ಚಾದ್ರೆ ಕುತ್ತು.

 ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ಮುಖ್ಯವಾದ ವಿಷಯವು ಈ ಗಾದೆಮಾತಿನಲ್ಲಿದೆ.‌ ನಾವು ತಿನ್ನುವ ತುತ್ತು ತುಸು ಕಡಿಮೆಯಾದರೂ ಪರವಾಗಿಲ್ಲ, ಆದರೆ ಅದು ಹೆಚ್ಚಾಗಬಾರದು‌. ಹೆಚ್ಚಾದರೆ ಅಜೀರ್ಣ, ತೂಕದ ಸಮಸ್ಯೆ, ಜಡತೆ….ಹೀಗೆ ಏನೇನೋ ಸಮಸ್ಯೆಗಳು‌ ಬರುತ್ತವೆ. ಆದ್ದರಿಂದ ನಾವು ತುತ್ತು ಹೆಚ್ಚಾದರೆ ಕುತ್ತು ಅಥವಾ ಅಪಾಯ ಎಂಬ ಗಾದೆಮಾತನ್ನು ಮರೆಯಬಾರದು. ಈ ವಿಷಯಕ್ಕೆ ಬಂದಾಗ, ಎಂಬತ್ತು ಶೇಕಡ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವ  ಜಪಾನೀ ಜನರ ಆಹಾರದ ಅಭ್ಯಾಸ ನಮಗೆ  ಮೇಲ್ಪಂಕ್ತಿಯಾಗಬೇಕು. Kannada proverb – Thuththu hechchadre kuththu ( […]

ಕನ್ನಡ ಗಾದೆಮಾತು – ಉಂಡಾತಾ ಕೇಳಿದ್ರೆ ಮುಂಡಾಸು ಮೂವತ್ಮೂರು‌ ಮೊಳ ಎಂದಿದ್ದ.

ನಾವು ಮನುಷ್ಯರು ಕೆಲವೊಮ್ಮೆ ನಮ್ಮನ್ನು ಕೇಳಲಾದ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳದೆ ಅಬದ್ಧ, ಅಸಂಬದ್ಧ ಉತ್ತರಗಳನ್ನು ಕೊಡುತ್ತೇವೆ! ಶಾಲಾ ಕಾಲೇಜುಗಳ ಪರೀಕ್ಷೆಗಳಲ್ಲೂ, ದೈನಂದಿನ ವ್ಯವಹಾರ- ಮಾತುಕತೆಗಳಲ್ಲೂ ಕೆಲವು ಸಲ ಹೀಗಾಗುತ್ತೆ. ಕೇಳಿದ ಪ್ರಶ್ನೆ ಒಂದು ದಿಕ್ಕಲ್ಲಿದ್ದರೆ, ಉತ್ತರ ಇನ್ಯಾವುದೋ ದಿಕ್ಕಿನಲ್ಲಿದ್ದು, ಹೇಳಿದ್ದಕ್ಕೂ ಕೇಳಿದ್ದಕ್ಕೂ ಸಂಬಂಧವೇ ಇರುವುದಿಲ್ಲ. ಇದನ್ನು ಗಮನಿಸಿಯೇ ನಮ್ಮ ಹಿರಿಯರು ಮೇಲಿನ ಗಾದೆಮಾತನ್ನು ಮಾಡಿರಬೇಕು‌. ‘ಊಟ ಆಯಿತಾ?’ ಎಂದು ಕೇಳಿದರೆ ಆಯಿತು ಅಥವಾ ಇಲ್ಲ ಎಂದು ಉತ್ತರ ಕೊಡುವ ಬದಲು ಪುಣ್ಯಾತ್ಮರೊಬ್ಬರು ‘ಮುಂಡಾಸು( ತಲೆಗೆ ಕಟ್ಟುವ ಬಟ್ಟೆ […]

ಕನ್ನಡ ಗಾದೆಮಾತು    –   ತಲೆ ಮೇಲೆ ಸಾಲ ಹೋಗ್ಬಾರ್ದು, ಒಲೆ ಮೇಲೆ ಬೆಂಕಿ ಹೋಗ್ಬಾರ್ದು. 

