Concord

ಸ್ವರಮೈತ್ರಿ – ಎರಡು ಅಥವಾ ಅದಕ್ಕಿಂತ ಹೆಚ್ಚು ಸ್ವರಗಳು ಒಟ್ಟಿಗೆ ಸೇರಿ, ಕಿವಿಗೆ ಇಂಪಾಗುವಂತಹ ಧ್ವನಿಸಂಯೋಜನೆಯನ್ನು ಉಂಟುಮಾಡುವುದು.

Concave

ತಗ್ಗು-ಉಬ್ಬು ಅಥವಾ ನಿಮ್ನ-ಪೀನ – ತನ್ನ ಒಂದು ಮೇಲ್ಮೈಯಲ್ಲಿ ಉಬ್ಬಿದ್ದು ಇನ್ನೊಂದು ಮೇಲ್ಮೈಯಲ್ಲಿ ತಗ್ಗಿರುವ ಗಾಜು ಅಥವಾ ಮಸೂರ.

Concave

ತಗ್ಗು ಅಥವಾ ನಿಮ್ನ – ತನ್ನ ಮೇಲ್ಮೈಯಲ್ಲಿ ಒಳಮುಖಿಯಾಗಿ ತಗ್ಗಿದ ಅಥವಾ ಬಾಗಿದ ಒಂದು ಗಾಜು ಅಥವಾ ಮಸೂರ.

Computer

ಗಣಕ ಯಂತ್ರ – ಒಂದು ವಿದ್ಯುನ್ಮಾನ ಉಪಕರಣ. ಒಂದು ಸೂಚಿತ ಕ್ರಮಬದ್ಧ ಕಾರ್ಯಪಟ್ಟಿ(ಪ್ರೋಗ್ರಾಂ)ಯ ಪ್ರಕಾರ ಮಾಹಿತಿಯನ್ನು ಸಂಸ್ಕರಿಸುತ್ತದೆ. ಗಣಕ ಯಂತ್ರದ ಯಂತ್ರಾಂಶವು(ಹಾರ್ಡ್ವೇರ್) ವಾಸ್ತವಿಕ ವಿದ್ಯುನ್ಮಾನ ಅಥವ ಯಾಂತ್ರಿಕ ಉಪಕರಣಗಳನ್ನು ಒಳಗೊಂಡಿರುತ್ತದೆ, ಹಾಗೂ ಅದರ ತಂತ್ರಾಂಶವು(ಸಾಫ್ಟ್ವೇರ್) ಕ್ರಮಬದ್ಧ ಕಾರ್ಯಪಟ್ಟಿ ಮತ್ತು ದತ್ತಾಂಶಗಳನ್ನು ಒಳಗೊಂಡಿರುತ್ತದೆ.

Compton effect

ಕಾಂಪ್ಟನ್ ಪರಿಣಾಮ – ಕ್ಷ-ಕಿರಣ ಅಥವಾ ಗಾಮಾಕಿರಣಗಳಲ್ಲಿನ ಫೋಟಾನು(ಬೆಳಕು ಶಕ್ತಿಯ ಕಣಗಳು)ಗಳನ್ನು ಮುಕ್ತ ಎಲೆಕ್ಟ್ರಾನಗಳು ಚದುರಿಸಿದಾಗ ಆ ಫೋಟಾನುಗಳ ಶಕ್ತಿಯು ಕಡಿಮೆಯಾಗುವ ವಿದ್ಯಮಾನ. ಈ ಪರಿಣಾಮವನ್ನು ೧೯೨೩ರಲ್ಲಿ ಅಮೆರಿಕದ ವಿಜ್ಞಾನಿ ಎ.ಎಚ್.ಕಾಂಪ್ಟನ್‌ರು ಮೊಟ್ಟಮೊದಲು ಗಮನಿಸಿದರು.

Compressibility

ಸಂಕೋಚನ ಮಟ್ಟ – ಹಾಕುವ ಒತ್ತಡದಲ್ಲಿ ಬದಲಾವಣೆಯಾದಾಗ ಒಂದು ಘನವಸ್ತು ಅಥವಾ ದ್ರವವಸ್ತುವಿನ ಪರಿಮಾಣದಲ್ಲಿ ಆಗುವ ತುಲನಾತ್ಮಕ ಬದಲಾವಣೆಯ ಅಳತೆ.

