ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

F.M.(Frequency Modulation)

ಎಫ್.ಎಂ – (ಫ್ರೀಕ್ವೆನ್ಸಿ ಮಾಡ್ಯುಲೇಷನ್) – ಪ್ರಸಾರವಾಗಬೇಕಾಗಿರುವ ಶ್ರವ್ಯ ಅಥವಾ ದೃಶ್ಯ ಅಲೆಗೆ ಅನುಗುಣವಾಗಿ ಒಯ್ಯಕ ಅಲೆಯ ಆವರ್ತನವನ್ನು ನಿಯಂತ್ರಿಸುವ ಕ್ರಿಯೆ.

Factorial 

 ಫ್ಯಾಕ್ಟೋರಿಯಲ್ – ಆದಿಗುಣಕ‌ – ಒಂದು ದತ್ತ ಸಂಖ್ಯೆ ಹಾಗೂ ಅದರ ಕೆಳಗಿರುವ ಎಲ್ಲ ಪೂರ್ಣಾಂಕಗಳ ಗುಣಲಬ್ಧ. ಸಾಮಾನ್ಯವಾಗಿ ಇದನ್ನು‌N! ಎಂದು ಬರೆಯುತ್ತಾರೆ. 

Fall out

ಫಾಲ್ ಔಟ್ – ವಿಕಿರಣ ಪಾತ – ಅಣು ಸ್ಥಾವರಗಳು ಸ್ಫೋಟಗೊಂಡಾಗ ವಾತಾವರಣಕ್ಕೆ ಬಂದು ಸೇರಿಕೊಳ್ಳುವ ವಿಕಿರಣ ವಸ್ತುಕಣಗಳು.‌ ಇವು‌ ಮನುಷ್ಯನ ಹಾಗೂ ಪ್ರಾಣಿಗಳ ದೇಹಕ್ಕೆ ತುಂಬ ಅಪಾಯವನ್ನುಂಟುಮಾಡುತ್ತವೆ.

Far infrared 

ಫಾರ್ ಇನ್ ಫ್ರಾರೆಡ್ – ತುಟ್ಟತುದಿಯ ಅಧೋಕೆಂಪು -ವಿದ್ಯುತ್ಕಾಂತೀಯ ವರ್ಣಪಟಲದಲ್ಲಿನ ಅಧೋಕೆಂಪು ಅಲೆಪ್ರದೇಶದ ಅತ್ಯಂತ ಉದ್ದದ ತರಂಗಾಂತರವುಳ್ಳ ಭಾಗಗಳು.

Far point

ಫಾರ್ ಪಾಯಿಂಟ್ –  ತುಟ್ಟತುದಿಯ ಬಿಂದು –   ಕಣ್ಣಿನ ಅಕ್ಷಿಪಟಲದ ಮೇಲೆ ಬಿಂಬವು ರೂಪುಗೊಳ್ಳಲು ಸಾಧ್ಯ ಇರುವ ಅತ್ಯಂತ ದೂರದ ಬಿಂದು ಇದು.

Farad( F)

ಫ್ಯಾರಡ್( F) – ಫ್ಯಾರಡ್( F) – ವಿದ್ಯುತ್ ಸಾಮರ್ಥ್ಯದ ಎಸ್.ಐ.ಮೂಲಮಾನ. ಭೌತವಿಜ್ಞಾನಿ ಮೈಕೆಲ್ ಫ್ಯಾರಡೆಯ( ಕಾಲ 1791-1867) ನೆನಪಿನಲ್ಲಿ‌ ಇಟ್ಟ ಹೆಸರು ಇದು.‌

Faraday disc

ಫ್ಯಾರಡೆ ಡಿಸ್ಕ್ –  ಫ್ಯಾರಡೆ ತಟ್ಟೆ ಅಥವಾ ಫ್ಯಾರಡೆ ಫಲಕ – ನೇರ ವಿದ್ಯುತ್ತನ್ನು ಉತ್ಪಾದಿಸುವ ಒಂದು ಉಪಕರಣ ಇದು. ಏಕಧ್ರುವ ವಿದ್ಯುದುತ್ಪಾದಕ. ಇದರಲ್ಲಿ, ಈ ಉದ್ದೇಶಕ್ಕಾಗಿ, ಕಾಂತಕ್ಷೇತ್ರದಲ್ಲಿ ಸುತ್ತುತ್ತಿರುವ ಲೋಹದ ತಟ್ಟೆಯೊಂದನ್ನು ಬಳಸುತ್ತಾರೆ.

Faraday effect

ಫ್ಯಾರಡೆ ಎಫೆಕ್ಟ್  – ಫ್ಯಾರಡೆ ಪರಿಣಾಮ‌- ಕಾಂತಕ್ಷೇತ್ರದಲ್ಲಿರುವಂತಹ ಒಂದು‌ ಅವಾಹಕ‌ ಮಾಧ್ಯಮವೊಂದರಲ್ಲಿ ವಿಕಿರಣದ ಧ್ರುವೀಕರಣದ ಮೇಲ್ಮೈಯ ಸುತ್ತುವಿಕೆ.

Fast neutron 

ಫಾಸ್ಟ್ ನ್ಯೂಟ್ರಾನ್ – ವೇಗದ ನ್ಯೂಟ್ರಾನು –  ಅಣುಬೀಜಕೇಂದ್ರದ ವಿದಳನದಿಂದ ಉತ್ಪತ್ತಿಯಾದ ಹೆಚ್ಚಿನ ಶಕ್ತಿ ಹೊಂದಿರುವ ನ್ಯೂಟ್ರಾನು.

Fast reactor 

ಫಾಸ್ಟ್ ರಿಯಾಕ್ಟರ್ – ವೇಗದ ಅಣುಸ್ಥಾವರ – ವೇಗ ನಿರೋಧಕವನ್ನು ಬಳಸದಿರುವ ಅಥವಾ ತುಸು ಪ್ರಮಾಣದಲ್ಲಷ್ಟೇ ಬಳಸುವ ಅಣುಸ್ಥಾವರ.

Page 1 of 10

Kannada Sethu. All rights reserved.