ಜೀವನ ವಿವೇಕದ ಮಾತೊಂದನ್ನು ಅಡಿಗೆ ಮನೆಯ ಹೋಲಿಕೆಯೊಂದಿಗೆ ಈ ಗಾದೆಮಾತು ಹೇಳುತ್ತದೆ. ನಾವು ಸಾಲ ಮಾಡುವಾಗ, ಯಾವತ್ತೂ ಸಹ,  ಎಂದಿಗೂ ತೀರಿಸಲಾಗದಷ್ಟು ಪ್ರಮಾಣದಲ್ಲಿ ಸಾಲ ಮಾಡಬಾರದು‌. ಹೀಗೆ ಮಾಡಿದರೆ ನಾವು ಭರಿಸಲಾಗದ ಕಷ್ಟನಷ್ಟಗಳನ್ನು ಅನುಭವಿಸುತ್ತೇವೆ. ಒಲೆಯ ಬೆಂಕಿ ಹೇಗೆ ಒಲೆಯಿಂದ ಮೇಲೆ ಹೋಗಿ ಅಪಾಯವುಂಟು ಮಾಡುವ ಪರಿಸ್ಥಿತಿ ಬರಬಾರದೋ, ಹಾಗೆಯೇ ಸಾಲಸೋಲ ಎನ್ನುವುದು  ಅತಿಯಾಗಬಾರದು. ಸದಾ ಒಂದು ಮಿತಿಯಲ್ಲಿ, ನಾವು ಭರಿಸಲಾಗುವ  ಸ್ಥಿತಿಯಲ್ಲಿ  ಇರಬೇಕು.  Kannada proverb – Thale mele saala hogbardu, ole mele […]

ಕನ್ನಡ ಗಾದೆಮಾತು – ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು.

ನಮ್ಮ ಹಿರಿಯರು ಕಲಿಸಿದ ಜೀವನ ಪಾಠಗಳಲ್ಲಿ ಈ ಗಾದೆಮಾತು ಸಹ ಒಂದು. ಜನರು ತಮಗಿಂತ ಕಡಿಮೆ ಅನುಕೂಲತೆ ಹೊಂದಿರುವವರಿಗೆ ತಾವು ಏನನ್ನಾದರೂ ಕೊಟ್ಟಾಗ, ತಾವು ಕೊಟ್ಟಿದ್ದರ ಬಗ್ಗೆ ಊರಿಗೆಲ್ಲಾ ಟಾಂಟಾಂ ಮಾಡುವ ಅಗತ್ಯವೇನಿರುವುದಿಲ್ಲ. ದಾನ ಮಾಡುವುದನ್ನು ಎಷ್ಟು ಮೌನವಾಗಿ, ಸದ್ದಿಲ್ಲದೆ ಮಾಡಬೇಕು ಎಂಬುದನ್ನು ಮೇಲಿನ ಮಾತು ಬಹಳ ಮಾರ್ಮಿಕವಾಗಿ ಹೇಳುತ್ತದೆ. ನಾವು ಬಲಗೈಯಿಂದ ಕೊಟ್ಟ ದಾನವು ನಮ್ಮದೇ ದೇಹದ ಭಾಗವಾದ ಎಡಗೈಗೂ ತಿಳಿಯದಷ್ಟು ಮೌನದಲ್ಲಿ‌ ನಾವು ದಾನ ನೀಡಬೇಕು. ಕೊಟ್ಟಿದ್ದರ ಬಗ್ಗೆ ಸಿಕ್ಕಿದವರಿಗೆಲ್ಲಾ ಹೇಳಿಕೊಂಡು ತಿರುಗುತ್ತಿದ್ದರೆ, ನಾವು […]

ಕನ್ನಡ ಗಾದೆಮಾತು –    ಹಣ ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ‌. 

