ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಹನಿಹನಿಗೂಡಿದ್ರೆ ಹಳ್ಳ  ತೆನೆತೆನೆಗೂಡಿದ್ರೆ ಬಳ್ಳ. 

ಕೆಲಸ, ಸಂಪತ್ತಿನ ಕ್ರೋಢೀಕರಣ, ನಮ್ಮ ಚಿಂತನಾ ವಿನ್ಯಾಸ ಈ ಮುಂತಾದವುಗಳ ಬಗ್ಗೆ ಉತ್ತಮವಾದ ತಿಳುವಳಿಕೆಯನ್ನು ಕೊಡುವ ಒಂದು ಗಾದೆ ಮಾತು ಇದು. ಒಂದೇ ರೀತಿಯ ಸಂಗತಿಗಳಿಗೆ ಒಂದಕ್ಕೊಂದು ಸೇರಿ ಕಾಲಾಂತರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುವ ಗುಣ ಇದೆ. ನೀರಿನ ಒಂದೊಂದೇ ಹನಿ‌ ಸೇರಿ ದೊಡ್ಡ ಹಳ್ಳವಾಗಿಬಿಡುತ್ತವೆ, ತೆನೆಯ ಒಂದೊಂದೇ ಕಾಳು ಸೇರಿ ಬಳ್ಳ (ಧಾನ್ಯವನ್ನು  ಅಳೆಯುವ ಒಂದು ಗ್ರಾಮೀಣ ಅಳತೆ, ಒಂದು ಬಳ್ಳ = ನಾಲ್ಕು‌ಸೇರು) ವಾಗುತ್ತವೆ. ಹೀಗೆಯೇ, ಒಂದೇ ಕ್ಷೇತ್ರದಲ್ಲಿ  ದಿನವೂ ಮಾಡಿದ ತುಸು ಪ್ರಮಾಣದ […]

ಕನ್ನಡ ಗಾದೆಮಾತು – ಅಂತ್ಯ ನಿಷ್ಠುರಕ್ಕಿಂತ ಆರಂಭ ನಿಷ್ಠುರವೇ ಮೇಲು.

ಕೆಲವು ಸಲ ಜೀವನದಲ್ಲಿ ಯಾರಾದರೂ ನಮ್ಮ ಮುಂದೆ ಯಾವುದಾದರೂ ಕೋರಿಕೆ ಇಟ್ಟಾಗ ಅದನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ನಾವು ಇರುವುದಿಲ್ಲ. ‌ ಹೀಗಿದ್ದಾಗ ನಾವು ತಕ್ಷಣ ಆಗುವುದಿಲ್ಲ ಎಂದು ಹೇಳಲು ಮುಜುಗರ ಪಟ್ಟುಕೊಂಡು ” ಹಾಂ ಹೂಂ…ಅದೇನೆಂದ್ರೆ… ಸ್ವಲ್ಪ ಕಷ್ಟ   …. ‌ ‌ ನೋಡೋಣ ” ಎಂದು ಹೇಳಿದೆವು ಎಂದಿಟ್ಟುಕೊಳ್ಳಿ‌. ತುಂಬ ಚಾಲಾಕಿಗಳಾಗಿರುವವರು ಅಥವಾ  ಏನಾದರೂ ಸರಿ    ನಮ್ಮಿಂದ ಕೆಲಸ ಮಾಡಿಸಲೇಬೇಕು ಎಂದಿರುವವರು ನಮ್ಮ ದಾಕ್ಷಿಣ್ಯದ ಅನಿಶ್ಚಿತ ನಿರಾಕರಣೆಯನ್ನು  ಒಪ್ಪಿಗೆ ಎಂದೇ ಊಹಿಸಿಕೊಂಡು ನಮ್ಮ ಮೇಲೆ ಜುಲುಮೆ […]

ಕನ್ನಡ ಗಾದೆ ಮಾತು – ಬಿಸಿ ತುಪ್ಪ: ಉಗುಳೋಕಾಗದು, ನುಂಗೋಕಾಗದು‌.

