ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರ್ದಂಗೆ..

ಮೊದಲೇ ಕಷ್ಟದಲ್ಲಿರುವವರಿಗೆ ಇನ್ನಷ್ಟು ಕಷ್ಟ ಬಂದರೆ ಈ ಗಾದೆಮಾತನ್ನು ಬಳಸುತ್ತಾರೆ. ನೋಡಿಕೊಳ್ಳುವವರು ಯಾರೂ ಇಲ್ಲದ ಕೋಳಿ‌ಯೊಂದು, ಅಲ್ಲಿ ಇಲ್ಲಿ ಬಿದ್ದಿರಬಹುದಾದ ಕಾಳುಗಳನ್ನು ಎಷ್ಟೋ ಕಷ್ಟದಿಂದ  ಹುಡುಕಿ ತಿನ್ನುತ್ತಾ ಇದ್ದಾಗ, ಯಾರಾದರೂ ಅದರ ಕಾಲು ಬೇರೆ ಮುರಿದುಬಿಟ್ಟರೆ ಅದಕ್ಕೆ ಹೇಗಾಗಬೇಡ! ಇದೇ ರೀತಿಯಲ್ಲಿ ಬಡವರ ಮನೆಯ ದುಡಿಯುವ ವ್ಯಕ್ತಿ ಅಪಘಾತಕ್ಕೊಳಗಾದರೆ, ತುಂಬಿದ ಮನೆಯ ಜವಾಬ್ದಾರಿ ವಹಿಸಿಕೊಂಡ ಪರಿಶ್ರಮಿಯ ಕೆಲಸ ಹೋದರೆ, ಪರಿಸ್ಥಿತಿ ಬಹಳ ದುರ್ಭರ ಆಗುತ್ತದೆ ಅಲ್ಲವೆ? ಅಂತಹ ಸಂದರ್ಭಗಳಲ್ಲಿ ಇದನ್ನು ನೋಡಿದ ಅವರ ಪರಿಚಿತರು ‘ಅಯ್ಯೋ ಪಾಪ’ […]

ಕನ್ನಡ ಗಾದೆಮಾತು – ಆಡಿ ತಪ್ಪಬೇಡ ಓಡಿ ಸಿಕ್ಕಬೇಡ.

ಪ್ರಾಸಬದ್ಧವಾದ ಮತ್ತು ಜೀವನ ವಿವೇಕವನ್ನು ಹೇಳಿಕೊಡುವ ಒಂದು ಗಾದೆಮಾತು ಇದು. ಮನುಷ್ಯರು ತಾವು ಆಡಿದ ಮಾತಿಗೆ ಅಥವಾ ಕೊಟ್ಟ ಭಾಷೆಗೆ ಎಂದೂ ತಪ್ಪಬಾರದು, ಹಾಗೆಯೇ ಯಾರಿಂದಲಾದರೂ ತಪ್ಪಿಸಿಕೊಂಡು ಓಡುತ್ತಿರುವಾಗ ಎಂದೂ ಸಿಕ್ಕಿ ಹಾಕಿಕೊಳ್ಳಬಾರದು‌‌. ಆಡಿದ ಮಾತಿಗೆ ತಪ್ಪಿದರೆ ಅಥವಾ ತಪ್ಪಿಸಿಕೊಂಡು ಓಡುವಾಗ ಸಿಕ್ಕಿಬಿದ್ದರೆ ವಿಪರೀತ ಅವಮಾನ ಆಗುತ್ತದೆ. ಆದುದರಿಂದ, ಇಂತಹ ಸನ್ನಿವೇಶವನ್ನು ನಮ್ಮ ಜೀವನದಲ್ಲಿ ತಂದುಕೊಳ್ಳಬಾರದು ಎಂದು ಈ ಗಾದೆಮಾತು ಹೇಳುತ್ತದೆ‌.  Kannada proverb – Adi thappabeda, odi sikkabada ( If you promise […]

ಕನ್ನಡ ಗಾದೆಮಾತು – ಎಲ್ಲ ಬಣ್ಣ ಮಸಿ ನುಂಗ್ತು.