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.

ಇದು ಕನ್ನಡದಲ್ಲಿ ಬಹುವಾಗಿ ಬಳಸಲಾಗುವ ಒಂದು ಗಾದೆ ಮಾತು. ಮೊಸರಲ್ಲಿ ಕಲ್ಲು ಬರುವುದು ಸಾಧ್ಯವೇ ಇಲ್ಲ, ಆದರೆ ಗಂಡನಿಗೆ ಹೆಂಡತಿಯ ಮೇಲೆ ಅಸಮಾಧಾನ, ಸಿಟ್ಟು ಇದ್ದರೆ ಅವನ ಕಣ್ಣಿಗೆ ಅವಳಲ್ಲಿ ತಪ್ಪುಗಳೇ ಕಾಣುತ್ತವೆ. ಅವಳು ಬಡಿಸಿದ ಮೊಸರಿನಲ್ಲಿ ಕಲ್ಲು ಇಲ್ಲದಿದ್ದರೂ ಅದು ಸಿಗುತ್ತದೆ!! ಮತ್ತು ಇನ್ನೊಂದು ಹೊಸ ಜಗಳಕ್ಕೆ ಕಾರಣವಾಗುತ್ತದೆ. ಹೀಗೆಯೇ ತಮಗೆ ಮನಸ್ಸಿಲ್ಲ ಎಂದಾದರೆ ಮನುಷ್ಯರು ಏನೋ ಒಂದು ಕುಂಟುನೆಪ ಹೇಳಿ, ಅಥವಾ ಇಲ್ಲದಿರುವ ದೋಷವೊಂದನ್ನು ಹುಡುಕಿ ಆಡಿ ಸಂಬಂಧದಿಂದ ದೂರವಾಗುತ್ತಾರೆ ಅಥವಾ ಕೆಲಸದಿಂದ ತಪ್ಪಿಸಿಕೊಳ್ಳುತ್ತಾರೆ. […]

ನಗದ ಕನ್ನಡ ಮೇಡಂರನ್ನು ನಗಿಸಿದ ತೇಜಸ್ವಿ ಬರವಣಿಗೆ

ನಾನು ವಿದ್ಯಾವರ್ಧಕ ಸಂಘ ಕಾಲೇಜಿನಲ್ಲಿ ಪದವಿಪೂರ್ವ ತರಗತಿಯಲ್ಲಿ ಓದುತ್ತಿದ್ದಾಗ, ಉತ್ತಮ ಕರ್ತವ್ಯ ಪ್ರಜ್ಞೆಯಿದ್ದ ಕನ್ನಡ ಅಧ್ಯಾಪಕಿಯೊಬ್ಬರು ನಮಗೆ ಪಾಠ ಮಾಡುತ್ತಿದ್ದರು. ಮಧ್ಯಮ ಎತ್ತರದ, ತುಸು ಸ್ಥೂಲ ಎನ್ನಬಹುದಾದ ದೇಹದ, ಕೆಂಪೊಡೆಯುವಷ್ಟು ಬಿಳಿ ಬಣ್ಣ ಹೊಂದಿದ್ದು ಮಧ್ಯವಯಸ್ಸು ಮೀರುತ್ತಿದ್ದ ಹಿರಿಯರು ಆಕೆ. ಪಾಠ ಮಾಡುವಾಗ ತುಂಬ ಬಿಗಿಯಾಗಿರುತ್ತಿದ್ದರು, ನಗುತ್ತಿರಲಿಲ್ಲ. ಅವರು ಬಹುತೇಕ ಕನ್ನಡ ಪದಗಳನ್ನೇ ಪಾಠದಲ್ಲಿ ಮಾತ್ರವಲ್ಲ, ತಮ್ಮ ಆಡುಮಾತಿನಲ್ಲೂ ಬಳಸುತ್ತಿದ್ದರು (ಈಗ ಸಮಯ ಎಷ್ಟು? … ಯಾಕೆ ತರಗತಿಗೆ ತಡವಾಗಿ ಬಂದೆ? … ಐವತ್ನಾಲ್ಕನೇ ಪುಟ ತೆಗೀರಿ […]

