ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

‘ಬೆಣ್ಣೆಯಿಂದ ಕೂದಲು ತೆಗೆದ ಹಾಗೆ’ – ಕನ್ನಡದ ಒಂದು ವಿಶಿಷ್ಟ ನುಡಿಗಟ್ಟು

ಪ್ರತಿಯೊಂದು ಭಾಷೆಗೂ ಅವರದ್ದೇ ಆದ ಕೆಲವು ವಿಶಿಷ್ಟ ನುಡಿಗಟ್ಟುಗಳಿರುತ್ತವೆ. ಕನ್ನಡ ಭಾಷೆಯೂ ಇದಕ್ಕೆ ಹೊರತಲ್ಲ. ಕನ್ನಡ ಭಾಷೆಯಲ್ಲಿರುವ ಅನೇಕ ನುಡಿಗಟ್ಟುಗಳಲ್ಲಿ ‘ಬೆಣ್ಣೆಯಿಂದ ಕೂದಲು ತೆಗೆದ ಹಾಗೆ’ ಎಂಬ ನುಡಿಗಟ್ಟು ಸಹ ಒಂದು‌. ಬೆಣ್ಣೆ ಎಂಬುದು ಕನ್ನಡ ನಾಡಿನ ಜನರು  ಬಹಳವಾಗಿ  ಇಷ್ಟ ಪಟ್ಟು ಬಳಸುವ ಹೈನು ಪದಾರ್ಥ.‌ ಯಾವುದಾದರೂ  ನಯವಾದ, ಮೃದುವಾದ ಪದಾರ್ಥವನ್ನು ಮೆಚ್ಚಬೇಕಾದರೆ  ಅದನ್ನು ಬೆಣ್ಣೆಗೆ ಹೋಲಿಸುವುದು ರೂಢಿ. ಆದರೆ ಬೆಣ್ಣೆಯಿಂದ ಕೂದಲು ತೆಗೆಯುವುದು ಎಂಬುದು ಕನ್ನಡದಲ್ಲಿ ಒಂದು ವಿಶೇಷ ಭಾಷಾ ಪ್ರಯೋಗ. ತುಂಬ ನಾಜೂಕಾದ […]

ಹೊಟ್ಟೆಕಿಚ್ಚು ಸರಿ. ‘ಹೊಟ್ಟೆಕಚ್ಚು’ ಅಂದ್ರೆ ಏನು!?

‘ಅಸೂಯೆ’ ಎಂಬ ಪದಕ್ಕೆ ಹೊಟ್ಟೆಕಿಚ್ಚು, ಹೊಟ್ಟೆಯುರಿ, ಮತ್ಸರ( ಇಂಗ್ಲಿಷ್ ನಲ್ಲಿ jealousy) ಎಂಬ ಸಂವಾದಿ ಪದಗಳಿರುವುದು ನಮಗೆ ಗೊತ್ತಲ್ಲವೆ? ಮೊನ್ನೆ ಒಂದು ಪುಸ್ತಕದ ವಿಷಯಕ್ಕಾಗಿ ನನಗೆ ಕರೆ ಮಾಡಿದ್ದ ಲೇಖಕ ಮಿತ್ರ ಹಾಡ್ಲಹಳ್ಳಿ ನಾಗರಾಜ್ ಅವರು ಮಾತಿನ ಮಧ್ಯೆ ‘ಹೊಟ್ಟೆಕಚ್ಚು’ ಎಂಬ ಪದವನ್ನು ಬಳಸಿದರು‌. ಆ ಪದದ ಬಗ್ಗೆ ಕುತೂಹಲ ಹುಟ್ಟಿ ನಾನು ಅದರ ಅರ್ಥ ಕೇಳಿದಾಗ ‘ಹೊಟ್ಟೆಯಲ್ಲಿ ಜಂತುಹುಳು ಮುಂತಾದ ಹುಳುಗಳ ಬಾಧೆಯಿಂದ ಮಕ್ಕಳು ಹೊಟ್ಟೆನೋವಿಂದ ನರಳುತ್ತಾರಲ್ಲ, ಅದನ್ನು ನಮ್ಮ ಕಡೆ ಹೊಟ್ಟೆಕಚ್ಚು ಅಂತಾರೆ’ ಅಂದರು. […]

ಅಪ್ಲೋಡ್, ಡೌನ್ಲೋಡ್ – ಇವುಗಳಿಗೆ ಕನ್ನಡ ಸಂವಾದಿ ಪದಗಳು ಯಾವುವು?

