Breeder reactor 

ಉತ್ಪತ್ತಿಸುವ ಸ್ಥಾವರ – ತಾನು ಇಂಧನವನ್ನು ಸೇವಿಸುತ್ತಿರುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಅಧಿಕಾಧಿಕ ಬೀಜಕೇಂದ್ರಗಳನ್ನು ಉತ್ಪಾದಿಸುವ ಅಣುಸ್ಥಾವರ

Bypass

ಪಕ್ಕದ ದಾರಿ – ಭೌತಶಾಸ್ತçದಲ್ಲಿ ಈ ಪದವನ್ನು ಸಾಮಾನ್ಯವಾಗಿ ವಿದ್ಯುತ್ತಿನ ಸಂದರ್ಭದಲ್ಲಿ ಬಳಸುತ್ತಾರೆ. ಇಲ್ಲಿ ಈ ಪದವು ಒಂದು ವಿದ್ಯುನ್ಮಂಡಲದ ಅಂಗ ಅಥವಾ ಅಂಗಗಳನ್ನು ಜೋಡಿಸುವ ಇನ್ನೊಂದು ದಾರಿಯನ್ನು ಸೂಚಿಸುತ್ತದೆ. 

Buoyancy

ತೇಲುವ ಗುಣ – ಒಂದು ವಸ್ತುವಿಗೆ ಇರುವಂತಹ ತೇಲುವ ಗುಣಲಕ್ಷಣ

Bumping

ಸಿಡಿಸಿಡಿ ಕುದಿತ – ವಾತಾವರಣದ ಒತ್ತಡಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಆವಿಯ ಗುಳ್ಳೆಗಳು ರೂಪುಗೊಳ್ಳುವ ರೀತಿಯಲ್ಲಿ ಒಂದು ದ್ರವವನ್ನು ಅತಿಯಾಗಿ, ವಿಪರೀತ ಜುಲುಮೆಯಿಂದ ಕುದಿಸುವುದು.

Bulk modulus

ಒಟ್ಟಾರೆ ಒತ್ತಡಗುಣಕ – ಒಟ್ಟಾರೆಯಾಗಿ ಇಡೀ ಒಂದು ವಸ್ತುವಿನ ಮೇಲೆ ಪ್ರಯೋಗಿಸಿದ ಬಲಕ್ಕೂ, ಆ ವಸ್ತುವಿನಲ್ಲಿ ಉಂಟಾಗುವ ಒತ್ತಡಕ್ಕೂ ಇರುವ ಅನುಪಾತ.  

Brownian motion

ಬ್ರೌನಿಯನ್ ಚಲನೆ – ಅತ್ಯಂತ ಕಿರಿದಾದ ವ್ಯಾಸ ಹೊಂದಿರುವ ಚಿಕ್ಕ ಚಿಕ್ಕ ಕಣಗಳು, ಉದಾಹರಣೆಗೆ ಪರಾಗರೇಣುಗಳು ದ್ರವವೊಂದರಲ್ಲಿ ತೇಲಾಡಿಕೊಂಡಿದ್ದಾಗಿನ ಸ್ಥಿತಿಯಲ್ಲಿ, ನಿರಂತರವಾಗಿ ಮತ್ತು ಅವ್ಯವಸ್ಥಿತವಾಗಿ ಚಲಿಸುವದು. ಇಂತಹ ಚಲನೆಯನ್ನು ಹೊಗೆಯಲ್ಲಿನ ಕಣಗಳಲ್ಲಿಯೂ ಗಮನಿಸಬಹುದು.

Booster

ವಿದ್ಯುತ್ ಬಲವರ್ಧಕ – (ಅ). ಒಂದು ವಿದ್ಯುತ್‍ಮಂಡಲದಲ್ಲಿ ಹರಿಯುತ್ತಿರುವ ವಿದ್ಯುತ ಚಾಲಕ ಶಕ್ತಿಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು, ಸರಣಿ ಜೋಡಣೆಯಲ್ಲಿ ಇರಿಸಿರುವಂತಹ ವಿದ್ಯುತ್ ಉತ್ಪಾದಕ ಯಂತ್ರ. (ಆ). ಪ್ರಸಾರ ಕಾರ್ಯದಲ್ಲಿ ಮುಖ್ಯಕೇಂದ್ರದಿಂದ ಪುನರಾವರ್ತನ ಕೇಂದ್ರವು ತರಂಗಾಂತರವನ್ನು ಸ್ವೀಕರಿಸಿ ಅದರ ಬಲವರ್ಧಿಸಿ, ಮರುಪ್ರಸಾರ ಮಾಡುತ್ತದೆ, ಕೆಲವೊಮ್ಮೆ ಆವರ್ತನವನ್ನು ಬದಲಿಸಿ ಮರುಪ್ರಸಾರಿಸುತ್ತದೆ. ಇಲ್ಲಿ ಬಲವರ್ಧಕವನ್ನು ಉಪಯೋಗಿಸುತ್ತಾರೆ.

Boson

ಬೋಸಾನು – ಆಂತರಿಕ ಗಿರಕಿ(ಸ್ಪಿನ್)ಯುಳ್ಳ ಯಾವುದೇ ಮೂಲಭೂತ ಕಣ.

Boundary layer 

ಸರಹದ್ದು ಪದರ – ಒಂದು ಘನವಸ್ತುವಿನ ಸರಹದ್ದಿನಲ್ಲಿ ಉಂಟಾಗುವ ಒಂದು ದ್ರವದ ಪದರ. ಇಲ್ಲಿ ಆ ದ್ರವದ ಸ್ನಿಗ್ಧ(ಅಂಟಂಟು) ಗುಣವು ಗಮನಾರ್ಹವಾಗಿರುತ್ತದೆ.

Bourdon gauge

ತಿರುಗಣಿ ಮಾಪಕ – ಒತ್ತಡವನ್ನು ಅಳೆಯಲು ಕೈಗಾರಿಕೆಗಳಲ್ಲಿ ಸಾಮಾನ್ಯವಾಗಿ ಬಳಸುವ ಒಂದು ಮಾಪಕ. ಇದರಲ್ಲಿ ತಿರುಚಿರುವಂತಹ ಹಿತ್ತಾಳೆ-ರಂಜಕ-ಕಂಚು ಲೋಹದ ತೆಳುಪದರದ ಕೊಳವೆ ಇರುತ್ತದೆ.

Page 1 of 6

Kannada Sethu. All rights reserved.