Henry (H)

ಹೆನ್ರಿ( H) – ಹೆನ್ರಿ ( H) – ಸ್ವಯಂ ವಿದ್ಯುತ್ ಪ್ರೇರಕತೆ ಅಥವಾ ಪರಸ್ಪರ ವಿದ್ಯುತ್ ಪ್ರೇರಕತೆಯ ಎಸ್.ಐ.ಮೂಲಮಾನ ಇದು. 1H = 1 ವೆಬರ್ /ಆಂಪಿಯರ್. ಜೋಸೆಫ್ ಹೆನ್ರಿ (1797-1878) ಎಂಬ ಅಮೆರಿಕಾದ ಭೌತಶಾಸ್ತ್ರಜ್ಞರ ನೆನಪಿನಲ್ಲಿ ಇಟ್ಟ ಹೆಸರು. ವಿದ್ಯುತ್ ಪ್ರೇರಕತೆಯನ್ನು ಕಂಡು ಹಿಡಿದ ವಿಜ್ಞಾನಿ ಇವರು.

ಕನ್ನಡ ಗಾದೆಮಾತು- ಕಳ್ಳನಿಗೊಂದು ಪಿಳ್ಳನೆವ.‌

ಈ ಗಾದೆಮಾತು ಕನ್ನಡ ಭಾಷೆಯಲ್ಲಿ ಸಾಕಷ್ಟು ಬಳಕೆಯಲ್ಲಿದೆ.‌ ಯಾರಾದರೂ ತಮ್ಮ  ಕೆಟ್ಟ ಚಟದಲ್ಲೋ, ದುರಾಭ್ಯಾಸದಲ್ಲೋ ( ಸಿಗರೇಟು, ಕುಡಿತ, ಜೂಜು, ಮಾದಕ ದ್ರವ್ಯ ವ್ಯಸನ)  ತೊಡಗಲು ಸಣ್ಣ ನೆಪ ಸಿಕ್ಕಿದರೂ ಸಾಕು, ಆ ಅವಕಾಶವನ್ನು ಬಿಡದೆ ಬಳಸಿಕೊಳ್ಳುತ್ತಾರಲ್ಲವೆ? ಅಂತಹ ಸಂದರ್ಭಗಳಲ್ಲಿ ಈ ಗಾದೆಮಾತನ್ನು ಬಳಸಲಾಗುತ್ತದೆ. ಜೊತೆಗೆ, ಕೆಲಸಗಳ್ಳರು ತಮಗೊಂದು ಸಣ್ಣ ನೆವ ಸಿಕ್ಕಿದರೂ ಸಾಕು, ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗಲೂ ಈ ಮಾತು ಬಳಕೆಯಾಗುತ್ತದೆ. ಪಿಳ್ಳೆ ಎಂದರೆ ಪುಟ್ಟ, ಚಿಕ್ಕ ಎಂದು ಅರ್ಥ.‌ ಒಟ್ಟಿನಲ್ಲಿ ಜನ ಚಿಕ್ಕ […]

ಕಣ್ಗುಡ್ಡೆ ಕಾಯಿ!  ನೋಡಿದಿರಾ ಕನ್ನಡಿಗರು ಹೆಸರಿಟ್ಟರೆ ಅದು ಕಿವಿಗೆ ಅಕ್ಷರ ಮಿಠಾಯಿ!ಕಣ್ಗುಡ್ಡೆ ಕಾಯಿ!  ನೋಡಿದಿರಾ

