ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳಿದುಕೊಳ್ಳಬೇಕು. 

ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಕಲಿಕೆ ಎಂಬುದು ಎಂದಿಗೂ ಮುಗಿಯುವುದಿಲ್ಲ. ನಾವು ಜೀವನ ನಡೆಸುವಾಗ ಅನೇಕ ಕಷ್ಟನಷ್ಟಗಳು, ಅನಿರೀಕ್ಷಿತ ಸವಾಲುಗಳು ಎದುರಾಗುತ್ತ, ನಮ್ಮ ತಿಳುವಳಿಕೆಯ ಮಟ್ಟವನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಹೀಗಿರುವಾಗ ನಾವು ಕಲಿಕೆಯನ್ನು ನಿಲ್ಲಿಸುವ ಪ್ರಶ್ನೆಯೇ ಬರಬಾರದು, ಅಲ್ಲವೇ? ಒಂದು ಚಿಕ್ಕ ಮಗು ಕೂಡ ಕೆಲವು ಸಂದರ್ಭಗಳಲ್ಲಿ ನಮಗೆ ಗುರುವಾಗಬಹುದು. ಅದರಲ್ಲೂ ಭೂತ, ಭವಿಷ್ಯಗಳ ಚಿಂತೆ ಮಾಡದೆ ತಕ್ಷಣದ ವರ್ತಮಾನ ಕಾಲವನ್ನು ಅದು ಇರುವಂತೆಯೇ ಸವಿಯುವುದರಲ್ಲಿ ಮಕ್ಕಳು ಎತ್ತಿದ ಕೈ. ಹೀಗಾಗಿ ಜೀವನವನ್ನು ಚೆನ್ನಾಗಿ ನಡೆಸುವ ಯುಕ್ತಿಯ ಮಾತು […]

ಕನ್ನಡ ಗಾದೆಮಾತು – ಆಡಿ ಉಂಡ ಮೈ ಅಟ್ಟು ಉಂಡೀತೇ?

ಮನುಷ್ಯ ಅಂದರೆ ಅವನ ಮಾಡಿಕೊಂಡ ಅಭ್ಯಾಸಗಳ ಮೊತ್ತ ಅನ್ನುತ್ತಾರೆ.‌ ಆಟ ಆಡಿದಂತೆ ಬೇಜವಾಬ್ದಾರಿಯಿಂದ ಜೀವನ ಮಾಡುತ್ತಾ ಬೇರೆಯವರು ಮಾಡಿ ಇರಿಸಿದ್ದನ್ನು ಆರಾಮಾಗಿ ತಿನ್ನುತ್ತಾ ಜೀವನ ಮಾಡುವವರು, ಎಂದಾದರೂ ಕಷ್ಟ ಪಟ್ಟು ತಾವೇ ಅಟ್ಟು( ಅಡಿಗೆ ಮಾಡಿ) ಊಟ ಮಾಡುತ್ತಾರೆಯೇ? ಇಲ್ಲ. ಅವರು ಆ ಸಾಮರ್ಥ್ಯವನ್ನೇ ಬೆಳೆಸಿಕೊಂಡಿರುವುದಿಲ್ಲ.‌ ಜನರ ಜೀವನ ಕ್ರಮ, ಅಭ್ಯಾಸಗಳನ್ನು  ದೀರ್ಘ ಕಾಲ ಗಮನಿಸಿ ನಮ್ಮ ಹಿರಿಯರು ಬಳಕೆಗೆ ತಂದಿರುವ ಗಾದೆ ಮಾತು ಇದು, ಅವರ ಅನುಭವದ ಸಾರ. ಇದರಿಂದ ನಾವು ಕಲಿಯುವುದು ಬಹಳ ಇದೆ.  […]

ಕನ್ನಡ ಗಾದೆಮಾತು –   ಹೆತ್ತೋರಿಗೆ ಹೆಗ್ಗಣ ಮುದ್ದು, ಕೂಡಿದೋರಿಗೆ ಕೋಡಗ ಮುದ್ದು.

