Magnetic bubble memory

ಮ್ಯಾಗ್ನೆಟಿಕ್ ಬಬ್ಬಲ್ ಮೆಮೊರಿ‌ – ಕಾಂತೀಯ ಬೊಬ್ಬುಳಿ ನೆನಪು  – ಇದು ಒಂದು ರೀತಿಯ ಗಣಕಯಂತ್ರ ನೆನಪು. ಇದರಲ್ಲಿ ಕಾಂತೀಯಗೊಳಿಸಲಾದ ವಸ್ತುವಿನ ಒಂದು ಸಣ್ಣ ಪ್ರದೇಶವು(ಭಾಗವು) ಮಾಹಿತಿ ಸಂಗ್ರಹಿಸಲು ಬಳಕೆಯಾಗುತ್ತದೆ.

ಕನ್ನಡ ಗಾದೆಮಾತು – ಅಕ್ಕರೆಯ ರುಚಿ ಮುಂದೆ, ಸಕ್ಕರೆಯ ರುಚಿ ಹಿಂದೆ.

ಮನುಷ್ಯರ ನಡುವಿನ ಪ್ರೀತಿ ವಿಶ್ವಾಸ ಗಳನ್ನು ಕುರಿತು ತುಂಬ ನಿದರ್ಶನೀಯವಾಗಿ ಹೇಳಿರುವ ಗಾದೆಮಾತು ಇದು. ಎಷ್ಟೇ ಸಿಹಿಯಾದ, ರುಚಿಯಾದ ಊಟವನ್ನು ಬಡಿಸಿದರೂ ಹಾಗೆ ಬಡಿಸುವಾಗ ಅಕ್ಕರೆ, ಪ್ರೀತಿ, ವಿಶ್ವಾಸ ಇಲ್ಲವೆಂದರೆ ಆ ಊಟ  ನಮ್ಮ ಬಾಯಿಗೆ ರುಚಿಸುವುದಿಲ್ಲ, ಹೆಚ್ಚು ತಿನ್ಮಬೇಕು ಅನ್ನಿಸುವುದಿಲ್ಲ. ಆದರೆ, ತಿಳಿಗಂಜಿಯ ಸರಳ ಊಟವನ್ನೇ ಆಗಲಿ, ಅಕ್ಕರೆಯಿಂದ ಕೊಟ್ಟರೆ ಮನಸ್ಸು ಸಂತಸ ಪಟ್ಟು, ಎರಡು ತುತ್ತು ಹೆಚ್ಚಾಗಿಯೇ ಸೇರಿ ಹೊಟ್ಟೆ ತಂಪಾಗುತ್ತದೆ. ಹೀಗೆ, ಈ ಗಾದೆಮಾತು,  ನಮ್ಮ‌‌ ಜೀವನದಲ್ಲಿ, ಪದಾರ್ಥವೈಭವಕ್ಕಿಂತ ಅಕ್ಕರೆ, ವಿಶ್ವಾಸಗಳು ಮುಖ್ಯ […]

ಅನುಚಿತ ಬಹುವಚನ ಪ್ರಯೋಗ ತಂದ ಫಜೀತಿ!

ಅದು ಒಂದು ಕಾಲೇಜಿನ ಅಧ್ಯಾಪಕರ ಸಂಘವು ಆಯೋಜಿಸಿದ್ದ ಒಂದು ಕಾರ್ಯಕ್ರಮ.‌ ಆ ದಿನ ವಯೋನಿವೃತ್ತಿ ಹೊಂದಲಿದ್ದ ಅಧ್ಯಾಪಕಿಯೊಬ್ಬರ ಗೌರವಾರ್ಥ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ. ಸಾಮಾನ್ಯವಾಗಿ ಇಂತಹ ಸಮಾರಂಭಕ್ಕೆ ನಿವೃತ್ತಿ ಹೊಂದುತ್ತಿರುವವರ ಕುಟುಂಬ ಸದಸ್ಯರನ್ನು ಸಹ ಆಹ್ವಾನಿಸಲಾಗಿರುತ್ತದೆ.‌ ಅಂತೆಯೇ, ಈ ಸಮಾರಂಭದಲ್ಲಿ, ಮೇಲೆ ಹೇಳಿದ ಅಧ್ಯಾಪಕಿಯ ಪತಿಗೆ ಆಹ್ವಾನ ನೀಡಲಾಗಿದ್ದು, ಅವರು ಉಪಸ್ಥಿತರಿದ್ದರು. ಸಮಾರಂಭದ ನಿರೂಪಕರು ಭಾಷೆಯ ವಿಷಯದಲ್ಲಿ ಅಷ್ಟೇನೂ ಸೂಕ್ಷ್ಮತೆ ಹೊಂದಿರಲಿಲ್ಲವೆಂದು ತೋರುತ್ತೆ. ಆಕೆ ತಮ್ಮ ಸ್ವಾಗತ ನುಡಿಗಳಲ್ಲಿ ವೇದಿಕೆಯಲ್ಲಿ ಹಾಗೂ ಸಭೆಯಲ್ಲಿ ಇದ್ದವರನ್ನು ಸ್ವಾಗತಿಸುವ ಭರದಲ್ಲಿ […]

