ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ತಲೇನ ಕಡಿದು ಕೊಟ್ಟರೂ ಸೋರೆಬುರುಡೆ ಎಂದೇ ಹೇಳ್ತಾನೆ. 

ಕನ್ನಡದ ಒಂದು ವಿಶಿಷ್ಟ ಗಾದೆಮಾತಿದು. ಜೀವನದಲ್ಲಿ ನಾವು ಕೆಲವೊಮ್ಮೆ ನಮ್ಮ ಕುಟುಂಬ ಸದಸ್ಯರಿಗೆ, ಬಂಧುಮಿತ್ರರಿಗೆ ಅಥವಾ ಉದ್ಯೋಗ ಕ್ಷೇತ್ರದ ಸಹೋದ್ಯೋಗಿಗಳಿಗೆ ಎಷ್ಟು ಸಹಾಯ/ಸೇವೆ ಮಾಡಿದರೂ ಅವರಿಗೆ ಏಕೋ ಸಮಾಧಾನ,ತೃಪ್ತಿ ಇರುವುದಿಲ್ಲ. ‘ನೀನೇನು ಮಹಾ ಮಾಡಿದೆ? ಯಾರಿದ್ರೂ ಇಷ್ಟು ಮಾಡ್ತಿದ್ರು ಬಿಡು’ ಅಂದುಬಿಡುತ್ತಾರೆ. ಕೆಲವು ಸಲ ನಾವು ಕೂಡ ಅವರು ‘ತಮ್ಮ ಗರಿಷ್ಠ ಮಿತಿ’ ಎಂದು ತಿಳಿದ ಕೆಲಸದ ಬಗ್ಗೆ ಹೀಗೆಯೇ ಪ್ರತಿಕ್ರಯಿಸಬಹುದು‌. ಅಂತಹ ಸನ್ನಿವೇಶದಲ್ಲಿ ‘ ಅಯ್ಯೋ, ಇದರಿಂದ ಆಚೆಗೆ ಇನ್ನೇನು ಮಾಡಲಪ್ಪಾ!?’ ಎಂಬ ಅಸಹಾಯಕ ಭಾವಕ್ಕೆ […]

ಕನ್ನಡ ಗಾದೆಮಾತು – ಮಾಡೋರೊಬ್ಬಿದ್ರೆ ನೋಡು ನನ್ನ ಸಿರಿ. 

ಜೀವನದಲ್ಲಿ ಎಷ್ಟೋ ಸಲ, ನಾವು ಮಾಡಬೇಕಾದ ಕರ್ತವ್ಯಗಳನ್ನು ತಾವು ಮಾಡಿ, ನಮಗೆ ವಿಶ್ರಾಂತಿ-ಬಿಡುವುಗಳನ್ನು ಒದಗಿಸಿ, ನಮ್ಮ ಜೀವನವನ್ನು ಹಗುರ ಮಾಡುವವರ ಬಗ್ಗೆ ನಮ್ಮ ಗಮನ ಹೋಗುವುದಿಲ್ಲ. ಉದಾಹರಣೆಗೆ, ಕಾಲೇಜು ಓದುವ ವಯಸ್ಸಾಗಿದ್ದರೂ ಮಕ್ಕಳಿಗೆ ಮನೆಯಲ್ಲಿ ಯಾವ ಕೆಲಸವನ್ನೂ ಹೇಳದೆ ಅವರ ಓದು, ಹವ್ಯಾಸ, ಸುತ್ತಾಟಗಳಿಗೆ ಅನುವು ಮಾಡಿಕೊಡುವ ತಾಯಿ-ತಂದೆ, ಸೊಸೆಗೆ ಅಳಿಯನಿಗೆ ತುಂಬು ಮನಸ್ಸಿನ ಸಹಕಾರ ನೀಡುವ ಅತ್ತೆ, ಮಾವ, ಭಾವ, ಮೈದುನ, ಅತ್ತಿಗೆ, ನಾದಿನಿ….ದೊಡ್ಡ ಮೊತ್ತದ ಸಂಬಳವಿಲ್ಲದಿದ್ದರೂ ಅಡುಗೆ, ಮನೆವಾಳ್ತೆ, ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು, ವಾಹನ […]

ಕನ್ನಡ ಗಾದೆಮಾತು –  ಕುಳಿತು ತಿಂದ್ರೆ ಕುಡಿಕೆ ಹೊನ್ನು ಸಾಲ್ದು‌.