ಕನ್ನಡ ಭಾಷೆಯ ಒಂದು ಪ್ರಸಿದ್ಧ ಗಾದೆಮಾತು ಇದು. ಚಿತ್ರಕಾರನೊಬ್ಬ ದಿನಗಟ್ಟಲೆ ಶ್ರಮವಹಿಸಿ, ವಿಧವಿಧ ಬಣ್ಣಗಳ ಕಲಾತ್ಮಕ ಸಂಯೋಜನೆಯಿಂದ ಸುಂದರವಾದ ಚಿತ್ರವೊಂದನ್ನು ರಚಿಸಿದ್ದು, ಇನ್ನೇನು ಮುಗಿಯಿತು ಎಂಬಷ್ಟರಲ್ಲಿ ಒಂದು ವೇಳೆ ಕಪ್ಪು ಬಣ್ಣ (ಮಸಿ ಬಣ್ಣ) ಆ ಚಿತ್ರದ ಮೇಲೆ ಚೆಲ್ಲಾಡಿದರೆ ಏನಾಗಬಹುದು? ಉಳಿದ ಯಾವ ಬಣ್ಣವೂ ಕಾಣಿಸದೆ ಇಡೀ ಚಿತ್ರ ಕಪ್ಪಿನ ಮುದ್ದೆಯಾಗಿ, ಕೆಟ್ಟದಾಗಿ ಕಾಣುತ್ತದೆ, ಅಲ್ಲವೆ? ಹಾಗೆಯೇ ನಮ್ಮಲ್ಲಿರುವ ಕೆಲವು ದುರ್ಗುಣಗಳು ಉದಾಹರಣೆಗೆ ಅತಿಕೋಪ, ಚಾಡಿ ಹೇಳುವ ಬುದ್ಧಿ, ವಿಪರೀತ ಹೊಟ್ಟೆಕಿಚ್ಚು, ಅಥವಾ ನಾವು ಅವಿವೇಕದಿಂದ […]

ಕನ್ನಡ ಗಾದೆಮಾತು – ತಾಯಿ ಕಂಡ್ರೆ ತಲೆಬೇನೆ. 

ಯಾರಲ್ಲಿ ನಮಗೆ ಸಲಿಗೆ ಇದೆಯೋ, ಯಾರು ನಮಗಾಗಿ ಅಯ್ಯೋ ಅನ್ನುತ್ತಾರೋ ಅವರ ಬಳಿ ನಮ್ಮ‌ ಗೋಳಾಟ, ದೂರಾಟ ಹೆಚ್ಚು. ಉದಾಹರಣೆಗೆ, ತಾವು ಒಬ್ಬರೇ ಇದ್ದಾಗ ಅಥವಾ ಅಪರಿಚಿತರೊಂದಿಗೆ ಇದ್ದಾಗ ತಮ್ಮ ಕೆಲಸ ತಾವೇ ಮಾಡಿಕೊಳ್ಳುವವರ ವರ್ತನೆಯು ತಮ್ಮ ತಾಯಿಯನ್ನು ಕಂಡರೆ ಇದ್ದಕ್ಕಿದ್ದಂತೆ ಬದಲಾಗಿಬಿಡಬಹುದು.‌ “ಅಮ್ಮ, ನಂಗೆ ತಲೆ ನೋಯ್ತಿದೆ, ಕಾಫಿ ಮಾಡಿಕೊಡು”, ” ಅಮ್ಮ, ನಂಗೆ ಮೈಕೈ ನೋವು, ನಾ ಸ್ವಲ್ಪ ಮಲಗ್ತೀನಿ, ರಾತ್ರಿಗೆ ನೀನೇ ಅಡಿಗೆ ಮಾಡ್ಬಿಡೇ” ಎನ್ನುತ್ತ ಚಿಕ್ಕ ಮಕ್ಕಳ ಹಾಗೆ ಅಮ್ಮನನ್ನು ಅವಲಂಬಿಸಬಹುದು […]

ಕನ್ನಡ ಗಾದೆಮಾತು – ತಲೇನ ಕಡಿದು ಕೊಟ್ಟರೂ ಸೋರೆಬುರುಡೆ ಎಂದೇ ಹೇಳ್ತಾನೆ. 

