Heat exchanger

ಹೀಟ್ ಎಕ್ಸಚೇಂಜರ್ – ತಾಪ ವಿನಿಮಯಕ – ಒಂದು ದ್ರವದಿಂದ ಮತ್ತೊಂದು ದ್ರವಕ್ಕೆ ತಾಪವನ್ನು ವರ್ಗಾಯಿಸುವ ಉಪಕರಣ‌. ಇದು ಕೊಳವೆಗಳ ಒಂದು ಸರಣಿಯನ್ನು ಹೊಂದಿರುತ್ತದೆ. ಕಾರಿನ ತಂಪುಕಾರಕ ಯಂತ್ರ (ರೇಡಿಯೇಟರ್) ಇದಕ್ಕೊಂದು ಉದಾಹರಣೆ.

Heat engine

ಹೀಟ್ ಇಂಜಿನ್ – ತಾಪಯಂತ್ರ (ಉಷ್ಣ ಚಲನಾ ಯಂತ್ರ) – ಉಷ್ಣತೆಯನ್ನು ಕಾರ್ಯವಾಗಿ ಪರಿವರ್ತಿಸುವ ಒಂದು ಯಂತ್ರ.

Heat capacity

ಹೀಟ್ ಕೆಪ್ಯಾಸಿಟಿ – ಉಷ್ಣತಾ ಸಾಮರ್ಥ್ಯ ಅಥವಾ ತಾಪ ಸಾಮರ್ಥ್ಯ – ಒಂದು ವಸ್ತುವಿನ‌ ತಾಪಮಾನವನ್ನು ಒಂದು ಏಕಘಟಕ ಅಳತೆಗೆ ಏರಿಸಲು ಬೇಕಾಗಿರುವ ಶಕ್ತಿ. ‌ಇದನ್ನು ಸಾಮಾನ್ಯವಾಗಿ ಜೌಲ್ಸ್ ಪರ್ ಕೆಲ್ವಿನ್ ನಲ್ಲಿ ಹೇಳಲಾಗುತ್ತದೆ. 

Heat

ಹೀಟ್ – ಉಷ್ಣತೆ – ಹೆಚ್ಚು ತಾಪಮಾನವುಳ್ಳ ಪ್ರದೇಶದಿಂದ ಕಡಿಮೆ ತಾಪಮಾನವುಳ್ಳ‌ ಪ್ರದೇಶಕ್ಕೆ ವರ್ಗಾವಣೆಯಾಗುವ ಶಕ್ತಿಯನ್ನು ಸಾಮಾನ್ಯವಾಗಿ ಉಷ್ಣತೆ ಎಂಬ‌ ಹೆಸರಿನಿಂದ ಕರೆಯುತ್ತಾರೆ.

ಕನ್ನಡ ಗಾದೆಮಾತು – ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರ್ದಂಗೆ..

ಮೊದಲೇ ಕಷ್ಟದಲ್ಲಿರುವವರಿಗೆ ಇನ್ನಷ್ಟು ಕಷ್ಟ ಬಂದರೆ ಈ ಗಾದೆಮಾತನ್ನು ಬಳಸುತ್ತಾರೆ. ನೋಡಿಕೊಳ್ಳುವವರು ಯಾರೂ ಇಲ್ಲದ ಕೋಳಿ‌ಯೊಂದು, ಅಲ್ಲಿ ಇಲ್ಲಿ ಬಿದ್ದಿರಬಹುದಾದ ಕಾಳುಗಳನ್ನು ಎಷ್ಟೋ ಕಷ್ಟದಿಂದ  ಹುಡುಕಿ ತಿನ್ನುತ್ತಾ ಇದ್ದಾಗ, ಯಾರಾದರೂ ಅದರ ಕಾಲು ಬೇರೆ ಮುರಿದುಬಿಟ್ಟರೆ ಅದಕ್ಕೆ ಹೇಗಾಗಬೇಡ! ಇದೇ ರೀತಿಯಲ್ಲಿ ಬಡವರ ಮನೆಯ ದುಡಿಯುವ ವ್ಯಕ್ತಿ ಅಪಘಾತಕ್ಕೊಳಗಾದರೆ, ತುಂಬಿದ ಮನೆಯ ಜವಾಬ್ದಾರಿ ವಹಿಸಿಕೊಂಡ ಪರಿಶ್ರಮಿಯ ಕೆಲಸ ಹೋದರೆ, ಪರಿಸ್ಥಿತಿ ಬಹಳ ದುರ್ಭರ ಆಗುತ್ತದೆ ಅಲ್ಲವೆ? ಅಂತಹ ಸಂದರ್ಭಗಳಲ್ಲಿ ಇದನ್ನು ನೋಡಿದ ಅವರ ಪರಿಚಿತರು ‘ಅಯ್ಯೋ ಪಾಪ’ […]

