ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆ ಮಾತು – ಹಸನ್ಮುಖಿ ಸದಾ ಸುಖಿ‌

ಎರಡೇ ಪದಗಳಿದ್ದರೂ ಎಷ್ಟೆಲ್ಲ ಅರ್ಥ ಇರುವ ಗಾದೆ ಮಾತು ಇದು! ಸದಾ ನಗೆಮೊಗದಿಂದ ಇರುವ ವ್ಯಕ್ತಿಯನ್ನು ಹಸನ್ಮುಖಿ ಎನ್ನುತ್ತಾರೆ. ಇಂತಹ ವ್ಯಕ್ತಿಗೆ ಬದುಕಿನ ಕಷ್ಟ, ಸವಾಲು, ಬೇಸರಗಳ ಕಡಲನ್ನು ದಾಟುವ ಸಂದರ್ಭದಲ್ಲಿ ಮುಗುಳ್ನಗುತ್ತಾ ಇರುವಂತಹ ಸಾಮರ್ಥ್ಯ ಇರುತ್ತದೆ. ಇದು ಅವನಲ್ಲಿ/ಅವಳಲ್ಲಿ ಮಾತ್ರವಲ್ಲ, ತನ್ನ ಬಳಿ ಬರುವ, ತಾನು ಭೇಟಿ ಮಾಡುವ ಪ್ರತಿ ವ್ಯಕ್ತಿಯ ಮನಸ್ಸಿನಲ್ಲೂ ಸಂತೋಷ, ನಿರಾತಂಕ ಭಾವವನ್ನು ಹುಟ್ಟಿಸುತ್ತದೆ. ಬದುಕಿನ ನಿಜ ಗೆಲುವು ಅಂದರೆ ಹಸನ್ಮುಖವೇ. ಇಂತಹ ವ್ಯಕ್ತಿಯು ಸದಾಸುಖಿಯಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.  ತನ್ನ […]

ಕನ್ನಡ ಗಾದೆ ಮಾತು – ಸೌಟಿಗೇನು ಗೊತ್ತು ಸಾರಿನ ರುಚಿ?

ಜೀವನದ ಒಂದು ವಿಪರ್ಯಾಸವನ್ನು ಈ ಗಾದೆಮಾತು ಹೇಳುತ್ತಿದೆ. ಸೌಟು ಸದಾಕಾಲವೂ ರುಚಿಕರವಾದ ಸಾರಿನಲ್ಲೇ ಇದ್ದರೂ ಅದಕ್ಕೆ ಸಾರಿನ ರುಚಿಯನ್ನು ಸವಿಯುವ ಸಾಮರ್ಥ್ಯ ಇರುವುದಿಲ್ಲ. ಇದೇ ರೀತಿಯಲ್ಲಿ ಮನೆ ತುಂಬಾ ಪುಸ್ತಕಗಳಿದ್ದರೂ ಒಂದು ಪುಸ್ತಕವನ್ನೂ ಓದದವರು, ಅತಿ ಸುಂದರವಾದ ಹೂವಿನ ತೋಟದಲ್ಲಿ ಓಡಾಡುತ್ತಿದ್ದರೂ ಒಂದೇ ಒಂದು ಹೂವಿನ ಅಂದವನ್ನೂ ಕಣ್ತುಂಬಿಕೊಳ್ಳದವರು, ಮುದ್ದಾದ ಮಕ್ಕಳ ನಡುವೆ ಇದ್ದರೂ ಒಂದೇ ಒಂದು ಮಗುವಿನ ಮುಗ್ಧ ಚೈತನ್ಯದ ಸಂತೋಷವನ್ನು ಅನುಭವಿಸದವರು, ಅವಕಾಶವಿದ್ದರೂ ಜೀವನ ಸಮೃದ್ಧಿಯಿಂದ ವಂಚಿತರಾಗುತ್ತಾರೆ. ಬದುಕಿನ ಒಂದು ನೈಜ ವಿಷಾದವನ್ನು ಈ […]

ಕನ್ನಡ ಗಾದೆಮಾತು – ಅನ್ನ ಹಾಕಿದ ಮನೆ ಕೆಡಲ್ಲ, ಗೊಬ್ಬರ ಹಾಕಿದ ಹೊಲ ಕೆಡಲ್ಲ.