ಕನ್ನಡದ ಒಂದು ಬಹು ಜನಪ್ರಿಯ ಗಾದೆ ಮಾತಿದು‌.‌ ನಾವು ಲೋಕದಲ್ಲಿ ಗಮನಿಸುವಂತೆ ಹೆತ್ತವರಿಗೆ ಅವರ ಮಕ್ಕಳು ಎಷ್ಟೇ ಕುರೂಪಿ, ದಡ್ಡರು, ಉಡಾಳರು, ಮೂರ್ಖರಾಗಿದ್ದರೂ ಅವರು ಮುದ್ದೇ. ಹಾಗೂ ಮದುವೆ ಮಾಡಿಕೊಂಡವರಿಗೆ ಅವರ ಗಂಡ/ಹೆಂಡತಿ ಏನು ಮಾಡಿದರೂ ಸರಿಯೇ. ಕೋಡಗ ಅಂದರೆ ಕೋತಿ. ಕೋತಿಯಂತಿದ್ದರೂ, ಅದರಂತೆ ಆಡಿದರೂ ತಾವು ಕೈಹಿಡಿದವರನ್ನ ಜನ ಬಿಟ್ಟುಕೊಡುವುದಿಲ್ಲ  ಎಂದು ನಾವು ಗಮನಿಸಬಹುದು. ತಮ್ಮ ಮಕ್ಕಳು ಅಥವಾ ಜೀವನ ಸಂಗಾತಿಯ ತಪ್ಪನ್ನು ಜನ ಖಂಡಿಸದೆ ಒಪ್ಪಿಟ್ಟುಕೊಂಡಾಗ ಈ ಗಾದೆಮಾತನ್ನು ಬಳಸಲಾಗುತ್ತದೆ.      Kannada […]

ಕನ್ನಡ ಗಾದೆಮಾತು – ಕಾಣದ ಊರಿಗೆ ನಾಲಿಗೆಯೇ ದಾರಿ. 

ಹಳೆಯ ಕಾಲದಲ್ಲಿ ಅಂದರೆ ಗೂಗಲ್ ನಕ್ಷೆಗಳು ಇಲ್ಲದಿದ್ದ ಸಮಯದಲ್ಲಿ ಯಾರಾದರೂ ತಮಗೆ ಅಪರಿಚಿತವಾದ ಊರಿಗೆ ಹೋಗಬೇಕೆಂದರೆ ದಾರಿಯಲ್ಲಿ ಸಿಗುವ ಜನರನ್ನು ವಿಚಾರಿಸುತ್ತಾ, ವಿಚಾರಿಸುತ್ತಾ ಕೇಳುತ್ತಾ ಹೋಗಿ ತಲುಪುತ್ತಿದ್ದರು.  ನಾಚಿಕೆ, ಸಂಕೋಚ ಬಿಟ್ಟು‌ ಮನುಷ್ಯರೊಂದಿಗೆ ಬಾಯಿ ಬಿಟ್ಟು  ಮಾತಾಡಿ,  ಕೇಳುತ್ತಾ ಕೇಳುತ್ತಾ ಎಷ್ಟು ದೂರದ, ಅಪರಿಚಿತ ಊರನ್ನಾದರೂ ತಲುಪಿಬಿಡುತ್ತಿದ್ದರು. ಆದರೆ ಇಂದು ಬದಲಾಗಿರುವ ಕಾಲದಲ್ಲಿ ನಗರ ಪ್ರದೇಶಗಳಲ್ಲಂತೂ ಕೈಯಲ್ಲಿರುವ ಜಂಗಮವಾಣಿಯ ಗೂಗಲ್ಲೇ ದಾರಿ ತೋರುವ ಸಂಗಾತಿ ಆಗಿಬಿಟ್ಟಿದೆ. ಆದರೆ ಗೂಗಲ್ ಸೌಲಭ್ಯ ಸಿಗದ ಕಡೆಯಲ್ಲಿ :ಕಾಣದ ಊರಿಗೆ ಈಗಲೂ […]

ಕನ್ನಡ ಗಾದೆಮಾತು – ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ. 

