ಕನ್ನಡ ಗಾದೆಮಾತು – ಹಾಯೋನೊಬ್ಬ ಇದ್ರೆ ಕಾಯೋನು ಒಬ್ಬ ಇರ್ತಾನೆ. 

ನಮ್ಮ ಗ್ರಾಮೀಣ ಜನತೆಯು ನಂಬಿ ಬಾಳುತ್ತಿದ್ದ ಮೌಲ್ಯವೊಂದನ್ನು ಈ ಗಾದೆಮಾತು ಪ್ರಕಟಿಸಿದೆ.‌ ನಮ್ಮ ಜೀವನದಲ್ಲಿ ಕಷ್ಟಗಳು ಬರುತ್ತವೆ, ಅವು ಕೆಲವು ಸಲ ಮನುಷ್ಯರು ಕೊಡುವ ತೊಂದರೆಯಿಂದಲೂ ಬರಬಹುದು‌. ಹೀಗೆ ನಾವು ತೊಂದರೆ ಅನುಭವಿಸುತ್ತಿದ್ದಾಗ ನಮಗೆ ಪರಿಚಿತರಲ್ಲಿ ಒಬ್ಬರು ನಮಗೆ ಸಹಾಯ ಮಾಡಬಹುದು‌. ಕೆಲವು ಸಲ ಆ ಸಹಾಯವು ಆಸ್ತಿಕರ ಮಟ್ಟಿಗೆ ದೇವರ ಕೃಪೆಯ ರೂಪದಲ್ಲೂ ಬರಬಹುದು. ಹೀಗಾಗಿ ನಮಗೆ ತೊಂದರೆ ಕೊಡುವವರು ಇರುವಂತೆಯೇ ನಮ್ಮನ್ನು ಕಷ್ಟದಿಂದ ಪಾರು ಮಾಡಿ ಕೈಹಿಡಿಯುವವರು ಸಹ ಇರುತ್ತಾರೆ. ಈ ನಂಬಿಕೆ ಎಷ್ಟೋ […]

ಶರಬತ್ತು ಎಂಬ ಪದದ ವಿಸ್ಮಯಕರ ಮೂಲ!

ಶರಬತ್ತು ಅಥವಾ ಸರಬತ್ತು ಎಂಬುದು ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ಪಾನಕಕ್ಕೆ ಬಳಸುವ ಒಂದು ಪರ್ಯಾಯ ಪದ. ನಿಂಬೆ ಹಣ್ಣಿನ ಶರಬತ್ತು, ನೆಲ್ಲಿಕಾಯಿ  ಶರಬತ್ತು, ಸೊಗದೆ ಬೇರಿನ ಶರಬತ್ತು ……  ಹೀಗೆ ಒಮ್ಮೊಮ್ಮೆ ಬಳಸುತ್ತೇವಲ್ಲವೆ?   ಮೊನ್ನೆ ಹೀಗೇ ಏನೋ ಓದುತ್ತಿದ್ದಾಗ ಈ ಪದದ ಮೂಲದ ಬಗೆಗಿನ ಒಂದು ವಿಷಯ ಕಣ್ಣಿಗೆ ಬಿತ್ತು. ಆಧುನಿಕ ಐಸ್ಕ್ರೀಮ್ ಅಂಗಡಿಗಳ ಖಾದ್ಯ-ಪಾನೀಯ- ಪಟ್ಟಿಗಳಲ್ಲಿ ಸಾರ್ಬೆಟ್ (Sorbett)ಎಂಬ ಪದ ನೋಡುತ್ತೇವಲ್ಲ?  ಈ ಪದ ಅರೇಬಿಕ್ ನ ಶರ್ಬ (ಅರ್ಥ – ಕುಡಿಯುವುದು) ದಿಂದ ಟರ್ಕಿ […]

Jogging

ಜಾಗಿಂಗ್ – ಜಗ್ಗಾಡಿಸುವುದು – ಚಲಾಯಿಸಲು ‌ಆರಂಭಿಸಿರುವ ಒಂದು ಯಂತ್ರದಲ್ಲಿ ಚಲನೆಯನ್ನುಂಟು ಮಾಡಲಿಕ್ಕಾಗಿ ವಿದ್ಯುನ್ಮಂಡಲವನ್ನು ಬೇಗ ಬೇಗ, ಮತ್ತೆ ಮತ್ತೆ ತೆರೆಯುವ ಮತ್ತು ಮುಚ್ಚುವ ಕ್ರಿಯೆ.

