Low pass filter

ಲೋ ಪಾಸ್ ಫಿಲ್ಟರ್ – ಕೆಳಶ್ರೇಣಿಯನ್ನು ದಾಟಿಸುವ ಅಲೆವಿಂಗಡಕ – ಸೊನ್ನೆ ಆವರ್ತನಗತಿಯಿಂದ ಹಿಡಿದು ಒಂದು ಗರಿಷ್ಠಮಿತಿಯ ಆವರ್ತನಗತಿ ( ಆದರೆ ಅನಂತವಲ್ಲ) ಹೊಂದಿರುವ, ಏಕಪ್ರಸಾರ ಪಟ್ಟಿಯನ್ನು ಇರಿಸಿಕೊಂಡಿರುವ ಅಲೆವಿಂಗಡಕ.

Low frequency

ಲೋ ಫ್ರೀಕ್ವೆನ್ಸಿ – ಕಡಿಮೆ ಆವರ್ತನಗತಿ –  30-300 ಕಿಲೋಹರ್ಟ್ಝ್ ಶ್ರೇಣಿಯಲ್ಲಿನ ರೇಡಿಯೋ ( ತ್ರಿಜ್ಯಾತ್ಮಕ) ಅಲೆಯ ಆವರ್ತನಗತಿ. ಇದು 1-10 ಕಿಲೋಮೀಟರ್ ನಷ್ಟು ಅಲೆಯುದ್ದ (ತರಂಗಾಂತರ) ವನ್ನು ಹೊಂದಿರುತ್ತದೆ.

Lowering of vapour pressure

ಲೋವರಿಂಗ್ ಆಫ್ ವೇಪರ್ ಪ್ರಶರ್ – ಆವಿಯೊತ್ತಡದ ಇಳಿತ – ಒಂದು ಕರಗುವಸ್ತುವನ್ನು ಸೇರಿಸಿದಾಗ ಒಂದು ಶುದ್ಧ ದ್ರವದ ಪರ್ಯಾಪ್ತ ( ಸ್ಯಾಚುರೇಟೆಡ್) ಆವಿಯೊತ್ತಡವು ಕಡಿಮೆಯಾಗುವಂಥದ್ದು.

Loudspeaker

ಲೌಡ್ ಸ್ಪೀಕರ್ – ಧ್ವನಿವರ್ಧಕ – ವಿದ್ಯುತ್ ಅಲೆಗಳನ್ನು, ಕಿವಿಗೆ ಕೇಳಿಸುವಷ್ಟು ಮಟ್ಟಿಗೆ ಗಟ್ಟಿಯಾಗಿರುವಂತಹ ಶಬ್ಧಕಂಪನಗಳನ್ನಾಗಿ  ಪರಿವರ್ತಿಸುವಂತಹ ಉಪಕರಣ.

Loudness of sound

ಲೌಡ್ ನೆಸ್ ಆಫ್ ಸೌಂಡ್ – ಶಬ್ಧದ ಗಟ್ಟಿತನ – ಶಬ್ಧದ ಒಂದು ಆಕರವು ಕೇಳುಗನಲ್ಲಿ ಉಂಟುಮಾಡುವ ಒಂದು ಇಂದ್ರಿಯ ಸವೇದನೆ‌. ಇದು ಒಂದು ದತ್ತ ಆವರ್ತನಗತಿಯ ಸಂದರ್ಭದಲ್ಲಿ, ಶಬ್ಧದ ತೀಕ್ಷ್ಣತೆ ಮತ್ತು ಶಬ್ಧದ ಆವರ್ತನಗತಿಯನ್ನು ಸಹ ಅವಲಂಬಿಸಿರುತ್ತದೆ.

ಕನ್ನಡ ಗಾದೆಮಾತು – ನೋಡಿ ತಿಳೀಬೇಕು, ಮಾಡಿ ಕಲೀಬೇಕು.

ಜೀವನದಲ್ಲಿ ನಾವು ಜಯಶಾಲಿಗಳಾಗಬೇಕಾದರೆ ಅನೇಕ  ಸಂಗತಿಗಳನ್ನು ತಿಳಿಯಬೇಕಾಗುತ್ತದೆ, ಕಲಿಯಬೇಕಾಗುತ್ತದೆ‌. ಬೇರೆಯವರು ಕೆಲಸ ಮಾಡುವ ರೀತಿಯನ್ನು ನೋಡಿ ನಾವು ಬಹಳಷ್ಟು ವಿಷಯಗಳ ಬಗ್ಗೆ ತಿಳಿಯಬಹುದು‌ ; ಉದಾಹರಣೆಗೆ ಮನೆಯಲ್ಲಿ, ಕಛೇರಿಯಲ್ಲಿ ನಮಗಿಂತ ಹಿರಿಯರು, ಅನುಭವಸ್ಥರು ಕೆಲಸ ಮಾಡುವುದನ್ನು ನೋಡಿ ತಿಳಿದುಕೊಳ್ಳುವುದು. ಅದರೆ ಇನ್ನು ಕೆಲವು ಕೆಲಸಗಳು ನಾವು ಮಾಡಿದಾಗಲೇ ಅವು ನಮಗೆ ಬರುವುದು‌ ; ಉದಾಹರಣೆಗೆ, ಈಜು,  ರುಚಿಕರ ಅಡಿಗೆ, ಹಾಗೆಯೇ ಕಾರು ಚಾಲನೆ ಮುಂತಾದ ಕೌಶಲ್ಯ ಬೇಡುವ ಕೆಲಸಗಳು‌. ನೋಡಿ ತಿಳಿದರೂ ನಿಜವಾಗಿಯೂ ಒಂದು ಕೆಲಸ ಮಾಡಲು […]

