ಚಟುವಟಿಕೆಯಿಂದ ಪುಟಿಯುವ ಹದಿಹರೆಯದವರನ್ನು ಕಾಲೇಜಿನ ತರಗತಿ ಕೋಣೆಗಳಲ್ಲಿ ಒಂದೇ ಕಡೆ ಕೂರುವಂತೆ ಮಾಡಿ ಅವರಿಗೆ ಆಸಕ್ತಿ ಮೂಡದ ವಿಷಯಗಳನ್ನು ಯಾಂತ್ರಿಕವಾಗಿ ತಲುಪಿಸುವುದು ಅಷ್ಟೇನೂ ಸಂತೋಷದ ವಿಷಯವಲ್ಲ. ವಿಷಯ ಹೀಗಿರುವಾಗ, `ಕನ್ನಡ ತರಗತಿಗಳನ್ನು ಆಸಕ್ತಿದಾಯಕವಾಗಿಸುವುದು ಹೇಗೆ’ ಎಂದು ಯಾವಾಗಲೂ ಯೋಚಿಸುವ ನನ್ನಂತಹ ಅಧ್ಯಾಪಕರಿಗೆ ಸಹಾಯ ಮಾಡುವ ಒಂದು ಪರಿಕಲ್ಪನೆ ಅಂದರೆ ಸಕ್ರಿಯ ತರಗತಿಯದ್ದು. ಸಕ್ರಿಯ ತರಗತಿ ಎಂದರೆ ಏನು? ಮಕ್ಕಳು ನಗುವ, ತಮ್ಮ ಭಾವನೆಗಳನ್ನು, ಪಾಠವು ಕೊಟ್ಟ ಹಾಗೂ ಜೀವನವು ಕೊಟ್ಟ ಅನುಭವಗಳನ್ನು ಮತ್ತು ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ […]
ವಿನಿಮಯಕ – ಇದು ಏಕಮುಖೀ ವಿದ್ಯುತ್ತು ಹರಿಯುವ ವಿದ್ಯುತ್‌ಚಾಲಕ ಅಥವಾ ವಿದ್ಯುಜ್ಜನಕ ಯಂತ್ರದ ಒಂದು ಇದು ಭಾಗ. ಇದು ಯಂತ್ರದ ವಿದ್ಯುತ್ ಸುರುಳಿಗಳನ್ನು ಹೊರಗಿನ ವಿದ್ಯುನ್ಮಂಡಲಕ್ಕೆ ಜೋಡಿಸುತ್ತದೆ, ಹಾಗೂ ವಿದ್ಯುತ್ ಸುರುಳಿಯು ಸುತ್ತುತ್ತಿರುವಾಗ ಅದರಲ್ಲಿ ಹರಿಯುವ ವಿದ್ಯುತ್ ಪ್ರವಾಹದ ದಿಕ್ಕು ಒಂದೇ ಆಗಿರುವಂತೆ ನೋಡಿಕೊಳ್ಳುತ್ತದೆ.
ಧೂಮಕೇತು – ಸೂರ್ಯನ ಆಕರ್ಷಣೆಗೊಳಪಟ್ಟು ಚಲಿಸುವ ಒಂದು ಆಕಾಶಕಾಯ. ಮಬ್ಬುಮಬ್ಬು ಅನಿಲದ ಮೋಡಗಳಿಂದ ಉಂಟಾಗಿರುವ ಇದರಲ್ಲಿ ಹೆಚ್ಚು ಪ್ರಕಾಶಮಾನವಾದ ಬೀಜಕೇಂದ್ರ ಮತ್ತು ಅಷ್ಟೇನೂ ಪ್ರಕಾಶಮಾನವಲ್ಲದ ಬಾಲ ಇರುತ್ತದೆ.
ಧೂಮಕೇತು ಬಿಂಬ – ಒಂದು ರೀತಿಯ ಬಿಂಬದೋಷ ಇದು. ಗೋಳಾಕಾರದ ಮಸೂರಗಳಲ್ಲಿ ಬೆಳಕು ಓರೆಯಾಗಿ ಬಿದ್ದಾಗ, ಬಿಂಬವು ಸಮಕಟ್ಟಿಲ್ಲದೆ ರೂಪುಗೊಳ್ಳುತ್ತದೆ. ಇಲ್ಲಿ ಒಂದು ಬಿಂದುವಿನ ಬಿಂಬವು ಧೂಮಕೇತುವಿನ ಆಕಾರದಲ್ಲಿರುವುದರಿಂದ ಇದನ್ನು ಧೂಮಕೇತು ಬಿಂಬ ಎನ್ನುತ್ತಾರೆ.
ಬಣ್ಣಯುತ ದೃಷ್ಟಿ – ಮನುಷ್ಯನ ಕಣ್ಣಿಗಿರುವ ಒಂದು ಸಾಮರ್ಥ್ಯ ಇದು. ಬೇರೆ ಬೇರೆ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಂತಹ ಸಾಮರ್ಥ್ಯ.
ಬಣ್ಣದ ದೂರದರ್ಶನ(ಟಿವಿ) – ಪರದೆಯೊಂದರ ಮೇಲೆ ಬಣ್ಣದ ಚಿತ್ರಗಳನ್ನು ಮೂಡಿಸುವ ವ್ಯವಸ್ಥೆ. ಕೆಂಪು, ಹಸುರು ಮತ್ತು ನೀಲಿ ಎಂಬ ಮೂಲಭೂತ ಬಣ್ಣಗಳನ್ನು ಹೊಂದಿರುವ ಬಿಂಬಗಳನ್ನು ಒಂದಾದ ಮೇಲೊಂದರಂತೆ ತುಂಬ ವೇಗದಲ್ಲಿ ಪ್ರಸಾರ ಮಾಡಿ ಎಲ್ಲ ಬಣ್ಣವುಳ್ಳ ಬಿಂಬವನ್ನು ರೂಪಿಸುವುದು.
ಬಣ್ಣಶಕ್ತಿ ಮಾಪಕ – ಯಾವುದೇ ಬಣ್ಣದ ತೀಕ್ಷ್ಣತೆಯನ್ನಾದರೂ ಮೂರು ಮೂಲಭೂತ ಬಣ್ಣಗಳ (ಕೆಂಪು, ಹಸುರು, ನೀಲಿ) ನೆಲೆಯಲ್ಲಿ(ಅಂದರೆ ಪ್ರತಿಯೊಂದರ ಪರಿಭಾಷೆಯಲ್ಲಿ) ನೀಡುವ ಒಂದು ಉಪಕರಣ.
Like us!
Follow us!