ಕನ್ನಡ ಜನರು ತಮ್ಮ ಮಾತಿನಲ್ಲಿ ಆಗಾಗ ಬಳಸುವ ಗಾದೆಮಾತು ಇದು. ಮೊದಲು ಈ ಗಾದೆಮಾತಿನ ಮೇಲ್ನೋಟದ ಅರ್ಥವನ್ನು ಅರಿಯೋಣ. ತುಪ್ಪ ಎಂಬುದು ಅತ್ಯಂತ ರುಚಿಯಾದ ಮತ್ತು ಬೇರೆ ತಿನಿಸುಗಳ ರುಚಿಯನ್ನು ಹೆಚ್ಚಿಸುವ ಪದಾರ್ಥ.‌ಇದು ದುಬಾರಿಯೂ ಆದ್ದರಿಂದ ಬಡವರ ಮನೆಗಳಲ್ಲಿ ಎಂದೋ ಒಂದು ಹಬ್ಬದಲ್ಲಿ, ವಿಶೇಷ ದಿನದಲ್ಲಿ ಮಾತ್ರ ಬಳಕೆಗೆ ಸಿಗುವಂಥದ್ದು‌. ಇಂತಹ ತುಪ್ಪ ಒಂದು ವೇಳೆ ಬಿಸಿಯಾಗಿದ್ದು ನೀವು ನೋಡದೆ ಅದನ್ನು ಬಾಯಿಗೆ ಹಾಕಿಕೊಂಡಿರಿ ಎಂದುಕೊಳ್ಳಿ. ಆಗ ಅದನ್ನು ಉಗಿಯಲೂ ಆಗುವುದಿಲ್ಲ (ರುಚಿ, ಮೌಲ್ಯದ ಕಾರಣದಿಂದಾಗಿ), ನುಂಗಲೂ […]

ಕನ್ನಡ ಗಾದೆಮಾತು – ಉಪವಾಸ ಇರಬಹುದು, ಉಪದ್ರವ ತಾಳಲಾಗದು.

ನಮ್ಮ ಜೀವನಾನುಭವದಲ್ಲಿ ನಾವು ಗಮನಿಸಿಯೇ ಇರುವಂತೆ, ಒಂದು ಹೊತ್ತು ಊಟ ಇಲ್ಲದದ್ದರೆ  ಹೇಗೋ ತಾಳಿಕೊಂಡುಬಿಡುತ್ತೇವೆ, ಆದರೆ ಯಾರಾದರೂ ನಮಗೆ ಒಂದೇ ಸಮ, ಕಿರಿಕಿರಿ ಅನ್ನಿಸುವಂತೆ ಉಪದ್ರವ ಕೊಡುತ್ತಿದ್ದರೆ ತಾಳಿಕೊಳ್ಳುವುದು ತುಂಬ ಕಷ್ಟ. ‌ಸದಾ ಮಾತಾಡುವ  ವಾಚಾಳಿಗಳು, ತಾನು ಮಾರುವ ವಸ್ತುವನ್ನು ಕೊಂಡುಕೋ, ಕೊಂಡುಕೋ ಎಂದು ಮೂರು ಹೊತ್ತೂ ದುಂಬಾಲು ಬೀಳುವ ಮಾರಾಟಗಾರರು, ಸದಾ ಗೋಳು ಹೇಳುತ್ತಾ ಸಾಲ ಕೇಳುತ್ತಲೇ ಇರುವವರು….ಇಂತಹವರ ಉಪದ್ರವವನ್ನು ತಡೆದುಕೊಳ್ಳುವುದು ಕಷ್ಟ. ಯಾವಾಗಲೂ ಗುಂಯ್ಗುಡುತ್ತಾ ಕಿರಿಕಿರಿ ಮಾಡುವ ಸೊಳ್ಳೆಗಳದ್ದೂ ಉಪದ್ರವವೇ. ಇಂತಹದ್ದನ್ನು ಸಹಿಸುವುದು ಒಂದು ಹೊತ್ತು […]

ಚಿಂತೆ ಮಾಡಿದರೆ ಸಂತೆ ಸಾಗೀತೇ?

