ಕೆಲಸ ಅಥವಾ ಕೌಶಲ್ಯವನ್ನು ಕಲಿಯಲು ಇಷ್ಟ ಪಡುವವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಚಿನ್ನದಂತಹ ಮಾತು ಇದು. ನಮ್ಮ ಹಿರಿಯರು ಕಲಿಸಿದ ವಿವೇಕ. ಈಜು ಹೊಡೆಯುವುದಾಗಲಿ, ಅಡಿಗೆ ಮಾಡುವುದಾಗಲಿ, ಎರಡು ಅಥವಾ ನಾಲ್ಕು ಚಕ್ರದ ಗಾಡಿ ಓಡಿಸುವುದಾಗಲಿ, ಉಪಕರಣವೊಂದನ್ನು ತಯಾರಿಸುವುದಾಗಲಿ …. ಆ ಕೆಲಸವನ್ನು ನಮ್ಮ ಕೈಮೈ, ಬುದ್ಧಿಗಳನ್ನು ಬಳಸಿ ತಪ್ಪು ಮಾಡಿ, ಸರಿ ಮಾಡಲು ಪ್ರಯತ್ನ ಮಾಡಿ, ಒದ್ದಾಡಿ, ನಂತರ ಸರಿಯಾಗಿ ಮಾಡಿದಾಗಲೇ ನಮಗೆ ಆ ಕೆಲಸ ಬರುವುದು. ಬೇರೆಯವರು ಮಾಡುವುದನ್ನು ದೂರದಿಂದ ನೋಡಿದರೆ ಆ ಕೆಲಸದ ಬಗೆಗಿನ ಶಾಸ್ತ್ರ ಅರ್ಥವಾದರೂ ಅದರ ಪ್ರಾಯೋಗಿಕತೆ ಬರಬೇಕೆಂದರೆ ನಾವೇ ಅದನ್ನು ಮಾಡಬೇಕು. ಹೀಗಾಗಿ, ಈಜು ಬರಬೇಕೆಂದರೆ ನೀರಿಗಿಳಿಯಲೇಬೇಕು.
Kannada proverb – Neerigiliyade eeju barolla ( If you don’t step into water, you can’t learn swimming).
This is a great tip or advice when one is learning a skill. Whether it is swimming, gardening, driving a car or learning guitar, unless and until we get into it physically, we can not learn it, let alone master it. Only reading about it or watching others do it may give us theoretical knowledge, but if we have to do it practically, in real life, it is possible only when we make our hands wet and learn it by trial and error. The only way to it is through it.
Like us!
Follow us!