Isometric change

ಐಸೋಮೆಟ್ರಿಕ್ ಚೇಂಜ್ – ಪರಿಮಾಣೀಯ ಬದಲಾವಣೆ – ಸ್ಥಿರಪರಿಮಾಣದ ಒಂದು ಅನಿಲದಲ್ಲಿ ಉಂಟಾಗುವ ಬದಲಾವಣೆ.

ಕನ್ನಡ ಗಾದೆಮಾತು – ಊರು ಬಾಗಿಲು ಮುಚ್ಚಬಹುದು, ದೂರುವವರ ಬಾಯಿ ಮುಚ್ಚೋಕಾಗುತ್ಯೆ?

ನಾವು ಏನೇ ಕೆಲಸ ಮಾಡಿದರೂ, ಹೇಗೇ ಇದ್ದರೂ ನಮ್ಮ ಸುತ್ತಮುತ್ತ ಕೆಲವು ದೂರುವ ಜನರು ಇದ್ದೇ ಇರುತ್ತಾರೆ.‌ ಇಂತಹವರು ನೆಂಟರಿಷ್ಟರ ಬಳಗದಲ್ಲಿ, ಸಹೋದ್ಯೋಗಿಗಳಲ್ಲಿ, ನಮ್ಮ ನೆರೆಹೊರೆಯಲ್ಲಿ – ಒಟ್ಟಿನಲ್ಲಿ ಎಲ್ಲ ಕಡೆಯೂ ಕಂಡು ಬರುತ್ತಾರೆ.‌ ಮಳೆಹನಿಗಳಂತೆ ಇವರ ಕೊಂಕುಮಾತುಗಳು ತಟತಟ ಕೇಳುತ್ತಲೇ ಇರುತ್ತವೆ. ಅವರ ಬಾಯಿ ಮುಚ್ಚಿಸಲು ಆಗುವುದಿಲ್ಲ. ಆದರೆ ಒಂದು ಮುಖ್ಯ ವಿಷಯ ಇಲ್ಲಿದೆ. ಇಂತಹವರ ಮಾತುಗಳನ್ನು ಹೃದಯಕ್ಕೆ ಹಚ್ಚಿಕೊಂಡೆವೆಂದರೆ ಒಂದೇ ಒಂದು ಕೆಲಸವನ್ನೂ ಮಾಡಲಾಗುವುದಿಲ್ಲ. ಹೀಗಾಗಿ ಅವರ ಇರುವಿಕೆಯ ವಾಸ್ತವವನ್ನು ಒಪ್ಪಿಕೊಂಡೂ, ಅವರ ಮಾತುಗಳನ್ನು […]

ಕನ್ನಡ ಅಧ್ಯಾಪಕರು ಮಾತಾಡಬೇಕಾಗಿರುವ ಗರಿಷ್ಠ ಕನ್ನಡ!

ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಕಾರ್ಯದಲ್ಲಿ ಬಹು ಮುಖ್ಯವಾದ ಭಾಗವೆಂದರೆ ಅದನ್ನು ಬಳಸುವುದು‌. ಈ‌ ಹೇಳಿಕೆಯು ಕೇಳಲು ಬಹಳ ಸರಳ ಅನ್ನಿಸಿದರೂ, ನಮ್ಮ ನಗರಗಳ ವಾಸ್ತವಿಕ ಸನ್ನಿವೇಶಗಳಿಂದಾಗಿ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ. ಔದ್ಯೋಗಿಕ ವಲಸೆಗಳಿಂದ ನಗರಗಳಲ್ಲಿ ಕನ್ನಡೇತರರ ಸಂಖ್ಯೆ ಹೆಚ್ಚಾಗಿರುವುದು, ಇನ್ನೂ ಹೆಚ್ಚುತ್ತಿರುವುದು ಒಂದೆಡೆಯಾದರೆ, ಆಂಗ್ಲ ಮಾಧ್ಯಮದ ಶಿಕ್ಷಣದಿಂದ ಹಾಗೂ ‘ಇಂಗ್ಲಿಷ್ ಭಾಷೆಯನ್ನು ಬಳಸುವುದು ಸಾಮಾಜಿಕ, ಆರ್ಥಿಕ ನೆಲೆಯಲ್ಲಿನ ಪ್ರತಿಷ್ಠೆ’ ಎಂಬ ಭಾವನೆಯು ನಮ್ಮ ಜನಮಾನಸದಲ್ಲಿ ಬೇರೂರಿರುವುದರಿಂದ, ಕನ್ನಡದ ಬಳಕೆಯು ನಮ್ಮ ನಗರಗಳ ಯುವಪೀಳಿಗೆ […]

