ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಮರಕ್ಕಿಂತ ಮರ ದೊಡ್ಡದು.

ಪ್ರಕೃತಿಯ ಒಂದು ವಾಸ್ತವ ಸಂಗತಿಯ ಮೂಲಕ ಅಮೂಲ್ಯವಾದ ಜೀವನ ವಿವೇಕವನ್ನು ಮನದಟ್ಟು ಮಾಡಿಸುವ ಗಾದೆಮಾತು ಇದು‌. ಕಾಡಿನಲ್ಲಿ ಒಂದು ಮರವನ್ನು ನಾವು ಎತ್ತರ ಎಂದು ಭಾವಿಸುವಷ್ಟರಲ್ಲಿ ಅದಕ್ಕಿಂತ ಎತ್ತರವಾದ ಇನ್ನೊಂದು ಮರ ಕಾಣಿಸುತ್ತದೆ. ‘ಓಹ್ ಇದೇ ಎಲ್ಲಕ್ಕಿಂತ ಎತ್ತರವಾದ ಮರ’ ಎಂದು ಅಂದುಕೊಳ್ಳುವಷ್ಟರಲ್ಲಿ ಅದಕ್ಕಿಂತ ಇನ್ನಷ್ಟು ಎತ್ತರವಾದ ನಮ್ಮ ಕಣ್ಣಿಗೆ ಬೀಳಬಹುದು. ಹೀಗೆಯೇ  ಜೀವನದಲ್ಲಿ ನಾವೇ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬೀಗುತ್ತಿರುವಾಗ ನಮಗಿಂತ ಹತ್ತು ಪಟ್ಟು ಹೆಚ್ಚು ಸಾಧನೆ ಮಾಡಿದವರು ಇದ್ದಾರೆ ಎಂದು ಗೊತ್ತಾದಾಗ ನಮ್ಮ […]

ಕನ್ನಡ ಗಾದೆಮಾತು – ಊರಿಗೆ ಆಳಲ್ಲ, ಮಸಣಕ್ಕೆ ಹೆಣ ಅಲ್ಲ.

ಮನುಷ್ಯನ ಇರವು ಹೇಗಿರಬೇಕು ಅಂದರೆ ಅದರಲ್ಲಿ ಒಂದು ದೃಢತೆ, ಸ್ಥಿರತೆ, ವಿಶ್ವಾಸನೀಯತೆ ಇರಬೇಕು.‌ ಅವುಗಳಿಂದ ಜನರು ಆ ವ್ಯಕ್ತಿಯನ್ನು ಗೌರವಿಸುವಂತೆ ಆಗಬೇಕು. ಇದು ಬಿಟ್ಟು ಯಾವ ಕೆಲಸವನ್ನೂ ಸರಿಯಾಗಿ ಮಾಡದೆ ಊರಿನವರ ಕಣ್ಣಲ್ಲಿ ಬೆಲೆ ಕಳೆದುಕೊಂಡರೆ, ಅಂತಹ ವ್ಯಕ್ತಿಯ ಬಗ್ಗೆ ಜನರು ಮೇಲ್ಕಂಡ ಗಾದೆಮಾತನ್ನು ಬಳಸಿ ನಿಂದನೆಯ ನುಡಿಗಳನ್ನಾಡುತ್ತಾರೆ – “ಛೆ, ಏನು ಬಾಳು ಅವನದ್ದು! ಊರಿಗೆ ಆಳಲ್ಲ, ಮಸಣಕ್ಕೆ ಹೆಣ ಅಲ್ಲ.‌ ಯಾವುದಕ್ಕೂ ಪ್ರಯೋಜನ ಇಲ್ಲ ಬಿಡಪ್ಪ” ಎನ್ನುತ್ತಾರೆ.‌ ನಾವು ಎಂದಿಗೂ ಜನರ ಬಾಯಿಂದ ಇಂತಹ […]

ಕನ್ನಡ ಗಾದೆಮಾತು – ಮುತ್ತಿಗಿಂತ ಹೊತ್ತು‌ ಉತ್ತಮ.

