ಪ್ರತಿಯೊಂದು ಭಾಷೆಗೂ ಅವರದ್ದೇ ಆದ ಕೆಲವು ವಿಶಿಷ್ಟ ನುಡಿಗಟ್ಟುಗಳಿರುತ್ತವೆ. ಕನ್ನಡ ಭಾಷೆಯೂ ಇದಕ್ಕೆ ಹೊರತಲ್ಲ. ಕನ್ನಡ ಭಾಷೆಯಲ್ಲಿರುವ ಅನೇಕ ನುಡಿಗಟ್ಟುಗಳಲ್ಲಿ ‘ಬೆಣ್ಣೆಯಿಂದ ಕೂದಲು ತೆಗೆದ ಹಾಗೆ’ ಎಂಬ ನುಡಿಗಟ್ಟು ಸಹ ಒಂದು. ಬೆಣ್ಣೆ ಎಂಬುದು ಕನ್ನಡ ನಾಡಿನ ಜನರು ಬಹಳವಾಗಿ ಇಷ್ಟ ಪಟ್ಟು ಬಳಸುವ ಹೈನು ಪದಾರ್ಥ. ಯಾವುದಾದರೂ ನಯವಾದ, ಮೃದುವಾದ ಪದಾರ್ಥವನ್ನು ಮೆಚ್ಚಬೇಕಾದರೆ ಅದನ್ನು ಬೆಣ್ಣೆಗೆ ಹೋಲಿಸುವುದು ರೂಢಿ. ಆದರೆ ಬೆಣ್ಣೆಯಿಂದ ಕೂದಲು ತೆಗೆಯುವುದು ಎಂಬುದು ಕನ್ನಡದಲ್ಲಿ ಒಂದು ವಿಶೇಷ ಭಾಷಾ ಪ್ರಯೋಗ. ತುಂಬ ನಾಜೂಕಾದ […]
ಇಮ್ಯಾಜಿನರಿ ನಂಬರ್ – ಕಲ್ಪಿತ ಸಂಖ್ಯೆ – -1 ರ ವರ್ಗಮೂಲದ ಗುಣಕವಾಗಿರುವ ಒಂದು ಸಂಖ್ಯೆ. ಇದನ್ನು ‘i’ ಯಿಂದ ಸೂಚಿಸಲಾಗುತ್ತದೆ.
ಇಮೇಜ್ ಫೋರ್ಸ್ – ಪ್ರತಿಬಿಂಬ ಬಲ ಅಥವಾ ಪ್ರತಿ ಬಲ – ಒಂದು ವಿದ್ಯುದಂಶವು ತನ್ನ ಸಮೀಪ ಇರುವ ವಾಹಕಗಳು ಅಥವಾ ಅವಾಹಕಗಳಲ್ಲಿ ಪ್ರಚೋದಿಸುವ ವಿದ್ಯುದಂಶಗಳಿಂದಾಗಿ, ಆ ವಿದ್ಯುದಂಶದ ಮೇಲೆ ಉಂಟಾಗುವ ಅಥವಾ ವರ್ತಿಸುವ ಬಲ.
ಇಮೇಜ್ – ಬಿಂಬ – ಮಸೂರ, ಕನ್ನಡಿ ಅಥವಾ ಇನ್ಯಾವುದಾದರೂ ದೃಶ್ಯಸಂಬಂಧೀ ಉಪಕರಣದಿಂದ ಮೂಡಿಸಿದಂತಹ, ವಸ್ತುವೊಂದರ ರೂಪ.
ಇಲ್ಯೂಮಿನೆನ್ಸ್ ( ಇಲ್ಯೂಮಿನೇಷನ್), ಸಿಂಬಲ್ ‘E’ – ಪ್ರಕಾಶ, ಸಂಕೇತ ‘E’ – ಕಣ್ಣಿಗೆ ಕಾಣುವ ಬೆಳಕಿನ ರೂಪದಲ್ಲಿರುವ ಶಕ್ತಿ. ಇದನ್ನು lux ಎಂಬ ಮೂಲಮಾನದಿಂದ ಅಳೆಯುತ್ತಾರೆ.
ಇಗ್ನಿಷನ್ ಟೆಂಪರೇಚರ್ – ಉರಿ ಹತ್ತುವ ಉಷ್ಣಾಂಶ – ಒಂದು ವಸ್ತುವು ಹತ್ತಿಕೊಂಡು ಉರಿಯಲು ಬೇಕಾದಂತಹ ಉಷ್ಣಾಂಶ.
ಐಡಿಯಲ್ ಗ್ಯಾಸ್ ( ಪರ್ಫೆಕ್ಟ್ ಗ್ಯಾಸ್) – ಆದರ್ಶ ಅನಿಲ ( ಪರಿಪೂರ್ಣ ಅನಿಲ) – ಬಾಯ್ಲ್ ನ ನಿಯಮವನ್ನು ಪಾಲಿಸುವ ಅನಿಲ. ಇದಕ್ಕೆ ತನ್ನ ಪರಿಮಾಣದ ಮೇಲೆ ಯಾವ ಅವಲಂಬನೆಯೂ ಇರದಂತಹ ಆಂತರಿಕ ಶಕ್ತಿ ಇರುತ್ತದೆ.
ಐಡಿಯಲ್ ಕ್ರಿಸ್ಟಲ್ – ಆದರ್ಶ ಸ್ಫಟಿಕ ಅಥವಾ ಆದರ್ಶ ಹರಳು – ಪರಿಪೂರ್ಣ ಹಾಗೂ ಅನಂತ ಎಂದು ಪರಿಗಣಿಸಲಾದ ಹರಳು ರಚನೆ.
Like us!
Follow us!