Hydrology

ಹೈಡ್ರಾಲಜಿ‌ – ಜಲವಿಜ್ಞಾನ – ವಾತಾವರಣದ ವಾಯುಮಂಡಲ‌ ಹಾಗೂ ಜಲಮಂಡಲಗಳಲ್ಲಿ ನೀರು ಸಿಗುವಂತಹ ಸ್ಥಳಗಳು ಮತ್ತು ಇವಕ್ಕೆ ಸಂಬಂಧಿಸಿದ ಗುಣಲಕ್ಷಣಗಳ ಅಧ್ಯಯನ.

Hydrogen ion

ಹೈಡ್ರೋಜನ್ ಅಯಾನ್ – ಜಲಜನಕದ ವಿದ್ಯುದಣು – ಧನ ವಿದ್ಯುದಂಶವುಳ್ಳ ಜಲಜನಕದ ಪರಮಾಣು ಅಂದರೆ ಪ್ರೋಟಾನು.

Hydrogen electrode

ಹೈಡ್ರೋಜನ್ ಎಲೆಕ್ಟ್ರೋಡ್ – ಜಲಜನಕದ ವಿದ್ಯುದ್ವಾರ – ವಿದ್ಯುದ್ವಾರ ಸಾಮರ್ಥ್ಯವು ಸೊನ್ನೆಯಾಗಿರುವಂತೆ ಇರಿಸಿದ, ಜಲಜನಕವನ್ನು ಆಧರಿಸಿದ ಒಂದು ವಿದ್ಯುದ್ವಾರ. ಹೀಗಾಗಿ ಬೇರೆ ಮೂಲವಸ್ತುಗಳನ್ನು ಇದರೊಂದಿಗೆ ಹೋಲಿಸಬಹುದಾಗಿರುತ್ತದೆ.

Hydraulic press

ಹೈಡ್ರಾಲಿಕ್ ಪ್ರೆಸ್ – ಜಲಸಾಮರ್ಥ್ಯದ ಒತ್ತುಯಂತ್ರ – ದ್ರವವೊಂದರಲ್ಲಿನ ಒತ್ತಡದ ಮೂಲಕ‌ ಬಲಗಳು ವರ್ಗಾಯಿಸಲ್ಪಡುವ ಒಂದು ಯಂತ್ರ.

ಕನ್ನಡ ಗಾದೆಮಾತು – ಕಿಡಿ ಸಣ್ಣದಾದ್ರೂ ಕಾಡು ಸುಡಬಲ್ಲುದು.

ತುಂಬ ಅರ್ಥಪೂರ್ಣವಾದ ಗಾದೆಮಾತು ಇದು. ‌ಬೆಂಕಿ ಕಿಡಿ ಚಿಕ್ಕದು ಎಂದು ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪುಟ್ಟ ಹುಲ್ಲಿನಿಂದ ಪ್ರಾರಂಭಿಸಿ ಪೊದೆ, ಗಿಡ, ಮರ ಎಲ್ಲವನ್ನೂ ಒಂದರ ಹಿಂದೆ ಒಂದರಂತೆ ಸುಡಬಲ್ಲುದು ಅದು. ಹಾಗೆಯೇ ಚಾಡಿಮಾತು, ಹೊಟ್ಟೆಕಿಚ್ಚು, ಒಳಸಂಚುಗಳಂತಹ ಕೆಟ್ಟ ಸಂಗತಿಗಳು ; ಶುರುವಿನಲ್ಲಿಯೇ ಅವುಗಳ ಬೇರು ಚಿವುಟದಿದ್ದರೆ ಇಡೀ ಬದುಕನ್ನೇ ಹಾಳು ಮಾಡಬಲ್ಲಂತಹ ಶಕ್ತಿ ಹೊಂದಿರುತ್ತವೆ‌‌. ಹೀಗಾಗಿ ಚಿಕ್ಕದೆಂದು ನಿರ್ಲಕ್ಷ್ಯ ಮಾಡದೆ ಇಂತಹ ‘ಬೆಂಕಿಯ ಕಿಡಿ’ಗಳನ್ನು ನಾವು ಬೇಗನೆ ನಂದಿಸಬೇಕು. ಇಲ್ಲದಿದ್ದರೆ ನಮ್ಮ ಬದುಕೆಂಬ ಶ್ರೀಮಂತ ಕಾಡು ನಾವು […]

