Emanation

ಎಮೆನೇಷನ್ – ಜನ್ಮಿತ ಅಥವಾ ಜನಿತ – ರೇಡಾನ್ ನ ಕೆಲವು ಸಮರೂಪಿಗಳಿಗೆ ಮುಂಚೆ ಇಟ್ಟಿದ್ದ ಹೆಸರು‌. ಇವುಗಳ ಜನಕ‌ ರೇಡಿಯಂ. ಈ ಮೂಲವಸ್ತುವಿನ ಆಲ್ಫಾ ವಿಘಟನೆಯಿಂದ ಈ ಸಮರೂಪಿಗಳು ಜನಿಸುತ್ತವೆ.

Elliptical polarization 

ಎಲಿಪ್ಟಿಕಲ್ ಪೋಲರೈಸೇಷನ್ – ಇದು  ವಿದ್ಯುತ್ ಕಾಂತೀಯ ವಿಕಿರಣದ ಒಂದು ರೀತಿಯ ಧ್ರುವೀಕರಣ. ಒಟ್ಟಿಗೆ ಸಾಗುತ್ತಿರುವ ಆದರೆ 90 ಡಿಗ್ರಿಗಳ ಗತಿವ್ಯತ್ಯಾಸವುಳ್ಳ ಮತ್ತು ಸಮಾನವಲ್ಲದ ಅಲೆಯೆತ್ತರ ಹೊಂದಿರುವ ಎರಡು ಮೇಲ್ಮೈ ಧ್ರುವೀಕೃತ ವಿಕಿರಣಗಳನ್ನು ಒಳಗೊಂಡದ್ದು ಎಂದು ನಾವಿದನ್ನು‌ ಪರಿಗಣಿಸಬಹುದು.

Elements, magnetic

ಎಲಿಮೆಂಟ್ಸ್, ಮ್ಯಾಗ್ನೆಟಿಕ್ – ಕಾಂತೀಯ ಪರಿಮಾಣಗಳು – ಯಾವುದೇ ಒಂದು ಸ್ಥಳಬಿಂದುವಿನಲ್ಲಿ ಭೂಮಿಯ ಕಾಂತಕ್ಷೇತ್ರವನ್ನು ಸಂಪೂರ್ಣವಾಗಿ ನಿರೂಪಿಸಿ ನಿರ್ಧರಿಸುವ ಮೂರು ಪರಿಮಾಣಗಳು. ಅವೆಂದರೆ, 1. ಕಾಂತೀಯ ಬಾಗು, 2. ಇಳಿಜಾರಿನ ಕೋನ, 3. ಅಡ್ಡರೇಖೆಯ ತೀಕ್ಷ್ಣತೆ.

Electrostriction

ಎಲೆಕ್ಟ್ರೋಸ್ಟ್ರಿಕ್ಷನ್ – ವಿದ್ಯುತ್ ವಿರೂಪ – ಒಂದು ವಸ್ತುವನ್ನು ವಿದ್ಯುತ್ ಕ್ಷೇತ್ರದಲ್ಲಿ ಇಟ್ಟಾಗ ಅದರಲ್ಲಿನ ಅಣುಗಳ ದಿಕ್ಕುದೆಸೆ ಬದಲಾಗುವುದರಿಂದ ಆ ವಸ್ತುವಿನ ಗಾತ್ರ, ಆಕಾರಗಳಲ್ಲಿ ಆಗುವ ಬದಲಾವಣೆ. 

Electrostatic shield

ಎಲೆಕ್ಟ್ರೋ ಸ್ಟ್ಯಾಟಿಕ್ ಶೀಲ್ಡ್ – ಸ್ಥಾಯೀವಿದ್ಯುತ್ ರಕ್ಷಣಾ ಕವಚ – ಒಂದು ಉಪಕರಣವನ್ನು ವಿದ್ಯುತ್ ಕ್ಷೇತ್ರಗಳು ಮುಟ್ಟದಂತೆ ಕಾಪಾಡುವ ಒಂದು ವಿದ್ಯುತ್ ವಾಹಕ ವಸ್ತು.‌

ಕನ್ನಡ ಗಾದೆಮಾತು – ಕಾಣದ ಊರಿಗೆ ನಾಲಿಗೆಯೇ ದಾರಿ. 

