ವಿದ್ಯುತ್ ಸ್ಥಾನಪಲ್ಲಟ – ವಿದ್ಯುತ್ ನಿರೋಧಕವಾದ ಒಂದು ಮಾಧ್ಯಮದಲ್ಲಿನ ವಿದ್ಯುತ್ ಪ್ರವಾಹದ ( ಹರಿವಿನ) ಸಾಂದ್ರತೆ.
ವಿದ್ಯುತ್ ದ್ವಿಧ್ರುವ – ಪರಸ್ಪರ ಹತ್ತಿರ ಇರುವ ಎರಡು ಸಮಸಮ ಮತ್ತು ವಿರುದ್ಧ ವಿದ್ಯುದಂಶಗಳು.
ವಿದ್ಯುತ್ ಕೋನ – ಪರ್ಯಾಯ ಹರಿವಿನ ವಿದ್ಯುತ್ತಿನ ಆವರ್ತನದ ‘ಮುನ್ನೂರ ಅರವತ್ತರಲ್ಲೊಂದು’ ಭಾಗವನ್ನು ಸೂಚಿಸುತ್ತದೆ.
ವಿದ್ಯುತ್ ಪ್ರವಾಹ – ವಿದ್ಯುದಂಶಗಳ ಒಂದು ಪ್ರವಾಹ ಇದು.
ವಿದ್ಯುದಂಶ – ವಸ್ತುವಿನ ಮೂಲಕಣಗಳ ಒಂದು ಮೂಲಭೂತ ಗುಣಲಕ್ಷಣ.
ವಿದ್ಯುತ್ ಗಂಟೆ – ವಿದ್ಯುತ್ ಕಾಂತೀಯ ನೆಲೆಯಿಂದ ಕಾರ್ಯ ನಿರ್ವಹಿಸುವ ಸುತ್ತಿಗೆಯೊಂದು ಗಂಟೆಯನ್ನು ಹೊಡೆಯುವ ವ್ಯವಸ್ಥೆಯುಳ್ಳ ಒಂದು ಉಪಕರಣ.
ವಿದ್ಯುತ್ ಪ್ರಕಾಶ – ಎರಡು ವಿದ್ಯುದ್ವಾರಗಳ ನಡುವೆ ಹೊರಚೆಲ್ಲುವ ಬೆಳಕು.
ವಿದ್ಯುತ್ ಶಕ್ತಿ – ಒಂದು ವಿದ್ಯುತ್ ಕ್ಷೇತ್ರದಲ್ಲಿ ಎಲೆಕ್ಟ್ರಾನಿನ ಸ್ಥಾನಕ್ಕೆ ಸಂಬಂಧಿಸಿದಂತಹ ಒಂದು ಶಕ್ತಿ.
ವಿದ್ಯುತೀಕೃತ – ಶಾಶ್ವತವಾಗಿ ವಿದ್ಯುತೀಕೃತಗೊಂಡ ಒಂದು ವಸ್ತು. ಇದರ ಒಂದು ತುದಿಯಲ್ಲಿ ಧನ ವಿದ್ಯುದಂಶ ಹಾಗೂ ಇನ್ನೊಂದು ತುದಿಯಲ್ಲಿ ಋಣ ವಿದ್ಯುದಂಶ ಇರುತ್ತದೆ.
ಸ್ಥಿತಿ ಸ್ಥಾಪಕತ್ವ – ಆಕಾರವನ್ನು ಕೆಡಿಸುವ/ಬದಲಾಯಿಸುವ ಪೀಡನೆಯನ್ನು ತೆಗೆದು ಹಾಕಿದಾಗ ತನ್ನ ಮೂಲ ಆಯಾಮಗಳನ್ನು ಮರಳಿ ಪಡೆಯುವ ಗುಣವೇ ಸ್ಥಿತಿ ಸ್ಥಾಪಕತ್ವ.