ಕನ್ನಡದ ಪ್ರಸಿದ್ಧ ಗಾದೆಮಾತುಗಳಲ್ಲಿ ಒಂದು ಇದು. ಊರನ್ನು ಪರರ ದಾಳಿಯಿಂದ ಕಾಪಾಡುವಂಥದ್ದು ಕೋಟೆ. ದಾಳಿಕೋರರು ಪ್ರವೇಶಿಸದಂತೆ ಕೋಟೆಯ ಬಾಗಿಲನ್ನು ಭದ್ರ ಪಡಿಸುವುದು ರಾಜನು ನೇಮಿಸಿದ ಕಾವಲುಗಾರನ ಕೆಲಸ. ಆದರೆ ಕೋಟೆಯ ಬಾಗಿಲನ್ನು ನಿರ್ಲಕ್ಷ್ಯದಿಂದ ತೆಗೆದಿಟ್ಟು ದಾಳಿಕೋರರು ಬರಲು ಅವಕಾಶ ಮಾಡಿಕೊಟ್ಟು, ಅವರು ದಾಳಿ ಮಾಡಿ‌ ಎಲ್ಲವನ್ನೂ ಲೂಟಿ ಹೊಡೆದು ಹೋದ ಮೇಲೆ ಕೋಟೆಯ ಬಾಗಿಲನ್ನು ಹಾಕಿದರೆ ಏನು ಪ್ರಯೋಜನ? ಹಾಗೆಯೇ ನಾವು ಮಾಡಬೇಕಾದ ಕೆಲಸಗಳನ್ನು, ತೆಗೆದುಕೊಳ್ಳಬೇಕಾದ ಜಾಗ್ರತೆಗಳನ್ನು ಅವು ಸಕಾಲಿಕವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಕೆಲಸ, ಜಾಗ್ರತೆಗಳು […]

ಕನ್ನಡ ಗಾದೆಮಾತು – ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ.

ಕನ್ನಡದ ಒಂದು ಪ್ರಸಿದ್ಧ ಗಾದೆಮಾತಿದು.‌ ಕೆಲವು ಜನರು ಮೋಸ, ದಗಾ, ವಂಚನೆಗಳಂತಹ ಅನಾಚಾರಗಳನ್ನು ಅಂದರೆ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರೂ ಮನೆಯ ಮುಂದೆ ಬೃಂದಾವನ ನೆಟ್ಟು, ಎದ್ದು ಕಾಣುವಂತೆ ತುಳಸಿ ಪೂಜೆ ಮಾಡುತ್ತಾ, ತಾವು ತುಂಬ ಒಳ್ಳೆಯವರು, ದೈವಭಕ್ತರು ಎಂಬ ನಟನೆ ಮಾಡುತ್ತಿರುತ್ತಾರೆ. ಇಂತಹವರ ನಿಜಗುಣವು ಒಂದಲ್ಲಾ ಒಂದು ದಿನ ಬಯಲಾಗುತ್ತದೆ.  ಹಾಗೆ ಬಯಲಾದ ದಿನ ಅವರ ಮನೆಯ ಸುತ್ತಮುತ್ತ ವಾಸಿಸುವವರು, ಅವರ ಪರಿಚಿತರು ಮೇಲ್ಕಂಡ ಗಾದೆಮಾತನ್ನು ಹೇಳಿ ಅವರನ್ಬು ಲೇವಡಿ ಮಾಡುತ್ತಾರೆ. ಹೀಗಾಗಿ ಇಂತಹ ಅಹಿತಕರ ಸಂದರ್ಭಗಳಿಗೆ […]

ಕನ್ನಡ ಗಾದೆಮಾತು – ಜನ ಮರುಳೋ ಜಾತ್ರೆ ಮರುಳೋ.