ಮೂರೇ ಪದಗಳಿರುವ ಗಾದೆ ಮಾತಾದರೂ ಬಹು ಮುಖ್ಯವಾದ ಜೀವನ ಸಂದೇಶವನ್ನು ಕೊಡುವಂತಹ ಸೊಲ್ಲು ಇದು. ಹೊತ್ತು ಅಥವಾ ಸಮಯವು ಬದುಕಿರುವ ಪ್ರತಿಯೊಬ್ಬರಿಗೂ ದಿನವೊಂದಕ್ಕೆ ಇಪ್ಪತ್ನಾಲ್ಕು ಗಂಟೆಯಂತೆ  ದೊರೆಯುವ ಸಂಪತ್ತು. ಇದು‌ ಉಚಿತವಾಗಿ ಸಿಗುವುದು ಹೌದಾದರೂ ಒಮ್ಮೆ ಕಳೆದುಹೋದರೆ ಏನು ಮಾಡಿದರೂ ಮತ್ತೆ ಮರಳಿ ಸಿಗುವುದಿಲ್ಲ. ಅಮೂಲ್ಯ ಮುತ್ತಾದರೂ, ಅದು ಕಳೆದು‌ಹೋದರೆ ಹೇಗಾದರೂ ಮಾಡಿ ಇನ್ನೊಮ್ಮೆ ಅದನ್ನು ಕೊಳ್ಳಬಹುದು. ಆದರೆ ಕಳೆದು ಹೋದ ಹೊತ್ತು ಮಾತ್ರ ಏನೇ ಮಾಡಿದರೂ, ಎಷ್ಟೇ ಹಣ ಕೊಟ್ಟರೂ ಮತ್ತೆ ಸಿಗುವುದಿಲ್ಲ. ಹಾಗಾಗಿಯೇ ನಾವು […]

ಕನ್ನಡ ಗಾದೆಮಾತು – ಅನ್ನಕ್ಕ್ ದಂಡ ಭೂಮೀಗ್ ಭಾರ.

ಕನ್ನಡ ನಾಡಿನಲ್ಲಿ  ಆಗಾಗ ಬಳಕೆಯಾಗುವ ಗಾದೆ ಮಾತು ಇದು‌. ಯಾವುದಾದರೂ ವ್ಯಕ್ತಿ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಉಂಡಾಡಿ ಗುಂಡನ ಹಾಗೆ ಬರೀ ತಿಂದುಂಡು‌ ಕಾಲ ಕಳೀತಿದ್ದಾನೆ ಅಂದ್ರೆ ಅವನನ್ನು ಬಯ್ದುಕೊಳ್ಳಲು ಬಳಸುವಂತಹ ಸೊಲ್ಲು.‌  ಇವರು ತಿನ್ನುವ ಅನ್ನಕ್ಕೆ ಸರಿಯಾದ ದುಡಿಮೆಯ ಬೆಲೆ‌ ತೆರುತ್ತಿಲ್ಲ ಎಂಬುದನ್ನು ಹೇಳುವ ಇನ್ನೊಂದು ರೀತಿಯಿದು. ತಾವು ಓಡಾಡುವ ಭೂಮಿಗೆ ಇವರು ಭಾರ ಎಂಬುದು ತಿರಸ್ಕಾರದ ತುತ್ತತುದಿ. ಜೊತೆಗೆ ಯಾರ ಬಗೆಗಾದರೂ ತೀರಾ ಅಸಹನೆ, ಸಿಟ್ಟು, ಅಸಮಾಧಾನ ಇದ್ದಾಗಲೂ ಜನ ಈ ಮಾತನ್ನು ಬಳಸುವುದುಂಟು. […]

ಕನ್ನಡ ಗಾದೆಮಾತು – ಕೋತಿ ತಾನು ಕೆಡೋದಲ್ದೆ ವನವನ್ನೆಲ್ಲಾ ಕೆಡಿಸ್ತಂತೆ.