ಮನುಷ್ಯನ ಮನಸ್ಸು ಯಾವುದಾದರೂ ಚಿಂತೆಗೆ ಬಿತ್ತೆಂದರೆ ಅವನ ಕೈಯಲ್ಲಿ ಯಾವ ಕೆಲಸವೂ ಸಾಗುವುದಿಲ್ಲ. ಸಂತೆಯಲ್ಲಾದರೂ ಅಷ್ಟೇ, ಮನೆಯಲ್ಲಾದರೂ ಅಷ್ಟೇ.  ಈ ಬದುಕು  ಸಹ ಒಂದು ರೀತಿಯಲ್ಲಿ ಸಂತೆ ಇದ್ದಂತೆ. ಜನ ಬರುತ್ತಾರೆ, ಹೋಗುತ್ತಾರೆ, ತಮ್ಮಲ್ಲಿರುವುದನ್ನು ಮಾರುತ್ತಾರೆ, ತಮಗೆ ಬೇಕಾದ್ದನ್ನು ಕೊಳ್ಳುತ್ತಾರೆ. ‌ಇಂತಹ ಗಡಿಬಿಡಿ ಗೌಜಿಯ ವಾತಾವರಣದಲ್ಲಿ ಮನುಷ್ಯನು‌ ಯಾವುದೋ ವಿಷಯದ ಬಗ್ಗೆ ಚಿಂತೆ ಮಾಡುತ್ತಾ ಕುಳಿತರೆ ವ್ಯಾಪಾರ ಸಾಗುವುದಿಲ್ಲ. ಹಾಗೆಯೇ ಯಾವ್ಯಾವುದಕ್ಕೋ ಚಿಂತೆ ಮಾಡುತ್ತಾ ಕುಳಿತಿದ್ದರೆ ನಮ್ಮ ಬದುಕಿನ ಬಂಡಿ ಮುಂದೆ ಹೋಗದು. ಹೀಗಾಗಿ ನಾವು ಚಿಂತೆ ಮಾಡುವ […]

ಕನ್ನಡ ಗಾದೆಮಾತು –  ಅರ್ಧ ಕಲಿತವನ ಅಬ್ಬರ ಹೆಚ್ಚು.

ನಿಜವಾಗಿಯೂ ಜ್ಞಾನಿಗಳಾದವರು ಅಬ್ಬರ ಮಾಡುವುದಿಲ್ಲ.‌ ‘ತಮಗೆ ಇಷ್ಟು ಗೊತ್ತು, ಅಷ್ಟು ಗೊತ್ತು, ತಾವು ಎಲ್ಲರಿಗಿಂತ ಮೇಲು’ ಎಂದು ಬೀಗುವುದಿಲ್ಲ.‌ ಆದರೆ ಯಾವುದಾದರೊಂದು ವಿಷಯವನ್ನು ಸ್ವಲ್ಪ ಕಲಿತವರು ತಾವು ಬಹಳ ಹೆಚ್ಚು ಕಲಿತುಬಿಟ್ಟಿದ್ದೇವೆ ಎಂದು ಅಬ್ಬರ ಮಾಡುತ್ತಾರೆ, ಮತ್ತು ಹೀಗೆ ಮಾಡಿ ತಮ್ಮ ಸುತ್ತಮುತ್ತಲಿನ ಜನರ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಹೀಗಾಗಿ, ಮನುಷ್ಯನು ನಿರಂತರವಾಗಿ ಕಲಿಯುತ್ತಾ ಇರಬೇಕೇ ಹೊರತು ಅನಗತ್ಯ ಕಡೆಗಳಲ್ಲಿ ತನ್ನ ಜ್ಞಾನ ಪ್ರದರ್ಶನ ಮಾಡಿ ತನ್ನ ಸ್ಥಾನವನ್ನು ತಾನೇ ಕಳೆದುಕೊಳ್ಳಬಾರದು‌. Kannada proverb – Ardha kalithavana […]

ಕನ್ನಡ ಗಾದೆಮಾತು –  ಅನ್ನ ಇಕ್ಕಿ ಸಾಕು ಅನ್ನಿಸಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸಕ್ಕೆ ಆಗಲ್ಲ.

