ನಮಗೆ ಒಂದು ವಸ್ತು ಅಥವಾ ಒಂದು ವಿಷಯದ ಬಗ್ಗೆ ಆಸಕ್ತಿ ಇಲ್ಲದೆ ಇದ್ದರೆ ಅಥವಾ ಅದರ ಅಗತ್ಯ ನಮಗಿಲ್ಲ ಎಂಬ ಭಾವನೆ ನಮ್ಮಲ್ಲಿದ್ದರೆ ನಮ್ಮ ಮನಸ್ಸಿನಲ್ಲಿ ಆ ವಸ್ತುವಿನ ಮೌಲ್ಯ ಕಡಿಮೆ ಆಗುತ್ತದೆ! ಹೊಟ್ಟೆ ತುಂಬ ಊಟ ಮಾಡಿದ್ದು, ‘ಇನ್ನು ಒಂದು ತುತ್ತು ಸಹ ಬೇಡ’ ಅನ್ನಿಸುವವರಿಗೆ ಎಷ್ಟೇ ಸಿಹಿಯಾದ ಹೋಳಿಗೆ ಕೊಟ್ಟರೂ ‘ ಅಯ್ಯೋ, ನಂಗೆ ಬೇಡ. ಇದು ಸಪ್ಪೆ ಸಪ್ಪೆ’ ಎಂದಾರು ಅವರು! ನಮ್ಮಮನಸ್ಸು ಜೀವನವನ್ನು ನಾವು ನೋಡುವ ಕ್ರಮವನ್ನು ಎಷ್ಟು ಪ್ರಬಲವಾಗಿ ಪ್ರಭಾವಿಸುತ್ತದೆ […]
ಸ್ವಾತಂತ್ರ್ಯದ ಮಟ್ಟಗಳು – ಪರಮಾಣುಗಳಲ್ಲಿ ಕಣಗಳು ಶಕ್ತಿಯನ್ನು ಪಡೆದುಕೊಳ್ಳುವ ಸ್ವತಂತ್ರ ರೀತಿಗಳು.
ನಿಷ್ಕಾಂತಗೊಳಿಸುವಿಕೆ – ಒಂದು ವಸ್ತುವಿನ ಕಾಂತಕ್ಷೇತ್ರವನ್ನು ಅದಕ್ಕೆ ಸಮವಾಗಿರುವ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿರುವ ಕಾಂತಕ್ಷೇತ್ರದ ಬಳಕೆಯಿಂದ ತಟಸ್ಥಗೊಳಿಸುವುದು.
ಜೋಡಣೆ ಕಳಚುವಿಕೆ – ವಿದ್ಯುನ್ಮಂಡಲವೊಂದರಿಂದ ಯಾವುದಾದರೂ ಭಾಗವನ್ನು ತೆಗೆದುಬಿಡುವುದು.
ಇಳಿಜಾರು ಮಾಪಕ – ಅಯಸ್ಕಾಂತೀಯ ಇಳಿಜಾರನ್ನು ಅಳೆಯಲು ಬಳಸುವ ಉಪಕರಣ.
ವಿನಾಶ – ಒಂದು ವಿಕಿರಣ ಬೀಜಕೇಂದ್ರವು ಇನ್ನೊಂದು ವಿಕಿರಣ ಬೀಜಕೇಂದ್ರವಾಗಿ ಮಾರ್ಪಾಟುಗೊಳ್ಳುವುದು.
ಡಾಲ್ಟನ್ ರ ನಿಯಮ – ಅನಿಲಗಳ ಒಂದು ಮಿಶ್ರಣದ ಒತ್ತಡವು ಆ ಮಿಶ್ರಣದಲ್ಲಿನ ಪ್ರತಿ ಬಿಡಿ ಅನಿಲದ ಒತ್ತಡಗಳ ಒಟ್ಟು ಮೊತ್ತವಾಗಿರುತ್ತದೆ ಎಂದು ಸೂಚಿಸುವ ನಿಯಮವಿದು.
Like us!
Follow us!