ಜೀವನದ ಬಗ್ಗೆ ತಿಳುವಳಿಕೆ ಹೇಳುವ ಒಂದು ಗಾದೆ ಮಾತು ಇದು‌. ಬೇರೆಯವರಿಗೆ, ಕಷ್ಟದಲ್ಲಿರುವವರಿಗೆ, ಬಂದು ಹೋಗುವವರಿಗೆ ಒಟ್ಟಿನಲ್ಲಿ ತನ್ನ ನೆರಳಿಗೆ ಬರುವ ಯಾರಿಗೇ ಆದರೂ ಅನ್ನ ಹಾಕುವ ಮನೆ ಅಂದರೆ ಅದು ಒಂದು‌ ಒಳ್ಳೆಯ ಕೆಲಸ ಮಾಡುವ ಮನೆ. ಇಂತಹ ಮನೆಯ ಮೇಲೆ ಅಲ್ಲಿ ಊಟ ಮಾಡಿದವರ ಹಾರೈಕೆ ಮತ್ತು ದೇವರ ಆಶೀರ್ವಾದ ಸದಾ ಇರುತ್ತವೆ. ಹೀಗಾಗಿ ಅದು ಎಂದೂ ಹಾಳಾಗುವುದಿಲ್ಲ. ಹಾಗೆಯೇ ಗೊಬ್ಬರ ಹಾಕಿದ ಹೊಲ. ಅದು ಸದಾ ಫಲವತ್ತಾಗಿರುತ್ತದೆ, ಹಾಗೂ ಅದರಲ್ಲಿ ಬೆಳೆ ಚೆನ್ನಾಗಿ […]

ಕನ್ನಡ ಗಾದೆ ಮಾತು‌ – ಬಾವಿ ಬಳಸದೆ ಕೆಟ್ಟಿತು, ನೆಂಟಸ್ತಿಕೆ ನಡೆಸದೆ ಕೆಟ್ಟಿತು.

ಬಾವಿಯೊಂದರ ನೀರು ಯಾವಾಗ ಕುಡಿಯಲು, ಮೀಯಲು ಬಟ್ಟೆ ಮುಂತಾದವನ್ನು  ತೊಳೆಯಲು ಯೋಗ್ಯ ಆಗಿರುತ್ತೆ ಅಂದರೆ ಅದನ್ನು ಜನರು ನಿಯಮಿತವಾಗಿ ಬಳಸುತ್ತಿದ್ದಾಗ. ಇರುವ ನೀರನ್ನು ಬಳಸುತ್ತಾ ಇದ್ದು, ಹೊಸ ನೀರು ಬಾವಿಯಾಳದ ನೀರಿನ ಸೆಲೆಗಳಿಂದ ಬರುತ್ತಿದ್ದರೆ ಆ ಬಾವಿಯ ನೀರು ಬಳಸಲು ಯೋಗ್ಯವಾಗಿರುತ್ತದೆ.‌ ಹಾಗೆಯೇ ನಮ್ಮ ನೆಂಟಸ್ತನಗಳು ಉಳಿಯುವುದು ನಾವು ಅವನ್ನು ನಿಯಮಿತವಾಗಿ ನಡೆಸಿದಾಗ. ಅಂದರೆ ಆಗಾಗ ಕ್ಷೇಮಸಮಾಚಾರದ ಮಾತಾಡುವುದು, ಕಷ್ಟಸುಖ ವಿಚಾರಿಸುವುದು, ಪರಸ್ಪರರ ಮನೆಯ ಸಮಾರಂಭಗಳಿಗೆ ಹೋಗಿ ಬಂದು ಮಾಡುವುದು, ಒಬ್ಬರು ಇನ್ನೊಬ್ಬರ ಆಪತ್ತಿಗೆ ಒದಗುವುದು – […]

ಕನ್ನಡ ಗಾದೆಮಾತು – ಗಂಡು ಹುಟ್ಟಿದ್ರೆ ಅನ್ನ ಮರೀಬೇಕು, ಹೆಣ್ಣು ಹುಟ್ಟಿದ್ರೆ ಬಣ್ಣ ಮರೀಬೇಕು. 