ಈ ಗಾದೆಮಾತು ನಮಗೊಂದು ಎಚ್ಚರಿಕೆ ನೀಡುತ್ತದೆ. ಅದೇನೆಂದರೆ, ನಾವು ಜೀವನದಲ್ಲಿ ಸೋಮಾರಿಗಳಾಗಬಾರದು ಎಂಬ ಎಚ್ಚರಿಕೆ ಅದು. ನಮ್ಮ ಜೀವನೋಪಾಯಕ್ಕಾಗಿ ನಮ್ಮಲ್ಲಿರುವ  ಕುಡಿಕೆಯಲ್ಲಿನ ಅಂದರೆ ಸಂಗ್ರಹಿತ ಹಣವನ್ನೇ ಬಳಸುತ್ತಿರಬಾರದು, ಹಾಗೆ ಬಳಸಿದರೆ ಅದು ಬಹಳ ಬೇಗ ಖರ್ಚಾಗಿ ಹೋಗಿ ನಾವು ಬೀದಿಗೆ ಬೀಳುವ ಪರಿಸ್ಥಿತಿ ಬಂದುಬಿಡುತ್ತದೆ. ಕುಳಿತು ತಿನ್ನುವವರು ಅಂದರೆ ದುಡಿಯದೆ ಸೋಮಾರಿಗಳಾಗಿ ಜೀವಿಸುವವರು ಎಂದು ಅರ್ಥ. ಇಂತಹವರ ಹತ್ತಿರ ಎಷ್ಟೇ ಹಣಸಂಗ್ರಹ ಇದ್ದರೂ, ಸಂಪಾದಿಸದೆ ಬರೇ ಖರ್ಚು ಮಾಡುವುದರಿಂದ ಅದು ನೀರಿನಂತೆ ಖರ್ಚಾಗಿ ಹೋಗಿ, ಅವರು ಭಿಕ್ಷೆ […]

ಕನ್ನಡ ಗಾದೆಮಾತು – ನಾಯಿ ಬೊಗಳಿದರೆ ದೇವಲೋಕ ಹಾಳೆ?

ಜೀವನದಲ್ಲಿ ಕಾರ್ಯಸಿದ್ಧಿಗಾಗಿ ಶ್ರಮಿಸುತ್ತಿರುವವರಿಗೆ ಉಪಯುಕ್ತ ಕಿವಿಮಾತಿನಂತಹ ಹಿರಿಯರ ನುಡಿ – ಈ‌ ಗಾದೆಮಾತು. ದಾರಿಯಲ್ಲಿ ಹೋಗುತ್ತಿರುವ ಯಾರೆಂದರವರಿಗೆ ಬೊಗಳುತ್ತಿರುವ ನಾಯಿಯ ಅರಚಾಟದಿಂದಾಗಿ, ದೂರದಲ್ಲೆಲ್ಲೋ ಇರುವ ದೇವಲೋಕಕ್ಕೆ ಯಾವ ಹಾನಿಯೂ ಆಗುವುದಿಲ್ಲ. ಹಾಗೆಯೇ ಪರಿಶ್ರಮದಿಂದ, ಶ್ರದ್ಧೆಯಿಂದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಅಸಹನೆ, ಅಸೂಯೆ ಅಥವಾ ಇನ್ಯಾವುದೋ ನಕಾರಾತ್ಮಕ ಭಾವನೆಯಿಂದ ಟೀಕೆ ಮಾಡುವವರು ಇದ್ದೇ ಇರುತ್ತಾರೆ‌; ಅದಕ್ಕಾಗಿ ತಲೆ ಕೆಡಿಸಿಕೊಂಡು ಮಾಡುವ ಕೆಲಸ ನಿಲ್ಲಿಸಬಾರದು ಸಾಧಕರು. ದೇವಲೋಕ ಹೇಗೆ ಬೀದಿನಾಯಿಯ ಬೊಗಳುವಿಕೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ […]

ಕನ್ನಡ ಗಾದೆಮಾತು – ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. 