Jitters

ಜಿಟ್ಟರ್ಸ್ – ಅದುರುವ ಚಿತ್ರದೋಷ – ಕ್ರಿಪ್ರ ವೀಕ್ಷಕ ಹಾಗೂ ದಾಖಲೆದಾರ ಉಪಕರಣದ ನಡುವೆ ಆಗುವುದಕ್ಕೆ ಹೊಂದಾಣಿಕೆಯ ವ್ಯತ್ಯಾಸದಿಂದಾಗಿ ದೂರದರ್ಶನದ ಚಿತ್ರದಲ್ಲಿ ಅಥವಾ ಪ್ರತಿಬಿಂಬ ಚಿತ್ರದಲ್ಲಿ ಉಂಟಾದ ಕ್ಷಣಿಕ ದೋಷಗಳು‌.

Jet propulsion ( Reaction propulsion)

ಜೆಟ್ ಪ್ರೊಪಲ್ಶನ್(ರಿಯಾಕ್ಷನ್ ಪ್ರೊಪಲ್ಶನ್) – ಧಾರಾಬುಗ್ಗೆಯಿಂದ ಮುನ್ನೂಕುವಿಕೆ –  ಧಾರಾಬುಗ್ಗೆಯ ರೂಪದಲ್ಲಿ ದ್ರವವೊಂದನ್ನು ಚಿಮ್ಮಿಸುವ ಮೂಲಕ ಉತ್ಪತ್ತಿಯಾದ ಬಲಗಳಿಂದ ಒಂದು ವಸ್ತುವನ್ನು ಮುನ್ನೂಕುವುದು.‌ ಇಲ್ಲಿ, ಹಿಂದು ಹಿಂದಕ್ಕೆ ಚಲಿಸುವ ಧಾರಾಬುಗ್ಗೆಯು ತನ್ನನ್ನು ಉತ್ಪತ್ತಿ ಮಾಡಿದ ವಸ್ತುವನ್ನು, ನ್ಯೂಟನ್ ರ ಮೂರನೆಯ ನಿಯಮದ ಪ್ರಕಾರ ಮುಂದುಮುಂದಕ್ಕೆ ನೂಕುತ್ತದೆ.

Jerk

ಜರ್ಕ್ – ಕುಲುಕು – ಯಂತ್ರಚಲನ ಶಾಸ್ತ್ರದಲ್ಲಿ ಬಳಸುವ ಪದ‌. ಇದನ್ನು ಒಂದು ವ್ಯವಸ್ಥೆಯ ವೇಗೋತ್ಕರ್ಷದ ಗತಿಯಲ್ಲಿ ಉಂಟಾಗುವ ಬದಲಾವಣೆ ಎಂದು ನಿರೂಪಿಸಲಾಗುತ್ತದೆ.

Isotropic

ಐಸೋಟ್ರೋಪಿಕ್ – ಸಮವರ್ತಿ – ಒಂದು ಮಾಧ್ಯಮದ ಗುಣಲಕ್ಷಣಗಳು ಎಲ್ಲ ದಿಕ್ಕುಗಳಲ್ಲೂ ಅವವೇ ಆಗಿದ್ದರೆ, ಅಂದರೆ, ಆ ಭೌತಿಕ ಗುಣಲಕ್ಷಣಗಳಿಗೂ ಅದರ ದಿಕ್ಕಿಗೂ ಸಂಬಂಧವಿಲ್ಲ ಎನ್ನುವುದಾದರೆ ಅದನ್ನು ಸಮವರ್ತಿ ಎನ್ನುತ್ತಾರೆ.

ಕನ್ನಡ ಗಾದೆಮಾತು – ಸಮಯಕ್ಕಾಗದ ಅರ್ಥ ಸಹಸ್ರವಿದ್ರೂ ವ್ಯರ್ಥ.

