ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಧೂಪ ಹಾಕಿದ್ರೆ ಪಾಪ ಹೋದೀತೆ?

ಪ್ರಾಸಬದ್ಧವಾದ ಮತ್ತು ಅರ್ಥಪೂರ್ಣವಾದ ಒಂದು ಕನ್ನಡ ಗಾದೆಮಾತು ಇದು‌. ಜನರು ಸುಳ್ಳು, ಮೋಸ, ಕಳವು, ಪರಪೀಡನೆ, ಜೀವಹಿಂಸೆ ಮುಂತಾದ ಪರಪೀಡನೆಗಳಲ್ಲಿ ತೊಡಗಿ (ಅಂದರೆ ಅನೇಕ ಪಾಪಗಳನ್ನು ಮಾಡಿ), ನಂತರ, ದೇವರ ಪೂಜೆಯನ್ನು ಧೂಪ ದೀಪಗಳೊಂದಿಗೆ ವಿಜೃಂಭಣೆಯಿಂದ ಮಾಡಿಬಿಟ್ಟರೆ, ಅವರು ಮಾಡಿದ ಪಾಪಕಾರ್ಯಗಳು ಮಾಯವಾಗಿಬಿಡುವವೇನು? ಖಂಡಿತ ಇಲ್ಲ. ಹೀಗಾಗಿ ‘ಪಾಪಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಎಷ್ಟು ಧೂಪ ಹಾಕಿ ಪೂಜೆ ಮಾಡಿದರೂ ಈ ಕೆಟ್ಟ ಕೆಲಸಗಳ ಪರಿಣಾಮ ಹೋಗುವುದಿಲ್ಲ’ ಎಂಬುದು ಈ ಗಾದೆಮಾತು ಕಲಿಸುವ ಜೀವನಪಾಠವಾಗಿದೆ.  Kannada […]

ಕನ್ನಡ ಗಾದೆಮಾತು – ಹಂಚಿ ಉಂಡರೆ ಹಸಿವಿಲ್ಲ. 

ಮೂರೇ ಪದಗಳಿದ್ದರೂ ಮಾರುದ್ದದ ಪ್ರೀತಿಭಾವ ತುಂಬಿರುವ ಗಾದೆಮಾತು ಇದು. ಸಾಮಾನ್ಯವಾಗಿ ಅವರವರ ಊಟದ ಬುತ್ತಿಯನ್ನು ತರುವ ಎಂಟು-ಹತ್ತು  ಜನ ಒಂದೆಡೆ ಸೇರಿದ್ದಾರೆ  ಎಂದಿಟ್ಟುಕೊಳ್ಳೋಣ. ಅವರಲ್ಲಿ ಒಬ್ಬರು ಜಾಸ್ತಿ, ಒಬ್ಬರು ಕಡಿಮೆ ಆಹಾರ ತಂದಿರಬಹುದು‌, ಇನ್ನೊಬ್ಬರು ಅಂದು ಬುತ್ತಿಯನ್ನೇ ತರದಿರಬಹುದು. ಆದರೆ ತಂದಿರುವುದನ್ನು ಅವರು ಎಲ್ಲರೂ ಹಂಚಿಕೊಂಡು ತಿಂದರೆ ಎಲ್ಲರ ಹೊಟ್ಟೆಯೂ ತುಂಬುತ್ತದೆ! ಹೆಚ್ಚು ಕಡಿಮೆಗಳು ಸೇರಿ ಏನೋ ಒಂದು ಸಮತೋಲನವೂ ಉಂಟಾಗುತ್ತದೆ, ಇದರೊಂದಿಗೆ ಒಟ್ಟಿಗೆ ಊಟ ಮಾಡಿದ/ತಿಂಡಿ ತಿಂದ ಸಂತೋಷವೂ ಇರುತ್ತದೆ ಮತ್ತು ಯಾರೂ ಹಸಿವಿನಿಂದ ನರಳುವುದಿಲ್ಲ. […]

ಕನ್ನಡ ಗಾದೆಮಾತು – ಕುಯ್ಯಲಾರದೋನಿಗೆ ಕುಡಗೋಲೊಂಬತ್ತು.

