ಕನ್ನಡ ಅಧ್ಯಾಪಕರಿಗೆ ತರಗತಿಗಳಲ್ಲಿ ಒಮ್ಮೊಮ್ಮೆ ಬಹು ಸ್ವಾರಸ್ಯಕರ ಅನುಭವಗಳಾಗುತ್ತವೆ. ಈಚೆಗೆ ಬಿ.ಸಿ.ಎ. ತರಗತಿಯೊಂದರಲ್ಲಿ ಕನ್ನಡ ವಿಷಯದ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿನಿಯರಿಗೆ ಪಾಠಕ್ಕೆ ಸಂಬಂಧ ಪಟ್ಟ ವಿಷಯವೊಂದನ್ನು ಬರೆಸುತ್ತಿದ್ದೆ. ನನ್ನ ಅನುಭವದಲ್ಲಿ, ಲೇಖನ ಚಿಹ್ನೆಗಳಿಗೆ ವಿದ್ಯಾರ್ಥಿಗಳು ಕೊಡಬೇಕಾದಷ್ಟು ಗಮನ ಕೊಡುವುದಿಲ್ಲ. ಹಾಗಾಗಿ ಅಂದು ಬರೆಸುತ್ತಿದ್ದಾಗ “ನೋಡಿ ಮಕ್ಳೇ, ಲೇಖನ ಚಿಹ್ನೆಗಳನ್ನು ಸರಿಯಾಗಿ ಹಾಕ್ಬೇಕು ನೀವು. ದಾರದಲ್ಲಿ ಮಣಿಗಳನ್ನು ಪೋಣಿಸಿ ಕೊನೆಯಲ್ಲಿ ಗಂಟು ಹಾಕೋದು ಎಷ್ಟು ಮುಖ್ಯಾನೋ, ವಾಕ್ಯದಲ್ಲಿ ಲೇಖನ ಚಿಹ್ನೆಗಳನ್ನು ಹಾಕೋದು ಅಷ್ಟೇ ಮುಖ್ಯ. ಗಂಟು ಹಾಕದ ಮಣಿಸರದಿಂದ […]
ಲ್ಯಾಟಿಸ್ – ಜಾಲಕ ( ಕಿಂಡಿ ಚೌಕಟ್ಟು) – ಒಂದು ಘನವಸ್ತುವಿನ ಹರಳೊಂದರಲ್ಲಿ ಅಣುಗಳ, ವಿದ್ಯುದಣುಗಳ ಅಥವಾ ಪರಮಾಣುಗಳ ನಿಯತವಾದ ಜೋಡಣೆ.
ಲ್ಯಾಟಿಟ್ಯೂಡ್ ಅಂಡ್ ಲಾಂಗಿಟ್ಯೂಡ್ – ಅಕ್ಷಾಂಶ ಮತ್ತು ರೇಖಾಂಶ – (ಅ). ಭೂಗೋಳ ಶಾಸ್ತ್ರದಲ್ಲಿ – ಅಕ್ಷಾಂಶ – ಭೂಪಟದಲ್ಲಿ ಸಮಭಾಜಕ ವೃತ್ತಕ್ಕೆ ಸಮಾನಾಂತರವಾಗಿ ಎಳೆದ ರೇಖೆ.
ರೇಖಾಂಶ – ಭೂಮಂಡಲದ ಉತ್ತರಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆದಂತಹ ಕಲ್ಪಿತ ಮುನ್ನೂರ ಅರವತ್ತು ರೇಖೆಗಳು. ಇವು ಉತ್ತರ ಹಾಗೂ ದಕ್ಷಿಣ ಧ್ರುವದಲ್ಲಿ ಸೇರುತ್ತವೆ.
(ಆ). ಖಗೋಳ ಶಾಸ್ತ್ರದಲ್ಲಿ ಅಕ್ಷಾಂಶ – ಒಂದು ನಕ್ಷತ್ರದ ಅಥವಾ ಯಾವುದಾದರೂ ಆಕಾಶಕಾಯದ ಅಂತರಿಕ್ಷ ಅಕ್ಷಾಂಶ ಅಂದರೆ ಸೂರ್ಯಪಥಕ್ಕೆ ಸಂಬಂಧಿಸಿದಂತೆ ಅದರ ದೂರ.
ರೇಖಾಂಶ – ಅಂತರಿಕ್ಷ ರೇಖಾಂಶ ಅಂದರೆ ಸೂರ್ಯನು ಸಮಭಾಜಕ ರೇಖೆಯನ್ನು ದಾಟುವ ದಿಕ್ಕಿಗೆ ಸಂಬಂಧಿಸಿದಂತೆ ಅಳೆಯಲಾಗುವ ಆಕಾಶಕಾಯದ ದೂರ.
ಲೇಟೆಂಟ್ ಹೀಟ್ – ಗುಪ್ತೋಷ್ಣ ( ಅಂತರ್ಗತ ಉಷ್ಣ) – ಒಂದು ವಸ್ತುವು ಘನಸ್ಥಿತಿಯಿಂದ ದ್ರವಸ್ಥಿತಿಗೆ, ದ್ರವಸ್ಥಿತಿಯಿಂದ ಅನಿಲ ಸ್ಥಿತಿಗೆ ತನ್ನ ಸ್ಥಿತಿಯನ್ನು ಬದಲಾಯಿಸಿದಾಗ ಉಂಟಾಗುವ ಶಕ್ತಿ ವರ್ಗಾವಣೆ.
ಲ್ಯಾಟರಲ್ ವೆಲೋಸಿಟಿ – ಪಾರ್ಶ್ವ ವೇಗ – ಒಂದು ಆಕಾಶಕಾಯದ ಕಣ್ ನೇರ ಸಮ ವೇಗಕ್ಕೆ 90 ಡಿಗ್ರಿಯಲ್ಲಿರುವ ವೇಗ.
ಲೇಸರ್ – ಲೇಸರ್ – ಪ್ರಚೋದಿತ ವಿಕಿರಣವನ್ನು ಹಾಯಿಸುವುದರ ಮೂಲಕ ಶಕ್ತಿಯನ್ನು ಹೆಚ್ಚಿಸಿಕೊಂಡಂತಹ ಬೆಳಕು ಹಾಗೂ
ಸುಸಂಬದ್ಧವಾದ, ಒಂದೇ ತರಂಗಾಂತರವುಳ್ಳ, ಸಮಾನಾಂತರ ಹಾಗೂ ತೀಕ್ಷ್ಣವಾದ ಮತ್ತು ಅತಿ ಹೆಚ್ಚು ಶಕ್ತಿಯನ್ನು ಹೊಂದಿರುವ ವಿಕಿರಣದ ಪುಂಜವೊಂದನ್ನು ಉತ್ಪತ್ತಿ ಮಾಡುವ ಶಕ್ತಿಯುಳ್ಳ ಸಾಧನ. ಯುಕ್ತವಾದ ಒಂದು ವಸ್ತುವಿಗೆ ( ಘನ, ದ್ರವ ಅಥವಾ ಅನಿಲ) ತುಂಬ ವೇಗವಾಗಿ ಶಕ್ತಿಯನ್ನು ಹಾಯಿಸಿ ಈ ಲೇಸರ್ ಅನ್ನು ಉತ್ಪತ್ತಿ ಮಾಡುತ್ತಾರೆ.
Like us!
Follow us!