ಅಂತರ್ಜಾಲ ಆಧಾರಿತ ಇಂದಿನ ಕಾರ್ಯಪ್ರಪಂಚದಲ್ಲಿ ನಾವು ಬಹಳವಾಗಿ ಬಳಸುವ ಎರಡು ಪದಗಳು – ಅಪ್ಲೋಡ್ ಹಾಗೂ ಡೌನ್ಲೋಡ್. ಒಂದು ನಿರ್ದಿಷ್ಟ ದಾಖಲೆ, ಬರವಣಿಗೆ, ಚಿತ್ರವನ್ನು ಯಾವುದಾದರೂ ಅಂತರ್ಜಾಲ ತಾಣಕ್ಕೆ ಏರಿಸುವುದು, ಸೇರಿಸುವುದು ‘ಅಪ್ಲೋಡ್’ ಅನ್ನಿಸಿಕೊಳ್ಳುತ್ತೆ. ಅಲ್ಲವೆ? ಈ ಪದಕ್ಕೆ ‘ಮೇಲ್ಸಲ್ಲಿಕೆ’ ಎಂಬ ಕನ್ನಡ ಪದ ಸೂಕ್ತವಾಗಬಹುದೆ?  ‘ಮೇಲ್ಸಲ್ಲಿಕೆ’ ಪದವನ್ನು ನಾನು ಕೆಲವು ಸಲ ಬಳಸುವ ಪ್ರಯತ್ನ ಮಾಡಿದ್ದೇನೆ. ಹಾಗೆಯೇ ಯಾವುದಾದರೂ ಜಾಲತಾಣದಿಂದ ಅಥವಾ ಮಿಂಚಂಚೆ ವಿಳಾಸದಿಂದ ಒಂದು  ನಿರ್ದಿಷ್ಟ ದಾಖಲೆ, ಬರವಣಿಗೆ ಅಥವಾ ಚಿತ್ರವನ್ನು ನಮ್ಮ ಗಣಕಯಂತ್ರ […]

ಕಪ್ಪೆಚಿಪ್ಪಿನಲ್ಲಿ ಕಪ್ಪೆ ಇರುತ್ತಾ?

ಮೊನ್ನೆ ಹೀಗೇ ತತ್ರಾಪಿ ಮಾತಾಡ್ತಾ (ಅದೂ ಇದೂ, casual ಎಂಬ ಅರ್ಥದಲ್ಲಿ) ನನ್ನ  ಚಿಕ್ಕ ಮಗಳು  “ಅಮ್ಮ ಸೀ ಶೆಲ್ ಗೆ ಕಪ್ಪೆಚಿಪ್ಪು ಅಂತಾರಲ್ಲ, ಯಾಕೆ? ಕಪ್ಪೆಚಿಪ್ಪಲ್ಲಿ ಕಪ್ಪೆ ಇರಲ್ಲ ಅಲ್ವಾ?” ಅಂತ ಕೇಳಿದಳು. ಅವಳ ಪ್ರಶ್ನೆ ನನ್ನನ್ನ ತುಂಬ ಯೋಚನೆಗೆ ಹಚ್ತು.  ಸಮುದ್ರ ದಂಡೆಗೆ ಹೋದವರು ಅಲ್ಲಿ ಬಿದ್ದಿರುವ ವಿವಿಧ ಅಳತೆ, ಬಣ್ಣಗಳ ಚಿಪ್ಪುಗಳನ್ನು ನೋಡಿದಾಗ ಅವನ್ನು ಆರಿಸಿಕೊಳ್ಳುವುದು, ತಮ್ಮ ಸಮುದ್ರ ಪ್ರವಾಸದ ನೆನಪಿಗಾಗಿ ಮನೆಗೆ ತಂದು ಇಟ್ಟುಕೊಳ್ಳುವುದು ಹೀಗೆ ಮಾಡುತ್ತಾರೆ ಅಲ್ಲವೆ? ಇಂಥವನ್ನು ಕನ್ನಡದಲ್ಲಿ […]