ತುಂಬ ಜೀವನಾನುಭವ ಇರುವ ಒಂದು ಗಾದೆಮಾತು ಇದು ; ಒಬ್ಬ ತಾಯಿಯ ಅನುಭವವನ್ನು ಮನೋಜ್ಞವಾಗಿ ಹೇಳುವಂತಹ ಗಾದೆಮಾತು.  ಬೆಳೆಯುತ್ತಿರುವ ಗಂಡು ಮಕ್ಕಳಿಗೆ ಆಹಾರವು ತುಂಬ ಹೆಚ್ಚು ಪ್ರಮಾಣದಲ್ಲಿ ಬೇಕು‌‌. ಹೀಗಾಗಿ ತಾಯಿಯು ಎಲ್ಲರ ಊಟ-ತಿಂಡಿ ಆದ ಮೇಲೆ  ತನಗಾಗಿ ಮಾಡಿಟ್ಟುಕೊಂಡಿರುವ ದೋಸೆ/ಚಪಾತಿ/ಪೂರಿ/ಅನ್ನ ಮುಂತಾದ ಆಹಾರ ಪದಾರ್ಥಗಳನ್ನು ತೋಳದಂತಹ ಹಸಿವುಳ್ಳ ತನ್ಮ ಹದಿಹರೆಯದ ಮಗನಿಗೆ ಕೊಡಬೇಕಾಗಿ‌ ಬರಬಹುದು. ಹಾಗೆಯೇ, ಬೆಳೆಯುತ್ತಿರುವ ಹೆಣ್ಣು ಮಗಳಿದ್ದಾಳೆ  ಅಂದರೆ ತಾಯಿಯ ಒಳ್ಳೊಳ್ಳೆ ಸೀರೆ, ಒಡವೆ, ಮುಖಾಲಂಕಾರ ಸಾಮಗ್ರಿಗಳನ್ನು ತುಂಬ ಇಷ್ಟಪಟ್ಟು ಬಳಸಲಾರಂಭಿಸುತ್ತಾಳೆ.  ಏಕೆಂದರೆ, […]

ಕನ್ನಡ ಗಾದೆಮಾತು – ಎಂಜಲು ಕೈಯಿಂದ ಕಾಗೇನೂ ಅಟ್ಟೋನಲ್ಲ. 

ಕನ್ನಡದ ಬಹು ಪ್ರಸಿದ್ಧವಾದ ಹಾಗೂ ತುಂಬ ಚಿತ್ರಕಶಕ್ತಿಯ ಗಾದೆ ಮಾತು ಇದು. ನಮ್ಮ ನಡುವೆ ಇರುವ ಜಿಪುಣರನ್ನು ಕುರಿತು ಹೇಳಿರುವ ಮಾತು.‌ ಎಂಜಲು ಕೈ ಅಂದರೆ ಊಟ ಮಾಡಿ ಇನ್ನೂ ತೊಳೆಯದ ಕೈ‌. ಅದಕ್ಕೆ ಅನ್ನದ ಒಂದೆರಡು ಅಗುಳುಗಳು ಅಂಟಿಕೊಂಡಿರುವ ಸಾಧ್ಯತೆ ಇರುತ್ತದೆ. ಅದರಿಂದ ಕಾಗೆಯನ್ನು ಓಡಿಸಿದರೆ ಆ ಅಗುಳುಗಳು ನೆಲಕ್ಕೆ ಬಿದ್ದು ಜಿಪುಣನಿಗೆ ನಷ್ಟ ಆಗುತ್ತದಲ್ಲವೆ!? ಅದಕ್ಕಾಗಿಯೇ ಅವನು ಎಂಜಲು ಕೈಯಲ್ಲಿ ಕಾಗೆಯನ್ನು ಅಟ್ಟುವುದಿಲ್ಲ (ಓಡಿಸುವುದಿಲ್ಲ)! ಜಿಪುಣರನ್ನು ಲಘುವಾಗಿ ತಮಾಷೆ ಮಾಡುವ ಗಾದೆ ಮಾತು ಇದು.  Kannada […]

ಕನ್ನಡ ಗಾದೆಮಾತು – ಕಡುಕೋಪ ಬಂದಾಗ ತಡಕೊಂಡವನೇ ಜಾಣ.