ಅಭಿನಂದಿತರೋ, ಅಭಿನಂದಿಸುವವರೋ‌..!? ಪದಬಳಕೆಯಲ್ಲಿನ ಅಜಾಗರೂಕತೆ ತಂದ ಗೊಂದಲ

ಹೀಗೇ ತತ್ರಾಪಿ ( casually) ಮಾತಾಡುತ್ತಿದ್ದಾಗ ನನ್ನ ಸಾಹಿತಿ-ಕಲಾವಿದ ಮಿತ್ರರೊಬ್ಬರು ಈಚೆಗೆ ತಮಗೆ ಆದ ಒಂದು ಪೇಚಿನ ಪ್ರಸಂಗವೊಂದನ್ನು ಹೇಳಿದರು. ಪದಗಳನ್ನು ಬಳಸುವಾಗ ಜಾಗ್ರತೆ ವಹಿಸದಿದ್ದರೆ ಏನಾಗಬಹುದು ಎಂಬುದಕ್ಕೆ ಈ ಪ್ರಸಂಗ ಉದಾಹರಣೆಯಾಗುತ್ತದೆ ಅನ್ನಿಸಿತು ನನಗೆ. ಅದಕ್ಕಾಗಿ ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ, ಬೆಂಗಳೂರಿನಿಂದ ಸುಮಾರು ಇನ್ನೂರು ಕಿ.ಮೀ‌. ದೂರ ಇರುವ ಊರಿನ ಸಾಹಿತ್ಯಕ ಸಂಘದವರೊಬ್ಬರು ಇವರಿಗೆ ದೂರವಾಣಿ ಕರೆ ಮಾಡಿ, ಮುಂದಿನ ವಾರ ಇಂತಹ ದಿನ ‘ಒಂದು ಸನ್ಮಾನ ಇಟ್ಕೊಂಡಿದೀವಿ, ದಯಮಾಡಿ ಬರಬೇಕು […]

Hybrid I C

ಹೈಬ್ರಿಡ್ ಐ ಸಿ – ಮಿಶ್ರ ವಿದ್ಯುನ್ಮಂಡಲ – ಒಂದು ಆಧಾರದ ಮೇಲೆ ( ಸಿಲಿಕಾನ್ ಚಿಪ್ಪು), ಒಂದು  ಅಥವಾ ಅದಕ್ಕಿಂತ ಹೆಚ್ಚು ಭಾಗಗಳನ್ನು ಏರಿಸಿದ  ಅಥವಾ ಜೋಡಿಸಿದ ವಿದ್ಯುನ್ಮಂಡಲ.

Huygen’s principle

ಹೈಗನ್ಸ್ ಪ್ರಿನ್ಸಿಪಲ್ – ಹೈಗನ್ಸ್ ರ ಸಿದ್ಧಾಂತ – ಒಂದು ಅಲೆಯ ಮೇಲಿನ ಪ್ರತಿಯೊಂದು ಬಿಂದುವನ್ನು ಸಹ ಅದರಿಂದ ಹುಟ್ಟುವ ಆನುಷಂಗಿಕ ( ಪುಟ್ಟ ಹೊಸ) ಅಲೆಗಳ ಕೇಂದ್ರವೆಂಬಂತೆ ಪರಿಗಣಿಸಬಹುದು‌. ಈ ಹೊಸ ಆನುಷಂಗಿಕ ಅಲೆಗಳ ಅಡ್ಡಹಾಯುವಿಕೆಯ ಫಲಿತವಾಗಿ ಹುಟ್ಟುವ ಅಲೆಗಳು ಮೂಲ ಅಲೆಗಳ ತರಹವೇ ಇರುತ್ತವೆ‌.

Huygen’s construction

ಹೈಗನ್ಸ್ ಕನ್ಸಟ್ರಕ್ಷನ್ – ಹೈಗನ್ ರ (ಅಲೆ)ನಿರ್ಮಿತಿ – ಈಗಾಗಲೇ ಇರುವ ಅಲೆಯೊಂದರಿಂದ ಅದರ ನಂತರ ಏಳುವ ಮತ್ತೊಂದು ಅಲೆಯನ್ನು ನಿರ್ಮಿಸುವ ಒಂದು ವಿಧಾನ. ಹೈಗನ್ ರ ಸಿದ್ಧಾಂತವು ಅಲೆಗಳ ಅಡ್ಡ ಹಾಯುವಿಕೆ( ಇಂಟರ್ ಫರೆನ್ಸ್) ಮತ್ತು ಹಬ್ಬುವಿಕೆ ( ಡಿಫ್ರ್ಯಾಕ್ಷನ್)ಗಳಿಗೆ  ಉತ್ತಮವಾದ ವಿವರಣೆಯನ್ನು ನೀಡುತ್ತದೆ.

Humidity

ಹ್ಯೂಮಿಡಿಟಿ – ತೇವಾಂಶ – ಗಾಳಿಯಲ್ಲಿರುವ ನೀರಿನ ಆವಿಯ ಅಂಶದ ಅಳತೆ ಇದು. ‘ಪರಮ ತೇವಾಂಶ’ವನ್ನು ವಾಯುವಿನ ಏಕಘಟಕ ಪರಿಮಾಣದಲ್ಲಿರುವ ನೀರಿನ ಆವಿಯ ಪ್ರಮಾಣವೆಂದು ನಿರೂಪಿಸಲಾಗುತ್ತದೆ.

Page 13 of 107

Kannada Sethu. All rights reserved.