ಜನರು ಒಂಟಿಯಾಗಿದ್ದಾಗ ಅಥವಾ ತಮ್ಮ ಕುಟುಂಬದವರೊಂದಿಗೆ ಇದ್ದಾಗ ಹೇಗೆ ಇರುತ್ತಾರೋ ಯೋಚಿಸುತ್ತಾರೋ ಅದು  ಅವರವರಿಗೆ ಸಂಬಂಧಿಸಿದ ವಿಷಯ. ‌ಆದರೆ ಜನರು ಜಾತ್ರೆಯಂತೆ ಗುಂಪು ಸೇರಿದಾಗ ಕೆಲವೊಮ್ಮೆ ವಿಚಿತ್ರವಾಗಿ, ವಿಲಕ್ಷಣವಾಗಿ ವರ್ತಿಸುತ್ತಾರೆ. ಗಣಪತಿಯ ವಿಗ್ರಹವು ಹಾಲು ಕುಡಿಯಿತು ಎಂದು ನಂಬುವುದು, ದೇವರ ವಿಗ್ರಹವೊಂದು ಕಣ್ಣು ತೆರೆಯಿತು ಎಂದು ಸುದ್ದಿ ಹಬ್ಬಿಸುವುದು,  ಯಾರೋ ಏನೋ  ಯಾವ ಕಾರಣಕ್ಕೋ ಏನೋ ಒಂದು ಕೆಲಸ ಮಾಡಿದರೆ ಅವರನ್ನು ನೋಡಿ ಕುರಿಗಳಂತೆ ತಾವೂ ಅದನ್ನೇ ಎಲ್ಲರೂ ಮಾಡುವುದು..,.. ಹೀಗೆ.‌ ಇಂಗ್ಲೀಷ್ ನಲ್ಲಿ ಇದನ್ನು ಮಾಸ್ […]

ಕನ್ನಡ ಗಾದೆಮಾತು – ಮನೆ ಗೆದ್ದು ಮಾರು ಗೆಲ್ಲು.

ಕನ್ನಡ  ವಿವೇಕದ  ಒಂದು ನೆಲೆಯನ್ನು ಬಹು ಅರ್ಥವತ್ತಾಗಿ‌ ಹೇಳುವ  ಗಾದೆ ಮಾತು ಇದು. ಮೊದಲು ಮನುಷ್ಯನು ತನ್ನ ಮನೆಯನ್ನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು, ನಂತರವಷ್ಟೇ ಅವನು ಮಾರಿನ ಬಗ್ಗೆ ಅಂದರೆ ಮನೆಯಾಚೆಗಿನ ವಿಸ್ತಾರ ಪ್ರದೇಶದ ಹಿತ, ನೆಮ್ಮದಿಗಳ ಬಗ್ಗೆ ಆಲೋಚಿಸಬೇಕು.‌ ತನ್ನ ಮನೆಯನ್ನು ನಿರ್ಲಕ್ಷಿಸಿ, ನೋಯಿಸಿದವನು ಎಷ್ಟು ಲೋಕೋಪಕಾರ ಮಾಡಿದರೆ ಏನು ಪ್ರಯೋಜನ? ಯೋಚಿಸಿ ನೋಡಬೇಕಾದ ವಿಷಯ ಇದು.‌ Kannada proverb – Mane geddu maaru gellu – ( First win the hearts […]

ಕನ್ನಡ ಗಾದೆಮಾತು –  ಹೂವಿನ ಜೊತೆ ನಾರೂ ಸ್ವರ್ಗ ಸೇರಿತು.