ಒಂದು  ಉತ್ಪ್ರೇಕ್ಷೆಯನ್ನು ಬಳಸಿ  ಲೋಕವ್ಯವಹಾರದ ಸತ್ಯವನ್ನು ಹೇಳುವಂತಹ ಒಂದು ಗಾದೆಮಾತು ಇದು. ಹಣವೆನ್ನುವುದು ಜನರ ಬದುಕಿಗೆ ಅನಿವಾರ್ಯವಾದ ಸಂಗತಿ‌. ಒಂದು ಬೆಂಕಿಪೊಟ್ಟಣದಿಂದ ಹಿಡಿದು ದೊಡ್ಡಬಂಗಲೆಯ ತನಕ ಯಾವುದನ್ನು ಕೊಳ್ಳಲಾದರೂ ಹಣ ಬೇಕೇ ಬೇಕು. ಹಣ ಇದೆ ಅಂದರೆ ಅದರ ಅರ್ಥ ಇಡೀ ಲೋಕದ ಭೌತಿಕ ಸಂಪತ್ತಿನ  ಖಜಾನೆಯ  ಬಾಗಿಲು ತೆಗೆಯಿತು ಎಂದೇ ಅರ್ಥ. ಅದಕ್ಕಾಗಿಯೇ ಜನರು ಹಣಕ್ಕಾಗಿ ಬಹುವಾಗಿ ಆಶಿಸುತ್ತಾರೆ, ಮತ್ತು ಹೇಗಾದರೂ ಮಾಡಿ ಅದನ್ನು ತಮ್ಮದಾಗಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಜನ ನೇರಮಾರ್ಗ ಮಾತ್ರವಲ್ಲ, ವಾಮಮಾರ್ಗವನ್ನು ಹಿಡಿದಾದರೂ […]

ಕನ್ನಡ ಗಾದೆಮಾತು – ಕಪ್ಪೇನ ತಕ್ಕಡೀಲಿ ಹಾಕಿದ್ಹಂಗೆ.

ಕನ್ನಡ ಭಾಷಾಬಳಕೆಯ ಸಂದರ್ಭದಲ್ಲಿ ಅನೇಕ ಸಲ ಬಳಕೆಯಾಗುವ ಗಾದೆ ಮಾತಿದು.‌ ಕಪ್ಪೆಗಳು ಸದಾ ಕುಪ್ಪಳಿಸುವ, ನೆಗೆಯುತ್ತಿರುವ ಚಂಚಲ ಜೀವಿಗಳಾದದ್ದರಿಂದ ಅವುಗಳನ್ನು ತೂಗಲು ಅಥವಾ ಇನ್ನು ಯಾವುದೇ ಉದ್ದೇಶದಿಂದಲಾಗಲೀ ಒಂದು ತಕ್ಕಡಿ ತಟ್ಟೆಯಲ್ಲಿ ಕೂರಿಸಲು ಸಾಧ್ಯ ಆಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಒಂದು ಕಪ್ಪೆಯನ್ನಿಟ್ಟರೆ ಇನ್ನೊಂದು ಕಪ್ಪೆ ಹೊರಗೆ ಎಗರುತ್ತದೆ. ಇದೇ ರೀತಿಯಲ್ಲಿ ದೊಡ್ಡ ಕೂಡುಕುಟುಂಬಗಳು ಪ್ರವಾಸಕ್ಕೆ ಹೊರಟಾಗ, ಯಾವುದಾದರೂ ಕಾರ್ಯಕ್ರಮವನ್ನು ಆಯೋಜಿಸಲು ಜನ ಒಟ್ಟು ಸೇರುವಾಗ, ಭಿನ್ನ ಭಿನ್ನ ಹಿನ್ನೆಲೆಯ ಜನರು ಸೇರಿ ಒಟ್ಟಾಗಿ ಏನಾದರೂ ಮಾಡಲು ಪ್ರಯತ್ನ […]

ಕನ್ನಡ ಗಾದೆಮಾತು – ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ.

