ಫೀಲ್ಡ್ ಎಮಿಷನ್ ಮೈಕ್ರೋಸ್ಕೋಪ್ – ಕ್ಷೇತ್ರೀಯ ಹೊರಸೂಸುವಿಕೆಯುಳ್ಳ ಸೂಕ್ಷ್ಮದರ್ಶಕ – ಇದು ಒಂದು ರೀತಿಯ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ. ಇದರಲ್ಲಿ ನಿರ್ವಾತದಲ್ಲಿರುವ ಲೋಹದ ಚೂಪುತುದಿಯೊಂದಕ್ಕೆ ಹೆಚ್ಚಿನ ವಿದ್ಯುತ್ ಸಾಮರ್ಥ್ಯವ್ಯತ್ಯಾಸವನ್ನು ನೀಡಿ, ಎಲೆಕ್ಟ್ರಾನುಗಳು ಹೊರಸೂಸುವಂತೆ ಮಾಡಲಾಗುತ್ತದೆ.
ಫೀಲ್ಡ್ ಎಮಿಷನ್ – ಕ್ಷೇತ್ರೀಯ ಹೊರಸೂಸುವಿಕೆ – ಕಾಯಿಸಿದರೂ ತನ್ನ ತಾಪಮಾನವು ಹೆಚ್ಚಾಗದಿರುವ ಮೇಲ್ಮೈ ಯೊಂದರಿಂದ, ತನ್ನಲ್ಲಿರುವ ಪ್ರಬಲ ವಿದ್ಯುತ್ ಕ್ಷೇತ್ರದಿಂದಾಗಿ ಎಲೆಕ್ಟ್ರಾನುಗಳು ಹೊರಸೂಸುವುದು.
ಫೀಲ್ಡ್ ಎಫೆಕ್ಟ್ ಟ್ರ್ಯಾನ್ಸಿಸ್ಟರ್ – ಕ್ಷೇತ್ರ ಪರಿಣಾಮ ಟ್ರ್ಯಾನ್ಸಿಸ್ಟರು – ಇದು ಒಂದು ರೀತಿಯ ಕಾಂತೀಯ ಟ್ರ್ಯಾನ್ಸಿಸ್ಟರು. ಇದು ಅರೆವಾಹಕದಲ್ಲಿನ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ವಿದ್ಯುತ್ ಕ್ಷೇತ್ರವನ್ನು ಬಳಸುತ್ತದೆ.
ಫೀಲ್ಡ್ ಕಾಯಿಲ್ – ಕಾಂತಕ್ಷೇತ್ರ ಸುರುಳಿ – ಒಂದು ವಿದ್ಯುತ್ ಉತ್ಪಾದಕ ಯಂತ್ರ ಅಥವಾ ಒಂದು ವಿದ್ಯುತ್ ಜನಕ ಯಂತ್ರದಲ್ಲಿನ ಕಾಂತಕ್ಷೇತ್ರವನ್ನು ಉತ್ಪಾದಿಸುವ ಸುರುಳಿ.
ಫಿಡೆಲಿಟಿ – ನಿಷ್ಠೆ – ವಿದ್ಯುತ್ ಪ್ರಸಾರ ಮಾಡುವ ಒಂದು ವ್ಯವಸ್ಥೆಯು ವಿದ್ಯುತ್ತನ್ನು ಕೊಡುವಾಗ ತಾನು ಪಡೆದುಕೊಳ್ಳುತ್ತಿರುವ ವಿದ್ಯುತ್ ಪ್ರವಾಹದ ಗುಣಲಕ್ಷಣಗಳನ್ನು ಎಷ್ಟರ ಮಟ್ಟಿಗೆ ಹಾಗೆಯೇ ಉಳಿಸಿಕೊಳ್ಳುತ್ತದೆ ಎಂಬುದರ ಅಳತೆ.
ಫೈಬರ್ ಆಪ್ಟಿಕ್ಸ್ – ಗಾಜಿನ ನಾರಿನ ಬೆಳಕು ವಿಜ್ಞಾನ – ಬೆಳಕನ್ನು ಪ್ರಸಾರ ಮಾಡಲು ಪಾರದರ್ಶಕವಾದ ಗಾಜಿನ/ಬೇರೆ ವಸ್ತುವಿನ ನಾರನ್ನು ಬಳಸುವುದು.
ಫರ್ಟೈಲ್ ಮೆಟೀರಿಯಲ್ – ಫಲದಾಯೀ ವಸ್ತು – ನ್ಯೂಟ್ರಾನುಗಳನ್ನು ಹೀರಿಕೊಳ್ಳುವ ಮೂಲಕ ವಿದಳನಗೊಳ್ಳುವ ವಸ್ತುಗಳಾಗಿ ಬದಲಾಗುವಂತಹ ವಸ್ತಗಳು.
ಫೆರ್ರೋಮ್ಯಾಗ್ನೆಟಿಸಂ – ಪ್ರಬಲ ಅಯಸ್ಕಾಂತತೆ – ಕಬ್ಬಿಣ, ಕೊಬಾಲ್ಟ್ ಮತ್ತು ನಿಕ್ಕಲ್ ನಂತಹ ಕೆಲವು ವಸ್ತುಗಳು ಹೆಚ್ಚಿನ ಪ್ರಮಾಣದ ಕಾಂತೀಯತೆಯನ್ನು ಹೊಂದಿರುತ್ತವೆ, ಅಂದರೆ, ಬಹಳ ಬೇಗ ಕಾಂತಗಳಾಗುವ ಗುಣವುಳ್ಳ ವಸ್ತುಗಳು ಇವು. ಇಂತಹ ವಸ್ತುಗಳನ್ನು ಪ್ರಬಲ ಅಯಸ್ಕಾಂತೀಯತೆ ಹೊಂದಿರುವವು ಅನ್ನಲಾಗುತ್ತದೆ.
ಫೆರ್ರೋಎಲೆಕ್ಟ್ರಿಕಲ್ಸ್ – ವಿದ್ಯುತ್ ಕಾಂತಗಳು – ಪ್ರಬಲ ಅಯಸ್ಕಾಂತ ವಸ್ತುಗಳು ಹೊಂದಿರುವ ವಿದ್ಯುತ್ತೀಯ ಗುಣಲಕ್ಷಣಗಳನ್ನು ಹೊಂದಿರುವ ಅವಾಹಕ ವಸ್ತುಗಳು.
ಫೆರೈಟ್ಸ್ – ದುರ್ಬಲ ಕಾಂತಗಳು – ಇವು ಕಬ್ಬಿಣಯುತ ಸಂಯುಕ್ತವಸ್ತುಗಳ ಒಂದು ಗುಂಪು. ಇವುಗಳಿಗೆ ದುರ್ಬಲ ಆದರೆ ಶಾಶ್ವತ ಅಯಸ್ಕಾಂತ ಗುಣ ಇರುತ್ತದೆ.