ನಗರಗಳ ಮೇಲ್ದರ್ಜೆಯ      ಮಾರುಕಟ್ಟೆಗಳಲ್ಲಿ ಅಥವಾ ಐಸ್ಕ್ರೀಮ್ ( ಕನ್ನಡದಲ್ಲಿ ‘ಮಂಜುಕೆನೆ’ ಎಂಬ ಸಂವಾದಿ ಪದ ಇದೆ ಐಸ್ಕ್ರೀಮ್ ಗೆ. ಆದರೆ ಐಸ್ಕ್ರೀಮ್ ಪದವು ಕನ್ನಡದ್ದೇ ಎಂಬಷ್ಟು ಜನಪ್ರಿಯ ಆಗಿದೆ, ಹೀಗಾಗಿ ಅದೇ ಬಳಕೆಯಲ್ಲಿದೆ.) ಅಂಗಡಿಗಳಲ್ಲಿ  ಲಿಚೀ ( Lychee) ಎಂಬ ಹಣ್ಣನ್ನು ಅಥವಾ ಅದರ ತಿರುಳನ್ನು ನಾವು ನೋಡಬಹುದು/ ಅದರ ಹೆಸರನ್ಬು ಕೇಳಬಹುದು. ಮಕ್ಕಳು ಆಡುವ ಗೋಲಿಗಿಂತ ತುಸುವೇ ದೊಡ್ಡದಿರುವ ಹಣ್ಣು ಇದು ;ಒರಟಾದ ಕೆಂಪು ಸಿಪ್ಪೆ ಹೊಂದಿದ್ದು ಅದನ್ನು ಸುಲಿದರೆ ಬಿಳಿಯಾದ, ರುಚಿಯಾದ ರಸಮಯ ತಿರುಳು […]

Helium  Neon laser

ಹೀಲಿಯಂ ನಿಯಾನ್ ಲೇಸರ್ – ಹೀಲಿಯಂ ‌ನಿಯಾನ್ ತೀಕ್ಷ್ಣ ಬೆಳಕು‌ – ಹೀಲಿಯಂ ಮತ್ತು ನಿಯಾನ್ ಅನಿಲಗಳನ್ನು ಬಳಸುವ ಪರಮಾಣೀಯ ತೀಕ್ಷ್ಣ ಬೆಳಕು.

Helix

ಹೆಲಿಕ್ಸ್ – ಸುರುಳಿ – ನೈಸರ್ಗಿಕವಾಗಿ ದೊರೆಯುವ ಅನೇಕ ದೊಡ್ಡ ಗಾತ್ರದ ಅಣುಗಳು, ಉದಾಹರಣೆಗೆ, ಪ್ರೋಟೀನುಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳು ಸುರುಳಿಯಾಕಾರದಲ್ಲಿರುತ್ತವೆ.

Helioscope

ಹೀಲಿಯೋಸ್ಕೋಪ್ – ಸೂರ್ಯದರ್ಶಕ – ಸೂರ್ಯನನ್ನು ಗಮನಿಸಲು ಬಳಸುವ ದೂರದರ್ಶಕ. ಸೂರ್ಯನ ತೀಕ್ಷ್ಣಪ್ರಕಾಶದಿಂದಾಗಿ ಗಮನಿಸುವವರ ಕಣ್ಣುಗಳಿಗೆ ಅಪಾಯವಾಗದಂತೆ ಇದನ್ನು ವಿನ್ಯಾಸ ಮಾಡಿರುತ್ತಾರೆ.

Heliocentric

ಹೀಲಿಯೋಸೆಂಟ್ರಿಕ್ – ಸೂರ್ಯಕೇಂದ್ರಿತ – 

ಅ. ಸೂರ್ಯನನ್ನು ಕೇಂದ್ರವಾಗಿ‌ ಉಳ್ಳಂಥದ್ದು

ಆ. ಸೂರ್ಯನ ಕೇಂದ್ರದಿಂದ ಅಳೆಯಲ್ಪಟ್ಟದ್ದು

Heliocentric

ಹೀಲಿಯೋಮೀಟರ್ – ಸೂರ್ಯಮಾಪಕ‌ – ವಿಶೇಷ ವಿನ್ಯಾಸದಿಂದ ಸಿದ್ಧವಾದ, ಸೀಳಿದ ಮಸೂರವನ್ನು ಹೊಂದಿರುವ ದೂರದರ್ಶಕ. ಇದನ್ನು ಸೂರ್ಯನ ವ್ಯಾಸವನ್ನು ಮತ್ತು ನಕ್ಷತ್ರಗಳ ನಡುವಿನ ದೂರವನ್ನು ಅಳೆಯಲು ಬಳಸುತ್ತಾರೆ. 