ಕಿವಿಗೆ ಇಂಪಾಗಿ ಕೇಳಿಸುವ ಈ ಗಾದೆಮಾತು ಬಹು ಜನಪ್ರಿಯವೂ ಹೌದು. ಬೇಡಿಕೆ ತುಂಬ ಹೆಚ್ಚಾಗಿದ್ದು ಪೂರೈಕೆ ತೀರಾ ಕಡಿಮೆಯಾಗಿರುವ ಸನ್ನಿವೇಶವೊಂದನ್ನು ಈ ಕನ್ನಡ ಜಾಣ್ಣುಡಿ ತುಂಬ ಚಿತ್ರಕವಾಗಿ ಪ್ರಸ್ತುತಿಸುತ್ತದೆ. ಗುಡಾಣದಂತಿರುವ ಆನೆಯ ಹೊಟ್ಟೆ ತುಂಬಬೇಕೆಂದರೆ ಭಾರೀ ಹೆಚ್ಚು ಪ್ರಮಾಣದಲ್ಲಿ ಆಹಾರ ಬೇಕು. ಅರೆಕಾಸಿಗೆ ಕೊಂಡಂತಹ ಅರ್ಧಲೋಟ ಮಜ್ಜಿಗೆ ಆನೆಗೆ ಎಲ್ಲಿ ಸಾಕಾಗುತ್ತದೆ!?  ನಮ್ಮ‌ ಜೀವನದ ಕೆಲವು ದೈನಂದಿನ ಸನ್ನಿವೇಶಗಳಲ್ಲೂ ಈ ಗಾದೆಮಾತಿನ ಪ್ರಸ್ತುತತೆಯನ್ನು  ಗಮನಿಸಬಹುದು. ಉದಾಹರಣೆಗೆ, ‘ಅಯ್ಯೋ, ಎಷ್ಟು ಮೆಟ್ರೋ ರೈಲಿದ್ರೂ ಬೆಂಗ್ಳೂರಿನ‌ ಜನಸಂಖ್ಯೆಗೆ ಸಾಲಲ್ಲಪ್ಪ. ಆನೆ […]

ಕನ್ನಡ ಗಾದೆಮಾತು – ದಾನ ಕೊಟ್ಟದ್ದನ್ನು ಮರೆಯಬೇಕು, ಸಾಲ ಕೊಟ್ಟದ್ದನ್ನು ಬರೆಯಬೇಕು.

ನಮ್ಮ ಹಿರಿಯರು ಜೀವನದಲ್ಲಿ ನೊಂದುಬೆಂದು ಕಷ್ಟ ಸುಖಗಳನ್ನು ಅನುಭವಿಸಿ ಆ ಸುದೀರ್ಘ ಜೀವನದ ಸಾರವನ್ನು ಗಾದೆಮಾತುಗಳೆಂಬ ಉಡುಗೊರೆಯಾಗಿ ನಮಗೆ ನೀಡಿದ್ದಾರೆ. ಅಂತಹ ಒಂದು ಅಮೂಲ್ಯ ನಿಧಿ ಈ ಗಾದೆಮಾತು. ನೋಡಿ, ನಾವು ಯಾರಿಗಾದರೂ ಒಂದು ವಸ್ತುವನ್ನು ಅಥವಾ ಒಂದಷ್ಟು ಹಣವನ್ನು ದಾನ ಎಂದು ಕೊಟ್ಟರೆ ಅದನ್ನು ಮತ್ತೆ ಮತ್ತೆ ‘ ಕೊಟ್ಟೆ, ಕೊಟ್ಟೆ’ ಎಂದು ನೆನಪಿಸಿಕೊಳ್ಳುವ ಅಗತ್ಯ ಇಲ್ಲ. ಶುಭಾಕಾಂಕ್ಷೆ ಮತ್ತು ಸಹಾಯ ಮನೋಭಾವದಿಂದ ದಾನ ಕೊಟ್ಟಿರುತ್ತೇವೆ, ಅದನ್ನು ಅಲ್ಲಿಗೇ ಮರೆತುಬಿಡಬೇಕು.‌ ಆದರೆ ನಾವು ಸಾಲವಾಗಿ ಕೊಟ್ಟದ್ದನ್ನು […]

