ಕಣ ವೇಗವರ್ಧಕ – ಕಣಗಳ ವೇಗವನ್ನು ಹೆಚ್ಚಿಸುವ ಉಪಕರಣಗಳ ವಿಧಗಳಲ್ಲಿ ಒಂದು.
ಕಮಾನುರೇಖೆ – ಒಂದರ ಪಕ್ಕ ಒಂದರಂತೆ ಕಮಾನುಗಳನ್ನು ಇಟ್ಟಂತೆ ತೋರುವಂತಹ ರೇಖೆಯಲ್ಲಿ ಚಲಿಸುವ ಬಿಂದುವಿನ ಚಲನೆ.
ಆವರ್ತನ / ಸುತ್ತು – ಒಂದು ವ್ಯವಸ್ಥೆಯು ಒಳಗಾಗುವಂತಹ ಬದಲಾವಣೆಗಳ ಅಥವಾ ಕಾರ್ಯಾಚರಣೆಗಳ ಒಂದು ಸರಣಿ ಅಥವಾ ಒಂದು ಕಟ್ಟು. ಇವು ಮುಗಿಯುತ್ತಿದ್ದಂತೆ ವ್ಯವಸ್ಥೆಯು ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬರುತ್ತದೆ.
ವಿದ್ಯುತ್ ಪ್ರವಾಹ – ವಿದ್ಯುದಂಶಗಳ ಒಂದು ಪ್ರವಾಹವಿದು. ವಿದ್ಯುತ್ ಚಾಲಕ ಶಕ್ತಿಯ ಪ್ರಭಾವದಿಂದಾಗಿ ಎಲೆಕ್ಟ್ರಾನುಗಳು ಅಥವಾ ವಿದ್ಯುದಣುಗಳು (ಅಯಾನುಗಳು) ಚಲಿಸುವುದರ ಫಲವೇ ವಿದ್ಯುತ್ಪ್ರವಾಹ.
ಕ್ಯೂರಿ ಬಿಂದು ಅಥವಾ ಕ್ಯೂರಿ ಉಷ್ಣತೆ – ಯಾವ ಉಷ್ಣತೆಯ ಮೇಲ್ಪಟ್ಟು ಸಹಜ ಅಯಸ್ಕಾಂತೀಯ ವಸ್ತುಗಳು ದುರ್ಬಲ ಅಯಸ್ಕಾಂತೀಯ ವಸ್ತುಗಳಂತೆ ವರ್ತಿಸುತ್ತವೋ ಆ ಉಷ್ಣತೆ.
ಕ್ಯೂರಿ – ವಿಜ್ಞಾನಿ ಮೇಡಂ ಕ್ಯೂರಿಯವರ ನೆನಪಿನಲ್ಲಿ ಇಡಲಾಗಿರುವ ಒಂದು ಮೂಲಮಾನ. ಒಂದು ವಸ್ತುವಿನ ವಿಕಿರಣ ಚಟುವಟಿಕೆಯನ್ನು(Radio activity) ಅಳೆಯುವ ಮೂಲಮಾನವಿದು.
ಹರಳು ಅಧ್ಯಯನ – ಹರಳುಗಳ ರಚನೆಯನ್ನು ಅಧ್ಯಯನ ಮಾಡಲು ಬಳಸುವಂತಹ ವಿಧಾನ.
ಹರಳು ನಿವಾಸ – ಹರಳಿನ ಬಾಹ್ಯ ರೂಪವನ್ನು ಹರಳು ನಿವಾಸ ಅನ್ನುತ್ತಾರೆ.
ಹರಳು – ಸಮಕಟ್ಟಾದ ಮೇಲ್ಮೈಗಳುಳ್ಳ ಒಂದು ಘನವಸ್ತು. ಇಲ್ಲಿ ಒಂದೇ ವಸ್ತುವಿನ ಹರಳುಗಳು ಹೇಗೆ ಬೆಳೆಯುತ್ತವೆ ಅಂದರೆ ಅವುಗಳ ಮೇಲ್ಮೈಗಳ ನಡುವಿನ ಕೋನವು ಒಂದೇ ಆಗಿರುತ್ತದೆ.
ಶೀತ ಭೌತಶಾಸ್ತ್ರ – ಬಹಳವೇ ಕಡಿಮೆ ತಾಪಮಾನಕ್ಕೆ ಸಂಬಂಧಿಸಿದ ಭೌತಶಾಸ್ತ್ರ.