ಕನ್ನಡ ಗಾದೆಮಾತು – ಕೋಣನ ಮುಂದೆ ಕಿನ್ನರಿ ಬಾರಿಸಿದ್ಹಂಗೆ

ಎಮ್ಮೆ, ಕೋಣಗಳ ಮನಸ್ಸಲ್ಲಿ‌ ಏನಿದೆಯೋ ಹೇಳಬಲ್ಲವರಾರು? ಆದರೆ ನಾವು ಮನುಷ್ಯರು ನಮ್ಮ ಸಹಜೀವಿಗಳ  ಮೊದ್ದುತನಕ್ಕೋ, ಪೆದ್ದುತನಕ್ಕೋ, ಅರಸಿಕತೆಗೋ ಈ‌ ಪ್ರಾಣಿಗಳನ್ನು ರೂಪಕವಾಗಿ ತೆಗೆದುಕೊಂಡು ಪರಸ್ಪರ ಲೇವಡಿ ಮಾಡಿಕೊಳ್ಳುವುದು ಮಾತ್ರ ಕಾಲಾನುಕಾಲದಿಂದಲೂ ತಪ್ಪಿಲ್ಲ. ‘ಕಿನ್ನರಿ ಎಂಬ ವಾದ್ಯವನ್ನು ಕೋಣನ ಮುಂದೆ ನುಡಿಸಿದರೆ/ಬಾರಿಸಿದರೆ ಏನೂ ಪ್ರಯೋಜನ ಇಲ್ಲ, ಅದು ಆ ವಾದ್ಯದ ನಾದ ಮಾಧುರ್ಯವನ್ನು ಕೇಳಿಸಿಕೊಳ್ಳುವುದೂ ಇಲ್ಲ, ಅದಕ್ಕೆ ಸ್ಪಂದಿಸುವುದೂ ಇಲ್ಲ’ – ಈ ಚಿಂತನೆಯಿಂದ ಹೊರಟ ಗಾದೆಮಾತಿದು. ಅಸೂಕ್ಷ್ಮ ಜನರ ಮುಂದೆ, ಅರಸಿಕರ ಮುಂದೆ ಕಲಾಪ್ರಸ್ತುತಿ ಮಾಡುವುದರಿಂದ ಅಥವಾ […]

“ಇಲ್ಲಿ ‘ಕಬ್ಬಿನ ಜ್ಯೂಸ್’ ದೊರೆಯುತ್ತದೆ”  ಯಾಕೆ ಈ ಪದ ಬಳಕೆ!?

ನಾನು ವಾಸಿಸುವ ಬೆಂಗಳೂರು ನಗರದ ಬಡಾವಣೆಯಾದ ಹಂಪಿನಗರದಲ್ಲಿಮೊನ್ನೆ, ಮನೆಸಾಮಾನು ತರಲೆಂದು ಅಂಗಡಿಗೆ ಹೋಗಿದ್ದಾಗ ಒಂದು‌ ಪ್ರಕಟಣಾ ಫಲಕ ನನ್ನ ಕಣ್ಣಿಗೆ ಬಿತ್ತು. “ಇಲ್ಲಿ ಕಬ್ಬಿನ ಜ್ಯೂಸ್ ದೊರೆಯುತ್ತದೆ” ಎಂದು ಸಾರುತ್ತಿದ್ದ ಫಲಕವದು. ನೋಡಿದರೆ ಅದು ಒಂದು ಕಬ್ಬಿನ ಹಾಲಿನ ಅಂಗಡಿಯಾಗಿತ್ತು. ಅಲ್ಲೇ ಪಕ್ಕದಲ್ಲಿ  ಇದ್ದ ಇನ್ನೊಂದು ಫಲಕದಲ್ಲಿ ‘Sugar cane juice available’ ಎಂಬ ಪ್ರಕಟಣೆ ಇತ್ತು‌.‌ ಅಂದರೆ ಇದರ ಅರ್ಥ ನಮ್ಮ ಬೆಂಗಳೂರು ಕನ್ನಡ  ‘ಕಂಗ್ಲಿಷ್’ ಆಗಿಬಿಟ್ಟು ಬಹಳ ದಿನವಾಗಿದೆ ಎಂದು!     ಕಾಲಾಂತರದಿಂದ ನಾವು […]

Page 28 of 117

Kannada Sethu. All rights reserved.