ಇಂಗಾಲ ಚಕ್ರ –ಪರಮಾಣು ಬೀಜಕೇಂದ್ರಗಳ ನಡುವೆ ನಡೆಯುವ ರಾಸಾಯನಿಕ ಕ್ರಿಯೆಗಳ ಒಂದು ಸರಣಿ. ಜಲಜನಕ ಬೀಜಕೇಂದ್ರಗಳು ಹೀಲಿಯಂ ಬೀಜಕೇಂದ್ರವಾಗಲು ಸಂಯೋಗಗೊಳ್ಳುವಾಗ ಇಂಗಾಲವು ವೇಗವರ್ಧಕವಾಗಿ ವರ್ತಿಸುವಂತಹ ಕ್ರಿಯಾ ಸರಣಿ ಇದು.
ಇಂಗಾಲ ಕಾಲನಿರ್ಣಯ – ಜೀವಂತ ವಸ್ತುಗಳನ್ನು ಒಳಗೊಂಡ ಅದರಲ್ಲೂ ಭೂಮಿಯನ್ನು ಅಗೆಯುವುದರಿಂದ ದೊರೆಯುವ ಪಳೆಯುಳಿಕೆಗಳ ಕಾಲವನ್ನು ಕಂಡು ಹಿಡಿಯಲು ಬಳಸುವ ಒಂದು ವಿಧಾನ. ಜೀವಂತ ವಸ್ತುಗಳಲ್ಲಿರುವ ಇಂಗಾಲದ ಪರಮಾಣುವಿನ ವಿಕಿರಣ ಸೂಸುವ ಗುಣವನ್ನು ಆಧಾರವಾಗಿಟ್ಟುಕೊಂಡಂತಹ ವಿಧಾನ ಇದು.
ಇಂಗಾಲ ಧ್ವನಿವರ್ಧಕ – ಇಂಗಾಲದ ಹರಳುಗಳನ್ನು ಬಳಸಿಕೊಂಡು ತನ್ನ ಕೆಲಸ ಮಾಡುವಂತಹ ಒಂದು ಧ್ವನಿವರ್ಧಕ.
ಕಾಲುವೆ ಕಿರಣಗಳು – ಋಣಧ್ರುವದಲ್ಲಿ ಚಿಕ್ಕ ಚಿಕ್ಕ ತೂತುಗಳನ್ನು ಮಾಡುವ ಮೂಲಕ, ವಿಸರ್ಜನ ಕೊಳವೆಯಿಂದ ಪಡೆದುಕೊಳ್ಳಲಾಗುವ ಧನ ಅಯಾನುಗಳ ಪ್ರವಾಹಗಳು.
ಉಷ್ಣಮಾಪಕ – ತಾಪಶಕ್ತಿಯನ್ನು ಅಳೆಯಲು ಬಳಸುವ ಉಪಕರಣ.
ತನ್ನ ಒಂದು ಕಡೆಯಲ್ಲಿ ಜೋಡಿಸಲ್ಪಟ್ಟ ಹಾಗೂ ಇನ್ನೊಂದು ಕಡೆಯಲ್ಲಿ ಮುಕ್ತವಾಗಿರಲು ಬಿಟ್ಟಂತಹ ವೃತ್ತಾಕಾರದ ಅಥವಾ ಚೌಕಾಕಾರದ ತೊಲೆ. ಇದರ ಮುಕ್ತಭಾಗದ ಮೇಲೆ ಭಾರ ಬೀಳುತ್ತದೆ.
ವಿದ್ಯುತ್ ಸಾಮರ್ಥ್ಯ – ವಾಹಕಗಳ ನಡುವೆ ವಿದ್ಯುತ್ ಅಂತಃಸಾಮರ್ಥ್ಯದ ವ್ಯತ್ಯಾಸವಿದ್ದಾಗ ವಿದ್ಯುತ್ ವಾಹಕಗಳು ಹಾಗೂ ನಿರೋಧಕಗಳ ಒಂದು ವ್ಯವಸ್ಥೆಗಿರುವ ವಿದ್ಯುತ್ ಸಂಗ್ರಹದ ಸಾಮರ್ಥ್ಯ.
Like us!
Follow us!