ಇಟ್ ಅದು ಬಟ್ ಆದ್ರೆ ವ್ಹಾಟ್ ಏನು! ಕಂಗ್ಲಿಷ್ ದ್ವಿರುಕ್ತಿಗಳ ತಮಾಷೆ ಪ್ರಪಂಚ

ಕಂಗ್ಲಿಷ್ ದ್ವಿರುಕ್ತಿಗಳು! ಹಾಂ, ಇವತ್ತಿನ ‘ಕನ್ನಡ ಪ್ರಸಂಗ’ದಲ್ಲಿ ನಾನು ಪ್ರಸ್ತಾಪಿಸಬೇಕೆಂದಿರುವುದು — ಕನ್ನಡ ಭಾಷೆಯಲ್ಲಿ, ಅದರಲ್ಲೂ ಬೆಂಗಳೂರಿನಂತಹ ನಗರ ಪ್ರದೇಶಗಳ ಕನ್ನಡದಲ್ಲಿ ಆಗಾಗ್ಗೆ ಬಳಕೆಯಾಗುವ ಕಂಗ್ಲಿಷ್ ದ್ವಿರುಕ್ತಿಗಳ ಬಗ್ಗೆ. (ಕಂಗ್ಲಿಷ್ ಅಂದ್ರೆ ಇಂಗ್ಲಿಷ್ ಭಾಷೆ ಧಾರಾಳವಾಗಿ ಬೆರೆತ ಕನ್ನಡ ಅಂತ ಎಲ್ಲರಿಗೂ ಗೊತ್ತಿರುತ್ತೆ.) ಪ್ರಾಥಮಿಕ ಶಾಲಾ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ನಮ್ಮ ತಾಯಿಯವರು, ನಾವು ಚಿಕ್ಕವರಿದ್ದಾಗ ‘ಇಟ್ ಅದು ಬಟ್ ಆದ್ರೆ ವ್ಹಾಟ್ ಏನು? ‘ ಎಂದು ಹೇಳಿ ನಮ್ಮನ್ನು ನಗಿಸುತ್ತಿದ್ದರು‌‌‌. ಇಂಗ್ಲಿಷ್ ಪದ ಮತ್ತು ಅದರ […]

‘ಮಕ್ಕಿ ಕಾ ಮಕ್ಕಿ’ಗೆ ನೊಣಂಪ್ರತಿ ಅನ್ನುವ ಸಂವಾದಿ ಪದ ಇದೆ ಕನ್ನಡದಲ್ಲಿ!

 ಪರೀಕ್ಷೆ, ವಿದ್ಯಾರ್ಥಿ, ಮೌಲ್ಯಮಾಪನ ಈ ವಿಷಯಗಳ ಬಗ್ಗೆ ಮಾತಾಡುವಾಗ ನಾವೆಲ್ಲರೂ ಒಂದಲ್ಲ ಒಂದು ಸಲ ‘ಮಕ್ಕಿ ಕಾ ಮಕ್ಕಿ’ ಪದವನ್ನು ಕೇಳಿಯೇ ಇರುತ್ತೇವಲ್ಲವೆ‌? ಒಂದಕ್ಷರವನ್ನೂ ಬಿಡದೆ ನಕಲು ಮಾಡುವುದನ್ನು ಈ ಪದದಿಂದ ಸೂಚಿಸಲಾಗುತ್ತದೆ. ನೊಣ ಇದ್ದರೆ ಅದನ್ನೂ ಬಿಡದೆ ಹಾಗೇ ನಕಲು ಮಾಡಿಬಿಡುವುದು!  ಸ್ವಂತಿಕೆ ಇಲ್ಲದೆ ಇನ್ನೊಬ್ಬರನ್ನು ಅನುಕರಿಸುವವರನ್ನು ಟೀಕಿಸಲು ಈ ಪದವನ್ನು ಬಳಸುತ್ತಾರೆ. ಲೇಖಕಿ ಅನುಪಮಾ ಪ್ರಸಾದ್ ಅವರು ಬರೆದಿರುವ  ‘ಕುಂತ್ಯಮ್ಮಳ ಮಾರಾಪು’ ಕಥೆ ಓದುತ್ತಿದ್ದಾಗ ‘ನೊಣಂಪ್ರತಿ’ ಅನ್ನುವ ಪದವನ್ನು ಓದಿದೆ, ಮಕ್ಕಿ ಕಾ ಮಕ್ಕಿ […]

ಕಾಳು ಮೆಣಸೋ…ಒಳ್ಳೆ ಮೆಣಸೋ…!