ಹಳೆಯ ಕಾಲದಲ್ಲಿ ಅಂದರೆ ಗೂಗಲ್ ನಕ್ಷೆಗಳು ಇಲ್ಲದಿದ್ದ ಸಮಯದಲ್ಲಿ ಯಾರಾದರೂ ತಮಗೆ ಅಪರಿಚಿತವಾದ ಊರಿಗೆ ಹೋಗಬೇಕೆಂದರೆ ದಾರಿಯಲ್ಲಿ ಸಿಗುವ ಜನರನ್ನು ವಿಚಾರಿಸುತ್ತಾ, ವಿಚಾರಿಸುತ್ತಾ ಕೇಳುತ್ತಾ ಹೋಗಿ ತಲುಪುತ್ತಿದ್ದರು.  ನಾಚಿಕೆ, ಸಂಕೋಚ ಬಿಟ್ಟು‌ ಮನುಷ್ಯರೊಂದಿಗೆ ಬಾಯಿ ಬಿಟ್ಟು  ಮಾತಾಡಿ,  ಕೇಳುತ್ತಾ ಕೇಳುತ್ತಾ ಎಷ್ಟು ದೂರದ, ಅಪರಿಚಿತ ಊರನ್ನಾದರೂ ತಲುಪಿಬಿಡುತ್ತಿದ್ದರು. ಆದರೆ ಇಂದು ಬದಲಾಗಿರುವ ಕಾಲದಲ್ಲಿ ನಗರ ಪ್ರದೇಶಗಳಲ್ಲಂತೂ ಕೈಯಲ್ಲಿರುವ ಜಂಗಮವಾಣಿಯ ಗೂಗಲ್ಲೇ ದಾರಿ ತೋರುವ ಸಂಗಾತಿ ಆಗಿಬಿಟ್ಟಿದೆ. ಆದರೆ ಗೂಗಲ್ ಸೌಲಭ್ಯ ಸಿಗದ ಕಡೆಯಲ್ಲಿ :ಕಾಣದ ಊರಿಗೆ ಈಗಲೂ […]

ಬೆಂಗಳೂರಿಗರ ಬೆರಕೆ ಕನ್ನಡ

ಬೆಂಗಳೂರಿನಲ್ಲಿ ಓಡಾಡುವಾಗ, ಜನರೊಂದಿಗೆ ಮಾತಾಡುವಾಗ ಈ ಬಗೆಯ ವಾಕ್ಯಗಳು ಕಿವಿಗೆ ಬೀಳುತ್ತವೆ – ” ಆಫೀಸ್ ತಲುಪ್ದೆ ಕಣೋ ಆಲ್ಮೋಸ್ಟು”, “ನಾನು ಈ ಕಡೇನೆ ಹೋಗೋದು ಮೋಸ್ಟ್ ಆಫ್ ದ ಟೈಮ್ಸು”,  ನೈಟೇ ನಿಮ್ಗೆ ಕಾಲ್ ಮಾಡಿದ್ನಲ್ಲಾ,  ಐ ಥಿಂಕ್ ಯೂ ವರ್ ಬಿಸಿ”,  ” ನೀ ಕಂಟಿನ್ಯುವಸ್ ಆಗಿ ಬಂದ್ರೆ ತಾನೇ, ಒನ್ಸ್ ಇನ್ ಎ ಬ್ಲೂಮೂನ್ ಬರ್ತೀಯ”, “ಆಲ್ ಆಫ್ ಅ ಸಡನ್ ನಮ್ ಬಾಸ್ ಮೀಟಿಂಗ್ ಕರೆದ್ಬಿಟ್ರು, ಸಾರಿ ಕಣೇ, ಐ ವಾಸ್ […]

Electrostatics

ಎಲೆಕ್ಟ್ರೋಸ್ಟ್ಯಾಟಿಕ್ಸ್ – ಸ್ಥಾಯೀವಿದ್ಯುತ್ ವಿಜ್ಞಾನ  – ವಿಶ್ರಾಂತಿಯಲ್ಲಿರುವ ‌ ವಿದ್ಯದಂಶಗಳನ್ನು, ಅವುಗಳ ನಡುವಿನ ಬಲಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ವಿದ್ಯುತ್ ಕ್ಷೇತ್ರಗಳನ್ನು ಅಧ್ಯಯನ ಮಾಡುವ ಜ್ಞಾನಶಾಖೆ.

Ellipsoid

ಎಲಿಪ್ಸಾಯ್ಡ್ –  ಅಂಡಾಕೃತಿ‌ ಘನ‌- ಮೂರು ಆಯಾಮಗಳ ಒಂದು‌ ಘನಾಕೃತಿ ಇದು, ಮೊಟ್ಟೆಯಂತೆ ಇರುತ್ತೆ.

Elementary particles

ಎಲಿಮೆಂಟರಿ ಪಾರ್ಟಿಕಲ್ಸ್ – ಮೂಲಭೂತ ಕಣಗಳು – ಈ ವಿಶ್ವದ ಎಲ್ಲ ವಸ್ತುಗಳನ್ನು ರೂಪಿಸಿರುವ ಆದರೆ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿರುವ ಕಣಗಳು. ಇವು ಪರಮಾಣುವಿನ ಒಳಗೆ ಇರುತ್ತವೆ. 

Page 85 of 140

Kannada Sethu. All rights reserved.