ಕನ್ನಡದ ಒಂದು ವಿಶಿಷ್ಟ ಗಾದೆಮಾತಿದು. ಜೀವನದಲ್ಲಿ ನಾವು ಕೆಲವೊಮ್ಮೆ ನಮ್ಮ ಕುಟುಂಬ ಸದಸ್ಯರಿಗೆ, ಬಂಧುಮಿತ್ರರಿಗೆ ಅಥವಾ ಉದ್ಯೋಗ ಕ್ಷೇತ್ರದ ಸಹೋದ್ಯೋಗಿಗಳಿಗೆ ಎಷ್ಟು ಸಹಾಯ/ಸೇವೆ ಮಾಡಿದರೂ ಅವರಿಗೆ ಏಕೋ ಸಮಾಧಾನ,ತೃಪ್ತಿ ಇರುವುದಿಲ್ಲ. ‘ನೀನೇನು ಮಹಾ ಮಾಡಿದೆ? ಯಾರಿದ್ರೂ ಇಷ್ಟು ಮಾಡ್ತಿದ್ರು ಬಿಡು’ ಅಂದುಬಿಡುತ್ತಾರೆ. ಕೆಲವು ಸಲ ನಾವು ಕೂಡ ಅವರು ‘ತಮ್ಮ ಗರಿಷ್ಠ ಮಿತಿ’ ಎಂದು ತಿಳಿದ ಕೆಲಸದ ಬಗ್ಗೆ ಹೀಗೆಯೇ ಪ್ರತಿಕ್ರಯಿಸಬಹುದು‌. ಅಂತಹ ಸನ್ನಿವೇಶದಲ್ಲಿ ‘ ಅಯ್ಯೋ, ಇದರಿಂದ ಆಚೆಗೆ ಇನ್ನೇನು ಮಾಡಲಪ್ಪಾ!?’ ಎಂಬ ಅಸಹಾಯಕ ಭಾವಕ್ಕೆ […]

ಕನ್ನಡ ಗಾದೆಮಾತು – ಮಾಡೋರೊಬ್ಬಿದ್ರೆ ನೋಡು ನನ್ನ ಸಿರಿ. 

ಜೀವನದಲ್ಲಿ ಎಷ್ಟೋ ಸಲ, ನಾವು ಮಾಡಬೇಕಾದ ಕರ್ತವ್ಯಗಳನ್ನು ತಾವು ಮಾಡಿ, ನಮಗೆ ವಿಶ್ರಾಂತಿ-ಬಿಡುವುಗಳನ್ನು ಒದಗಿಸಿ, ನಮ್ಮ ಜೀವನವನ್ನು ಹಗುರ ಮಾಡುವವರ ಬಗ್ಗೆ ನಮ್ಮ ಗಮನ ಹೋಗುವುದಿಲ್ಲ. ಉದಾಹರಣೆಗೆ, ಕಾಲೇಜು ಓದುವ ವಯಸ್ಸಾಗಿದ್ದರೂ ಮಕ್ಕಳಿಗೆ ಮನೆಯಲ್ಲಿ ಯಾವ ಕೆಲಸವನ್ನೂ ಹೇಳದೆ ಅವರ ಓದು, ಹವ್ಯಾಸ, ಸುತ್ತಾಟಗಳಿಗೆ ಅನುವು ಮಾಡಿಕೊಡುವ ತಾಯಿ-ತಂದೆ, ಸೊಸೆಗೆ ಅಳಿಯನಿಗೆ ತುಂಬು ಮನಸ್ಸಿನ ಸಹಕಾರ ನೀಡುವ ಅತ್ತೆ, ಮಾವ, ಭಾವ, ಮೈದುನ, ಅತ್ತಿಗೆ, ನಾದಿನಿ….ದೊಡ್ಡ ಮೊತ್ತದ ಸಂಬಳವಿಲ್ಲದಿದ್ದರೂ ಅಡುಗೆ, ಮನೆವಾಳ್ತೆ, ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು, ವಾಹನ […]

ಕನ್ನಡ ಗಾದೆಮಾತು –  ಕುಳಿತು ತಿಂದ್ರೆ ಕುಡಿಕೆ ಹೊನ್ನು ಸಾಲ್ದು‌.

