ಇನ್ಸ್ಯುಲೇಟರ್, ಥರ್ಮಲ್ – ಪ್ರತಿರೋಧಕ, ಉಷ್ಣತಾ –
ಉಷ್ಣತೆಯನ್ನು ಸರಾಗವಾಗಿ (ಕೂಡಲೇ ಎಂಬಂತೆ) ತಮ್ಮೊಳಗೆ ಮತ್ತು ತಮ್ಮ ಮೂಲಕ ಹರಿಯಲು ಬಿಡದ ವಸ್ತುಗಳು.
			ಇನ್ಸ್ಯುಲೇಟರ್, ಥರ್ಮಲ್ – ಪ್ರತಿರೋಧಕ, ಉಷ್ಣತಾ –
ಉಷ್ಣತೆಯನ್ನು ಸರಾಗವಾಗಿ (ಕೂಡಲೇ ಎಂಬಂತೆ) ತಮ್ಮೊಳಗೆ ಮತ್ತು ತಮ್ಮ ಮೂಲಕ ಹರಿಯಲು ಬಿಡದ ವಸ್ತುಗಳು.
ಇನ್ಸ್ಯುಲೇಷನ್, ಎಲೆಕ್ಟ್ರಿಕಲ್ – ಪ್ರತಿರೋಧ, ವಿದ್ಯುತ್ತೀಯ – (ರಕ್ಷಣೆಗಾಗಿ ಅಥವಾ ಮಂಡಲ ಮೊಟಕಾಗದಂತೆ ( ಶಾರ್ಟ್ ಸರ್ಕ್ಯೂಟ್ ಆಗದಂತೆ) ತಡೆಯಲಿಕ್ಕಾಗಿ) ವಿದ್ಯುತ್ ವಾಹಕಗಳಿಗೆ ಹೊದಿಸಲು ಅಥವಾ ಅವುಗಳನ್ನು ಪ್ರತ್ಯೇಕಿಸಲು ಅವಾಹಕ ವಸ್ತುಗಳನ್ನು ಬಳಸುವುದು.
ಇನ್ಸ್ಟೆಂಟೇನಿಯಸ್ ವ್ಯಾಲ್ಯೂ – ತಾಕ್ಷಣಿಕ ಮೌಲ್ಯ – ವೇಗೋತ್ಕರ್ಷ, ವಿದ್ಯುತ್, ವಿದ್ಯುತ್ ಬಲ ಮುಂತಾದ ಕ್ಷಣಭಿನ್ನ ಪರಿಮಾಣಕ್ಕೆ ಸಂಬಂಧಿಸಿದಂತೆ ಕಾಲದ ಒಂದು ನಿರ್ದಿಷ್ಟ ಕ್ಷಣದಲ್ಲಿ ಅದರ ಮೌಲ್ಯ.
ಇನ್ಲೈನ್ ಹೋಲೋಗ್ರಫಿ – ಏಕರೇಖೆಯ ಪೂರ್ಣಚಿತ್ರಗ್ರಹಣ – ಒಂದು ಚಿಕ್ಕ ವಸ್ತುವಿನಿಂದ ಚದುರಿಸಲ್ಪಟ್ಟ ಅಥವಾ ಹಬ್ಬಿಸಲ್ಪಟ್ಟ ಅಲೆಗಳೊಂದಿಗೆ ಲೇಸರ್ ಕಿರಣಗಳು ಅಡ್ಡ ಹಾಯ್ದು ಉತ್ಪತ್ತಿಯಾದ ಪೂರ್ಣಚಿತ್ರ.
ಇನ್ಫ್ರಾರೆಡ್ ಸ್ಟಾರ್ಸ್ – ಅಧೋಕೆಂಪು ನಕ್ಷತ್ರಗಳು – ಅಧೋಕೆಂಪು ವಿಕಿರಣವನ್ನು ತಮ್ಮ ಮುಖ್ಯ ಹೊರಸೂಸುವಿಕೆಯಾಗಿ ಹೊಂದಿರುವ ಆಕಾಶಕಾಯಗಳು. ಧೂಳಿನ ಮೋಡಗಳಿಂದ ಸುತ್ತುವರಿದಿರುವ ನಕ್ಷತ್ರಗಳಿವು ಎನ್ನಲಾಗುತ್ತದೆ.
ಇನ್ಫ್ರಾಸೌಂಡ್ – ಅಧೋಶಬ್ಧ – 16 ಹರ್ಟ್ಝ್ ಗಿಂತ ಕಡಿಮೆ ಆವರ್ತನ ಇರುವ ಮಾಧ್ಯಮವೊಂದರಲ್ಲಿನ ಕಂಪನಗಳು. ಇವನ್ನು ಕಿವಿಯು ಒಂದು ನಿರಂತರವಾದ ಶಬ್ಧ ಎಂದು ಗ್ರಹಿಸುವುದಿಲ್ಲ, ಬದಲಾಗಿ ಶಬ್ಧಮಿಡಿತಗಳ ಸರಣಿಯಾಗಿ ಗ್ರಹಿಸುತ್ತದೆ.
ಇನ್ಫ್ರಾರೆಡ್ ಡಿಟೆಕ್ಟರ್ – ಅಧೋಕೆಂಪು ಪತ್ತೆಯಂತ್ರ – ಅಧೋಕೆಂಪು ವಿಕಿರಣವನ್ನು ಗಮನಿಸಲು ಮತ್ತು ಅಳೆಯಲು ಬಳಸುವಂತಹ ಒಂದು ಉಷ್ಣ ಉಪಕರಣ.
ಇನ್ಫ್ರಾರೆಡ್ ರೇಡಿಯೇಷನ್ – ಅಧೋಕೆಂಪು ವಿಕಿರಣ – ಅಣು ಮಟ್ಟದಲ್ಲಿ ಉಂಟಾಗುವಂತಹ ವಿದ್ಯುದಂಶದ ಚಲನೆಯಿಂದ ಉತ್ಪತ್ತಿಯಾಗುವ ವಿಕಿರಣಗಳಿವು.
Kannada Sethu. All rights reserved.