ಮೊನ್ನೆ ಬ್ರೆಡ್ಡು, ಸಾದಾ ಕೇಕುಗಳನ್ನು ಕೊಳ್ಳಲು ಒಂದು ಬೇಕರಿಗೆ ಹೋಗಿದ್ದೆ. ನಮ್ಮ ಹಂಪಿನಗರದಲ್ಲಿರುವ ಒಂದು ‘ಹಾಸನ ಅಯ್ಯಂಗಾರ್’ ಬೇಕರಿ ಅದು. ನನಗೆ ಆ ತಿನಿಸುಗಳನ್ನು ಕೊಟ್ಟ ಹುಡುಗನನ್ನು “ಏನಪ್ಪಾ, ಇವು ತಾಜಾ ಇದಾವಾ?” ಎಂದು ಕೇಳಿದೆ. ಅವನಿಗೆ ತುಂಬ ಗಾಬರಿಯಾಯಿತು! “ಅಯ್ಯೋ. ತಾಜಾ ಅನ್ನೋ ಹೆಸರಿನ್ ತಿಂಡಿ ಇಲ್ಲ ಮೇಡಂ” ಎಂದು ಆತಂಕದಿಂದ ಹೇಳಿದ. ಸಾಮಾನ್ಯವಾಗಿ ಜನ ‘ಫ್ರೆಷ್’ ಅನ್ನುವ ಪದ ಬಳಸ್ತಾರಲ್ಲ, ಅದರ ಬದಲು ನಾನು ‘ತಾಜಾ’ ಎಂಬ ಪದ ಬಳಸಿದ್ದು ಅವನಿಗೆ ಹೀಗೆ ಗಾಬರಿ ಮೂಡಿಸಿರಬಹುದು ಅನ್ನಿಸುತ್ತೆ. ಅದರ ಅರ್ಥ ಗೊತ್ತಿಲ್ಲದೆ ತಾಜಾ ಅನ್ನುವುದು ಒಂದು ತಿಂಡಿ ಅಂದುಕೊಂಡಿರಬಹುದೇನೋ ಅವನು.
ಅಷ್ಟರಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತಿದ್ದ ಹಿರಿಯರು – ಬಹುಶಃ ಅವರು ಅಂಗಡಿಯ ಮಾಲೀಕರಿರಬೇಕು – “ಏಯ್, ತಾಜಾ ಅಂದ್ರೆ ಫ್ರೆಶ್ ಅಂತ ಕಣೋ” ಎಂದು ಅವನಿಗೆ ಹೇಳಿ, ನನಗೆ ” ಹೌದು ಮೇಡಂ, ಬ್ರೆಡ್ಡು, ಕೇಕು ತಾಜಾ ಇವೆ. ಈಗಿನ್ ಹುಡುಗ್ರು ನೋಡಿ, ಕನ್ನಡ ಪದಗಳು ಗೊತ್ತಾಗಲ್ಲ ಅವ್ರಿಗೆ, ತಾಜಾ ಅನ್ನೋ ಪದ ರೂಢಿ ಇಲ್ಲ” ಅಂದರು. “ಹೋಗ್ಲಿ ಬಿಡಿ ಸರ್, ಈಗ ಒಂದು ಹೊಸ ಪದ ಕಲಿತ ಹಾಗಾಯ್ತು ಅವ್ರು” ಎಂದೆ ನಾನು.
Like us!
Follow us!