ಈ ಗಾದೆಮಾತು ನಮಗೊಂದು ಎಚ್ಚರಿಕೆ ನೀಡುತ್ತದೆ. ಅದೇನೆಂದರೆ, ನಾವು ಜೀವನದಲ್ಲಿ ಸೋಮಾರಿಗಳಾಗಬಾರದು ಎಂಬ ಎಚ್ಚರಿಕೆ ಅದು. ನಮ್ಮ ಜೀವನೋಪಾಯಕ್ಕಾಗಿ ನಮ್ಮಲ್ಲಿರುವ  ಕುಡಿಕೆಯಲ್ಲಿನ ಅಂದರೆ ಸಂಗ್ರಹಿತ ಹಣವನ್ನೇ ಬಳಸುತ್ತಿರಬಾರದು, ಹಾಗೆ ಬಳಸಿದರೆ ಅದು ಬಹಳ ಬೇಗ ಖರ್ಚಾಗಿ ಹೋಗಿ ನಾವು ಬೀದಿಗೆ ಬೀಳುವ ಪರಿಸ್ಥಿತಿ ಬಂದುಬಿಡುತ್ತದೆ. ಕುಳಿತು ತಿನ್ನುವವರು ಅಂದರೆ ದುಡಿಯದೆ ಸೋಮಾರಿಗಳಾಗಿ ಜೀವಿಸುವವರು ಎಂದು ಅರ್ಥ. ಇಂತಹವರ ಹತ್ತಿರ ಎಷ್ಟೇ ಹಣಸಂಗ್ರಹ ಇದ್ದರೂ, ಸಂಪಾದಿಸದೆ ಬರೇ ಖರ್ಚು ಮಾಡುವುದರಿಂದ ಅದು ನೀರಿನಂತೆ ಖರ್ಚಾಗಿ ಹೋಗಿ, ಅವರು ಭಿಕ್ಷೆ […]

ಕನ್ನಡ ಗಾದೆಮಾತು – ನಾಯಿ ಬೊಗಳಿದರೆ ದೇವಲೋಕ ಹಾಳೆ?

ಜೀವನದಲ್ಲಿ ಕಾರ್ಯಸಿದ್ಧಿಗಾಗಿ ಶ್ರಮಿಸುತ್ತಿರುವವರಿಗೆ ಉಪಯುಕ್ತ ಕಿವಿಮಾತಿನಂತಹ ಹಿರಿಯರ ನುಡಿ – ಈ‌ ಗಾದೆಮಾತು. ದಾರಿಯಲ್ಲಿ ಹೋಗುತ್ತಿರುವ ಯಾರೆಂದರವರಿಗೆ ಬೊಗಳುತ್ತಿರುವ ನಾಯಿಯ ಅರಚಾಟದಿಂದಾಗಿ, ದೂರದಲ್ಲೆಲ್ಲೋ ಇರುವ ದೇವಲೋಕಕ್ಕೆ ಯಾವ ಹಾನಿಯೂ ಆಗುವುದಿಲ್ಲ. ಹಾಗೆಯೇ ಪರಿಶ್ರಮದಿಂದ, ಶ್ರದ್ಧೆಯಿಂದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಅಸಹನೆ, ಅಸೂಯೆ ಅಥವಾ ಇನ್ಯಾವುದೋ ನಕಾರಾತ್ಮಕ ಭಾವನೆಯಿಂದ ಟೀಕೆ ಮಾಡುವವರು ಇದ್ದೇ ಇರುತ್ತಾರೆ‌; ಅದಕ್ಕಾಗಿ ತಲೆ ಕೆಡಿಸಿಕೊಂಡು ಮಾಡುವ ಕೆಲಸ ನಿಲ್ಲಿಸಬಾರದು ಸಾಧಕರು. ದೇವಲೋಕ ಹೇಗೆ ಬೀದಿನಾಯಿಯ ಬೊಗಳುವಿಕೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ […]

ಕನ್ನಡ ಗಾದೆಮಾತು – ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. 

