Light year

ಲೈಟ್ ಇಯರ್ – ಬೆಳಕಿನ ವರ್ಷ( ಜ್ಯೋತಿರ್ವರ್ಷ) – ಖಗೋಳವಿಜ್ಞಾನದಲ್ಲಿ ಬಳಸುವ ದೂರವನ್ನಳೆಯುವ ಒಂದು ಮೂಲಮಾನ ಇದು‌. ನಿರ್ವಾತದಲ್ಲಿ ಒಂದು ವರ್ಷದ ಅವಧಿಯಲ್ಲಿ ಬೆಳಕು ಚಲಿಸಿದ ದೂರ.

ಕನ್ನಡ ಗಾದೆಮಾತು – ಸಟ್ಟುಗ ಇದ್ರೂ ಕೈ ಸುಟ್ಟುಕೊಂಡ್ರು.

ಸಟ್ಟುಗ ಅಂದ್ರೆ ಮಗುಚೆಕೈ ಅಥವಾ ದೋಸೆ ಎತ್ತುವ ಸಪಾಟು ಮೂತಿಯ ಸೌಟು‌. ಇದು ಇರುವುದೇ ದೋಸೆಯನ್ನು ಕಾವಲಿಯಿಂದ ಎತ್ತುವಾಗಲೋ ಅಥವಾ ಉಪ್ಪಿಟ್ಟು ಕೆದಕುವಾಗಲೋ ಕೈ ಸುಡಬಾರದು ಎಂದು. ‌ನೋಡಿ ಮತ್ತೆ, ಇದು ಇದ್ದರೂ ಹೇಗೆಹೇಗೋ ಬಿಸಿ ಕಾವಲಿಯನ್ನೋ‌ ಪಾತ್ರೆಯನ್ನೋ ಮುಟ್ಟಿ ಕೈ ಸುಟ್ಟುಕೊಂಡರೆ ಅಂಥವರಿಗೆ ಏನೆನ್ನಬೇಕು? ಮೂರ್ಖರೆನ್ನಬೇಕೋ, ಅಜ್ಞಾನಿಗಳೆನ್ನಬೇಕೋ? ಹಾಗೆಯೇ ಜೀವನದಲ್ಲಿ ನಮ್ಮ ಅಪಾಯ, ಕಷ್ಟಗಳನ್ನು ಕಡಿಮೆ ಮಾಡುವ ಅನುಕೂಲಕರ  ಸಂಗತಿಗಳು (ಉದಾಹರಣೆಗೆ ವಿಮೆ) ಇದ್ದರೂ ಅವುಗಳನ್ನು ಉಪಯೋಗಿಸದೆ ಅನಗತ್ಯ ಅನಾನುಕೂಲ ಮಾಡಿಕೊಳ್ಳಬಾರದು ನಾವು. ಅಲ್ಲವೆ? Kannada proverb – […]

ಕೇಕ್ ಗೆ ಕನ್ನಡ ಪದ ಯಾವುದು !?

ಕೇಕ್ ಎಂಬುದು ಪ್ರಪಂಚದ ಅತಿ ಪ್ರಸಿದ್ಧ ತಿನಿಸುಗಳಲ್ಲಿ ಒಂದು ಅನ್ನಿಸುತ್ತೆ.  ಪಾಪದ ಬ್ರೆಡ್ಡಿನ ಶ್ರೀಮಂತ ದಾಯಾದಿಯಂತೆ ಕಾಣಿಸುವ ಈ ಕೇಕ್ ಎಂಬ ಮಾಯಾತಿನಿಸಿನ ರೂಪ-ರುಚಿ ವೈವಿಧ್ಯಗಳು ಹಲವು. 13 ನೇ ಶತಮಾನದ ಜರ್ಮನಿಕ್ ಮೂಲದ, ವೈಕಿಂಗ್ ಸಂದರ್ಭದ ನೋರ್ಸ್ ಭಾಷಾಬಳಗದ ಕಾಕಾ ಎಂಬ ಪದವು ಕೇಕ್ ಪದಕ್ಕೆ ಮೂಲವಂತೆ. ಚಿಕ್ಕಮಕ್ಕಳಿಗಂತೂ ಸರಿಯೇ ಸರಿ, ದೊಡ್ಡವರಲ್ಲೂ ಅನೇಕರಿಗೆ ಈ ತಿನಿಸು ಇಷ್ಟ ಈ ಪ್ರಪಂಚಪ್ರಿಯ ತಿನಿಸಿನ ಕನ್ನಡ ನಾಮಧೇಯ ಏನು ಎಂದು‌ ಯೋಚಿಸುತ್ತಿದ್ದೆ ನಾನು.‌ ಸಾಮಾನ್ಯವಾಗಿ ಕೇಕ್, ಕೇಕು […]