ಕನ್ನಡ ಗಾದೆಮಾತು – ಪಾಲಿಗೆ ಬಂದದ್ದು ಪಂಚಾಮೃತ

ನಮ್ಮ‌ ಹಿರಿಯರು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಗಾದೆಮಾತುಗಳಲ್ಲಿ ಇದೂ ಒಂದು.‌ ನಾವು ಮನುಷ್ಯರು ಆಸೆ ಪಡುವುದಕ್ಕೆ ಯಾವ ಮಿತಿಯೂ ಇಲ್ಲ. ಎಷ್ಟು ಕೊಟ್ಟರೂ ಇನ್ನೂ ಬೇಕೆನ್ನುವ ಮನಃಸ್ಥಿತಿ ನಮ್ಮದು.‌ ಆದರೆ ಜೀವನದ ವಾಸ್ತವಿಕತೆಯಲ್ಲಿ‌ ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ.‌ ಕೆಲವು ಸಲ ಏನೋ ಬಯಸಿದರೆ ಇನ್ನೇನೋ ಸಿಗುತ್ತದೆ. ಇಂತಹ ಸಂದರ್ಭಗಳಲ್ಲಿ ನಮ್ಮ‌ ಹತ್ತಿರ ಇಲ್ಲದ್ದರ ಬಗ್ಗೆ ಕೊರಗುವ ಬದಲು ಇರುವುದನ್ನು ಪಂಚಾಮೃತ (ಹಾಲು,‌ ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆಗಳ ರುಚಿಕರ ಮಿಶ್ರಣ. ದೇವಸ್ಥಾನಗಳಲ್ಲಿ, ಮನೆಯ ಪೂಜೆಗಳಲ್ಲಿ ಇದನ್ನು ದೇವರಿಗೆ […]

ಕನ್ನಡ ಗಾದೆಮಾತು – ನಿದ್ಗೆಟ್ರೋ, ಬುದ್ಗೆಟ್ರೋ.

ಈ ಗಾದೆಮಾತಿನ ಗ್ರಾಂಥಿಕ ರೂಪ ‘ನಿದ್ದೆ ಕೆಟ್ಟರೋ, ಬುದ್ಧಿ ಕೆಟ್ಟರೋ’ ಎಂದು. ಬಳಕೆ ಮಾತಿನಲ್ಲಿ ಅದು ‘ನಿದ್ಗೆಟ್ರೋ, ಬುದ್ಗೆಟ್ರೋ’ ಎಂದಾಗುತ್ತದೆ. ಈಗ ಈ ಗಾದೆಮಾತಿನ ಅರ್ಥದ ಬಗ್ಗೆ ವಿವೇಚನೆ ಮಾಡೋಣ. ನಿದ್ದೆ ಕೆಟ್ಟರೆ ಸಾಕಷ್ಟು ವಿಶ್ರಾಂತಿ ಸಿಗದೆ ಮನುಷ್ಯನ ದೇಹ ದಣಿಯುತ್ತದೆ, ಮನಸ್ಸು ಹಾಗೂ ಬುದ್ಧಿಗಳು ಮಂಕಾಗುತ್ತವೆ. ಆ ಸ್ಥಿತಿಯಲ್ಲಿ ಅವನು ಮಾಡುವ ಕೆಲಸಗಳು, ತೆಗೆದುಕೊಳ್ಳುವ  ನಿರ್ಧಾರಗಳು, ಸಹಜೀವಿಗಳೊಂದಿಗೆ ವರ್ತಿಸುವ ರೀತಿ‌ –  ಇವು ಸಮರ್ಪಕ ಹಾಗೂ ಸುಸಂಬದ್ಧವಾಗಿರದ ಸಾಧ್ಯತೆ ಇರುತ್ತದೆ. ಬಹುಶಃ ಎಲ್ಲ ಮನುಷ್ಯರೂ ಈ […]

ಕನ್ನಡ ಗಾದೆಮಾತು – ಹೊಸದರಲ್ಲಿ ಅಗಸ ಗೋಣಿಯನ್ನ ಎತ್ತೆತ್ತಿ ಒಗೆದನಂತೆ.

