Linear modulation

ಲೀನಿಯರ್ ಮಾಡ್ಯುಲೇಷನ್ – ರೇಖಾತ್ಮಕ ಅಲೆಪರಿವರ್ತನೆ – ಒಯ್ಯಕ ಅಲೆಯ ಪರಿವರ್ತಿತ ಗುಣಲಕ್ಷಣವು ಶ್ರವ್ಯ ಆವರ್ತನಗತಿಯ ಒಂದು ಶ್ರೇಣಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಸಮಾನುಪಾತದಲ್ಲಿದ್ದರೆ, ಅದನ್ನು ರೇಖಾತ್ಮಕ ಅಲೆ ಪರಿವರ್ತನೆ ಎನ್ನುತ್ತಾರೆ.

Linear expansion

ಲೀನಿಯರ್ ಎಕ್ಸ್ ಪ್ಯಾನ್ಶನ್ – ರೇಖಾತ್ಮಕ ವಿಸ್ತರಣೆ – ಒಂದು ವಸ್ತುವನ್ನು ಕಾಯಿಸಿದಾಗ ಅದರ ಉದ್ದದಲ್ಲಿ ಆಗುವ ಬದಲಾವಣೆ‌.

Linear distortion

ಲೀನಿಯರ್ ಡಿಸ್ಟಾರ್ಷನ್ – ರೇಖಾತ್ಮಕ  ವಿರೂಪಣೆ –  ವಿದ್ಯುದಲೆಯ ಎತ್ತರಕ್ಕೆ ಯಾವುದೇ ಸಂಬಂಧವಿಲ್ಲದಂತಹ ಯಾವುದೇ ರೂಪದ ಕೊಂಕು ಅಥವಾ ವಿರೂಪಣೆ.

Linear detector 

ಲೀನಿಯರ್ ಡಿಟೆಕ್ಟರ್ –  ರೇಖಾತ್ಮಕ ಪತ್ತೆಯಂತ್ರ – ಹೊರಬರುವ ವಿದ್ಯುದ್ಬಲಕ್ಕೂ ಒಳಹೋಗುವ ವಿದ್ಯುದ್ಬಲಕ್ಕೂ ತನ್ನ ಉಪಯೋಗಕರ ಶ್ರೇಣಿಗೆ ಸಂಬಂಧಪಟ್ಟಂತೆ ನೇರ ಅನುಪಾತವುಳ್ಲ ಪತ್ತೆಯಂತ್ರ‌.

Linear amplifier

ಲೀನಿಯರ್ ಆಂಪ್ಲಿಫೈಯರ್ –  ರೇಖಾತ್ಮಕ‌ ಬಲವರ್ಧಕ – ತನ್ನೊಳಗೆ, ತತ್ಕ್ಷಣದ ಧನವಿದ್ಯುದ್ವಾರದ ವಿದ್ಯುತ್ ಗೂ ಹಾಗೂ ನೀಡಲಾಗುತ್ತಿರುವ ವಿದ್ಯುದ್ಬಲಕ್ಕೂ ನೇರ ರೇಖಾತ್ಮಕ ಸಂಬಂಧವುಳ್ಳ ಬಲವರ್ಧಕ.

ಕನ್ನಡ ಗಾದೆಮಾತು – ನೀರಿಗಿಳಿಯದೆ ಈಜು ಬರೊಲ್ಲ.

ಕೆಲಸ ಅಥವಾ ಕೌಶಲ್ಯವನ್ನು ಕಲಿಯಲು‌ ಇಷ್ಟ ಪಡುವವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಚಿನ್ನದಂತಹ ಮಾತು ಇದು. ನಮ್ಮ‌ ಹಿರಿಯರು ಕಲಿಸಿದ ವಿವೇಕ. ಈಜು ಹೊಡೆಯುವುದಾಗಲಿ, ಅಡಿಗೆ ಮಾಡುವುದಾಗಲಿ, ಎರಡು ಅಥವಾ ನಾಲ್ಕು ಚಕ್ರದ ಗಾಡಿ ಓಡಿಸುವುದಾಗಲಿ, ಉಪಕರಣವೊಂದನ್ನು ತಯಾರಿಸುವುದಾಗಲಿ …. ಆ ಕೆಲಸವನ್ನು ನಮ್ಮ ಕೈಮೈ, ಬುದ್ಧಿಗಳನ್ನು ಬಳಸಿ ತಪ್ಪು ಮಾಡಿ, ಸರಿ ಮಾಡಲು ಪ್ರಯತ್ನ ಮಾಡಿ, ಒದ್ದಾಡಿ, ನಂತರ ಸರಿಯಾಗಿ ಮಾಡಿದಾಗಲೇ ನಮಗೆ ಆ ಕೆಲಸ ಬರುವುದು‌. ಬೇರೆಯವರು ಮಾಡುವುದನ್ನು ದೂರದಿಂದ ನೋಡಿದರೆ ಆ ಕೆಲಸದ ಬಗೆಗಿನ […]

‘ಭೀಕರ’ – ‘ಭಿಕಾರಿ’!….ವಿದ್ಯಾರ್ಥಿನಿ ತಪ್ಪಾಗಿ ಓದಿದಾಗ…ಅಯ್ಯೋ ಏನು‌ ಮಾಡೋಣ ರೀ….!

ಕನ್ನಡ ತರಗತಿಗಳಲ್ಲಿ ಓದಿಸುವುದು, ವಿದ್ಯಾರ್ಥಿಗಳ  ಉಚ್ಚಾರ ತಿದ್ದುವುದು – ಇವು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತಗಳ ತರಗತಿಗಳಲ್ಲಿ ಬಹಳ ಸಾಮಾನ್ಯ ಸಂಗತಿ. ಆದರೆ ಪದವಿ ಹಂತದಲ್ಲಿ ಈ ರೀತಿಯ ಶಿಕ್ಷಣ ಚಟುವಟಿಕೆ ತುಸು ಕಡಿಮೆ.  ವಿದ್ಯಾರ್ಥಿಗಳು ಪದವಿ ಹಂತಕ್ಕೆ ಬರುವ ಹೊತ್ತಿಗೆ, ‘ಸರಿಯಾದ ಉಚ್ಚಾರದೊಂದಿಗೆ ಕನ್ನಡ ಭಾಷೆಯನ್ನು ಓದುವುದನ್ನು ಕಲಿತಿರುತ್ತಾರೆ’ ಎಂಬ ಗೃಹೀತದೊಂದಿಗೆ ನಾವು ಅಧ್ಯಾಪಕರು ‌ಪಾಠ ಮಾಡುತ್ತಿರುತ್ತೇವೆ. ಓದಿದ ಭಾಗದ ವಿಚಾರ-ವಿಮರ್ಶೆ, ವಿಶ್ಲೇಷಣೆ, ಪಾಠವನ್ನು ಜೀವನಕ್ಕೆ‌‌ ಹಾಗೂ ಜೀವನವನ್ನು ಪಾಠಕ್ಕೆ ಅನ್ವಯಿಸಿ ಕಲಿಯುವ ಉನ್ನತ  ಮಟ್ಟದ […]

Kannada Sethu. All rights reserved.