Isomers

ಐಸೋಮರ್ಸ್ – ಸಮಾಂಗಿಗಳು – ಸಮಾನ ಅಣುತೂಕ ಮತ್ತು  ಸಮಾನ ಶೇಕಡಾವಾರು ವಸ್ತುಸಂಯೋಜನೆಗಳನ್ನು ಹೊಂದಿದ್ದು, ತಮ್ಮ ಕೆಲವು ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಲ್ಲಿ ಭಿನ್ನವಾಗಿರುವ ಸಂಯುಕ್ತಗಳು.

Isomagnetic lines

ಐಸೋಮ್ಯಾಗ್ನೆಟಿಕ್ ಲೈನ್ಸ್ – ಕಾಂತಬಲವು ಸಮಾನವಾಗಿರುವ ಬಿಂದುಗಳನ್ನು ಜೋಡಿಸುವ ರೇಖೆಗಳು‌.

Isolator

ಐಸೋಲೇಟರ್ – ಪ್ರತ್ಯೇಕ‌ಕಾರಕ – ವಿದ್ಯುತ್ ಕಾಂತೀಯ ಶಕ್ತಿಯನ್ನು ಒಂದು ದಿಕ್ಕಿನಲ್ಲಿ ಹರಿಯಲು ಬಿಟ್ಟು ಅದರ ವಿರುದ್ಧ ದಿಕ್ಕಿನಲ್ಲಿ ವಿದ್ಯುತ್ ಸಾಮರ್ಥ್ಯವನ್ನು ಹೀರಿಕೊಳ್ಳುವ ಉಪಕರಣ.

Isolating transformer

ಐಸೋಲೇಟಿಂಗ್ ಟ್ರ್ಯಾನ್ಸ್ಫಾರ್ಮರ್ – ಪ್ರತ್ಯೇಕಗೊಳಿಸುವ ವಿದ್ಯುತ್ ಪರಿವರ್ತಕ – ಯಾವುದಾದರೂ ವಿದ್ಯುನ್ಮಂಡಲ ಅಥವಾ ಉಪಕರಣವನ್ನು ತನ್ನ ವಿದ್ಯುತ್ ಸರಬರಾಜಿನಿಂದ ಪ್ರತ್ಯೇಕಗೊಳಿಸುವ (ಬೇರೆ ಮಾಡುವ) ಪರಿವರ್ತಕ.

Isochronous circuits

ಐಸೋಕ್ರೋನಸ್ ಸರ್ಕ್ಯೂಟ್ಸ್ – ಸಮಕಂಪನ ವಿದ್ಯುನ್ಮಂಡಲಗಳು – ಎರಡು ವಿದ್ಯುನ್ಮಂಡಲಗಳು ಒಂದೇ ಕಂಪನಾವರ್ತನ ಕಾಲ ( resonant frequency) ವನ್ನು ಹೊಂದಿದ್ದರೆ ಅವುಗಳನ್ನು ಸಮಕಂಪನ ವಿದ್ಯುನ್ಮಂಡಲಗಳು ಎನ್ನುತ್ತಾರೆ.

ಕನ್ನಡ ಗಾದೆಮಾತು – ಬೊಬ್ಬೆ ಹೊಡೆದ್ರೆ ಹಬ್ಬ ಆಗುತ್ತಾ?