ಮನುಷ್ಯ ಸ್ವಭಾವ ಹಾಗೂ ಬದುಕಿನ ಬಗ್ಗೆ ಮುಖ್ಯವಾದ ಒಳನೋಟವೊಂದನ್ನು ಕೊಡುವ ಗಾದೆ ಮಾತಿದು. ಹಸಿದ ಮನುಷ್ಯನೊಬ್ಬನಿಗೆ ನೀವು ಊಟ ಬಡಿಸಿದಾಗ ಎರಡಲ್ಲ ನಾಲ್ಕು ತುತ್ತಿಗೆ ‘ ಇನ್ನು ಸಾಕು, ಹೊಟ್ಟೆ ತುಂಬಿತು’ ಎಂದು ಅವನು ಹೇಳುತ್ತಾನೆ ಮತ್ತು ಅವನಿಗೆ ಹೊಟ್ಟೆ ತುಂಬ ಬಡಿಸಿದ ತೃಪ್ತಿ ನಿಮಗೆ ಸಿಗುತ್ತದೆ. ಆದರೆ ಹಣದ ವಿಷಯದಲ್ಲಿ ಹೀಗಾಗುವುದಿಲ್ಲ.‌ ಮನುಷ್ಯನಿಗೆ ಯಾರು ಎಷ್ಟು ಹಣ ಕೊಟ್ಟರೂ ಯಾವತ್ತೂ ಅವನಿಗೆ ಸಾಕು ಅನ್ನಿಸಲ್ಲ, ಇನ್ನೂ ಬೇಕು ಬೇಕು ಅನ್ನಿಸುತ್ತಲೇ ಇರುತ್ತೆ. ಲಂಚ-ರಿಷುವತ್ತು, ಭ್ರಷ್ಟಾಚಾರ, ಕಳ್ಳತನದಂತಹ […]

ಕನ್ನಡ ಗಾದೆಮಾತು –  ಹಿತ್ತಲ ಗಿಡ ಮದ್ದಲ್ಲ.‌

ಕನ್ನಡದ ಅತಿ ಜನಪ್ರಿಯ ಗಾದೆಮಾತುಗಳಲ್ಲಿ ಇದೂ ಒಂದು‌. ಮೂರೇ ಪದಗಳಲ್ಲಿ ಲೋಕಸತ್ಯವೊಂದನ್ನು ಹೇಳುವ ನುಡಿಸಿರಿ ಇದು.  ನಮ್ಮ ಹಿತ್ತಲಲ್ಲೇ ಇರುವ ಒಂದು  ಮದ್ದು( ಔಷಧೀಯ ಗಿಡ) ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ! ಬೇರೆಯವರು ಯಾರಾದರೂ ಅದನ್ನು ಮೆಚ್ಚಿಕೊಂಡರೆ ಆಗ ನಮಗೇ ಆಶ್ಚರ್ಯ ಆಗುತ್ತದೆ, ‘ಅಯ್ಯೋ ಇಷ್ಟು ದಿನ ಇದು ಇದ್ದದ್ದು ನಮ್ಮ ಅರಿವಿಗೆ ಬಂದೇ ಇರಲಿಲ್ಲವಲ್ಲ!’ ಅಂತ. ಅತಿಪರಿಚಿತತೆ ತರುವ ತಿರಸ್ಕಾರವು ಇದಕ್ಕೆ ಕಾರಣವಿರಬಹುದು.‌ ಗಿಡಗಳು ಮಾತ್ರ ಅಲ್ಲ, ನಾವು ಮನುಷ್ಯರ ವಿಷಯದಲ್ಲೂ ಹೀಗೇ ವರ್ತಿಸುತ್ತವೆ. ನಮ್ಮೊಂದಿಗೆಯೇ,  […]