Light water reactor

ಲೈಟ್ ವಾಟರ್ ರಿಯಾಕ್ಟರ್ – ಸಾಮಾನ್ಯ ನೀರಿನ ಅಣುಸ್ಥಾವರ – ತಂಪುಕಾರಕವಾಗಿ ಸಾಮಾನ್ಯ ನೀರನ್ನು ಬಳಸುವ ಒಂದು‌‌ ವಿಶೇಷ ರೀತಿಯ ಅಣುಸ್ಥಾವರ.

Light Watt 

ಲೈಟ್ ವ್ಯಾಟ್ –  ಬೆಳಕು ವ್ಯಾಟ್ – ದೃಶ್ಯಬೆಳಕು ವಿಜ್ಞಾನದಲ್ಲಿ ಒಂದು ಬೆಳಕಿನ ಆಕರದ ಪ್ರಕಾಶ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಬಳಸುವ ಒಂದು ಪದ.

Lightening surge

ಲೈಟ್ನಿಂಗ್ ಸರ್ಜ್ – ಮಿಂಚಿನಲೆ ( ಮಿಂಚಿನ ಉಬ್ಬರದಲೆ) – ಒಂದು ವಿದ್ಯುನ್ಮಂಡಲ ದಲ್ಲಿ ಮಿಂಚಿನಿಂದಾಗಿ ಉಂಟಾಗುವ ತಾತ್ಕಾಲಿಕ ಅಡಚಣೆ ( ಕ್ಷೋಭೆ) ಯನ್ನು ಮಿಂಚಿನಲೆ ಎನ್ನುತ್ತಾರೆ.

Lightening conductor

ಲೈಟ್ನಿಂಗ್ ಕಂಡಕ್ಟರ್ – ಮಿಂಚು ವಾಹಕ‌ – ಸಾಮಾನ್ಯವಾಗಿ ಕಟ್ಟಡಗಳಲ್ಲಿ ಮತ್ತು ಇನ್ನಿತರ ಕಟ್ಟೋಣಗಳಲ್ಲಿ ಮಿಂಚಿನಿಂದ ಆಗುವ ಅಪಾಯದಿಂದ ಅವುಗಳನ್ನು ರಕ್ಷಿಸುವುದಕ್ಕಾಗಿ ಸ್ಥಾಪಿಸಿಟ್ಟ ಒಂದು‌ ವಿದ್ಯುತ್ ವಾಹಕ.

Lightening arrestor

ಲೈಟ್ನಿಂಗ್ ಅರೆಸ್ಟರ್ – ಮಿಂಚು ಪ್ರತಿಬಂಧಕ‌ – ತನ್ನ ತುದಿಭಾಗಗಳಿಗೆ ಬಂದು ತಗಲುವ ಉಬ್ಬರದಲೆಯ ವಿದ್ಯುದ್ಬಲವನ್ನು ಕಡಿಮೆ ಮಾಡುವ ಗುಣವುಳ್ಳ ಉಪಕರಣ.

ಕನ್ನಡ ಗಾದೆಮಾತು – ಮೂರ್ಕಾಸಿನ ಗಳಿಕೆ, ಆರ್ಕಾಸಿನ ಬಳಕೆ.