‘ಕೇಟರಿಂಗ್’ ಗೆ ಕನ್ನಡ ಪದ ಯಾವುದಪ್ಪ?

ಸಭೆ-ಸಮಾರಂಭಗಳು, ಔತಣಕೂಟಗಳ ಮಾತು ಬಂದಾಗ ಅಥವಾ ಮನೆಯಲ್ಲಿ ನಿತ್ಯವೂ ಅಡಿಗೆ ಮಾಡುವುದು ಕಷ್ಟ ಎಂಬ ಸಂದರ್ಭ ಇದ್ದಾಗ,  ‘ಕೇಟರಿಂಗ್ ಗೆ ಹೇಳ್ಬಿಟ್ಟಿದ್ದೀವಪ್ಪ, ಅವ್ರೇ ಅಡಿಗೆ ಮಾಡಿ ತಂದು ಬಡಿಸ್ತಾರೆ, ಉಳಿದದ್ದನ್ನ ತಗೊಂಡು ಹೋಗ್ತಾರೆ, ನಮಗೆ ಯಾವ್ದೂ ತಲೆನೋವಿಲ್ಲ ಸದ್ಯ’, “ನಮ್ಮ ಪರಿಚಯದ ಕೇಟರಿಂಗ್ ನವ್ರಿದಾರೆ, ಫೋನ್ ನಂಬರ್ ಬೇಕಾ?”, “ಅಯ್ಯೋ, ಬೆಳಿಬೆಳಿಗ್ಗೆ ಆಫೀಸ್ಗೆ ಓಡುವಾಗ ತಿಂಡಿ ಮಾಡೋದು ಕಷ್ಟ. ಕೇಟರಿಂಗ್ನವ್ರಿಗೆ ಹೇಳಿದೀನಿ. ತಂದ್ಕೊಡ್ತಾರೆ” …. ಈ ತರಹದ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ, ಅಲ್ಲವೆ? ಈ ‘ಕೇಟರಿಂಗ್’ ಎಂಬ […]

Lossy

ಲಾಸೀ – ನಷ್ಟಕಾಲ – ವಿದ್ಯುತ್ ಶಕ್ತಿವಾಹನೆಯ ಸಂದರ್ಭದಲ್ಲಿ ತುಂಬ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಗುಂದಿಸುತ್ತಾ, ಶಕ್ತಿಯನ್ನು ವ್ಯರ್ಥ ಮಾಡುವ ಅವಾಹಕ ಅಥವಾ ವಿದ್ಯುತ್ ಪ್ರಸಾರಪಥಗಳ ಸಂದರ್ಭದಲ್ಲಿ ಬಳಸುವ ಪದ.

Loss factor

ಲಾಸ್ ಫ್ಯಾಕ್ಟರ್ – ನಷ್ಟಾಂಶ – ಒಂದು ವಿದ್ಯುತ್ ಸಂಪರ್ಕ ರೇಖೆ, ಮಂಡಲ ಅಥವಾ ಉಪಕರಣದ ವಿದ್ಯುತ್ ಪೂರಕದ ಅತಿಗರಿಷ್ಠ ಬಿಂದುವಿನಲ್ಲಿ ಉಂಟಾಗುವ ವಿದ್ಯುತ್ ನಷ್ಟಕ್ಕೂ ಸರಾಸರಿ ವಿದ್ಯುತ್ ನಷ್ಟಕ್ಕೂ ಇರುವಂತಹ ಅನುಪಾತ. 

Loss angle

ಲಾಸ್ ಆಂಗಲ್ – ನಷ್ಟ ಕೋನ – ಒಳ ಹಾಕುವ ವಿದ್ಯುದ್ಬಲವು ಸುಸಂಗತ ಅಲೆ ( ಸೈನ್ ವೇವ್) ಯಾಗಿದ್ದಾಗ, ವಿದ್ಯುತ್ ಸಂಪರ್ಕ ತಂತುವಿನ ಕೋನವು 90 ಡಿಗ್ರಿಗಿಂತ  ಎಷ್ಟು ಕಡಿಮೆ ಇದೆಯೋ ಆ ಕೋನ.

Page 1 of 4

Kannada Sethu. All rights reserved.