ಕಿವಿಗೆ ಇಂಪಾಗಿ ಕೇಳಿಸುವ ಈ ಗಾದೆಮಾತು ಬಹು ಜನಪ್ರಿಯವೂ ಹೌದು. ಬೇಡಿಕೆ ತುಂಬ ಹೆಚ್ಚಾಗಿದ್ದು ಪೂರೈಕೆ ತೀರಾ ಕಡಿಮೆಯಾಗಿರುವ ಸನ್ನಿವೇಶವೊಂದನ್ನು ಈ ಕನ್ನಡ ಜಾಣ್ಣುಡಿ ತುಂಬ ಚಿತ್ರಕವಾಗಿ ಪ್ರಸ್ತುತಿಸುತ್ತದೆ. ಗುಡಾಣದಂತಿರುವ ಆನೆಯ ಹೊಟ್ಟೆ ತುಂಬಬೇಕೆಂದರೆ ಭಾರೀ ಹೆಚ್ಚು ಪ್ರಮಾಣದಲ್ಲಿ ಆಹಾರ ಬೇಕು. ಅರೆಕಾಸಿಗೆ ಕೊಂಡಂತಹ ಅರ್ಧಲೋಟ ಮಜ್ಜಿಗೆ ಆನೆಗೆ ಎಲ್ಲಿ ಸಾಕಾಗುತ್ತದೆ!?  ನಮ್ಮ‌ ಜೀವನದ ಕೆಲವು ದೈನಂದಿನ ಸನ್ನಿವೇಶಗಳಲ್ಲೂ ಈ ಗಾದೆಮಾತಿನ ಪ್ರಸ್ತುತತೆಯನ್ನು  ಗಮನಿಸಬಹುದು. ಉದಾಹರಣೆಗೆ, ‘ಅಯ್ಯೋ, ಎಷ್ಟು ಮೆಟ್ರೋ ರೈಲಿದ್ರೂ ಬೆಂಗ್ಳೂರಿನ‌ ಜನಸಂಖ್ಯೆಗೆ ಸಾಲಲ್ಲಪ್ಪ. ಆನೆ […]

ಕನ್ನಡ ಗಾದೆಮಾತು – ದಾನ ಕೊಟ್ಟದ್ದನ್ನು ಮರೆಯಬೇಕು, ಸಾಲ ಕೊಟ್ಟದ್ದನ್ನು ಬರೆಯಬೇಕು.

ನಮ್ಮ ಹಿರಿಯರು ಜೀವನದಲ್ಲಿ ನೊಂದುಬೆಂದು ಕಷ್ಟ ಸುಖಗಳನ್ನು ಅನುಭವಿಸಿ ಆ ಸುದೀರ್ಘ ಜೀವನದ ಸಾರವನ್ನು ಗಾದೆಮಾತುಗಳೆಂಬ ಉಡುಗೊರೆಯಾಗಿ ನಮಗೆ ನೀಡಿದ್ದಾರೆ. ಅಂತಹ ಒಂದು ಅಮೂಲ್ಯ ನಿಧಿ ಈ ಗಾದೆಮಾತು. ನೋಡಿ, ನಾವು ಯಾರಿಗಾದರೂ ಒಂದು ವಸ್ತುವನ್ನು ಅಥವಾ ಒಂದಷ್ಟು ಹಣವನ್ನು ದಾನ ಎಂದು ಕೊಟ್ಟರೆ ಅದನ್ನು ಮತ್ತೆ ಮತ್ತೆ ‘ ಕೊಟ್ಟೆ, ಕೊಟ್ಟೆ’ ಎಂದು ನೆನಪಿಸಿಕೊಳ್ಳುವ ಅಗತ್ಯ ಇಲ್ಲ. ಶುಭಾಕಾಂಕ್ಷೆ ಮತ್ತು ಸಹಾಯ ಮನೋಭಾವದಿಂದ ದಾನ ಕೊಟ್ಟಿರುತ್ತೇವೆ, ಅದನ್ನು ಅಲ್ಲಿಗೇ ಮರೆತುಬಿಡಬೇಕು.‌ ಆದರೆ ನಾವು ಸಾಲವಾಗಿ ಕೊಟ್ಟದ್ದನ್ನು […]

Page 6 of 18

Kannada Sethu. All rights reserved.