ಕನ್ನಡ ಭಾಷೆಯ ಒಂದು ಪ್ರಸಿದ್ಧ ಗಾದೆಮಾತಿದು. ಕೋತಿ ಮನುಷ್ಯನ ಅತಿ ಹತ್ತಿರದ ಜೀವ ವಿಕಾಸದ ಕೊಂಡಿ ಎಂದು ನಾವು ಬಲ್ಲೆವು, ಅಲ್ಲವೇ( ವಾನರನಿಂದ ನರ, ಮಂಗನಿಂದ ಮಾನವ ಎಂಬು ನಾಣ್ಣುಡಿಗಳನ್ನು ಎಲ್ಲ ಕನ್ನಡಿಗರೂ ಕೇಳಿಯೇ ಇರುತ್ತಾರೆ). ಕೋತಿಯು ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಬುದ್ಧಿವಂತ ಪ್ರಾಣಿಯಾದರೂ, ಅದು ಬಹು ಚಂಚಲ ಸ್ವಭಾವದ, ತಂಟೆಕೋರ ಪ್ರಾಣಿಯೂ ಹೌದು. ಒಂದು ನಿಮಿಷ ಸುಮ್ಮನಿರದೆ ತಾನಿರುವ ಮರದ ಎಲೆ, ಹಣ್ಣು, ಕಾಯಿ ತರಿಯುವುದು, ಕಾರಣ ಇರಲಿ, ಬಿಡಲಿ ಅತ್ತಿಂದಿತ್ತ, ಇತ್ತಿಂದತ್ತ ಹಾರುವುದು, ಬೇರೆ […]

ಕನ್ನಡ ಗಾದೆಮಾತು – ಸಾಯೋ ತನಕ ಸಾಮು ಮಾಡಿ ಬಾಳೋದ್ಯಾವಾಗ?

ಜಟ್ಟಿಗಳು ಮಲ್ಲಯುದ್ಧದ ಪಟ್ಟುಗಳನ್ನು ಅಭ್ಯಾಸ ಮಾಡುವುದಕ್ಕೆ ಸಾಮು ಮಾಡೋದು ಎನ್ನುತ್ತಾರೆ. ಸಾಮು ಮಾಡೋದು ಎಂಬ ಪದವನ್ನು ನಾವು ಮಾಡುವ ಯಾವುದೇ ವೃತ್ತಿ/ಕೌಶಲ್ಯದ  ಅಭ್ಯಾಸದ ಸಂದರ್ಭದಲ್ಲೂ ಒಂದು ರೂಪಕವಾಗಿ ಬಳಸಬಹುದು. ಜೀವನವಿಡೀ ಯಾವುದೋ ಕಸರತ್ತು‌ ಮಾಡುತ್ತಾ, ಏನಕ್ಕಾಗಿಯೋ ಒದ್ದಾಡುತ್ತಾ, ಇಪ್ಪತ್ನಾಲ್ಕು ಗಂಟೆಯೂ ದುಡಿಯುತ್ತಲೇ ಇದ್ದರೆ ಜೀವನದ ಸಂತೋಷಗಳನ್ನು ಅನುಭವಿಸಲು, ಬದುಕು ಕೊಡುವ ಸವಿಯನ್ನು ಸ್ವೀಕರಿಸಲು ಸಾಧ್ಯ ಆಗುವುದಿಲ್ಲ.‌ ಹಾಗೆಂದೇ  ಈ ಗಾದೆಮಾತು ನಮ್ಮೆಲ್ಲ ಕಸರತ್ತುಗಳಿಗೂ ಒಂದು ಮಿತಿ ಇರಬೇಕು ಎಂಬ ಸಂದೇಶವನ್ನು ಕೊಡುತ್ತಿದೆ. Kannada proverb – Saayo […]

ಕನ್ನಡ ಗಾದೆಮಾತು – ಬೀಸೊ ದೊಣ್ಣೆ ತಪ್ಪಿದ್ರೆ ಸಾವಿರ ವರ್ಷ ಆಯಸ್ಸು. 