Harmonic motion 

ಹಾರ್ಮೋನಿಕ್ ಮೋಷನ್ – ಸಂಗತ ಆವರ್ತನ ಅಥವಾ ಸಮರಸ ಚಲನೆ – ನಿಯಮಿತವಾಗಿ ಪುನರಾವರ್ತನೆಗೊಳ್ಳುವ ಸರಣಿ. ಇದನ್ನು ಸೈನ್ ತರಂಗಗಳ (ಅಲೆಗಳ)  ಒಂದು‌ ಮೊತ್ತವಾಗಿ ನಿರೂಪಿಸಬಹುದು (ತನ್ನ ಆಕಾರವನ್ನು ಸದಾ ಉಳಿಸಿಕೊಳ್ಳುವ ಅಲೆಯೇ ಸೈನ್ ಅಲೆ).

Harmonic

ಹಾರ್ಮೋನಿಕ್ – ಸಮರಸ, ಸಮರೂಪೀ ಅಲೆ – ಒಂದು ಸಂಕೀರ್ಣ ಅಲೆರೂಪ ಅಥವಾ  ಕಂಪನದ ಸಂದರ್ಭದಲ್ಲಿ ಸಾಧ್ಯವಾಗುವ ಸರಳ ಅಲೆರೂಪೀ ಭಾಗ‌‌. ಇದು ಸೈನ್ ಅಲೆಯ  ರೂಪದಲ್ಲಿ ಇರುತ್ತದೆ. ಇದರಲ್ಲಿ ಏರುತಗ್ಗಿನ ಪ್ರಮಾಣ ಒಂದೇ ಸಮನಾಗಿರುತ್ತದೆ.

Hard(high) vacuum

ಹಾರ್ಡ್( ಹೈ) ವ್ಯಾಕ್ಯೂಮ್ – ಕಠಿಣ (ಉನ್ನತ) ನಿರ್ವಾತ – ನೂರು‌ ಮಿಲಿ ಪ್ಯಾಸ್ಕಲ್ ಗಳಿಗಿಂತ ಕಡಿಮೆ ಒತ್ತಡವುಳ್ಳ ನಿರ್ವಾತ.

Hardware 

ಹಾರ್ಡ್‌ವೇರ್ – (ಗಣಕಯಂತ್ರದ) ಯಂತ್ರಾಂಶ – ಗಣಕಯಂತ್ರದಲ್ಲಿ ವಾಸ್ತವಿಕವಾಗಿ ಬಳಸುವ ವಿದ್ಯುನ್ಮಾನೀಯ ಅಥವಾ ಯಾಂತ್ರಿಕ ಉಕಕರಣಗಳು‌( ಸಾಪ್ಟ್ ವೇರ್ ಅಂದರೆ ತಂತ್ರಾಂಶ = ದತ್ತಾಂಶ ಹಾಗೂ ಕಾರ್ಯಕ್ರಮ ಪಟ್ಟಿಗಳು).

Hard radiation

ಹಾರ್ಡ್ ರೇಡಿಯೇಷನ್ – ಕಠಿಣ ವಿಕಿರಣ – ತೀಕ್ಷ್ಣ ವಾದ ಒಳಪ್ರವೇಶಿಕ ಸಾಮರ್ಥ್ಯ ಇರುವಂತಹ ವಿಕಿರಣಕಾರಕ ಬೆಳಕು ಅಥವಾ ಕಿರಣಗಳು, ಅಥವಾ ಚಿಕ್ಕ ತರಂಗಾಂತರವುಳ್ಳ ಕ್ಷ-ಕಿರಣಗಳು.

Page 25 of 112

Kannada Sethu. All rights reserved.