Elastance

ವಿದ್ಯುತ್ ಸಾಮರ್ಥ್ಯ ವಿಲೋಮ – ವಿದ್ಯುತ್ ಸಾಮರ್ಥ್ಯದ ವಿಲೋಮ‌‌ ಇದು. ಇದನ್ನು ವಿಲೋಮ ಫ್ಯಾರಡ್ ಗಳಲ್ಲಿ ಅಳೆಯುತ್ತಾರೆ.

Effusion 

ಹೊರ ಹರಿಯುವಿಕೆ – ಒಂದು ಸಣ್ಣ ಕಿಂಡಿಯ ಮೂಲಕ ಅನಿಲವೊಂದರ ಹೊರ ಹರಿಯುವಿಕೆ, ಹೊರ ಚೆಲ್ಲುವಿಕೆ. 

Eddy currents

ಸುಳಿರೂಪೀ ವಿದ್ಯುತ್ಪ್ರವಾಹ- ಕಾಂತಕ್ಷೇತ್ರಗಳು ಬದಲಾಗುತ್ತಿದ್ದಾಗ ವಿದ್ಯುತ್ ವಾಹಕಗಳಲ್ಲಿ ಪ್ರಚೋದನೆಗೊಳ್ಳುವ ವಿದ್ಯುತ್ಪ್ರವಾಹಗಳು. ಇವುಗಳಿಂದಾಗಿ ಆ ವಾಹಕಗಳ ತಾಪಮಾನ ಏರಿ ಉಪಯುಕ್ತ ಶಕ್ತಿಯು ನಷ್ಟವಾಗುತ್ತದೆ.

Eclipse

ಗ್ರಹಣ – ಒಂದು ಆಕಾಶಕಾಯದ ನೆರಳು ಇನ್ನೊಂದರ ಮೇಲೆ ಬೀಳುವುದು‌ ಅಥವಾ ಒಂದು ಆಕಾಶಕಾಯದ ನೆರಳು ಇನ್ನೊಂದನ್ನು ಕಾಂತಿಗುಂದಿಸುವುದು.

Echo

ಪ್ರತಿಧ್ವನಿ – ಒಂದು ಗಟ್ಟಿ ಮೇಲ್ಮೈಯು ಶಬ್ಧದ ಅಲೆಗಳನ್ನು ಪ್ರತಿಫಲಿಸಿದಾಗ ಉಂಟಾಗುವ ಪರಿಣಾಮ. 

Earth’s magnetism

ಭೂಮಿಯ ಅಯಸ್ಕಾಂತತೆ – ಭೂಮಿಯು ತನ್ನ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಹತ್ತಿರವಿರುವ ಬಿಂದುಗಳಲ್ಲಿ ಕಾಂತಕ್ಷೇತ್ರವನ್ನು ಹೊಂದಿರುವುದು ಗೊತ್ತಾಗಿರುವ ವಿಷಯವಾಗಿದೆ‌. ಹೆಚ್ಚೂಕಮ್ಮಿ ಉತ್ತರ ದಕ್ಷಿಣ ದಿಕ್ಕಿನಲ್ಲಿ ತನ್ನೊಳಗೆ ಒಂದು ಬೃಹತ್ ಗಾತ್ರದ ಪಟ್ಟಿ ರೂಪದ ಅಯಸ್ಕಾಂತವಿದೆಯೇನೋ ಎಂಬಂತೆ ವರ್ತಿಸುತ್ತದೆ ನಮ್ಮ ಭೂಮಿ.

Earth’s atmosphere

ಭೂಮಿಯ ವಾತಾವರಣ – ಭೂಮಿಯನ್ನು ಸುತ್ತುವರಿದಿರುವ ಅನಿಲ. ಇದರಲ್ಲಿ‌ ಅನೇಕ ಪದರಗಳಿರುತ್ತವೆ.

Earthing

ಭೂಸ್ಪರ್ಶನ – ಒಂದು ವಿದ್ಯುತ್ ವಾಹಕವನ್ನು ಭೂಮಿಗೆ ಜೋಡಿಸುವ ಪ್ರಕ್ರಿಯೆ.

Earth Inductor

ಭೂ ಪ್ರೇರಕ – ಒಂದು ಗೊತ್ತಾದ ವಿಸ್ತೀರ್ಣವುಳ್ಳ ಪ್ರದೇಶದಲ್ಲಿ ಗೊತ್ತಾದ ತಿರುವುಗಳಿರುವ ಒಂದು ದೊಡ್ಡ ಸುರುಳಿ‌. ಒಂದು ನಿರ್ದಿಷ್ಟ ಸ್ಥಳದಲ್ಲಿನ ಕಾಂತಕ್ಷೇತ್ರವನ್ನು ಅಳೆಯುವಾಗ ಇದನ್ನು ಬಳಸುತ್ತಾರೆ.‌

Earth Current

ಭೂಸ್ಪರ್ಶಿತ( ನೆಲ) ವಿದ್ಯುತ್ ‌- ಯಾವುದಾದರೊಂದು ವಿದ್ಯುತ್ ಉಪಕರಣದ ಮೂಲಕ ಹರಿಯುತ್ತಿರುವ ವಿದ್ಯುತ್ತು ಸೋರುವ, ತಪ್ಪಾಗಿ ಹರಿಯುವ ಅಥವಾ ಮರಳುವ ಸಂದರ್ಭಕ್ಕೆ ಇದು ಸಂಬಂಧಿಸಿದೆ. 

Page 2 of 2

Kannada Sethu. All rights reserved.