ಐಸೋಗಾನಿಕ್ ಲೈನ್ ( ಐದೋಗಾನಲ್) – ಭೂಮಿಯ ಮೇಲ್ಮೈಯಲ್ಲಿ ಸಮಬಾಗುವಿಕೆಯುಳ್ಳ ಬಿಂದುಗಳನ್ನು ಸೇರಿಸುವ ಕಲ್ಪಿತ ರೇಖೆ.
ಸಮಬಲ ರೇಖೆ – ಭೂಮಿಯ ಮೇಲ್ಮೈಯಲ್ಲಿ ಒಟ್ಟು ಕಾಂತಕ್ಷೇತ್ರಬಲವು ಒಂದೇ ಆಗಿರುವ ಬಿಂದುಗಳನ್ನು ಸೇರಿಸುವಂತಹ ಒಂದು ಕಲ್ಪಿತ ರೇಖೆ.
ಐಸೋಕ್ಲಿನಿಕ್ ಲೈನ್ – ಸಮ ಇಳಿಜಾರುಯುತ ರೇಖೆ – ಭೂಮಿಯ ಮೇಲ್ಮೈಯ ಮೇಲೆ ಸಮ ಇಳಿಜಾರು ಕೋನಗಳುಳ್ಳ ಬಿಂದುಗಳನ್ನು ಸೇರಿಸುವ ಒಂದು ರೇಖೆ.
ಐಸೋಬಾರ್ – ಸಮ ಒತ್ತಡ/ಸಮಭಾರಿ –
(ಅ) ನಕ್ಷೆಯಲ್ಲಿ ಸಮಾನ ಹವಾಮಾನ ಒತ್ತಡವುಳ್ಳ ಸ್ಥಳಗಳ ಮೂಲಕ ಹಾದುಹೋಗುವ ಒಂದು ರೇಖೆ.
(ಆ) ಒಂದೇ ದ್ರವ್ಯರಾಶಿ ಸಂಖ್ಯೆ ಇದ್ದು ಬೇರೆ ಬೇರೆ ಪರಮಾಣು ಸಂಖ್ಯೆಯುಳ್ಳ ಎರಡು ಅಥವಾ ಅದಕ್ಕಿಂತ ಹೆಚ್ಚಿನ ನ್ಯೂಕ್ಲೈಡು( ಒಂದು ರೀತಿಯ ಪರಮಾಣು)ಗಳು.
ಐಸೆನ್ ಟ್ರೋಪಿಕ್ ( ಅಡಿಯಾಬ್ಯಾಟಿಕ್)
ಪ್ರೋಸೆಸ್ – ಶಕ್ತಿವಿನಿಮಯ ರಹಿತ ಪ್ರಕ್ರಿಯೆ – ವ್ಯವಸ್ಥೆಯಲ್ಲಿರುವ ಶಕ್ತಿಯು ಹೊರಗೆ ಹೋಗದೆ, ಹೊರಗಿನಿಂದ ಶಕ್ತಿಯು ಒಳಗೆ ಪ್ರವೇಶಿಸದೆ ಇರುವ ಪ್ರಕ್ರಿಯೆ.
ಐಸೆನ್ಥಾಲ್ಪಿಕ್ ಪ್ರೋಸೆಸ್ – ಸಮಶಾಖ ಪ್ರಮಾಣ ಪ್ರಕ್ರಿಯೆ – ಶಾಖಪ್ರಮಾಣದಲ್ಲಿ ಯಾವುದೇ ಬದಲಾವಣೆ ಇಲ್ಲದೆ ನಡೆಯುವ ಪ್ರಕ್ರಿಯೆ, ಅಂದರೆ, ಇದರಲ್ಲಿನ ಒಟ್ಟು ಉಷ್ಣ ಶಕ್ತಿಯು ಸ್ಥಿರವಾಗಿಯೇ ಉಳಿಯುತ್ತದೆ.
ಇರ್ರಿವರ್ಸೆಬಲ್ ಪ್ರೋಸೆಸ್ – ಹಿಮ್ಮರಳಿಸಲಾಗದ ಪ್ರಕ್ರಿಯೆ – ಕ್ರಿಯೆ ನಡೆಯುವಾಗ ಯಾವ ಹಂತಗಳ ಸರಣಿ ಜಾರಿಯಾಗಿತ್ತೋ ಅದೇ ಸರಣಿಯಲ್ಲಿ ತನ್ನ ಮೂಲಸ್ಥಿತಿಗೆ ಮರಳಲಾಗದ ಪ್ರಕ್ರಿಯೆ. ಎಲ್ಲ ನಿಜ ಕ್ರಿಯೆಗಳೂ ತಮ್ಮ ಗುಣಸ್ವಭಾವದಲ್ಲಿ ಮರಳಿಸಲಾಗದ ಪ್ರಕ್ರಿಯೆಗಳೇ ಆಗಿರುತ್ತವೆ.
ಅಯಾನ್ ಸೌಂಡ್ – ವಿದ್ಯುದಣು ಶಬ್ಧ – ಪ್ಲಾಸ್ಮಾದಲ್ಲಿ ವಿದ್ಯುದಣುಗಳ ಉದ್ದುದ್ದ ಆಂದೋಲನಗಳಿಂದ ತುಂಬ ಕಡಿಮೆ ತರಂಗಾಂತರವಿರುವ ಅಲೆಗಳು ಹುಟ್ಟುತ್ತವೆ. ಇವನ್ನು ವಿದ್ಯುದಣು ಶಬ್ಧ ಎನ್ನುತ್ತಾರೆ.
Like us!
Follow us!