Colloid

ಕಲಿಲ – ಇದು ಒಂದು ರೀತಿಯ ಮಿಶ್ರಣ. ಒಂದು ವಸ್ತು ಮತ್ತು ಆ ವಸ್ತುವಿನೊಳಗೆ ಅದರ ಎಲ್ಲೆಡೆಗೂ ವ್ಯಾಪಿಸಿರುವ ಆದರೆ ಕರಗದ ಕಣಗಳ ರೂಪದಲ್ಲಿಯೇ ಉಳಿದಿರುವ ಇನ್ನೊಂದು ವಸ್ತು – ಇವುಗಳ ಮಿಶ್ರಣ ಇದು. ಉದಾಹರಣೆಗೆ ಹಾಲು. ಹಾಲಿನಲ್ಲಿ ಕೊಬ್ಬಿನ ಕಣಗಳು ಕರಗದ ಕಣಗಳಾಗಿಯೇ ಇರುತ್ತವೆ.

Collision

ಢಿಕ್ಕಿ(ಸಂಘರ್ಷ) – ಅಣುಗಳು, ಪರಮಾಣುಗಳು ಮುಂತಾದವು ಮುಖಾಮುಖಿಯಾದಾಗ ಅವುಗಳಲ್ಲಿ ಉಂಟಾಗುವ ಪರಸ್ಪರ ಕ್ರಿಯೆ.

Colour photography

ಬಣ್ಣ ಛಾಯಾಚಿತ್ರ ಕಲೆ – ಒಂದು ತೆಳುವಾದ ಪೊರೆ ಅಥವಾ ಕಾಗದದ ಮೇಲೆ ಬಣ್ಣವುಳ್ಲ ಬಿಂಬಗಳನ್ನು ಮೂಡಿಸುವ ವಿಧಾನಗಳಲ್ಲಿ ಯಾವುದಾದರೂ ಒಂದು.

Colour blindness

ಬಣ್ಣಗುರುಡು – ಮನುಷ್ಯನ ಕಣ್ಣಿನ ಒಂದು ಸಮಸ್ಯೆ ಇದು. ಒಂದು ನಿರ್ದಿಷ್ಟ ಬಣ್ಣ ಅಥವಾ ಕೆಲವು ಬಣ್ಣಗಳನ್ನು ಗುರುತಿಸಲಾರದ ಕಣ್ಣಿನ ಸಮಸ್ಯೆ.

Colour

ಬಣ್ಣ – ಮನುಷ್ಯನ ಕಣ್ಣಿನ ಮೇಲೆ ಬೇರೆ ಬೇರೆ ತರಂಗಾಂತರಗಳ ಬೆಳಕು ಬಿದ್ದಾಗ ಉಂಟಾಗುವ ಇಂದ್ರಿಯ ಗ್ರಹಿಕೆ.

Cold trap

ಶೀತ ಪಂಜರ – ದ್ರವರೂಪೀ ಅನಿಲ ಅಥವಾ ಅಸಿಟೋನಿನಲ್ಲಿರುವ ಒಣ ಮಂಜುಗಡ್ಡೆ(ಹೆಪ್ಪುಗಟ್ಟಿಸಿದ ಇಂಗಾಲದ ಡೈ ಆಕ್ಸೈಡ್)ಯನ್ನು ಹೊಂದಿದ್ದು, ತುಂಬ ತಣ್ಣಗಿರುವ ಒಂದು ಕೊಳವೆ ಇದು. ಈ ಕೊಳವೆಯು ತನ್ನ ಮೂಲಕ ಚಿಲಸುವ ಆವಿಯನ್ನು ಹಿಡಿದು ದ್ರವರೂಪಕ್ಕೆ ತಂದುಬಿಡುತ್ತದೆ.

Cold cathode

ತಂಪು ಋಣವಿದ್ಯುದ್ವಾರ – ವಿದ್ಯುತ್ ತಂತಿಯ ಸಹಾಯದಿಂದ ಬಿಸಿ ಮಾಢದೇ ಇರುವ ಋಣ ವಿದ್ಯುದ್ವಾರ.

Cohesion

ಸಮಕಣ ಆಕರ್ಷಣೆ – ಒಂದೇ ರೀತಿಯ ಅಲೆಗಳು ಅಥವಾ ಒಂದೇ ವಸ್ತುವಿನ ಅಣುಗಳ ನಡುವಿನ ಆಕರ್ಷಣೆಯ ಬಲ.

Coherence

ಸುಸಂಬದ್ಧತೆ – ಏಕಮಾತ್ರ ಆವರ್ತನವುಳ್ಳ ಕಿರಣಗಳ ಸಮೂಹದಲ್ಲಿ ಅಲೆಗಳ, ಏರಿಕೆಗಳ ಹಂತವ್ಯತ್ಯಾಸವು ಸ್ಥಿರವಾಗಿರುವುದು. ಒಂದೇ ದಿಕ್ಕಿಗೆ ಹರಿಯುವ ಬೆಳಕನ್ನು ಹೊರಸೂಸುವ ಆಕರವು ಸುಸಂಬದ್ಧವಾಗಿರುತ್ತದೆ, ಉದಾಹರಣೆಗೆ ಲೇಸರ್.

ಇರಲಾರದೆ ಇರುವೆ ಬಿಟ್ಟುಕೊಂಡರಂತೆ.

ಇದು ಕನ್ನಡ ಭಾಷೆಯ ಒಂದು ಸ್ವಾರಸ್ಯಕರ ಗಾದೆಮಾತು. ಜನರು ಕೆಲವು ಸಲ ಅನಗತ್ಯವಾಗಿ ತೊಂದರೆಗಳನ್ನು ಆಹ್ವಾನಿಸಿಕೊಂಡಾಗ ಈ ಗಾದೆಮಾತನ್ನು ನೆನಪಿಸಿಕೊಳ್ಳಲಾಗುತ್ತದೆ. ಗೊತ್ತಿದ್ದೂ ಗೊತ್ತಿದ್ದೂ ಜಗಳಗಂಟರೊಡನೆ ಜಗಳಕ್ಕೆ ಹೋಗುವುದು, ಇಷ್ಟವಿಲ್ಲದ ಕೆಲಸವನ್ನು ಮಾಡಲು ಒಪ್ಪಿಕೊಂಡು ಆಮೇಲೆ ಪೇಚಾಡುವುದು, ಮಲಗಿದ್ದ ನಾಯಿಗೆ ಕಲ್ಲೆಸೆದು ಅದಕ್ಕೆ ಕೋಪ ಬರಿಸಿ ಅದರಿಂದ ಕಚ್ಚಿಸಿಕೊಂಡು ಒದ್ದಾಡುವುದು ಇಂತಹ ಬುದ್ಧಿಹೀನ ಕೆಲಸಗಳನ್ನು ತಮ್ಮ ಪರಿಚಿತರು ಮಾಡಿದಾಗ “ನೋಡು, ಇರಲಾರದೆ ಇರುವೆ ಬಿಟ್ಕೊಂಡ್ರು!’ ಎಂದು ಜನ ಮಾತಾಡಿಕೊಳ್ಳುತ್ತಾರೆ. ಇರುವೆಗಳು ಮೈಮೇಲೆ ತಾವಾಗಿ ಬಂದಾಗಲೇ ಎಷ್ಟು ಹಿಂಸೆ, ಕಿರಿಕಿರಿ, […]

Page 86 of 112

Kannada Sethu. All rights reserved.