ನಾನು ಈ ಬರಹದ ಶೀರ್ಷಿಕೆಯಲ್ಲಿ ಬಳಸಿರುವ ಪದಗಳನ್ನು ಕನ್ನಡ ನಾಡಿನಲ್ಲಿ ಬಹಳ ಸಲ ಕೇಳುತ್ತೇವೆ, ಅಲ್ಲವೆ? ಬೋಂಬೆ ಹಲ್ವಾ, ಬೋಂಬೆ ರವಾ, ಬೋಂಬೆ ಮಿಠಾಯಿ, ಬೋಂಬೆ ಟಾಕೀಸ್, ಬೊಂಬಾಯ್ ಮಾಮ……ಕನ್ನಡ ಭಾಷೆಯಲ್ಲಿ ಎಷ್ಟೆಲ್ಲ ಪದಗಳು ಈ ಬೋಂಬೆ ಪದದಿಂದ ಪ್ರಾರಂಭವಾಗುತ್ತವೆ ಎಂದರೆ ಅಚ್ಚರಿಯಾಗುತ್ತದೆ! ಇದಕ್ಕೆ ಕಾರಣ ಏನಿರಬಹುದು ಎಂದು ಒಂದಿಷ್ಟು ವಿಚಾರಿಸಿ, ಓದಿ ನೋಡಿದಾಗ ಈ ಕೆಳಗಿನ ಅಂಶಗಳು ತಿಳಿದು ಬಂದವು. 1.ಕನ್ನಡ ನಾಡಿನ ಏಕೀಕರಣಕ್ಕೆ ಮುಂಚೆ ಧಾರವಾಡ, ಬೆಳಗಾವಿ, ಬಿಜಾಪುರ ಮೊದಲಾದ ಪ್ರದೇಶಗಳು ಬ್ರಿಟಿಷ್ ಭಾರತದ ಬೋಂಬೆ […]
ಕೆಲ್ವಿನ್, ಸಿಂಬಲ್ K – ಕೆಲ್ವಿನ್, ಸಂಕೇತ K – ಉಷ್ಣಚಲನೆಯ ತಾಪಮಾನದ ಎಸ್.ಐ. ಮೂಲಮಾನ ಇದು. ನೀರಿನ ತ್ರಿಬಿಂದು*ವಿನ 273.16 ರಲ್ಲಿ ಒಂದು ಭಾಗಕ್ಕೆ ಸಮ ಇದು. ಲಾರ್ಡ್ ಕೆಲ್ವಿನ್ ಎಂಬ ಬ್ರಿಟಿಷ್ ಗಣಿತಜ್ಞರ ನೆನಪಿನಲ್ಲಿ ಇಟ್ಟ ಹೆಸರು.
*ನೀರಿನ ತ್ರಿಬಿಂದು = ನೀರಿನ ಘನ, ದ್ರವ ಹಾಗೂ ಅನಿಲ ಸ್ಥಿತಿಗಳು ಸಮತೋಲನದಲ್ಲಿರುವಂತಹ ಒಂದು ಬಿಂದು.
ಕೆ – ಎಲೆಕ್ಟ್ರಾನ್ : ಕೆ.ಎಲೆಕ್ಟ್ರಾನು – ಪರಮಾಣುವಿನ ಬೀಜಕೇಂದ್ರಕ್ಕೆ ಅತ್ಯಂತ ಹತ್ತಿರವುಳ್ಳ ಸುತ್ತುಪಥ( ಕಕ್ಷೆ) ಯಲ್ಲಿರುವ ಎರಡು ಎಲೆಕ್ಟ್ರಾನುಗಳಲ್ಲಿ ಒಂದು.
ಕೀಪರ್ – ಕಾಂತರಕ್ಷಕ – ಶಾಶ್ವತ ಅಯಸ್ಕಾಂತವೊಂದನ್ನು ಬಳಸದೆ ಇಟ್ಟಿದ್ದಾಗ ಅದರ ಧ್ರುವಗಳನ್ನು ಬೆಸೆಯಲು ಬಳಸುವಂತಹ ಮೃದುಕಬ್ಬಿಣದ ಒಂದು ತುಂಡು. ಇದು ಕಾಂತಶಕ್ತಿಯ ಸೋರುವಿಕೆಯನ್ನು ತಡೆಯುವುದರ ಮೂಲಕ ಅಯಸ್ಕಾಂತೀಕರಣವನ್ನು ರಕ್ಷಿಸಿಟ್ಟಿರುತ್ತದೆ.
ಕೇಸರ್ – ಅಲೆಯ ಸಂಖ್ಯೆಯ ಮೂಲಮಾನವಾಗಿ ಸ್ವೀಕೃತವಾದ ಒಂದು ಹೆಸರು. ಒಂದು ಸೆಂಟಿಮೀಟರ್ ನಲ್ಲಿ ಇರುವಂತಹ ಅಲೆಗಳ ಸಂಖ್ಯೆ ಇದು.
ಕ್ಯಾಥರೋಮೀಟರ್ -ಉಷ್ಣವಾಹಕತಾ ಮಾಪಕ – ಎರಡು ಅನಿಲಗಳ ಉಷ್ಣವಾಹಕತೆಗಳನ್ನು ಆ ಅನಿಲಗಳು ಸುತ್ತುವರಿದಿರುವಂತಹ ಕಾದ ಸುರುಳಿಗಳು ಕಳೆದುಕೊಳ್ಳುವ ಉಷ್ಣತೆಗಳನ್ನು ತುಲನೆ ಮಾಡುವ ಮೂಲಕ ಅಳೆಯುವಂತಹ ಒಂದು ಉಪಕರಣ.
ಕ್ಯಾಪ್ ಲೈನ್ – ಕ್ಯಾಪ್ ಲೈನ್ – ಕಾಂತೀಯ ಬಲರೇಖೆಗಳ ಒಂದು ಮೂಲಮಾನ. ಇದು 6000 ಮಾಕ್ಸ್ವೆಲ್ ಗಳಿಗೆ ಸಮ.
ಕೇಯಾನಿಕ್ ಆಟಮ್ – ಕೇಯಾನೀಯ ಪರಮಾಣು – ಒಂದು ಸಾಧಾರಣ ಬೀಜಕೇಂದ್ರದ ಸುತ್ತ ಋಣಾತ್ಮಕ ವಿದ್ಯುದಂಶವುಳ್ಳ ಕೇಯಾನು ಸುತ್ತುತ್ತಿದ್ದರೆ ಅಂತಹ ಪರಮಾಣುವನ್ನು ಕೇಯಾನೀಯ ಪರಮಾಣು ಎನ್ನುತ್ತಾರೆ.
Like us!
Follow us!