ಕಾಸು-ಹಣ-ಧನ-ರೂಪಾಯಿ- ಪೌಂಡು – ಡಾಲರ್- ಯೂರೋ – ಯೆನ್ …… ಯಾವ ಹೆಸರಿನಿಂದ ಕರೆದರೇನಂತೆ, ಮನುಷ್ಯ ಯಾವ ನಾಗರಿಕ ಸಮಾಜದಲ್ಲಿ ಇದ್ದರೇನಂತೆ, ಅವನ ಮೂಲ ಜೀವನಾವಶ್ಯಕತೆಗಳು ಪೂರ್ಣಗೊಳ್ಳಲು ಕಾಸು ಬೇಕು. ಜೊತೆಗೆ ಕಷ್ಟಪಟ್ಟು ದುಡಿದು ಗಳಿಸಿದ ಕಾಸನ್ನು ಹುಷಾರಾಗಿಯೂ ಖರ್ಚು ಮಾಡಬೇಕು. ಮೂರು ಕಾಸನ್ನು ಗಳಿಸಿ ಆರು ಕಾಸನ್ಬು ಬಳಸಬಾರದು. ನಮ್ಮ ಆದಾಯಕ್ಕಿಂತ ಖರ್ಚು ಯಾವತ್ತೂ ಜಾಸ್ತಿ ಆಗಬಾರದು ; ಜಾಸ್ತಿ ಆದರೆ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ. ಉತ್ತಮವಾದ ಒಂದು ಆರ್ಥಿಕ ವಿವೇಕವನ್ನು ಈ ಗಾದೆಮಾತು ಎಷ್ಟು ಚೆನ್ನಾಗಿ, ನಾಲ್ಕೇ ಪದಗಳಲ್ಲಿ ಹೇಳಿದೆ ಅಲ್ಲವೆ?
Kannada proverb – Moorkaasina galike, aarkaasina balake (Earning three pennies, spending six pennies).
Whatever we call the money as, in whichever civilised country we live, we need money to fulfill our basic needs. One has to work hard to earn the money for his/her livelihood. While earning is important, it is equally important that we spend below our means. If we earn three pennies and spend six pennies we end up in debt and misery. The above proverb aptly and concisely imparts a very basic and very important financial wisdom. Isn’t it?
Like us!
Follow us!