ಲಿಮಿಟಿಂಗ್ ಫ್ರಿಕ್ಷನ್ – ಘರ್ಷಣೆಯ ಗರಿಷ್ಠ ಮಿತಿ – ಒಂದು ವಸ್ತುವು ಇನ್ನೊಂದು ವಸ್ತುವಿನ ಮೇಲೆ ಚಲಿಸಿದಾಗ ಉಂಟಾಗುವ ಗರಿಷ್ಠ ಮಟ್ಟದ ಪ್ರತಿರೋಧ ಬಲ.
ಲಿಮಿಟಿಂಗ್ ಕರೆಂಟ್ (ಡಿಫ್ಯೂಷನ್ ಕರೆಂಟ್) – ಮಿತಗೊಳಿಸುವ ವಿದ್ಯುತ್ ( ಚೆಲ್ಲಾಪಿಲ್ಲಿ ಚಲನೆಯ ವಿದ್ಯುತ್) – ವಿದ್ಯುತ್ ವಿಭಜನೆಯಲ್ಲಿ ವಿದ್ಯುದ್ವಾರದ ಕಡೆಗೆ ಚೆಲ್ಲಾಪಿಲ್ಲಿಯಾಗಿ ಚಲಿಸುವ ವಿದ್ಯುದಣುಗಳ ಗತಿಯು ಅವು ಉತ್ಪತ್ತಿಯಾಗಿ ಹೊರಬೀಳಿವ ಗತಿಗೆ ಸಮನಾಗಿರುವುದಿಲ್ಲ. ಹೀಗಾಗಿ ವಿದ್ಯುತ್ ವಿಭಜಕದ ಗುಣಲಕ್ಷಣಗಳು ಮತ್ತು ವಿದ್ಯುದಣುಗಳ ಕೇಂದ್ರೀಕರಣಗಳ ನಿರ್ದಿಷ್ಟ ಸನ್ನಿವೇಶಗಳನ್ನು ಅವಲಂಬಿಸಿ ನಾವು ಹರಿಯಿಸಬಲ್ಲ ವಿದ್ಯುತ್ತಿಗೆ ಒಂದು ಮಿತಗೊಳಿಸುವ ಮೌಲ್ಯ ಇರುತ್ತದೆ.
ಲಿಮಿಟರ್ – ಮಿತಕಾರಕ – ಒಂದು ವ್ಯವಸ್ಥೆಯು ಹೊರಕ್ಕೆ ನೀಡುವಂತಹ ಯಾವುದಾದರೂ ಗುಣಲಕ್ಷಣ (ಉದಾಹರಣೆಗೆ ಆವರ್ತನ ಗತಿ) ವನ್ನು ಒಂದು ನಿರ್ದಿಷ್ಟ ಮೌಲ್ಯವನ್ನು ದಾಟದಂತೆ, ತಾನೇ ತಕ್ಷಣ ಸ್ವಯಂಚಾಲಿತವಾಗಿ ತಡೆಯುವ ಉಪಕರಣ.
ಲಿಮಿಟ್ – ಮಿತಿ – ಒಂದು ಸ್ವತಂತ್ರ ಚರಾಂಕವು ಒಂದು ನಿಶ್ಚಿತ ಮೌಲ್ಯವನ್ಜು ಸಮೀಪಿಸುವಾಗ ಒಂದು ಗಣಿತ ಕ್ರಿಯೆಯು ಸಮೀಪಿಸುವ ಮೌಲ್ಯ.
ಲೈಟ್ ಇಯರ್ – ಬೆಳಕಿನ ವರ್ಷ( ಜ್ಯೋತಿರ್ವರ್ಷ) – ಖಗೋಳವಿಜ್ಞಾನದಲ್ಲಿ ಬಳಸುವ ದೂರವನ್ನಳೆಯುವ ಒಂದು ಮೂಲಮಾನ ಇದು. ನಿರ್ವಾತದಲ್ಲಿ ಒಂದು ವರ್ಷದ ಅವಧಿಯಲ್ಲಿ ಬೆಳಕು ಚಲಿಸಿದ ದೂರ.
ಲೈಟ್ ವಾಟರ್ ರಿಯಾಕ್ಟರ್ – ಸಾಮಾನ್ಯ ನೀರಿನ ಅಣುಸ್ಥಾವರ – ತಂಪುಕಾರಕವಾಗಿ ಸಾಮಾನ್ಯ ನೀರನ್ನು ಬಳಸುವ ಒಂದು ವಿಶೇಷ ರೀತಿಯ ಅಣುಸ್ಥಾವರ.
ಲೈಟ್ ವ್ಯಾಟ್ – ಬೆಳಕು ವ್ಯಾಟ್ – ದೃಶ್ಯಬೆಳಕು ವಿಜ್ಞಾನದಲ್ಲಿ ಒಂದು ಬೆಳಕಿನ ಆಕರದ ಪ್ರಕಾಶ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಬಳಸುವ ಒಂದು ಪದ.
ಲೈಟ್ನಿಂಗ್ ಸರ್ಜ್ – ಮಿಂಚಿನಲೆ ( ಮಿಂಚಿನ ಉಬ್ಬರದಲೆ) – ಒಂದು ವಿದ್ಯುನ್ಮಂಡಲ ದಲ್ಲಿ ಮಿಂಚಿನಿಂದಾಗಿ ಉಂಟಾಗುವ ತಾತ್ಕಾಲಿಕ ಅಡಚಣೆ ( ಕ್ಷೋಭೆ) ಯನ್ನು ಮಿಂಚಿನಲೆ ಎನ್ನುತ್ತಾರೆ.
Like us!
Follow us!