ಕನ್ನಡದಲ್ಲಿ ಆಗಾಗ ಬಳಕೆಯಾಗುವ ಗಾದೆ ಮಾತು ಇದು. ‘ಇನ್ನೇನು ನಮ್ಮ ಮೇಲೆ ಬೀಸಲಿರುವ ದೊಣ್ಣೆಯ ಏಟು ತಕ್ಷಣಕ್ಕೆ ತಪ್ಪಲಿ, ಹಾಗೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಸಿಕ್ಕಿದಂತೆ ಆಗುತ್ತೆ, ಮುಂದೆ ನೋಡಿಕೊಳ್ಳೋಣ’ ಎಂಬ ಚಿಂತನೆ ಈ ಗಾದೆಮಾತಿನ ಹಿನ್ನೆಲೆಯಲ್ಲಿದೆ. ನಿಜ ಜೀವನದಲ್ಲಿ ಬರುವ ಅನೇಕ ತ್ರಾಸದಾಯಕ ಸಂದರ್ಭಗಳು ಈ‌ ಜಾಣ್ಣುಡಿಯನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಉದಾಹರಣೆಗೆ,  ನ್ಯಾಯಾಲಯದ ಪ್ರಕರಣಗಳಲ್ಲಿ ತಡೆಯಾಜ್ಞೆ ಸಿಕ್ಕಿದರೆ, ತುಂಬ ಕಷ್ಟವಾದ ವಿಷಯಗಳ ಪರೀಕ್ಷೆಗಳು ಮುಂದೂಲ್ಪಟ್ಟರೆ, ಉದ್ಯೋಗಿಗಳಿಗೆ ಕೆಲಸದ ಸ್ಥಳದಿಂದ ಆಗುವಂತಹ, ಇಷ್ಟವಿಲ್ಲದ  ವರ್ಗಾವಣೆ ಯಾವುದೋ […]

ಕನ್ನಡ ಗಾದೆಮಾತು – ಮರಣಕ್ಕೆ ಮದ್ದಿಲ್ಲ.

ನೋಡಿ, ನಮ್ಮ ನುಡಿಯಲ್ಲಿರುವ ಈ ಗಾದೆಮಾತು ಎರಡೇ ಪದಗಳಲ್ಲಿ ಜೀವನದ  ಗಾಢಸತ್ಯವೊಂದನ್ನು ಹೇಳ್ತಿದೆ. ಹುಟ್ಟಿದವರಿಗೆ ಮರಣವು ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿದ್ದರೂ, ತಾವು ಎಂದೂ ಸಾಯುವುದಿಲ್ಲ ಎಂಬಂತೆಯೇ ಜನರ ವರ್ತನೆ ಇರುತ್ತದೆ. ಮರಣವನ್ನು ಮುಂದೂಡಲು ಜನರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ, ಅಷ್ಟೇ ಅಲ್ಲ ಚಿರಂಜೀವಿಯಾಗುವ ಆಸೆಯಿಂದ ಜನರು ಏನೆಲ್ಲ ಕಸರತ್ತುಗಳನ್ನು ಮಾಡುತ್ತಾರೆ ಎಂಬುದನ್ನು ನಾವು ಅನೇಕ ಸಲ ಗಮನಿಸುತ್ತೇವೆ ಅಲ್ಲವೇ? ನಮ್ಮ ಪುರಾಣಗಳಲ್ಲಿ ಮಹತ್ವಾಕಾಂಕ್ಷಿ ರಾಕ್ಷಸರು ತಮಗೆ ಮರಣವೇ ಬರಬಾರದು ಎಂಬ ವರ ಪಡೆಯಲಿಕ್ಕಾಗಿ, ವರ್ಷಗಟ್ಟಲೆ ತಪಸ್ಸು […]

ಕನ್ನಡ ಗಾದೆಮಾತು – ಹೊಳೆಯಲ್ಲಿ ಹುಣಿಸೆ ಹಣ್ಣು ಕಿವುಚಿದ್ಹಂಗೆ. 