ಕನ್ನಡ ಭಾಷೆಯಲ್ಲಿ ಬಹುವಾಗಿ ಬಳಕೆಯಾಗುವ ಗಾದೆ ಮಾತು ಇದು. ಜನರು ಯಾವುದಾದರೂ ಕೆಲಸವನ್ನು ಹೊಸದಾಗಿ ಶುರು ಮಾಡಿದಾಗ ಬಹು ಹುರುಪಿನಿಂದ ಅದರಲ್ಲಿ ತೊಡಗುತ್ತಾರೆ.  ಆ ಕೆಲಸದಲ್ಲಿ ಇರುವ ಅನಾಕರ್ಷಕ ಭಾಗಗಳನ್ನು ಸಹ ಉತ್ಸಾಹದಿಂದಲೇ ಎದುರುಗೊಂಡು ನಿಭಾಯಿಸುತ್ತಾರೆ. ಉದಾಹರಣೆಗೆ, ಬಟ್ಟೆ ಶುಚಿ ಮಾಡುವ ಕೆಲಸದ ಅಗಸನು ತನ್ನ ವೃತ್ತಿಯನ್ನು ಶುರು ಮಾಡಿದ ಹೊಸದರಲ್ಲಿ, ಗೋಣಿಚೀಲದಂತಹ ಅಮುಖ್ಯ, ಅನಾಕರ್ಷಕ  ಅನ್ನಿಸುವ ಬಟ್ಟೆಯನ್ನೂ  ಸಹ ಬಹಳ ಉತ್ಸಾಹದಿಂದ ಒಗೆಯುತ್ತಾನೆ. ಆದರೆ ಬರುಬರುತ್ತಾ ಈ ಉತ್ಸಾಹ ಕಡಿಮೆ ಆಗುತ್ತದೆ ಹಾಗೂ ಕೆಲಸ ಮಾಡುವಾಗ […]

ಕನ್ನಡ ಗಾದೆಮಾತು – ಆಡೋನು ತಪ್ತಾನೆ, ನಡೆಯೋನು ಎಡವ್ತಾನೆ.

ಕನ್ನಡ ಭಾಷೆಯ ಒಂದು ಅಪರೂಪದ ಗಾದೆಮಾತು ಇದು‌. ನಮ್ಮ ಬಗ್ಗೆ ಹಾಗೂ ನಮ್ಮ ಸಹಜೀವಿಗಳ ಬಗ್ಗೆ ನಮಗೆ ತಾಳ್ಮೆ ಮತ್ತು ಕ್ಷಮಾಗುಣವನ್ನು ಕಲಿಸುವ ವಿವೇಕದ ಮಾತು.‌ ಮಾತಾಡುವವರು‌ ಮಾತಿನ ಓಘದಲ್ಲಿಯೋ, ಸರಿಯಾಗಿ ಯೋಚಿಸದೆಯೋ ಮಧ್ಯೆ ಒಂದೊಂದು ತಪ್ಪು ಶಬ್ದ ಆಡಬಹುದು. ಹಾಗೆಯೇ ದಾರಿ ಮೇಲೆ ನಡೆಯುವವರು ಕಲ್ಲು ತಾಗಿಯೋ, ಚಪ್ಪಲಿ ಜಾರಿಯೋ ಒಮ್ಮೊಮ್ಮೆ ಎಡವಬಹುದು.‌ ಹೀಗೆಂದ ಮಾತ್ರಕ್ಕೆ ಮುಂದೆ ಅವರು ನಡೆಯಲೇಬಾರದು, ಮಾತಾಡಲೇಬಾರದು ಎಂದು ಅರ್ಥ ಅಲ್ಲ, ಅಲ್ಲವೇ? ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಬೇಕು…ಸಾಗಲು ಬಿಡಬೇಕು. ‌ಅದೇ […]

Page 4 of 16

Kannada Sethu. All rights reserved.