ಕೆಲಸದ ವಿಷಯ ಬಂದರೆ  ನಾವು ಎರಡು ತರಹದ ಜನರನ್ನು ನೋಡಬಹುದು. ‌ಒಂದು, ಯಾವುದೇ ನೆಪ ಹೇಳದೆ ಅಚ್ಚುಕಟ್ಟಾಗಿ ಕೆಲಸ ಮಾಡುವವರು, ಇನ್ನೊಂದು, ಕೆಲಸ ಮಾಡದೆ ಬರೀ ನೆಪ ಹೇಳುವವರು‌.‌ ಈ ಎರಡನೆಯ ರೀತಿಯ ಜನರು ತಮ್ಮ ಕೈಲಿ ಕೆಲಸ ಸಾಗದು ಎಂಬ ಕಾರಣಕ್ಕಾಗಿ ಸಮಯ, ಸಲಕರಣೆಗಳು, ಸಂಗಡಿಗರು, ಸನ್ನಿವೇಶ ಎಲ್ಲವನ್ನೂ ದೂರುತ್ತಾ ಇರುತ್ತಾರೆ. ಉದಾಹರಣೆಗೆ ಹೊಲದಲ್ಲಿ ಪೈರು ಕುಯ್ಯುವವನು, ಬೆನ್ನು ಬಾಗಿಸಿ, ಬಾಯಿ ಮುಚ್ಚಿಕೊಂಡು ತನ್ನ ಕುಡುಗೋಲಿನಿಂದ( ಕೃಷಿಯಲ್ಲಿ ಬಳಸುವ, ಬಾಗಿರುವ ಒಂದು ರೀತಿಯ ಕತ್ತಿ) ಪೈರು ಕೊಯ್ಯಬೇಕಲ್ಲವೆ? […]

ಕನ್ನಡ ಗಾದೆಮಾತು- ಕಳ್ಳನಿಗೊಂದು ಪಿಳ್ಳನೆವ.‌

ಈ ಗಾದೆಮಾತು ಕನ್ನಡ ಭಾಷೆಯಲ್ಲಿ ಸಾಕಷ್ಟು ಬಳಕೆಯಲ್ಲಿದೆ.‌ ಯಾರಾದರೂ ತಮ್ಮ  ಕೆಟ್ಟ ಚಟದಲ್ಲೋ, ದುರಾಭ್ಯಾಸದಲ್ಲೋ ( ಸಿಗರೇಟು, ಕುಡಿತ, ಜೂಜು, ಮಾದಕ ದ್ರವ್ಯ ವ್ಯಸನ)  ತೊಡಗಲು ಸಣ್ಣ ನೆಪ ಸಿಕ್ಕಿದರೂ ಸಾಕು, ಆ ಅವಕಾಶವನ್ನು ಬಿಡದೆ ಬಳಸಿಕೊಳ್ಳುತ್ತಾರಲ್ಲವೆ? ಅಂತಹ ಸಂದರ್ಭಗಳಲ್ಲಿ ಈ ಗಾದೆಮಾತನ್ನು ಬಳಸಲಾಗುತ್ತದೆ. ಜೊತೆಗೆ, ಕೆಲಸಗಳ್ಳರು ತಮಗೊಂದು ಸಣ್ಣ ನೆವ ಸಿಕ್ಕಿದರೂ ಸಾಕು, ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗಲೂ ಈ ಮಾತು ಬಳಕೆಯಾಗುತ್ತದೆ. ಪಿಳ್ಳೆ ಎಂದರೆ ಪುಟ್ಟ, ಚಿಕ್ಕ ಎಂದು ಅರ್ಥ.‌ ಒಟ್ಟಿನಲ್ಲಿ ಜನ ಚಿಕ್ಕ […]