 ನಮ್ಮ ತಾಯಿಯವರು ಉಡುಪಿ ಮೂಲದವರಾಗಿದ್ದು ಕೊಡಗಿನಲ್ಲಿ ಬೆಳೆದವರು. ‌ಅವರು ಅಡಿಗೆ, ಊಟಗಳ ಬಗ್ಗೆ ಮಾತಾಡುವಾಗ ‘ಒಳ್ಳೆ ಮೆಣಸು’ ಎಂಬ ಪದವನ್ನು ಸಹಜವಾಗಿ ಬಳಸುತ್ತಿದ್ದರು. ಅವರು ಆ ಪದ ಬಳಸುತ್ತಿದ್ದುದು ಕರಿಮೆಣಸು/ಕಾಳು ಮೆಣಸು ಅಥವಾ ಮೆಣಸಿನ ಕಾಳು ಎಂಬ ಪದಕ್ಕೆ ಸಂವಾದಿಯಾಗಿ(ಪೆಪ್ಪರ್).  ಕನ್ನಡ ಮಾತಾಡುವ ಎಲ್ಲ ಮನೆಗಳಲ್ಲೂ  ಒಳ್ಳೆ ಮೆಣಸು ಎಂಬ  ಈ ಪದ ಬಳಕೆಯಲ್ಲಿದೆಯೇ ಎಂಬ ಕುತೂಹಲ ನನಗೆ. ಆದರೆ ಈ ಪದವನ್ನು ಜನ ಅಷ್ಟಾಗಿ ಬಳಸುವುದಿಲ್ಲವೇನೋ.   ಒಂದು ಮಸಾಲಾ ಪದಾರ್ಥದ ಹೆಸರಿನ ಹಿಂದೆ ಈ ‘ಒಳ್ಳೆ’ ಎಂಬ […]

ಅಭಿನಂದಿತರೋ, ಅಭಿನಂದಿಸುವವರೋ‌..!? ಪದಬಳಕೆಯಲ್ಲಿನ ಅಜಾಗರೂಕತೆ ತಂದ ಗೊಂದಲ

ಹೀಗೇ ತತ್ರಾಪಿ ( casually) ಮಾತಾಡುತ್ತಿದ್ದಾಗ ನನ್ನ ಸಾಹಿತಿ-ಕಲಾವಿದ ಮಿತ್ರರೊಬ್ಬರು ಈಚೆಗೆ ತಮಗೆ ಆದ ಒಂದು ಪೇಚಿನ ಪ್ರಸಂಗವೊಂದನ್ನು ಹೇಳಿದರು. ಪದಗಳನ್ನು ಬಳಸುವಾಗ ಜಾಗ್ರತೆ ವಹಿಸದಿದ್ದರೆ ಏನಾಗಬಹುದು ಎಂಬುದಕ್ಕೆ ಈ ಪ್ರಸಂಗ ಉದಾಹರಣೆಯಾಗುತ್ತದೆ ಅನ್ನಿಸಿತು ನನಗೆ. ಅದಕ್ಕಾಗಿ ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ, ಬೆಂಗಳೂರಿನಿಂದ ಸುಮಾರು ಇನ್ನೂರು ಕಿ.ಮೀ‌. ದೂರ ಇರುವ ಊರಿನ ಸಾಹಿತ್ಯಕ ಸಂಘದವರೊಬ್ಬರು ಇವರಿಗೆ ದೂರವಾಣಿ ಕರೆ ಮಾಡಿ, ಮುಂದಿನ ವಾರ ಇಂತಹ ದಿನ ‘ಒಂದು ಸನ್ಮಾನ ಇಟ್ಕೊಂಡಿದೀವಿ, ದಯಮಾಡಿ ಬರಬೇಕು […]

ವಿದ್ಯೆ ಕೊಡುವ ಶಾಲೆಯ ಹೆಸರಿನ ನಾಮಫಲಕದಲ್ಲೇ ಅಕ್ಷರ ತಪ್ಪು! ಅಯ್ಯೋ…!

