ಎಲೆಕ್ಟ್ರೋಸ್ಟ್ಯಾಟಿಕ್ ಇಂಡಕ್ಷನ್ – ಸ್ಥಾಯೀವಿದ್ಯುತ್ ಆವಾಹನೆ – ಒಂದು ವಿದ್ಯುತ್ ಕ್ಷೇತ್ರದ ಯಾವುದಾದರೊಂದು ಬಿಂದುವಿನಲ್ಲಿ ಧನ ಹಾಗೂ ಋಣ ವಿದ್ಯುದಂಶಗಳನ್ನು ಪ್ರತ್ಯೇಕಿಸುವ ಮೂಲಕ ವಿದ್ಯುತ್ತನ್ನು ಉತ್ಪಾದಿಸುವುದು.
ಎಲೆಕ್ಟ್ರೋಸ್ಟ್ಯಾಟಿಕ್ ಪ್ರಿಸಿಪಿಟೇಷನ್ – ಸ್ಥಾಯೀವಿದ್ಯುತ್ ಅವಪತನ – ಒಂದು ಅನಿಲದಲ್ಲಿ ತೇಲಾಡುತ್ತಿರುವ ಸ್ಥಿತಿಯಲ್ಲಿರುವ ಘನವಸ್ತು ಅಥವಾ ದ್ರವವಸ್ತುವಿನ ಕಣಗಳನ್ನು ಬೇರೆಮಾಡುವ ಅಥವಾ ತೆಗೆದು ಹಾಕುವ ಒಂದು ವಿಧಾನ.
ಎಲೆಕ್ಟ್ರೋಸ್ಟ್ಯಾಟಿಕ್ ಜೆನರೇಟರ್ – ಸ್ಥಾಯೀವಿದ್ಯುತ್ತಿನ ಮೂಲಕ ನಿರಂತರ ವಿದ್ಯುತ್ ಸರಬರಾಜು ಆಗುವಂತೆ ವಿನ್ಯಾಸಗೊಳಿಸಿದ ಒಂದು ಉಪಕರಣ.
ಎಲೆಕ್ಟ್ರೋಸ್ಟ್ಯಾಟಿಕ್ ಫೀಲ್ಡ್ – ಸ್ಥಾಯಿ (ಚಲಿಸದಿರುವ)ವಿದ್ಯುದಂಶದಿಂದ ಉತ್ಪತ್ತಿಯಾದ ವಿದ್ಯುತ್ ಕ್ಷೇತ್ರ.
ಎಲೆಕ್ಟ್ರೋಸ್ಕೋಪ್ – ವಿದ್ಯುತ್ ಸಾಮರ್ಥ್ಯ ಶೋಧಕ – ವಿದ್ಯುತ್ ಅಂತಃ ಸಾಮರ್ಥ್ಯವ್ಯತ್ಯಾಸವನ್ನು ಪತ್ತೆ ಮಾಡುವ ಉಪಕರಣ.
ಎಲೆಕ್ಟ್ರೋಪ್ಲೇಟಿಂಗ್ – ವಿದ್ಯುಲ್ಲೇಪನ – ಒಂದು ಘನವಸ್ತುವಿನ ಮೇಲ್ಮೈಗೆ ವಿದ್ಯುದ್ವಿಭಜನೆಯ ಮೂಲಕ ಒಂದು ಲೋಹವನ್ನು ಲೇಪಿಸುವುದು.
ಎಲೆಕ್ಟ್ರೋಆಪ್ಟಿಕಲ್ ಎಫೆಕ್ಟ್ – ವಿದ್ಯುತ್ ದೃಶ್ಯ ಬೆಳಕು ಪರಿಣಾಮ – ಯಾವುದಾದರೊಂದು ಪಾರದರ್ಶಕ ವಿದ್ಯುತ್ ನಿರೋಧಕ ವಸ್ತುವೊಂದನ್ನು ತುಂಬ ಬಲವತ್ತರವಾದ ವಿದ್ಯುತ್ ಕ್ಷೇತ್ರದಲ್ಲಿರಿಸಿದಾಗ ಆ ಕ್ಷೇತ್ರದ ಹಾಗೂ ಆ ವಸ್ತುವಿನ ವಕ್ರೀಭವನದ ಗುಣಲಕ್ಷಣಗಳ ನಡುವೆ ಉಂಟಾಗುವ ಅಂತರ್ ಕ್ರಿಯೆ.
Like us!
Follow us!