ಕನ್ನಡ ಗಾದೆಮಾತು – ರೆಟ್ಟೆ ಮುರೀಬೇಕು ರೊಟ್ಟಿ ತಿನ್ನಬೇಕು

ನಾವು ಮನುಷ್ಯರು ಕಷ್ಟಪಟ್ಟು ದುಡಿದು ನಮ್ಮ ಅನ್ನ ಸಂಪಾದಿಸಬೇಕು ಎಂಬ ಉತ್ತಮ ನೀತಿಯನ್ನು ನಾಲ್ಕೇ ಪದಗಳಲ್ಲಿ ಹೇಳುವ ಗಾದೆ ಮಾತಿದು. ರೆಟ್ಟೆ ಎಂಬ ನಾಮಪದಕ್ಕೆ ನಿಘಂಟಿನಲ್ಲಿ ಇರುವ ಅರ್ಥ ತೋಳು, ಬಾಹು ಎಂದು. ರೆಟ್ಟೆ ಮುರಿಯುವುದು ಅಂದರೆ ಶ್ರಮ ಪಟ್ಟು ಕೆಲಸ ಮಾಡುವುದು ಎಂದರ್ಥ. ನಾವು ತಿನ್ನುವ ರೊಟ್ಟಿಯು ನಮ್ಮ ರೆಟ್ಟೆ ಮುರಿದು ದುಡಿದು ಗಳಿಸಿದ ಹಣದಿಂದ ಬರಬೇಕೇ ಹೊರತು, ಇನ್ನೊಬ್ಬರ ಮರ್ಜಿ, ಭಿಕ್ಷೆ, ದಾನದಿಂದ ಬರಬಾರದು. ದುಡಿದು ಗಳಿಸಿ ತನ್ನ ಪರಿಶ್ರಮದ ಕೂಳನ್ನು ತಾನು ಉಣ್ಣುವುದರಲ್ಲಿ […]

ಕನ್ನಡ ಗಾದೆಮಾತು –  ಗಣೇಶನ್ನ ಮಾಡು ಅಂದ್ರೆ ಅವರಪ್ಪನ್ನ ಮಾಡಿದ್ರಂತೆ!

ಕೆಲವರಿಗೆ ಯಾವ ಕೆಲಸ ಕೊಟ್ಟರೂ ಅವರು ಅದನ್ನು ಸರಿಯಾಗಿ ಮಾಡುವುದಿಲ್ಲ. ಉದಾಹರಣೆಗೆ ಯಾವುದೋ ಸಾಮಾನು ತಾ ಅಂದರೆ ಇನ್ಯಾವುದನ್ನೋ‌ ತರುವುದು, ಅಡಿಗೆಗೆ ಒಂದು‌‌ ಹಿಡಿ‌ ಉಪ್ಪು ಹಾಕೆಂದರೆ ಮೂರು ಹಿಡಿ ಹಾಕಿಬಿಡುವುದು…..ಹೀಗೆ. ಇಂಥವರು ಪ್ರತಿಯೊಂದು ಕೆಲಸದಲ್ಲೂ ಯಡವಟ್ಟು ಮಾಡುತ್ತಾರೆ. ಇಂಥವರ ಬಗ್ಗೆ ಹೇಳಿರುವ ಮಾತಿದು. ಗಣೇಶನ ಮೂರ್ತಿಯನ್ನು ಮಾಡು ಎಂದರೆ ಅವರ ತಂದೆಯಾದ ಶಿವನ ಮೂರ್ತಿಯನ್ನು ಮಾಡಿದರೆ ಏನು ಮಾಡಬೇಕು ನೀವೇ ಹೇಳಿ! ಇಂತಹ ಯಡವಟ್ಟರಿಗಾಗಿಯೇ ಮಾಡಿರುವ ಗಾದೆ ಮಾತಿದು.  Kannada proverb – Ganeshanna maadu […]

Page 9 of 16

Kannada Sethu. All rights reserved.