ಗ್ಯಾಸಿಂಗ್ – ಅನಿಲೋತ್ಪಾದನೆ – ಒಂದು ವಿದ್ಯುತ್ ಕೋಶದ ವಿದ್ಯುತ್ ಪೂರಣವು ಮುಗಿದ ಮೇಲೂ ವಿದ್ಯುತ್ ಪೂರಣವನ್ನು ಮುಂದುವರಿಸಿದಾಗ ಆ ವಿದ್ಯುತ್ ಕೋಶದಿಂದ ಸಣ್ಣ ಸಣ್ಣ ಗುಳ್ಳೆಗಳು ಏಳುವ ಕ್ರಿಯೆ.
ಗ್ಯಾಸ್ ಟರ್ಬೈನ್ – ಹವೆ ಯಂತ್ರ – ದ್ರವರೂಪೀ ಇಂಧನದ ರಾಸಾಯನಿಕ ಶಕ್ತಿಯು ಯಂತ್ರಚಾಲನಾ ಶಕ್ತಿಯಾಗಿ ಪರಿವರ್ತಿತವಾಗುವ ಒಂದು ಚಾಲಕ ಯಂತ್ರ. ಇದನ್ನು ವಿಮಾನ, ರೈಲು ಹಾಗೂ ಮೋಟಾರು ಕಾರುಗಳಲ್ಲಿ ಬಳಸುತ್ತಾರೆ.
ಗ್ಯಾಸ್ ಥರ್ಮೋಮೀಟರ್ – ಅನಿಲ ತಾಪಮಾಪಕ – ಒಂದು ರೀತಿಯ ತಾಪಮಾಪಕ – ಇದರಲ್ಲಿ ತಾಪದ ಉತ್ಪನ್ನವಾಕ್ಯ(ಫಂಕ್ಷನ್)ವಾಗಿ ಅನಿಲದ ಗುಣಗಳ ಬದಲಾವಣೆಯನ್ನು ಗಮನಿಸಿ ತಾಪಮಾನದ ಅಳತೆ ಮಾಡಲಾಗುತ್ತದೆ.
ಗ್ಯಾಸ್ ಆಯಿಲ್ – ಅನಿಲ ಎಣ್ಣಿ ಅಥವಾ ಡೀಸೆಲ್ ಎಣ್ಣೆ – ಕಚ್ಚಾ ಪೆಟ್ರೋಲಿಯಂನಿಂದ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಭಟ್ಟಿ ಇಳಿಸಿ ತೆಗೆದ ನಂತರ ಉಳಿಯುವ ಎಣ್ಣೆ. ಇದನ್ನು ಡೀಸಲ್ ಚಾಲಿತ ಚಾಲಕಯಂತ್ರಗಳಲ್ಲಿ ಇಂಧನವಾಗಿ ಬಳಸುತ್ತಾರೆ, ಮತ್ತು ಅಶ್ರುವಾಯು ತಯಾರಿಸುವಾಗಿನ ಇಂಗಾಲ ಮಿಶ್ರಣವನ್ನು ಮಾಡುವಲ್ಲಿ ಬಳಸುತ್ತಾರೆ.
ಗ್ಯಾಸ್ ಮೇಸರ್ – ಅನಿಲ ಬಲವರ್ಧಕ – ಮೈಕ್ರೋ ಅಲೆಗಳ ವಿಕಿರಣವು ಅನಿಲದ ಅಣುಗಳೊಂದಿಗೆ ಅಂತರ್ ಕ್ರಿಯೆ ನಡೆಸುವ ಒಂದು ಬಲವರ್ಧಕ.
ಗ್ಯಾಸ್ ಲಾಸ್ – ಅನಿಲ ನಿಯಮಗಳು – ಒಂದು ಅನಿಲದ ಒತ್ತಡ ಮತ್ತು/ಅಥವಾ ಉಷ್ಣತೆಯನ್ನು ಬದಲಾಯಿಸಿದಾಗ ಉಂಟಾಗುವ ಬದಲಾವಣೆಗಳನ್ನು ವಿವರಿಸುವ ನಿಯಮಗಳು. ಉದಾಹರಣೆಗೆ ಬಾಯ್ಲ್ ರ ನಿಯಮ, ಚಾಲ್ಸ್ರ್ ರ ನಿಯಮ.
ಗ್ಯಾಸ್ ಸೆಲ್ – ಅನಿಲ ವಿದ್ಯುತ್ ಕೋಶ – – ತನ್ನ ವಿದ್ಯುತ್ ದ್ವಾರಗಳು ಅನಿಲವನ್ನು ಹೀರಿಕೊಳ್ಳುವುದರ ಮೂಲಕ ಕೆಲಸ ಮಾಡುವಂತಹ ಒಂದು ವಿದ್ಯುತ್ ಕೋಶ.