Magnetic bottle

ಮ್ಯಾಗ್ನೆಟಿಕ್ ಬಾಟಲ್ – ಕಾಂತೀಯ ಸೀಸೆ – ವಿದ್ಯುದಂಶ ಹೊತ್ತಿರುವ ಕಣಗಳನ್ನು ಹದ್ದುಬಸ್ತಿನಲ್ಲಿಡಲು( ನಿರ್ಬಂಧದಲ್ಲಿಡಲು) ಸಹಾಯ ಮಾಡುವ ವ್ಯವಸ್ಥೆ ಇದು‌.‌ ಇದನ್ನು ‌ಅಣುಬೀಜಕೇಂದ್ರದ ಬೆಸುಗೆಯ ಸಂದರ್ಭದಲ್ಲಿ ಪ್ಲಾಸ್ಮಾವನ್ನು ನಿರ್ಬಂಧದಲ್ಲಿಡಲು ಬಳಸುತ್ತಾರೆ. ಮೂಲತಃ ಒಂದು ಅಸಮಗುಣೀ ಕಾಂತಕ್ಷೇತ್ರ ಇದು‌.

Magnetic balance

ಮ್ಯಾಗ್ನೆಟಿಕ್ ಬ್ಯಾಲೆನ್ಸ್ – ಕಾಂತೀಯ ತ್ರಾಸು (ಕಾಂತೀಯ ತಕ್ಕಡಿ) – ಅಯಸ್ಕಾಂತ ಧ್ರುವಗಳ ನಡುವಿನ ಆಕರ್ಷಣೆ ಅಥವಾ ವಿಕರ್ಷಣೆಯನ್ನು ನೇರವಾಗಿ‌ ಅಳೆಯಲು ಬಳಸುವಂತಹ ಉಪಕರಣ.

Magnetic anisotropy

ಮ್ಯಾಗ್ನೆಟಿಕ್ ಅನಿಸೋಟ್ರೋಫಿ‌ – ಕಾಂತೀಯ ಅಸಮವರ್ತನೆ – ಕೆಲವು ವಸ್ತುಗಳ ಕಾಂತೀಯ ಗುಣಗಳು ಯಾವ ದಿಕ್ಕಿನಲ್ಲಿ ಅವುಗಳನ್ನು ಅಳೆಯುತ್ತೇವೆ ಎಂಬುದನ್ನು ಅವಲಂಬಿಸಿರುತ್ತವೆ‌. ಈ ಗುಣವನ್ನು ಕಾಂತೀಯ ಅಸಮವರ್ತನೆ ಎನ್ನುತ್ತಾರೆ.

Magnetic amplifier

ಮ್ಯಾಗ್ನೆಟಿಕ್ ಆಂಪ್ಲಿಫೈಯರ್ – ಕಾಂತೀಯ ಬಲವರ್ಧಕ‌- ಇದೊಂದು ರೀತಿಯ ವಿದ್ಯುತ್ ಬಲವರ್ಧಕ. ಇದನ್ನು ಹೇಗೆ ವ್ಯವಸ್ಥೆಗೊಳಿಸಿರುತ್ತಾರೆ ಎಂದರೆ, ನಿಯಂತ್ರಿಸುವ ನೇರ ವಿದ್ಯುತ್ತನ್ನು ಸಣ್ಣ ಪ್ರಮಾಣದಲ್ಲಿ ನೀಡಿದಾಗ ಇದಕ್ಕೆ ಜೋಡಿಸಿದಂತಹ ವಿದ್ಯುನ್ಮಂಡಲದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳು ಉಂಟಾಗುತ್ತವೆ.

Magnet

ಮ್ಯಾಗ್ನೆಟ್ – ಅಯಸ್ಕಾಂತ – ಕಾಂತ ಗುಣವುಳ್ಳ ವಸ್ತುವಿನ ತುಂಡು. ಇದನ್ನು ಅಯಸ್ಕಾಂತ ಕ್ಷೇತ್ರದಲ್ಲಿಟ್ಟು ಅಯಸ್ಕಾಂತವಾಗಿಸಿರುತ್ತಾರೆ‌‌. ಇದು ಒಂದು ಬಿಲ್ಲೆಯ ಆಕಾರದಲ್ಲಿ ಅಥವಾ ಒಂದು ಕುದುರೆ ಲಾಳದ ಆಕಾರದಲ್ಲಿ ಇರುತ್ತದೆ.