ಕಾಮಾಲೆ ರೋಗ ಬಂದರೆ ಕಣ್ಣು ಹಳದಿಯಾಗುವುದು ನಮಗೆ ಗೊತ್ತು. ‌ಈ ರೋಗ ಬಂದವರಿಗೆ ಲೋಕವೆಲ್ಲ ಹಳದಿಯಾಗಿ ಕಂಡರೆ ಅದು ಅವರ ಕಣ್ಣಿನ ಪ್ರಶ್ನೆಯೇ ಹೊರತು ಲೋಕದ ಸಮಸ್ಯೆ ಅಲ್ಲ.‌ ಇದೇ ರೀತಿಯಲ್ಲಿ ಕೆಲವು ಸಲ ಜನ ತಮ್ಮಲ್ಲಿ ದೋಷ ಇಟ್ಟುಕೊಂಡು‌ ಆ ದೋಷವನ್ನು ಲೋಕದ ಜನರಿಗೆಲ್ಲಾ ಆರೋಪಿಸುತ್ತಾರೆ. ಭ್ರಷ್ಟ ಮನಸ್ಸುಗಳು ಹೀಗೆ ಮಾಡುವುದು ಹೆಚ್ಚು.‌ ಇಂತಹ ಮನಸ್ಸುಗಳಿಂದ ನಾವು ದೂರ ಇರುವುದು ಒಳಿತು. Kannada proverb – Kaamale kannige lokavella haladi ( For the jaundice […]

ಕನ್ನಡ ಗಾದೆಮಾತು – ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ.

ಕನ್ನಡದ ಹತ್ತು ಅತ್ಯಂತ ಜನಪ್ರಿಯ ಗಾದೆ ಮಾತುಗಳನ್ನು ಪಟ್ಟಿ ಮಾಡುವುದಾದರೆ ಆ ಪಟ್ಟಿಯಲ್ಲಿ  ಈ ಗಾದೆ ಮಾತು ಕೂಡ ಸೇರುತ್ತದೆ ಅನ್ನಿಸುತ್ತೆ; ಏಕೆಂದರೆ ಕನ್ನಡಿಗರು ಮತ್ತೆ ಮತ್ತೆ ಬಹುವಾಗಿ ಬಳಸುವ ಒಂದು ಗಾದೆ ಮಾತಿದು. ಹಿಂಸೆ ಕೊಡುತ್ತಿದ್ದ ಪಿಶಾಚಿಯೊಂದು ಬಾಗಿಲಿಂದ ಹೋಯಿತಪ್ಪ, ಸದ್ಯ! ಅಂದುಕೊಳ್ಳುವಷ್ಟರಲ್ಲಿ ಅದು ಗವಾಕ್ಷಿಯಿಂದ (ವೆಂಟಿಲೇಟರ್) ವಾಪಸ್ಸು ಬಂದರೆ, ಅದರಿಂದ ತೊಂದರೆ ಅನುಭವಿಸುತ್ತಿರುವವರಿಗೆ ಹೇಗಾಗಬೇಡ!  ಇದೇ ರೀತಿಯಲ್ಲಿ,  ನಮಗೆ ಸದಾ ಕಿರಿಕಿರಿ, ತೊಂದರೆ ಮಾಡುತ್ತಿದ್ದ ಸಂಗತಿಯೊಂದು ನಮ್ಮ ಬದುಕಿನಿಂದ ಹೋಯಿತು, ಮರೆಯಾಯಿತು ಅಂದುಕೊಳ್ಳುವಷ್ಟರಲ್ಲಿ, ಅದು […]

ಕನ್ನಡ ಗಾದೆಮಾತು – ಆಗಿಷ್ಟು ಉಂಡು ಈಗಿಷ್ಟು ಉಂಡು ರೋಗಿಷ್ಟನಾದ.

