ಕಪ್ಪು ವಸ್ತು – ತನ್ನ ಮೇಲೆ ಬೀಳುವ ಎಲ್ಲ ಬೆಳಕನ್ನೂ ಸಂಪೂರ್ಣವಾಗಿ ಹೀರಿಕೊಳ್ಳುವ ವಸ್ತು.
ಕಪ್ಪು ಕುಳಿ – ಬಾಹ್ಯಾಕಾಶದಲ್ಲಿರುವ ಒಂದು ವಸ್ತು ಇದು. ತನ್ನದೇ ಗುರುತ್ವಶಕ್ತಿಗಳ ಅಡಿಯಲ್ಲಿ ಕುಸಿದಂತಹ ವಸ್ತು. ಇದು ಎಷ್ಟರ ಮಟ್ಟಿಗೆ ಕುಸಿದಿರುತ್ತದೆಂದರೆ ಇದರ ವಿಮೋಚನಾ ವೇಗವು ಬೆಳಕಿನ ವೇಗಕ್ಕೆ ಸಮನಾಗಿರುತ್ತದೆ (ವಿಮೋಚನಾ ವೇಗ = ಒಂದು ವಸ್ತುವಿನ ಗುರುತ್ವಾಕರ್ಷಣೆಯಿಂದ ಇನ್ನೊಂದು ವಸ್ತುವು ತಪ್ಪಿಸಿಕೊಂಡು ಹೋಗಲು ಹೊಂದಿರಬೇಕಾದ ಕನಿಷ್ಠ ವೇಗ).
ಕಪ್ಪು ಬೆಳಕು – ಇದು ವಿದ್ಯುತ್ಕಾಂತೀಯ ಅದೃಶ್ಯ ವಿಕಿರಣ(ಬೆಳಕು). ಇದು ಹೊಳಪಿನ ಕಾಂತಿ ಬೀರಬಲ(ಫ್ಲೋರೋಸೆಂಟ್) ವಸ್ತುಗಳ ಮೇಲೆ ಬಿದ್ದಾಗ ಅವು ಕಣ್ಣಿಗೆ ಕಾಣುವ ಬೆಳಕನ್ನು ಸೂಸುವಂತೆ ಮಾಡುತ್ತದೆ.
ಕುರುಡು ಜಾಗ – ಕಣ್ಣಿನ ದೃಶ್ಯಪಟಲದಲ್ಲಿ ನರವು ಕಣ್ಣನ್ನು ಬಿಡುವಂತಹ ಜಾಗ.
ಹೊದಿಕೆ – ಅಣುಸ್ಥಾವರದ ಕೇಂದ್ರವನ್ನು ಸುತ್ತುವರಿದಿರುವ ಫಲವತ್ತಾದ ವಸ್ತು. ಇದನ್ನು ಒಂದೋ ಹೊಸ ಇಂಧನವಸ್ತುವನ್ನು ಬೆಳೆಸಲು ಇಲ್ಲವೇ ಕೆಲವು ನ್ಯೂಟ್ರಾನುಗಳನ್ನು ಕೇಂದ್ರಕ್ಕೆ ಮರಳಿ ಪ್ರತಿಫಲಿಸಲು ಬಳಸುತ್ತಾರೆ.
ದ್ವಿಧ್ರುವ ವಿದ್ಯುದ್ವಾರ ವಿದ್ಯುತ್ ರಾಸಾಯನಿಕ ಕೋಶವೊಂದರಲ್ಲಿ ವಿದ್ಯುತ್ ಹರಿಯುವ ಒಂದು ಲೋಹದ ಪಟ್ಟಿ. ಆದರೆ ಇದನ್ನು ಆ ಕೋಶದ ಧನವಿದ್ಯುದ್ವಾರಕ್ಕಾಗಲೀ ಋಣವಿದ್ಯುದ್ವಾರಕ್ಕಾಗಲೀ ಜೋಡಿಸಿರುವುದಿಲ್ಲ. ಏಕೆಂದರೆ ವಿದ್ಯುತ್ ಹರಿಯುವಾಗ ಈ ಪಟ್ಟಿಯ ಒಂದು ಮುಖವು ಸಹಕಾರೀ ಋಣವಿದ್ಯುದ್ವಾರವಾಗಿ ಕೆಲಸ ಮಾಡಿದರೆ ಇನ್ನೊಂದು ಮುಖವು ಧನವಿದ್ಯುದ್ವಾರವಾಗಿ ಕೆಲಸ ಮಾಡುತ್ತದೆ.
ದ್ವಿಧ್ರುವ ಟ್ರ್ಯಾನ್ಸಿಸ್ಟರು _ ಎಲೆಕ್ಟ್ರಾನುಗಳು ಮತ್ತು ರಂಧ್ರಗಳು ತುಂಬ ಅವಶ್ಯಕವಾದ ಪಾತ್ರಗಳನ್ನು ನಿರ್ವಹಿಸುವ ಒಂದು ಟ್ರ್ಯಾನ್ಸಿಸ್ಟರು, ಉದಾಹರಣೆಗೆ ಒಂದು ಕೂಡುಸ್ಥಳ(ಜಂಕ್ಷನ್) ಟ್ರ್ಯಾನ್ಸಿಸ್ಟರು.
(ಪ್ರೆಸ್ನೆಲ್‌ರ) ಇಮ್ಮಡಿ ಪಟ್ಟಕ – ಬೆಳಕಿನ ಪ್ರವೇಶದ ಅಗತ್ಯವುಳ್ಳ ಪ್ರಯೋಗಗಳಲ್ಲಿ ಎರಡು ನಿಜಭಾಸ(ವರ್‍ಚುವಲ್) ಹಾಗೂ ಸಮಂಜಸ(ಕೊಹೆರೆಂಟ್) ಆಕರಗಳನ್ನು ಉತ್ಪತ್ತಿ ಮಾಡುವಂತಹ ದೊಡ್ಡ ಕೋನವುಳ್ಳ ಒಂದು ಗಾಜಿನ ಪಟ್ಟಕ. ಪ್ರಾನ್ಸಿನ ಕಟ್ಟಡ ಯಂತ್ರಜ್ಞಾನಿಯಾಗಿದ್ದ ಆಗಸ್ಟಿನ್ ಜೀನ್ ಫ್ರೆಸ್ನೆಲ್‌ರು(ಕಾಲ : ೧೦-೦೫-೧೭೮೮ ರಿಂದ ೧೪-೦೭-೧೮೨೭) ಇದನ್ನು ಕಂಡುಹಿಡಿದರು.
Like us!
Follow us!