ಕನ್ನಡ ಗಾದೆಮಾತು – ಕೋಣನ ಮುಂದೆ ಕಿನ್ನರಿ ಬಾರಿಸಿದ್ಹಂಗೆ

ಎಮ್ಮೆ, ಕೋಣಗಳ ಮನಸ್ಸಲ್ಲಿ‌ ಏನಿದೆಯೋ ಹೇಳಬಲ್ಲವರಾರು? ಆದರೆ ನಾವು ಮನುಷ್ಯರು ನಮ್ಮ ಸಹಜೀವಿಗಳ  ಮೊದ್ದುತನಕ್ಕೋ, ಪೆದ್ದುತನಕ್ಕೋ, ಅರಸಿಕತೆಗೋ ಈ‌ ಪ್ರಾಣಿಗಳನ್ನು ರೂಪಕವಾಗಿ ತೆಗೆದುಕೊಂಡು ಪರಸ್ಪರ ಲೇವಡಿ ಮಾಡಿಕೊಳ್ಳುವುದು ಮಾತ್ರ ಕಾಲಾನುಕಾಲದಿಂದಲೂ ತಪ್ಪಿಲ್ಲ. ‘ಕಿನ್ನರಿ ಎಂಬ ವಾದ್ಯವನ್ನು ಕೋಣನ ಮುಂದೆ ನುಡಿಸಿದರೆ/ಬಾರಿಸಿದರೆ ಏನೂ ಪ್ರಯೋಜನ ಇಲ್ಲ, ಅದು ಆ ವಾದ್ಯದ ನಾದ ಮಾಧುರ್ಯವನ್ನು ಕೇಳಿಸಿಕೊಳ್ಳುವುದೂ ಇಲ್ಲ, ಅದಕ್ಕೆ ಸ್ಪಂದಿಸುವುದೂ ಇಲ್ಲ’ – ಈ ಚಿಂತನೆಯಿಂದ ಹೊರಟ ಗಾದೆಮಾತಿದು. ಅಸೂಕ್ಷ್ಮ ಜನರ ಮುಂದೆ, ಅರಸಿಕರ ಮುಂದೆ ಕಲಾಪ್ರಸ್ತುತಿ ಮಾಡುವುದರಿಂದ ಅಥವಾ […]

ಕನ್ನಡ ಗಾದೆಮಾತು – ತಾನು ಕಳ್ಳ, ಪರರ ನಂಬ.

ಕನ್ನಡಿಗರ ಸಂಭಾಷಣೆಗಳಲ್ಲಿ ಆಗಾಗ ಕೇಳಿಬರುವ ಗಾದೆಮಾತು ಇದು‌.  ಜನರು ಬಹಳ ಸಲ ತಮ್ಮಲ್ಲಿರುವ ಒಳ್ಳೆಯ ಅಥವಾ ಕೆಟ್ಟ ಗುಣವನ್ನು, ಇನ್ನೊಬ್ಬರ ಮೇಲೆ ಬೀರುವ ಕೆಲಸ ಮಾಡುತ್ತಾರೆ(projection). ಉದಾಹರಣೆಗೆ,  ತಾವು ಸಮಯಪ್ರಜ್ಞೆಗೆ ತುಂಬ ಮಹತ್ವ ಕೊಡುತ್ತೇವೆ ಅಂದರೆ ಬೇರೆಯವರು ಸಹ ಕೊಡುತ್ತಾರೆ ಎಂದು ಭಾವಿಸುವುದು, ಭಿಕ್ಷುಕರಿಗೆ ಹಣ ಕೊಡಬಾರದು ಎಂದು ತಾವು ಭಾವಿಸುವಂತೆ ಬೇರೆಯವರೂ ಭಾವಿಸುತ್ತಾರೆ ಎಂದು ತಿಳಿಯುವುದು, ತಾವು ಪರೀಕ್ಷೆಯಲ್ಲಿ ನಕಲು ಮಾಡಿ ತೇರ್ಗಡೆ ಆಗಿದ್ದರೆ ಬೇರೆಯವರು ಸಹ ಹಾಗೇ ತೇರ್ಗಡೆ ಆಗಿರುತ್ತಾರೆ ಎಂದು ಭಾವಿಸುವುದು….ಹೀಗೆ.‌ ಇದೇ ರೀತಿಯಲ್ಲಿ […]

ಕನ್ನಡ ಗಾದೆಮಾತು – ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರ್ದಂಗೆ..

