ಕ್ಯೂರಿ – ವಿಜ್ಞಾನಿ ಮೇಡಂ ಕ್ಯೂರಿಯವರ ನೆನಪಿನಲ್ಲಿ ಇಡಲಾಗಿರುವ ಒಂದು ಮೂಲಮಾನ. ಒಂದು ವಸ್ತುವಿನ ವಿಕಿರಣ ಚಟುವಟಿಕೆಯನ್ನು(Radio activity) ಅಳೆಯುವ ಮೂಲಮಾನವಿದು.
ಹರಳು ಅಧ್ಯಯನ – ಹರಳುಗಳ ರಚನೆಯನ್ನು ಅಧ್ಯಯನ ಮಾಡಲು ಬಳಸುವಂತಹ ವಿಧಾನ.
ಹರಳು ನಿವಾಸ – ಹರಳಿನ ಬಾಹ್ಯ ರೂಪವನ್ನು ಹರಳು ನಿವಾಸ ಅನ್ನುತ್ತಾರೆ.
ಹರಳು – ಸಮಕಟ್ಟಾದ ಮೇಲ್ಮೈಗಳುಳ್ಳ ಒಂದು ಘನವಸ್ತು. ಇಲ್ಲಿ ಒಂದೇ ವಸ್ತುವಿನ ಹರಳುಗಳು ಹೇಗೆ ಬೆಳೆಯುತ್ತವೆ ಅಂದರೆ ಅವುಗಳ ಮೇಲ್ಮೈಗಳ ನಡುವಿನ ಕೋನವು ಒಂದೇ ಆಗಿರುತ್ತದೆ.
ಶೀತ ಭೌತಶಾಸ್ತ್ರ – ಬಹಳವೇ ಕಡಿಮೆ ತಾಪಮಾನಕ್ಕೆ ಸಂಬಂಧಿಸಿದ ಭೌತಶಾಸ್ತ್ರ.
ಮಸೂರ ತಯಾರಿಕಾ ಗಾಜು ಅಥವಾ ದೃಶ್ಯೋಪಕರಣ ತಯಾರಿಕಾ ಗಾಜು – ಸಾಕಷ್ಟು ಗಟ್ಟಿಯಾಗಿದ್ದರೂ ಸುಲಭವಾಗಿ ಉಜ್ಜಿ ಹೊಳಪು ನೀಡಲು ಸಾಧ್ಯವುಳ್ಳ ಗಾಜು. ಇದು ತುಂಬಾ ಪಾರದರ್ಶಕವಾಗಿರುತ್ತದೆ.
ಋಣಧ್ರುವ ಕಿರಣ ಬಿಂಬ ದರ್ಶಕ – ವಿದ್ಯುತ್ ಪ್ರವಾಹವನ್ನು ಅಥವಾ ವಿದ್ಯುದಂಶವನ್ನು ಒಂದು ಪ್ರತಿದೀಪಕ (ಫ್ಲೋರೋಸೆಂಟ್) ಪರದೆಯ ಮೇಲೆ ತೋರಿಸುವ ಒಂದು ಉಪಕರಣ.
ನಿರ್ಧಾರಕ ವೇಗ – ದ್ರವಗಳ ಹರಿವಿನಲ್ಲಿ ಶಾಂತ ಹರಿವಿನಿಂದ ಪ್ರಕ್ಷುಬ್ಧ ಹರಿವಿಗೆ ಆ ದ್ರವವು ಬದಲಾಗುವಂತಹ ವೇಗ.
Like us!
Follow us!