ಕೋಪ ಬರದ ಮನುಷ್ಯರಿಲ್ಲ.‌ ಮನಸ್ಸಿಗೆ ಇಷ್ಟವಾಗದ್ದು ನಡೆದರೆ, ಯಾರಾದರೂ ತೊಂದರೆ ಮಾಡಿದರೆ, ಬದುಕು ಅಸಹಾಯಕ ಪರಿಸ್ಥಿತಿಗೆ ಒಡ್ಡಿದರೆ ಮನುಷ್ಯರಿಗೆ ಕೋಪ ಬರುತ್ತದೆ. ಕೋಪ ಬರುವುದು ಅಸಹಜ ಅಲ್ಲ. ಆದರೆ ಕೋಪ ಬಂದಾಗ ಅದನ್ನು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ಮುಖ್ಯ ವಿಷಯ. ಸುಮ್ಮನಿದ್ದು ಬಿಡುವುದೋ, ಆ ಜಾಗ ಬಿಟ್ಟು ಸ್ವಲ್ಪ ದೂರ ಹೋಗುವುದೋ, ದೀರ್ಘ ಉಸಿರುಗಳನ್ನು  ತೆಗೆದುಕೊಳ್ಳುವುದೋ ಇಂಥವನ್ನು ಮಾಡಬೇಕು‌‌. ಅದು ಬಿಟ್ಟು ಕೋಪ, ಅದರಲ್ಲೂ ಕಡುಕೋಪ( ಅತಿ ಹೆಚ್ಚಿನ ಕೋಪ) ಬಂದರೆ ನಾವು ಪ್ರತಿಕ್ರಯಿಸಿದೆವು ಅಂದರೆ ಎದುರಿಗಿರುವ […]

ಕನ್ನಡ ಗಾದೆಮಾತು‌ – ಆನೆಯಂಥದೂ ಮುಗ್ಗರಿಸ್ತದೆ.

ನಮ್ಮ ಹಿರಿಯರ ಅನುಭವದ ಸಾರ ಈ ಗಾದೆಮಾತು.  ಮನುಷ್ಯರು ತಮ್ಮ ವಯಸ್ಸು, ಸ್ಥಾನಮಾನ, ವಿದ್ಯೆ, ಅಧಿಕಾರ ಇಂತಹ ಸಮೃದ್ಧಿಗಳನ್ನು ನೆಚ್ಚಿಕೊಂಡು, ನೆಮ್ಮಿಕೊಂಡು ತಮ್ಮಿಂದ ಎಂದೂ ಯಾವ ತಪ್ಪೂ ಆಗುವುದಿಲ್ಲ ಎಂದು ಭಾವಿಸಿದರೆ ಅದು ವಿವೇಕದ ನಡೆ ಅಲ್ಲ. ಯಾವಾಗಲೂ ಗಂಭೀರವಾಗಿ ಹೆಜ್ಜೆಹಾಕುವ (ಗಜಗಾಂಭೀರ್ಯ ಎಂಬ ನುಡಿಗಟ್ಟೇ ಇದೆಯಲ್ಲವೆ ಕನ್ನಡದಲ್ಲಿ), ಕಾಡಿನ ಕೀರ್ತಿಕಲಶದಂತಹ, ದೈತ್ಯಗಾತ್ರದ ಪ್ರಾಣಿ ಆನೆಯೂ ಸಹ, ನಡೆಯುವಾಗ ಕೆಲವೊಮ್ಮೆ ಮುಗ್ಗರಿಸಬಹುದು‌.‌ ಹಾಗೆಯೇ ಬಹಳ ವಿವೇಕಿಗಳು, ವಿದ್ವಾಂಸರು ಅನ್ನಿಸಿಕೊಂಡ ಅನುಭವಸ್ಥ ಮನುಷ್ಯರೂ ಸಹ ಕೆಲವು ಸಲ ತಪ್ಪು ಮಾಡುವ ಸಾಧ್ಯತೆ […]

ಕನ್ನಡ ಗಾದೆಮಾತು – ಮಂಡೆ ಗಟ್ಟಿ ಅಂತ ಬಂಡೆಗೆ ಚಚ್ಚಿದ್ರಂತೆ.