ಆರೋಗ್ಯವನ್ನು ಕಾಪಾಡಿಕೊಳ್ಳುವ ಇಚ್ಛೆ ಇರುವವರು ಇಟ್ಟುಕೊಳ್ಳಬಾರದ ಒಂದು ಅಭ್ಯಾಸದ ಬಗ್ಗೆ ಗಮನ ಸೆಳೆಯುವ, ಕನ್ನಡದ ಒಂದು ಗಾದೆಮಾತು ಇದು. ನಾವು  ಸೇವಿಸುವ ಎರಡು ಊಟಗಳ/ತಿಂಡಿಗಳ  ನಡುವೆ ಸುಮಾರು ಐದು ಗಂಟೆಯ ಬಿಡುವು ಇರಬೇಕೆಂದು ಆರೋಗ್ಯತಜ್ಞರು ಹೇಳುತ್ತಾರೆ. ‌ಏಕೆಂದರೆ ತೆಗೆದುಕೊಂಡ ಆಹಾರವನ್ನು ಜೀರ್ಣವಾಗಿಸಿ ಅದರಲ್ಲಿನ ಪೋಷಕಾಂಶಗಳನ್ನು ರಕ್ತಗತವಾಗಿಸಲು ನಮ್ಮ‌ ಜೀರ್ಣಾಂಗಗಳಿಗೆ ಅಷ್ಟು ಸಮಯಾವಕಾಶ ಬೇಕಾಗುತ್ತದೆ. ಆದರೆ ನಾವು ಗಂಟೆಗೊಮ್ಮೆ, ಅರ್ಧಗಂಟೆಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇದ್ದರೆ ನಮ್ಮ ಜೀರ್ಣಾಂಗಗಳ ಮೇಲೆ  ನಿರಂತರ ಒತ್ತಡ ಬಿದ್ದು ಜೀರ್ಣಕ್ರಿಯೆಗೆ ತೊಂದರೆಯಾಗಿ ಆರೋಗ್ಯ ಕೆಡುತ್ತದೆ. ಅದಕ್ಕಾಗಿಯೇ […]

ಕನ್ನಡ ಗಾದೆಮಾತು – ಹಾಸಿಗೆ ಇದ್ದಷ್ಟು ಕಾಲು ಚಾಚು.‌

ಕನ್ನಡದ ಸುಪ್ರಸಿದ್ಧ ಗಾದೆ ಮಾತುಗಳಲ್ಲಿ ಇದೂ ಒಂದು. ನಮ್ಮ ಹಾಸಿಗೆ ಎಷ್ಟು ಉದ್ದ ಇದೆಯೋ ನಾವು ಅಷ್ಟು ಮಾತ್ರ‌ ಕಾಲು ಚಾಚಬೇಕು.  ಇಲ್ಲದಿದ್ದರೆ ಕಾಲು ಹಾಸಿಗೆಯಿಂದ ಆಚೆ ಹೋಗಿ ದೇಹಕ್ಕೆ ಅನಾನುಕೂಲವುಂಟಾಗುತ್ತದೆ. ಇದೇ ರೀತಿಯಲ್ಲಿ, ನಾವು ನಮ್ಮ ಹಣಕಾಸಿನ ಸ್ಥಿತಿಗತಿ ಎಷ್ಟರ ಮಟ್ಟಿಗೆ ಇದೆಯೋ ಅಷ್ಟರ ಮಟ್ಟಿಗೆ ನಮ್ಮ ಖರ್ಚುವೆಚ್ಚಗಳನ್ನು ಮಿತಿಯಲ್ಲಿರಿಸಿಕೊಳ್ಳಬೇಕು‌. ನಮ್ಮ ಹತ್ತಿರ ಇಲ್ಲದ ಹಣವನ್ನು ಸಾಲಸೋಲ ಮಾಡಿ ಖರ್ಚು ಮಾಡಿದರೆ ಮುಂದೆ ನಾವು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಹೀಗೆ ಈ ಗಾದೆಮಾತು ಜೀವನಕ್ಕೆ ತುಂಬ […]

Page 7 of 16

Kannada Sethu. All rights reserved.