ಈಚೆಗೆ ಮದುವೆ ಛತ್ರವೊಂದನ್ನು ಹುಡುಕುತ್ತಿದ್ದಾಗ ನನಗೆ ಆದ ಅನುಭವ ಇದು.  ಬೃಹತ್ ಬೆಂಗಳೂರಿನ ವಿಶಾಲ ವಿಸ್ತಾರದಲ್ಲಿ ಸ್ಥಳಗಳನ್ನು ಹುಡುಕುವುದು ಸುಲಭವೇನಲ್ಲ. ಬಂಧುಗಳ ಮದುವೆಯೊಂದಕ್ಕೆ ಆಹ್ವಾನ ಬಂದಿದ್ದು, ಬೆಂಗಳೂರೆಂಬೋ ಬೆಂಗಳೂರಿನಲ್ಲಿ, ನಾನು ಮತ್ತು ನನ್ನ ಮನೆಯವರು ನಮ್ಮ ಮಟ್ಟಿಗೆ ಅಪರಿಚಿತವಾದ ಪ್ರದೇಶದಲ್ಲಿ ಇದ್ದ  ಆ ಮದುವೆ ಛತ್ರವನ್ನು ಹುಡುಕುತ್ತಿದ್ದೆವು. ಗೂಗಲ್ ರಾಯರು ನಮಗೆ ಮಾರ್ಗದರ್ಶನ ಮಾಡಲು ಸೋತಾಗ ಅಲ್ಲೇ ಓಡಾಡುತ್ತಿದ್ದ ಜನರ ಬಳಿ ‘ಆ ಛತ್ರ ಎಲ್ಲಿದೆ’ ಎಂದು ಕೇಳಿದೆವು. “ಅಲ್ಲೇ ಆ ಸ್ಕೂಲ್ ಪಕ್ಕ  ಇದೆ ನೋಡಿ” ಎಂದು […]

ಓಹ್…..ಅದು ಮೈಸೂರು ಬೇಳೆ ಅಲ್ಲ ಮಸೂರು ಬೇಳೆ!

ದಿನಸಿ ಅಂಗಡಿಗೆ ಹೋದಾಗಲೆಲ್ಲ  ತೊಗರಿಬೇಳೆಗಿಂತ ಚಿಕ್ಕದಾದ, ತನ್ನ ಕೇಸರಿ-ನಸುಗೆಂಪು ಬಣ್ಣದಿಂದ ಕಣ್ಸೆಳೆಯುತ್ತಿದ್ದ  ಬೇಳೆಯೊಂದನ್ನು ನಾನು ನೋಡುತ್ತಿದ್ದೆ‌. ನಮ್ಮ ಮನೆಯಲ್ಲಿ ಅದನ್ನು ಯಾವತ್ರೂ ತಂದ ನೆನಪಿಲ್ಲ ನನಗೆ. ಅಂಗಡಿಯವನನ್ನು ಒಮ್ಮೆ ಕೇಳಿದಾಗ ‘ಅದರ ಹೆಸರು ಮಸೂರ್ ದಾಲ್ ಮೇಡಂ’ ಅಂತ ಹೇಳಿದ್ದ. ಆ ನಂತರವೂ ಒಮ್ಮೊಮ್ಮೆ ಅದು ಕಣ್ಣಿಗೆ ಬೀಳುತ್ತಿದ್ದಾಗ ಅದರ ಹೆಸರು ಮನಸ್ಸಿಗೆ ಬರುತ್ತಿತ್ತಾದರೂ ಅಷ್ಟೇನೂ ಅದು ನನ್ನ ಕಾಡಿರಲಿಲ್ಲ.  ಆದರೆ, ಈಚೆಗೆ ನನ್ನ ಸಹೋದ್ಯೋಗಿಯೊಬ್ಬರು “ನಮ್ಮನೆಯಲ್ಲಿ ಇವತ್ತು ಮಸೂರ್ ದಾಲ್’ ಮಾಡಿದ್ದೆ.‌ ಅದು ತುಂಬಾ ಚೆನ್ನಾಗಿ […]

Page 2 of 16

Kannada Sethu. All rights reserved.