ಬಹಳ ಅರ್ಥಪೂರ್ಣ ಗಾದೆಮಾತಿದು. ನಮ್ಮ ಹತ್ತಿರ ಇರುವ ಹಣ ( ಅರ್ಥ) ಕಷ್ಟಸುಖಗಳ ನಮ್ಮ ಸಮಯ ಸಂದರ್ಭಕ್ಕೆ ಒದಗಬೇಕು.‌ ಆಗಲೇ ಅದು ಇರುವುದು ಸಾರ್ಥಕ ಆಗುತ್ತದೆ. ಸಮಯಕ್ಕೆ ಒದಗದ ದುಡ್ಡು ಸಾವಿರ ಅಲ್ಲ ಹತ್ತು ಸಾವಿರವಿದ್ದರೂ ಏನು ಪ್ರಯೋಜನ ಬಂತು? ಹಣದ ವಿಷಯದಲ್ಲಿ ಹಿರಿಯರು ನಮಗೆ ಈ ಗಾದೆಮಾತಿನ ಮೂಲಕ ಕೊಟ್ಟಿರುವ ಎಚ್ಚರಿಕೆಯನ್ನು ಗಮನಿಸಿ, ನಮ್ಮ ಹಣವು ನಮ್ಮ ಸಮಯಕ್ಕೆ ಆಗುವ ರೀತಿಯಲ್ಲಿ ಅದನ್ನು ನಿರ್ವಹಿಸಬೇಕು.‌ ಅಲ್ಲವೆ? Kannada proverb – Samayakkagada artha sahasraviddaru vyartha […]

ಕರ್ನಾಟಕದ ಹೆಮ್ಮೆ – ಮೈಸೂರು ಶೈಲಿ‌ ಭರತನಾಟ್ಯ 

ಒಬ್ಬ ಭರತನಾಟ್ಯ ಶಿಕ್ಷಕಿಯಾಗಿ, ಕಳೆದ ಮೂವತ್ನಾಲ್ಕು ವರ್ಷಗಳಲ್ಲಿ, ಬೆಂಗಳೂರಿನ ಹಂಪಿ ನಗರದಲ್ಲಿರುವ ನಮ್ಮ ಚಿತ್ರನಾಟ್ಯ ಫೌಂಡೇಶನ್ ಸಂಸ್ಥೆಯಲ್ಲಿ, ಮಕ್ಕಳಿಗೆ, ನಾಟ್ಯಾಸಕ್ತ ಪ್ರೌಢ ವಯಸ್ಕರಿಗೆ ಭರತನಾಟ್ಯವನ್ನು ಕಲಿಸುವಾಗಲೆಲ್ಲ ನೆನಪಿಗೆ ಬಂದು ಸಂತೋಷ ಕೊಡುವ ಒಂದು ಸಂಗತಿ ಅಂದರೆ, ನಮ್ಮ ಕರ್ನಾಟಕ ರಾಜ್ಯವು ಭರತನಾಟ್ಯಕ್ಕೆ ಕೊಡುಗೆಯಾಗಿ ಕೊಟ್ಟಿರುವ ಒಂದು ಶೈಲಿ.‌ ಅದೆಂದರೆ ಮೈಸೂರು ಭರತನಾಟ್ಯ ಶೈಲಿ. ಮೈಸೂರು ಒಡೆಯರ್ ರಾಜವಂಶದ ರಾಜ, ಹತ್ತನೆಯ ಜಯಚಾಮರಾಜೇಂದ್ರ ಒಡೆಯರ್ ಅವರ ಆಸ್ಥಾನದಲ್ಲಿ ಜಟ್ಟಿ ತಾಯಮ್ಮ ಎಂಬ ಆಸ್ಥಾನ ನರ್ತಕಿ ಇದ್ದರು. ಮೈಸೂರು ಭರತನಾಟ್ಯ […]

Isotopic( Iso/Isobaric) spin

ಐಸೀಟೋಪಿಕ್( ಐಸೋ/ ಐಸೋಬಾರಿಕ್) ಸ್ಪಿನ್ – ಸಮಸ್ಥಾನೀ(ಸಮ/ಸಮಭಾರಿ) ಗಿರಕಿ – ಒಂದು ರೀತಿಯ ಮೂಲಭೂತ ಕಣಗಳಾದ ಹೇಡ್ರಾನುಗಳಿಗೆ ನೀಡುವಂತಹ ಒಂದು ಶಕ್ತಿಪೊಟ್ಟಣ ( ಕ್ವಾಂಟಂ) ಸಂಖ್ಯೆ. ಬಹಳಷ್ಟು ರೀತಿಗಳಲ್ಲಿ ಸಮನಾಗಿದ್ದು, ವಿದ್ಯುತ್ ಕಾಂತೀಯ ಗುಣಲಕ್ಷಣಗಳಲ್ಲಿ ಮಾತ್ರ ಭಿನ್ನವಾಗುವ ಕಣಗಳ ಒಂದು ಕಟ್ಟಿನ ಸದಸ್ಯರನ್ನು ಗುರುತಿಸಲು ಈ ಪದವನ್ನು ಬಳಸಲಾಗುತ್ತದೆ.

Page 26 of 139

Kannada Sethu. All rights reserved.