ಎಮ್ಮೆ, ಕೋಣಗಳ ಮನಸ್ಸಲ್ಲಿ ಏನಿದೆಯೋ ಹೇಳಬಲ್ಲವರಾರು? ಆದರೆ ನಾವು ಮನುಷ್ಯರು ನಮ್ಮ ಸಹಜೀವಿಗಳ ಮೊದ್ದುತನಕ್ಕೋ, ಪೆದ್ದುತನಕ್ಕೋ, ಅರಸಿಕತೆಗೋ ಈ ಪ್ರಾಣಿಗಳನ್ನು ರೂಪಕವಾಗಿ ತೆಗೆದುಕೊಂಡು ಪರಸ್ಪರ ಲೇವಡಿ ಮಾಡಿಕೊಳ್ಳುವುದು ಮಾತ್ರ ಕಾಲಾನುಕಾಲದಿಂದಲೂ ತಪ್ಪಿಲ್ಲ. ‘ಕಿನ್ನರಿ ಎಂಬ ವಾದ್ಯವನ್ನು ಕೋಣನ ಮುಂದೆ ನುಡಿಸಿದರೆ/ಬಾರಿಸಿದರೆ ಏನೂ ಪ್ರಯೋಜನ ಇಲ್ಲ, ಅದು ಆ ವಾದ್ಯದ ನಾದ ಮಾಧುರ್ಯವನ್ನು ಕೇಳಿಸಿಕೊಳ್ಳುವುದೂ ಇಲ್ಲ, ಅದಕ್ಕೆ ಸ್ಪಂದಿಸುವುದೂ ಇಲ್ಲ’ – ಈ ಚಿಂತನೆಯಿಂದ ಹೊರಟ ಗಾದೆಮಾತಿದು. ಅಸೂಕ್ಷ್ಮ ಜನರ ಮುಂದೆ, ಅರಸಿಕರ ಮುಂದೆ ಕಲಾಪ್ರಸ್ತುತಿ ಮಾಡುವುದರಿಂದ ಅಥವಾ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!