ಕನ್ನಡ ಭಾಷೆಯಲ್ಲಿ ಆಗಾಗ ಬಳಕೆಯಾಗುವ ಗಾದೆಮಾತು ಇದು.  ನಮ್ಮ ತಲೆ ( ಮಂಡೆ) ಗಟ್ಟಿ ಇದೆ ಎಂದು ನಾವು ಭಾವಿಸಿ, ಅದಕ್ಕಿಂತ ಸಾವಿರ ಪಾಲು ಗಟ್ಟಿ ಇರುವ ಬಂಡೆಗಲ್ಲಿಗೆ ಅದನ್ನು ಚಚ್ಚಿದರೆ ನಮ್ಮ ತಲೆ ಉಳಿದೀತೇ? ಇಲ್ಲ. ಒಡೆದು ರಕ್ತ ಬರುತ್ತದೆ. ಹಾಗೆಯೇ ಜೀವನದಲ್ಲಿ ಕೆಲವು ಸಲ ಅತಿ ಕಠಿಣ  ಸಮಸ್ಯೆ, ಸನ್ನಿವೇಶಗಳು ಎದುರಾಗುತ್ತವೆ. ಅಂತಹ ಸಮಯದಲ್ಲಿ ನಮ್ಮ ಕೈಯಿಂದ ಪರಿಹಾರ  ಇದನ್ನು ಪರಿಹಾರ ಮಾಡಲು ಸಾಧ್ಯವೇ?, ಆ ಶಕ್ತಿ ಸಾಮರ್ಥ್ಯ  ನಮಗಿದೆಯೇ? ಎಂದು ಯೋಚಿಸಿ ನಾವು […]

ಕನ್ನಡ ಗಾದೆ ಮಾತು – ಗೆಳೆಯರಿಲ್ಲದ ಗ್ರಾಮ ಗೊಂಡಾರಣ್ಯ.

ಸ್ನೇಹ ಅನ್ನುವುದು ಜೀವನದಲ್ಲಿ ತುಂಬ ಅಮೂಲ್ಯವಾದುದು. ವಯಸ್ಸು, ಜಾತಿ, ಲಿಂಗ, ಧರ್ಮ, ಭಾಷೆ, ಅಂತಸ್ತು ಮುಂತಾದ ಯಾವ ಭೇದಗಳನ್ನೂ ಲೆಕ್ಕಿಸದೆ ಎರಡು ಜೀವಗಳು ಒಂದಕ್ಕೊಂದು ಸದಾ ಒಳಿತನ್ನು ಬಯಸುತ್ತಾ, ಕಷ್ಟ ಸುಖಗಳಲ್ಲಿ ಜೊತೆಗಿರುತ್ತಾ,  ತಾವು ಜೊತೆಗಿರುವ ಹೊತ್ತನ್ನು  ಸವಿಯುತ್ತಾ, ಪರಸ್ಪರರ ಬದುಕಿನ ಭಾರವನ್ನು ಹಗುರ ಮಾಡುವ ಅದ್ಭುತ ಭಾವನೆ ಇದು‌. ಕವಿ ಚೆನ್ನವೀರ ಕಣವಿಯವರು ಸ್ನೇಹವನ್ನು ‘ಉಪ್ಪಿಗಿಂತಲು ರುಚಿಯು, ತಾಯಿಗಿಂತಲು ಬಂಧು’ ಎಂದು ಬಣ್ಣಿಸಿದ್ದಾರೆ. ಒಬ್ಬರಾದರೂ ಆಪ್ತ ಸ್ನೇಹಿತರು ಇಲ್ಲದ ಬಾಳಿನಲ್ಲಿ ಸುಖವಿಲ್ಲ. ಅದಕ್ಕಾಗಿಯೇ ಈ ಗಾದೆಮಾತು, […]

Page 6 of 20

Kannada Sethu. All rights reserved.