ಮೊದಲೇ ಕಷ್ಟದಲ್ಲಿರುವವರಿಗೆ ಇನ್ನಷ್ಟು ಕಷ್ಟ ಬಂದರೆ ಈ ಗಾದೆಮಾತನ್ನು ಬಳಸುತ್ತಾರೆ. ನೋಡಿಕೊಳ್ಳುವವರು ಯಾರೂ ಇಲ್ಲದ ಕೋಳಿ‌ಯೊಂದು, ಅಲ್ಲಿ ಇಲ್ಲಿ ಬಿದ್ದಿರಬಹುದಾದ ಕಾಳುಗಳನ್ನು ಎಷ್ಟೋ ಕಷ್ಟದಿಂದ  ಹುಡುಕಿ ತಿನ್ನುತ್ತಾ ಇದ್ದಾಗ, ಯಾರಾದರೂ ಅದರ ಕಾಲು ಬೇರೆ ಮುರಿದುಬಿಟ್ಟರೆ ಅದಕ್ಕೆ ಹೇಗಾಗಬೇಡ! ಇದೇ ರೀತಿಯಲ್ಲಿ ಬಡವರ ಮನೆಯ ದುಡಿಯುವ ವ್ಯಕ್ತಿ ಅಪಘಾತಕ್ಕೊಳಗಾದರೆ, ತುಂಬಿದ ಮನೆಯ ಜವಾಬ್ದಾರಿ ವಹಿಸಿಕೊಂಡ ಪರಿಶ್ರಮಿಯ ಕೆಲಸ ಹೋದರೆ, ಪರಿಸ್ಥಿತಿ ಬಹಳ ದುರ್ಭರ ಆಗುತ್ತದೆ ಅಲ್ಲವೆ? ಅಂತಹ ಸಂದರ್ಭಗಳಲ್ಲಿ ಇದನ್ನು ನೋಡಿದ ಅವರ ಪರಿಚಿತರು ‘ಅಯ್ಯೋ ಪಾಪ’ […]

ಕನ್ನಡ ಗಾದೆಮಾತು – ಆಡಿ ತಪ್ಪಬೇಡ ಓಡಿ ಸಿಕ್ಕಬೇಡ.

ಪ್ರಾಸಬದ್ಧವಾದ ಮತ್ತು ಜೀವನ ವಿವೇಕವನ್ನು ಹೇಳಿಕೊಡುವ ಒಂದು ಗಾದೆಮಾತು ಇದು. ಮನುಷ್ಯರು ತಾವು ಆಡಿದ ಮಾತಿಗೆ ಅಥವಾ ಕೊಟ್ಟ ಭಾಷೆಗೆ ಎಂದೂ ತಪ್ಪಬಾರದು, ಹಾಗೆಯೇ ಯಾರಿಂದಲಾದರೂ ತಪ್ಪಿಸಿಕೊಂಡು ಓಡುತ್ತಿರುವಾಗ ಎಂದೂ ಸಿಕ್ಕಿ ಹಾಕಿಕೊಳ್ಳಬಾರದು‌‌. ಆಡಿದ ಮಾತಿಗೆ ತಪ್ಪಿದರೆ ಅಥವಾ ತಪ್ಪಿಸಿಕೊಂಡು ಓಡುವಾಗ ಸಿಕ್ಕಿಬಿದ್ದರೆ ವಿಪರೀತ ಅವಮಾನ ಆಗುತ್ತದೆ. ಆದುದರಿಂದ, ಇಂತಹ ಸನ್ನಿವೇಶವನ್ನು ನಮ್ಮ ಜೀವನದಲ್ಲಿ ತಂದುಕೊಳ್ಳಬಾರದು ಎಂದು ಈ ಗಾದೆಮಾತು ಹೇಳುತ್ತದೆ‌.  Kannada proverb – Adi thappabeda, odi sikkabada ( If you promise […]

ಕನ್ನಡ ಗಾದೆಮಾತು – ಎಲ್ಲ ಬಣ್ಣ ಮಸಿ ನುಂಗ್ತು.