ಕನ್ನಡ ಭಾಷೆಯಲ್ಲಿ ಬಹುವಾಗಿ ಬಳಕೆಯಾಗುವ ಗಾದೆಮಾತುಗಳಲ್ಲಿ ಇದೂ ಒಂದು. ನಾವು ಮನೆಯಲ್ಲಿ ಹುಣಿಸೆ ಹಣ್ಣನ್ನು ಸಾರು, ಸಾಂಬಾರು, ಗೊಜ್ಜು, ಪುಳಿಯೋಗರೆ ಮುಂತಾದವನ್ನು ಮಾಡಲು ಬಳಸುವಾಗ, ನಮಗೆ ಎಷ್ಟು ಬೇಕೋ ಅಷ್ಟನ್ನು ನೀರಿನಲ್ಲಿ ಕಿವುಚಿಕೊಂಡು ರಸ ತೆಗೆದು ಬಳಸುತ್ತೇವಲ್ಲ,  ಇದು ನಮ್ಮ ದಿನದ ರೂಢಿಯ ಮಾತಾಯಿತು. ಆದರೆ ಇಷ್ಟೇ ಪ್ರಮಾಣದ ಹುಣಿಸೆ ಹಣ್ಣನ್ನು ಒಂದು ಹೊಳೆ ಅಥವಾ ನದಿಯಲ್ಲಿ ಕಿವುಚಿದರೆ ಏನಾಗಬಹುದು!? ಆ ಹಣ್ಣು ವ್ಯರ್ಥವಾಗಿ ಹೋಗುತ್ತದೆಯೇ ಹೊರತು ನಮಗೆ ಅದರ ಹುಳಿರುಚಿ‌ ಸ್ವಲ್ಪವೂ ದೊರೆಯುವುದಿಲ್ಲ.    ಹೀಗೆಯೇ […]

ಕನ್ನಡ ಗಾದೆಮಾತು – ಹಲಸಿನ ಹಣ್ಣು ಬೇಕು, ಅಂಟು‌ ಬ್ಯಾಡ ಅಂದಂಗೆ.  

ಜೀವನ ವಿವೇಕದ ಮಾತೊಂದನ್ನು ತುಂಬ ಅರ್ಥ ಪೂರ್ಣವಾಗಿ ಹೇಳುವಂತಹ ಗಾದೆಮಾತು ಇದು. ನಮಗೆ ಹಲಸಿನ ಹಣ್ಣನ್ನು ತಿನ್ನುವ ಆಸೆ ಇದ್ದು ಅದನ್ನು ಬೇರೆಯವರಿಂದ ಕೇಳಿ ಪಡೆದೋ ಅಥವಾ ಹಣ ಕೊಟ್ಟು  ಕೊಂಡೋ ಮನೆಗೆ ತರುತ್ತೇವೆ ಎಂದಿಟ್ಟುಕೊಳ್ಳಿ. ಅದನ್ನು ಹೆಚ್ಚುವಾಗ ಅದರೊಳಗಿನ ಮೇಣವು ಚಾಕುವಿಗೆ, ಕೈಗೆ ಅಂಟಿಕೊಳ್ಳುತ್ತದೆ. ನಾವು ಹಲಸಿನ ತೊಳೆಯನ್ನು ತಿನ್ನಬೇಕು ಅಂದರೆ ಈ ಮಿಜಿಮಿಜಿಮಿಜಿ ಎನ್ನುತ್ತಾ ಕೈಗೆಲ್ಲಾ ಅಂಟಿಕೊಳ್ಳುವ ಮೇಣದ ಜೊತೆ ಗುದ್ದಾಡಲೇಬೇಕು.‌ ಹಲಸಿನ ಹಣ್ಣು ಮಾತ್ರ ಬೇಕು, ಮೇಣ ಬೇಡ ಅಂದರೆ ಆಗುವುದಿಲ್ಲ. ಹಾಗೆಯೇ […]

Page 5 of 16

Kannada Sethu. All rights reserved.