ಕನ್ನಡ ಭಾಷೆಯಲ್ಲಿನ ಒಂದು ವಿಶಿಷ್ಟ ಗಾದೆಮಾತಿದು. ದೇವರಿಗೆ ಹೂವಿನ ಹಾರ ಹಾಕಲು ಹೂ ಕಟ್ಟುವಾಗ ಬಾಳೆಯ ಅಥವಾ ಇನ್ಯಾವುದಾದರೂ ಗಿಡದ ನಾರನ್ನು ಬಳಸುತ್ತಾರೆ ಅಲ್ಲವೇ? ದೇವರಿಗೆ ಅರ್ಪಿಸಿದ ಹೂವು ಸ್ವರ್ಗ ಸೇರುತ್ತದೆ, ಏಕೆಂದರೆ ದೇವರ ಆವಾಸಸ್ಥಾನ ಸ್ವರ್ಗ ತಾನೇ. ಇಲ್ಲಿ ಸ್ವಾರಸ್ಯದ ಸಂಗತಿ ಅಂದರೆ ಸುಂದರ, ಸುಗಂಧಮಯ ಹೂವು ಸ್ವರ್ಗ ಸೇರುವುದೇನೋ ಸರಿಯೇ ; ಅದರೆ ಅದನ್ನು ಕಟ್ಟಲು ಬಳಸಿದ ಅಂದಚಂದ ಇಲ್ಲದ ಸರಳ ಸಾಧಾರಣ ನಾರೂ ಸಹ ಅದರೊಂದಿಗೆ ಸ್ವರ್ಗ ಸೇರಿಬಿಡುತ್ತದಲ್ಲ!! ನಮ್ಮ ಜೀವನದಲ್ಲಿ ಯಾರಾದರೂ […]

ಕನ್ನಡ ಗಾದೆಮಾತು – ಲೋಕ ತಿಳೀಬೇಕು ಲೆಕ್ಕ ಕಲೀಬೇಕು.‌

ಲೋಕಜ್ಞಾನ ಎಂಬುದು ಯಾವುದೇ ಶಾಲೆ-ಕಾಲೇಜುಗಳಿಗೆ ಹೋದ ತಕ್ಷಣ ನಮ್ಮ ತಲೆಯಲ್ಲಿ ಜನ್ಮಿಸಿಬಿಡುವಂತಹದ್ದಲ್ಲ. ಅದು ಈ ಲೋಕದಲ್ಲಿ ಜೀವಿಸಿ, ಕಷ್ಟ ಸುಖ ಅನುಭವಿಸಿ, ಜನ ಮತ್ತು ಜೀವನದ ನಡೆ, ರೀತಿಗಳನ್ನು ಗಮನಿಸಿಯೇ ಗಳಿಸಿಕೊಳ್ಳಬೇಕಾದ ಜ್ಞಾನ‌. ಹೀಗೆ ಲೋಕವನ್ನು ಅರಿಯುತ್ತಾ ಹೋಗುವಾಗ ಲೋಕದಲ್ಲಿ ಬಾಳುವುದಕ್ಕೆ ಲೆಕ್ಕ-ಲೆಕ್ಕಾಚಾರ ಕೂಡ ಎಷ್ಟು ಮುಖ್ಯವಾಗುತ್ತದೆ ಎಂಬ ಸತ್ಯ ನಮ್ಮ ಅರಿವಿಗೆ ಬರುತ್ತದೆ. ಲೋಕದ ಲೆಕ್ಕ-ಲೆಕ್ಕಾಚಾರ ಗೊತ್ತಿಲ್ಲದವರು ಸದಾ ಮೋಸ ಹೋಗುತ್ತಿರುತ್ತಾರೆ. ಲೋಕದಲ್ಲಿ, ಅದರಲ್ಲೂ ಮನೆಯಾಚೆಗಿನ ಹೊರಪ್ರಪಂಚದಲ್ಲಿ ಯಾವುದೂ ಉಚಿತವಾಗಿ ದೊರಕದು ಎಂಬ ಒಳಮರ್ಮ ನಮಗೆ  […]

Page 8 of 16

Kannada Sethu. All rights reserved.