ಕನ್ನಡ ಗಾದೆಮಾತು – ಊಟಕ್ಕೆ ಮೊದಲಿರಬೇಕು, ಸ್ನಾನಕ್ಕೆ ಕೊನೆಗಿರಬೇಕು.

ನೈಜ ಜೀವನಾನುಭವದಿಂದ ಮೂಡಿ ಬಂದಿರುವ ಗಾದೆಮಾತು ಇದು. ಮನೆಯಲ್ಲಿ, ಹಬ್ಬ – ಹರಿದಿನಗಳಲ್ಲಿ ಅಥವಾ ಮದುವೆ – ಮುಂಜಿಗಳಲ್ಲಿ, ಅಡಿಗೆ ಆದ ತಕ್ಷಣ ಅಂದರೆ ಮೊದಲ ಪಂಕ್ತಿಯಲ್ಲೇ ಊಟ ಮಾಡಿದರೆ ಅಡಿಗೆ ಬಿಸಿಬಿಸಿಯಾಗಿ, ವಿಪುಲವಾಗಿದ್ದು ಎಲ್ಲ ಭಕ್ಷ್ಯಭೋಜ್ಯಗಳೂ ಸಾಕುಬೇಕೆಂಬಷ್ಟು ಸಿಗುತ್ತವೆ. ಅದೇ ಕೊನೆಯಲ್ಲಿ ಊಟ ಮಾಡುತ್ತೇವೆ ಎಂದರೆ ಹೋಳುಕಾಳು ಇಲ್ಲದ ಸಾಂಬಾರು, ಆರಿ ಹೋದ ಬಜ್ಜಿ- ಬೋಂಡಾ ತಿನ್ನಬೇಕಾಗಬಹುದು, ಅಥವಾ ಊಟಕ್ಕೆಂದು ಮಾಡಿದ ಪಲ್ಯವೋ, ಸಿಹಿತಿಂಡಿಗಳೋ ಮುಗಿದೇ ಹೋಗಿರಬಹುದು‌. ಹಾಗೆಯೇ ಮೊದಲು ಸ್ನಾನ ಮಾಡುತ್ತೇವೆಂದರೆ (ಮುಖ್ಯವಾಗಿ ಹಳೆಕಾಲದ […]

‘ದೇವಿ‌ ಹಾಕಿಸುವುದು‌’ ಎಂಬ ಪದದ ವಿಶೇಷತೆ

ದೇವಿ ಹಾಕಿಸುವುದು – ಕನ್ನಡ ಭಾಷೆಯ ಒಂದು ವಿಶಿಷ್ಟ ಪದಪ್ರಯೋಗ ಇದು‌. ಆಧುನಿಕ ವಿಜ್ಞಾನದ ಆವಿಷ್ಕಾರಕ್ಕಿಂತ ಮುಂಚೆ ಮೈತುಂಬ ಗುಳ್ಳೆಗಳು ಏಳುವ ವಿವಿಧ ರೀತಿಯ ಸಿಡುಬಿನ ಕಾಯಿಲೆಗಳು ಬಂದರೆ, ಅದಕ್ಕೆ ಕಾರಣ ಗ್ರಾಮದೇವತೆಯ ಕೋಪ ಎಂಬ ಭಾವನೆಯು ನಮ್ಮ‌ ಹಳ್ಳಿಗರಲ್ಲಿತ್ತು. ಅದಕ್ಕಾಗಿಯೇ ನೋಡಿ ಈ ಕಾಯಿಲೆಗೆ ‘ಅಮ್ಮ ಬಂದಿದೆ, ಅಮ್ಮ ಆಗಿದೆ’ ಎಂದೇ ಹೇಳುತ್ತಿದ್ದರು. Small pox ಎಂಬ ಸಿಡುಬಿಗಂತೂ ‘ದೇವಮ್ಮ‌ ಕಾಯಿಲೆ’ ಎಂಬ ಹೆಸರೇ ಇತ್ತು! ಮುಂದೆ, 1796ರಲ್ಲಿ, ಇಂಗ್ಲೆಂಡ್ ದೇಶದ ವಿಜ್ಞಾನಿ ಎಡ್ವರ್ಡ್ ಜನ್ನರ್ ಅವರು […]

Page 7 of 139

Kannada Sethu. All rights reserved.