ಮನೆಯಲ್ಲಿ ಹಬ್ಬ, ಮದುವೆ-ಮುಂಜಿ ಎಂದರೆ ಮಾಡಬೇಕಾದ ಬಹಳಷ್ಟು ಕೆಲಸಗಳಿರುತ್ತವೆ ; ತೋರಣದಿಂದ ಹೂರಣದ ತನಕ, ಪೂಜೆ-ಪುನಸ್ಕಾರಗಳಿಂದ ದಾನದ ತನಕ. ವಾರ-ಹದಿನೈದು ದಿನಗಳ ಕಾಲ ಗಮನವಿಟ್ಟು ಕೆಲಸ ಮಾಡಿದರೆ ಮಾತ್ರ ಹಬ್ಬ ಚೆನ್ನಾಗಿ ಆಗುತ್ತದೆ. ಆದರೆ ಕೆಲವರು ಕೈಯಿಂದ ಏನೂ ಮಾಡದೆ, ಬರೀ ಕೆಲಸದ ಬಗ್ಗೆ ಮಾತಾಡಿ, ಕೂಗಾಡಿ ಬೊಬ್ಬೆ ಹೊಡೆಯುತ್ತಾ ಇರುತ್ತಾರೆ. ಇಂತಹವರಿದ್ದರೆ ಹಬ್ಬ ಆಗುವುದಿಲ್ಲ, ಯಾವ ಕೆಲಸವೂ ಆಗುವುದಿಲ್ಲ‌.  ಕೆಲಸಕ್ಕೆ ಬಾರದ ಈ ರೀತಿಯ ಬೊಬ್ಬೆವೀರರನ್ನು ನೋಡಿಯೇ ನಮ್ಮ ಹಿರಿಯರು ಈ ಗಾದೆ ಮಾತನ್ನು ಬಳಕೆಗೆ ತಂದಿರಬೇಕು. […]

‘ಪೂಜೆ – ಪುನಸ್ಕಾರ’ ಈ ಜೋಡಿ ಪದದಲ್ಲಿ ಪುನಸ್ಕಾರ ಪದದ ಅರ್ಥವೇನು?

“ಓಹ್….ನಮ್ಮ ಅತ್ತೆ ಮನೆಯಲ್ಲಿ ಪೂಜೆ ಪುನಸ್ಕಾರ ಹೆಚ್ಚು”, ” ನಾನು ಬೆಳಿಗ್ಗೆ ಪೂಜೆ ಪುನಸ್ಕಾರ ಮುಗಿಸೋ ಹೊತ್ತಿಗೆ ಬೆಳಿಗ್ಗೆ ಹನ್ನೊಂದು ಗಂಟೆ ಆಗುತ್ತೆ”, “ಆಚಾರವಂತ್ರಪ್ಪಾ. ಪೂಜೆ ಪುನಸ್ಕಾರ ಮುಗಿಸ್ದೆ ಬರ್ತಾರಾ!” – ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವಲ್ಲ? ನಾನು ಈ ಪುನಸ್ಕಾರ ಎಂಬ‌ ಪದ ಕೇಳಿದಾಗಲೆಲ್ಲ ಏನು ಈ‌ ಪದದ ಅರ್ಥ ಎಂದು ಯೋಚಿಸುತ್ತಿದ್ದೆ. ಒಂದಷ್ಟು ಪರಾಮರ್ಶನ ಮಾಡಿ, ಗೂಗಲಿಸಿ, ಭಾಷಾಪ್ರಿಯರ ಜೊತೆಗೆ ಚರ್ಚಿಸಿ, ಕೊನೆಗೆ ನನಗೆ ಪರಿಚಯವಿರುವ ಸಂಸ್ಕೃತ ಪಂಡಿತರಾದ ಡಾ.ಹಯವದನ ಎಂಬವರ ಬಳಿ […]

Page 28 of 139

Kannada Sethu. All rights reserved.