ಕಾಸು-ಹಣ-ಧನ-ರೂಪಾಯಿ- ಪೌಂಡು – ಡಾಲರ್- ಯೂರೋ – ಯೆನ್ …… ಯಾವ ಹೆಸರಿನಿಂದ ಕರೆದರೇನಂತೆ, ಮನುಷ್ಯ ಯಾವ ನಾಗರಿಕ ಸಮಾಜದಲ್ಲಿ ಇದ್ದರೇನಂತೆ, ಅವನ‌ ಮೂಲ ಜೀವನಾವಶ್ಯಕತೆಗಳು ಪೂರ್ಣಗೊಳ್ಳಲು ಕಾಸು ಬೇಕು‌. ಜೊತೆಗೆ ಕಷ್ಟಪಟ್ಟು ದುಡಿದು ಗಳಿಸಿದ ಕಾಸನ್ನು ಹುಷಾರಾಗಿಯೂ ಖರ್ಚು ಮಾಡಬೇಕು. ಮೂರು ಕಾಸನ್ನು ಗಳಿಸಿ ಆರು ಕಾಸನ್ಬು ಬಳಸಬಾರದು‌. ನಮ್ಮ ಆದಾಯಕ್ಕಿಂತ ಖರ್ಚು ಯಾವತ್ತೂ ಜಾಸ್ತಿ ಆಗಬಾರದು ; ಜಾಸ್ತಿ ಆದರೆ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ.‌ ಉತ್ತಮವಾದ ಒಂದು ಆರ್ಥಿಕ ವಿವೇಕವನ್ನು ಈ ಗಾದೆಮಾತು […]

ವಿದ್ಯಾರ್ಥಿನಿ ಬಳಸಿದ ಹೊಸ ಪದ – ಗೋವಾಲಯ!

 ನಾವು ಕನ್ನಡ ಅಧ್ಯಾಪಕರು ಕೆಲವು ಸಲ ತರಗತಿಗಳಲ್ಲಿ ಅಚ್ಚರಿಗೊಳಿಸುವ ಸನ್ನಿವೇಶಗಳಿಗೆ ಎದುರಾಗುತ್ತೇವೆ. ನನ್ನ ಇಂತಹ ಒಂದು ಅನುಭವವನ್ನು ಇಲ್ಲಿ‌ ಹಂಚಿಕೊಳ್ಳುತ್ತಿದ್ದೇನೆ. ಈಚೆಗೆ ಒಂದು ಪದವಿ ತರಗತಿಯಲ್ಲಿ ಸೃಜನಶೀಲ ಬರವಣಿಗೆ ಎಂಬ ಪ್ರಾಯೋಗಿಕ ಕನ್ನಡ ತರಗತಿಯ ಭಾಗವಾಗಿ “ಇಂದಿನಿಂದ ಹತ್ತು ವರ್ಷಗಳ ನಂತರ ತಾನು ಯಾವ ಉದ್ಯೋಗದಲ್ಲಿ ಇರುತ್ತೇನೆ? ಆಗ ತನ್ನ ಸ್ಥಿತಿ- ಸ್ಥಾನಮಾನ ಹೇಗಿರುತ್ತೆ?” ಎಂಬುದನ್ನು ಪ್ರತಿ  ವಿದ್ಯಾರ್ಥಿನಿಯೂ ಕಲ್ಪಿಸಿಕೊಂಡು ಬರೆಯಬೇಕು ಎಂಬ ಕೆಲಸವನ್ನು ನೀಡಿದ್ದೆ. ‘ವಿದ್ಯಾರ್ಥಿನಿಯರ ಕಲ್ಪನಾ ಶಕ್ತಿ, ಸೃಜನಶೀಲ  ಬರವಣಿಗೆಯ ಕೌಶಲ್ಯ ಹೆಚ್ಚಲಿ, ಮುಂದೆ […]

Page 14 of 139

Kannada Sethu. All rights reserved.