ಕನ್ನಡ ಭಾಷೆಯ ಒಂದು ಪ್ರಸಿದ್ಧ ಗಾದೆಮಾತು ಇದು. ಚಿತ್ರಕಾರನೊಬ್ಬ ದಿನಗಟ್ಟಲೆ ಶ್ರಮವಹಿಸಿ, ವಿಧವಿಧ ಬಣ್ಣಗಳ ಕಲಾತ್ಮಕ ಸಂಯೋಜನೆಯಿಂದ ಸುಂದರವಾದ ಚಿತ್ರವೊಂದನ್ನು ರಚಿಸಿದ್ದು, ಇನ್ನೇನು ಮುಗಿಯಿತು ಎಂಬಷ್ಟರಲ್ಲಿ ಒಂದು ವೇಳೆ ಕಪ್ಪು ಬಣ್ಣ (ಮಸಿ ಬಣ್ಣ) ಆ ಚಿತ್ರದ ಮೇಲೆ ಚೆಲ್ಲಾಡಿದರೆ ಏನಾಗಬಹುದು? ಉಳಿದ ಯಾವ ಬಣ್ಣವೂ ಕಾಣಿಸದೆ ಇಡೀ ಚಿತ್ರ ಕಪ್ಪಿನ ಮುದ್ದೆಯಾಗಿ, ಕೆಟ್ಟದಾಗಿ ಕಾಣುತ್ತದೆ, ಅಲ್ಲವೆ? ಹಾಗೆಯೇ ನಮ್ಮಲ್ಲಿರುವ ಕೆಲವು ದುರ್ಗುಣಗಳು ಉದಾಹರಣೆಗೆ ಅತಿಕೋಪ, ಚಾಡಿ ಹೇಳುವ ಬುದ್ಧಿ, ವಿಪರೀತ ಹೊಟ್ಟೆಕಿಚ್ಚು, ಅಥವಾ ನಾವು ಅವಿವೇಕದಿಂದ […]

ಕನ್ನಡ ಗಾದೆಮಾತು – ತಾಯಿ ಕಂಡ್ರೆ ತಲೆಬೇನೆ. 

ಯಾರಲ್ಲಿ ನಮಗೆ ಸಲಿಗೆ ಇದೆಯೋ, ಯಾರು ನಮಗಾಗಿ ಅಯ್ಯೋ ಅನ್ನುತ್ತಾರೋ ಅವರ ಬಳಿ ನಮ್ಮ‌ ಗೋಳಾಟ, ದೂರಾಟ ಹೆಚ್ಚು. ಉದಾಹರಣೆಗೆ, ತಾವು ಒಬ್ಬರೇ ಇದ್ದಾಗ ಅಥವಾ ಅಪರಿಚಿತರೊಂದಿಗೆ ಇದ್ದಾಗ ತಮ್ಮ ಕೆಲಸ ತಾವೇ ಮಾಡಿಕೊಳ್ಳುವವರ ವರ್ತನೆಯು ತಮ್ಮ ತಾಯಿಯನ್ನು ಕಂಡರೆ ಇದ್ದಕ್ಕಿದ್ದಂತೆ ಬದಲಾಗಿಬಿಡಬಹುದು.‌ “ಅಮ್ಮ, ನಂಗೆ ತಲೆ ನೋಯ್ತಿದೆ, ಕಾಫಿ ಮಾಡಿಕೊಡು”, ” ಅಮ್ಮ, ನಂಗೆ ಮೈಕೈ ನೋವು, ನಾ ಸ್ವಲ್ಪ ಮಲಗ್ತೀನಿ, ರಾತ್ರಿಗೆ ನೀನೇ ಅಡಿಗೆ ಮಾಡ್ಬಿಡೇ” ಎನ್ನುತ್ತ ಚಿಕ್ಕ ಮಕ್ಕಳ ಹಾಗೆ ಅಮ್ಮನನ್ನು ಅವಲಂಬಿಸಬಹುದು […]

Page 3 of 16

Kannada Sethu. All rights reserved.