ಬಿದಿರಿ ಕಲೆ ಮತ್ತು ಸೌಂದರ್ಯಗುರುಡರ ಪ್ರಸಂಗ

ಈಚೆಗೆ ಗೆಳತಿಯೊಬ್ಬಳ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡುವುದೆಂದು ಯೋಚಿಸುತ್ತಿದ್ದಾಗ ಬಿದಿರಿ ಕಲಾಕೃತಿಯೊಂದನ್ನು ಕೊಡಬಹುದಲ್ಲ ಅನ್ನಿಸಿತು. ಸರಿ, ಅದು ನಮ್ಮ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ(ಜನಪ್ರಿಯವಾಗಿ ಕರೆಯುವಂತೆ ಎಂಜಿ ರೋಡ್) ಕಾವೇರಿ ಕರಕುಶಲ ಮಳಿಗೆಯಲ್ಲಿ ಸಿಗಬಹುದೆಂಬ ಭಾವನೆಯಿಂದ ಅಲ್ಲಿಗೆ ಹೋದೆ. ಗಂಧದ ಮರದ ವಸ್ತುಗಳು, ಮೈಸೂರು ವರ್ಣಚಿತ್ರಗಳು, ಲೋಹದ ವಿಗ್ರಹಗಳು, ಚೆನ್ನಪಟ್ಟಣದ ಗೊಂಬೆಗಳು ಮುಂತಾದ ಕರ್ನಾಟಕ ರಾಜ್ಯಮೂಲದ ಸುಂದರ ವಸ್ತುಗಳನ್ನು ಕೊಳ್ಳಬಹುದಾದ ಸ್ಥಳ ಅದು.  ಕರ್ನಾಟಕ ಸರ್ಕಾರದ ಒಡೆತನವುಳ್ಳ  ಈ ಮಳಿಗೆಯು, ಬೆಂಗಳೂರಿನ ಒಂದು ಮುಖ್ಯ ಕರಕುಶಲಕಲಾಕೃತಿಗಳ ಮಾರಾಟ […]

ಹೌದಪ್ಪನ ಚಾವಡೀಲಿ ಹೌದಪ್ಪ, ಅಲ್ಲಪ್ಪನ ಚಾವಡೀಲಿ ಅಲ್ಲಪ್ಪ.

ಕೆಲವು ಜನರಿರುತ್ತಾರೆ, ಅವರಿಗೆ ಸ್ವಂತ ಅಭಿಪ್ರಾಯ, ಅನಿಸಿಕೆ ಅನ್ನುವುದೇ ಇರುವುದಿಲ್ಲ. ಯಾರು ಏನು ಹೇಳಿದರೂ ಹೌದು, ಹೌದು ಅನ್ನುತ್ತಾರೆ. ತುಸು ಮುಂಚೆ ತಾವು ಹೌದು ಎಂದು ಒಪ್ಪಿಕೊಂಡಿದ್ದ ವಿಷಯವನ್ನು ಎರಡು ಗಳಿಗೆಯ ನಂತರ ಇನ್ನೊಬ್ಬರು ಅಲ್ಲ ಅಂದೊಡನೆ ಇವರೂ ಸಹ ಅಲ್ಲ ಅನ್ನುತ್ತಾರೆ! ಇಂಥವರು ಬೌದ್ಧಿಕವಾಗಿ ಚಿಂತನ-ಮಂಥನ ನಡೆಸುವ ವಿಷಯದಲ್ಲಿ ಸೋಮಾರಿತನದಿಂದ ಹೀಗೆ ಮಾಡುವರೋ, ಅಥವಾ ಎದುರಿಗೆ ಇರುವವರನ್ನು ಮೆಚ್ಚಿಸಿ ಅವರಿಂದ ತಮಗೆ ಬೇಕಾದ ಸ್ವಾರ್ಥಸಾಧನೆ ಮಾಡಿಕೊಳ್ಳಲು ಹೀಗೆ ವರ್ತಿಸುವರೋ ಹೇಳಲಾಗದು. ಆದರೆ ಇಂಥವರನ್ನು ಯಾರೂ ಸಹ […]

Page 101 of 130

Kannada Sethu. All rights reserved.