ಹಮ್ಮ್ – ಗುಂಯ್ ಎಂಬ ಸದ್ದು – ವಿದ್ಯುತ್ ಬಲವರ್ಧಕವು ನೀಡುವ ಹೊರಹರಿವಿನಲ್ಲಿ ( ಔಟ್ ಪುಟ್) ಉಂಟಾಗುವ ಬಾಹ್ಯ, ಪರ್ಯಾಯ ವಿದ್ಯುತ್ ಪ್ರವಾಹಗಳು. ಇವುಗಳ ಮೂಲವು ನಮ್ಮ ಗಮನದಲ್ಲಿರುವ ಉಪಕರಣಕ್ಕೆ ಜೋಡಿಸಲಾದ ಒಂದು ಉಪಕರಣ ಅಥವಾ ಅದಕ್ಕೆ ಹತ್ತಿರದಲ್ಲಿ ಇರಿಸಿರುವ ವಿದ್ಯುನ್ಮಂಡಲಗಳಲ್ಲಿ ಇರುತ್ತದೆ.
ಹಾಟ್ ಸ್ಪಾಟ್ – ಗರಿಷ್ಠ ತಾಪ ಬಿಂದು – ತನ್ನ ಸುತ್ತಮುತ್ತಲ ಪ್ರದೇಶಗಳಿಗೆ ಹೋಲಿಸಿದರೆ ತುಂಬ ಹೆಚ್ಚು ತಾಪಮಾನವುಳ್ಳ ಒಂದು ಪ್ರದೇಶ.
ಹಾಟ್ ವಯರ್ ಮೈಕ್ರೋಫೋನ್ – ಧ್ವನಿಶಕ್ತಿ ಮಾಪಕ – ಶಬ್ಧದ ಅಲೆಗಳ ಎತ್ತರ ಮತ್ತು ತೀಕ್ಷ್ಣತೆಯನ್ನು ಅಳೆಯಲು ಬಳಸುವಂತಹ ಉಪಕರಣ. ಇದರಲ್ಲಿ ವಿದ್ಯುತ್ತಿನ ಮೂಲಕ ಕಾಯಿಸಲಾದ ಒಂದು ತಂತಿಗೆ ಶಬ್ಧದ ಅಲೆಗಳನ್ನು ಹಾಯಿಸಿದಾಗ ಅದರ ಪ್ರತಿರೋಧವು ಕಡಿಮೆಯಾಗುವುದನ್ನು ಅವಲಂಬಿಸಿ, ಶಬ್ಧದ ತೀಕ್ಷ್ಣತೆಯನ್ನು ಅಳೆಯಲಾಗುತ್ತದೆ.
ಹಾಟ್ ವೈರ್ ಗಾಜ್ – ಬಿಸಿತಂತಿಯ ಅಳತೆ ಉಪಕರಣ – ಒಂದು ಅನಿಲವು ಬಿಸಿತಂತಿಯನ್ನು ತಣ್ಣಗಾಗಿಸುವುದನ್ಬು ಅವಲಂಬಿಸಿ, ಒತ್ತಡವನ್ನು ಅಳೆಯುವ ಉಪಕರಣ.
ಹಾಟ್ ಲ್ಯಾಬೊರೇಟರಿ – ಸುಡು ಪ್ರಯೋಗಾಲಯ – ವಿಕಿರಣ ವಸ್ತುಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಯೋಗಾಲಯ. ಈ ಲೋಹಗಳ ರಾಸಾಯನಿಕ ಕ್ರಿಯಾತ್ಮಕತೆಯು (ರಿಯಾಕ್ಟಿವಿಟಿ) ತುಂಬಾ ಹೆಚ್ಚಿನ ಮಟ್ಟದಲ್ಲಿರುತ್ತದೆ.
ಹಾಟ್ ಕ್ಯಾಥೋಡ್ ಟ್ಯೂಬ್ – ಬಿಸಿ ಋಣವಿದ್ಯುದ್ವಾರ ಕೊಳವೆ ಅಥವಾ ಬಿಸಿ ಕ್ಯಾಥೋಡು – ವಿದ್ಯುತ್ ಹರಿವಿಗಾಗಿ ಬೇಕಾಗುವಂತಹ ಎಲೆಕ್ಟ್ರಾನುಗಳನ್ನು, ಕಾಯಿಸಿದ ಒಂದು ಭಾಗದಿಂದ ಸರಬರಾಜು ಮಾಡುವ ವ್ಯವಸ್ಥೆಯುಳ್ಳ ಒಂದು ವಿದ್ಯುತ್ (ಹರಿವಿನ) ಕೊಳವೆ.