ಚಟ್ನಿ. ಈ ಪದದ ಬಳಕೆ ಮಾಡದ ಕನ್ನಡಿಗರಾರು? ಇಡ್ಲಿ ಚಟ್ನಿ, ತೆಂಗಿನಕಾಯಿ ಚಟ್ನಿ, ಕೆಂಪು ಚಟ್ನಿ, ಪುದಿನಾ ಚಟ್ನಿ, ಶೇಂಗಾ ಚಟ್ನಿ, ಈರುಳ್ಳಿ ಚಟ್ನಿ… ಓಹ್…..ಅದೆಷ್ಟು ವೈವಿಧ್ಯ ಇದರಲ್ಲಿ! ವಿವಿಧ ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳನ್ನು ಬಳಸಿ ಥರಾವರಿ ಚಟ್ನಿಗಳನ್ನು ಪ್ರಪಂಚದಾದ್ಯಂತ ಮಾಡುತ್ತಾರೆ.ಉತ್ತರ ಭಾರತೀಯರ ಚಾಟ್ ಅಂಗಡಿಗಳಲ್ಲಿ ಸಿಹಿ ಚಟ್ನಿ ಮಾಡುವಾಗ ಖರ್ಜೂರ ಹಾಕ್ತಾರಂತೆ! ಹೋಟೆಲ್ ಗಳಲ್ಲಿ ತಾವು ಇಡ್ಲಿಗೆ ‘ಅನ್ಲಿಮಿಟೆಡ್ ಚಟ್ನಿ’ ಕೊಡುತ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಧಾರವಾಡದ ಕಡೆ ಚಟ್ನಿಪುಡಿಗೆ ಚಟ್ನಿ ಅಂತಾರೆ. ಮಂಗಳೂರಿನಲ್ಲಿ ತೆಳು […]
ಎಲೆಕ್ಟ್ರಾನು ಕೊಳವೆ – ಎರಡು ವಿದ್ಯುದ್ವಾರಗಳ ನಡುವಿನ ಎಲೆಕ್ಟ್ರಾನುಗಳ ಚಲನೆಯು ಒಂದು ಮುಚ್ಚಿರುವ ಅಥವಾ ನಿರಂತರವಾಗಿ ಬರಿದಾಗುತ್ತಿರುವ ಆವರಣದೊಳಗಡೆ ನಡೆಯುತ್ತಿರುವಂತಹ ಒಂದು ಉಪಕರಣ.
ಎಲೆಕ್ಟ್ರಾನು ಉಷ್ಣತೆ – ಪ್ಲಾಸ್ಮಾದೊಳಗಿನ ಎಲೆಕ್ಟ್ರಾನುಗಳ ಸರಾಸರಿ ಚಲನಶಕ್ತಿಯನ್ನೇ ಅನಿಲದ ಅಣುಗಳು ಕೂಡ ಹೊಂದಿರುವ ಉಷ್ಣತೆ.
ಎಲೆಕ್ಟ್ರಾನು ದೂರದರ್ಶಕ – ಅತಿನೇರಳೆ ಹಾಗೂ ಅಧೋಕೆಂಪು ವಿಕಿರಣವನ್ನು ದೃಗ್ಗೋಚರ ಬಿಂಬವನ್ನಾಗಿ ಪರಿವರ್ತಿಸಬಲ್ಲ ಒಂದು ದೂರದರ್ಶಕ.
ಎಲೆಕ್ಟ್ರಾನು ರಂಗು – ಕೆಲವು ಆಮ್ಲಗಳು ಎಲೆಕ್ಟ್ರಾನುಗಳನ್ನು ತುಂಬ ಹೆಚ್ಚಾಗಿ ಚದುರಿಸುವ ಗುಣವನ್ನು ಹೊಂದಿರುತ್ತವೆ. ಹೀಗಾಗಿ ಇವುಗಳನ್ನು ಎಲೆಕ್ಟ್ರಾನು ಸೂಕ್ಷ್ಮದರ್ಶಕದಲ್ಲಿ ಬಳಸುತ್ತಾರೆ. ಅಂದರೆ, ಬೆಳಕು ಸೂಕ್ಷ್ಮದರ್ಶಕಗಳಲ್ಲಿ ರಂಗಿನ ಮಾಧ್ಯಮಗಳನ್ನು ಬಳಸುವಂತೆಯೇ ಇವನ್ನು ಬಳಸಲಾಗುವುದು.
ಎಲೆಕ್ಟ್ರಾನು ಅರೆಕಾಂತೀಯ ಅನುರಣನ – ಲೋಹಗಳು ಮತ್ತು ಅರೆವಾಹಕಗಳಲ್ಲಿ ವಾಹಕ ಎಲೆಕ್ಟ್ರಾನುಗಳಿಂದ ಉಂಟಾಗುವ ಅನುರಣನವನ್ನು ಎಲೆಕ್ಟ್ರಾನು ಅರೆಕಾಂತೀಯ ಅನುರಣನ ಎನ್ನುತ್ತಾರೆ.
ಎಲೆಕ್ಟ್ರಾನು ದೃಶ್ಯ-ಬೆಳಕು ವಿಜ್ಞಾನ – ವಿದ್ಯುತ್ತೀಯ ಮತ್ತು ಕಾಂತೀಯ ಕ್ಷೇತ್ರಗಳಲ್ಲಿ ಒಂದು ಎಲೆಕ್ಟ್ರಾನು ಕಿರಣಪುಂಜದ ವರ್ತನೆ ಮತ್ತು ನಿಯಂತ್ರಣಗಳ ಅಧ್ಯಯನ.
ಎಲೆಕ್ಟ್ರಾನು ಸೂಕ್ಷ್ಮದರ್ಶಕ – ಒಂದು ವಸ್ತುವಿನ ಹಿಗ್ಗಿಸಿದ ಬಿಂಬವನ್ನು ಉತ್ಪತ್ತಿ ಮಾಡಲು ಬೆಳಕಿನ ಕಿರಣಗಳ ಬದಲು ವಿದ್ಯುತ್ತೀಯ ಹಾಗೂ ಕಾಂತೀಯ ಕ್ಷೇತ್ರಗಳ ಸಂಯೋಜನೆಯನ್ನು ಬಳಸುವ ಒಂದು ಉಪಕರಣ.
Like us!
Follow us!